ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಶ್ರಫ್ ಪ್ರಾಯ: 35 ವರ್ಷ ತಂದೆ: ಪುತ್ತಬ್ಬ ಬ್ಯಾರಿ, ವಾಸ: ಕಂಚಿಲ ಮನೆ, ಸಜೀಪ ಮೂಡ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 20-02-2022 ರಂದು ಸಮಯ ಸುಮಾರು 15-45 ಗಂಟೆಗೆ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ  ಬೊಳ್ಳಾಯಿ ಜಂಕ್ಷನ್ ನಲ್ಲಿರುವಾಗ ಪಿರ್ಯಾದಿದಾರರ  ಅಕ್ಕನ ಮಗನಾದ ಮೊಹಮ್ಮದ್ ತೌಸೀಪ್ ನು ಅಂಗಡಿಗೆ ಬಂದು ವಾಪಾಸು ಮನೆ ಕಡೆಗೆ  ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಾರ್ನೆಬೈಲು ಕಡೆಯಿಂದ ಮಂಚಿ ಕಡೆಗೆ ಒಂದು ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮೊಹಮ್ಮದ್ ತೌಸೀಪ್ ನಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ವಾಹನ ಸಮೇತಾ ಪರಾರಿಯಾಗಿದ್ದು, ಅಪಘಾತದಲ್ಲಿ ಮೊಹಮ್ಮದ್ ತೌಸೀಪ್ ನ ತಲೆಯ ಹಿಂಬದಿಗೆ ರಕ್ತ ಗಾಯ, ಎಡ ಕಾಲಿನ ತೊಡೆಗೆ ಗುದ್ದಿದ ಗಾಯವಾದವರನ್ನು  ಬಿ ಸಿ ರೋಡ್ ಸೋಮಯಾಜಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಒಳರೋಗಿಯಾಗಿ ದಾಖಲಾಗಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 26/2022 ಕಲಂ 279,337 IPC  ಮತ್ತು ಕಲಂ 134(ಎ)(ಬಿ), 187  ಮೋವಾ. ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಸುಮಿತ್ರ(50) ಗಂಡ: ಜಯರಾಜ್‌ ಜೈನ್‌, ವಾಸ: ಪದ್ಮಶ್ರೀ ಮನೆ,ವಿಕಾಸನಗರ ಅಳಿಯೂರು, ವಾಲ್ಪಾಡಿ ಗ್ರಾಮ,ಮಂಗಳೂರು ತಾಲೂಕು ಎಂಬವರ ದೂರಿನಂತೆ ದಿನಾಂಕ: 21-02-2022 ರಂದು  ಮಧ್ಯಾಹ್ನ  ಸುಮಾರು  2:30 ಗಂಟೆಗೆ  ಬೆಳ್ತಂಗಡಿ   ತಾಲೂಕು  ಕರಿಮಣೇಲು  ಗ್ರಾಮದ  ದೇಲಂಪುರಿ  ಕ್ರಾಸ್  ಬಳಿ  ವೇಣೂರು- ಮೂಡಬಿದ್ರೆ  ಸಾರ್ವಜನಿಕ  ರಸ್ತೆಯಲ್ಲಿ ಲಾರಿ ನಂಬ್ರ ಕೆಎ 70-3764 ನೇದನ್ನು ಅದರ  ಚಾಲಕ ವಿಕ್ರಂ ಕುಮಾರ್  ಎಂಬಾತನು  ಮೂಡಬಿದ್ರೆ ಕಡೆಯಿಂದ  ವೇಣೂರು  ಕಡೆಗೆ   ತಿರುವು  ರಸ್ತೆಯಲ್ಲಿ ದುಡುಕುತನ  ಹಾಗೂ ನಿರ್ಲಕ್ಷ್ಯ ತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಎದುರಿನಿಂದ ಅಂದರೆ ವೇಣೂರು ಕಡೆಯಿಂದ  ಪಿರ್ಯಾದಿದಾರರು  ತನ್ನ ಗಂಡನೊಂದಿಗೆ ಸವಾರಿ ಮಾಡುತ್ತಿದ್ದ  ಬೈಕ್ ನಂಬ್ರ  ಕೆಎ 19 ಎಸ್ 7281  ನೇದಕ್ಕೆ  ರಭಸದಿಂದ ಡಿಕ್ಕಿ ಹೊಡೆದ  ಪರಿಣಾಮ ಬೈಕ್ ಜಖಂಗೊಂಡು ಬೈಕ್ ಸವಾರರುಗಳು ರಸ್ತೆಗೆ ಬಿದ್ದು ಪಿರ್ಯಾದಿಯ ಗಂಡ ಜಯರಾಜ್  ಜೈನ್ ರವರ ಬಲ ಕೋಲು   ಕಾಲಿಗೆ ಮುರಿತದ ತೀವೃ  ಗಾಯಗಳಾಗಿ  ಮೂಡಬಿದ್ರೆ  ಆಳ್ವಾಸ್  ಆಸ್ಪತ್ರೆಯಲ್ಲಿ   ಪ್ರಥಮ  ಚಿಕಿತ್ಸೆ  ಪಡೆದು ಹೆಚ್ಚಿನ  ಚಿಕಿತ್ಸೆಗೆ ಮಂಗಳೂರು ಎ ಜೆ  ಆಸ್ಪತ್ರೆಗೆ   ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 15/2022 ಕಲಂ: 279,338, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹದೇವ ಪ್ರಾಯ 31 ವರ್ಷ ತಂದೆ: ಕೃಷ್ಣಪ್ಪ ವಾಸ: ಪ್ರಸುತ್ತ ಪರ್ಲಿಯಾ ನರ್ಸಿಂಗ್ ಆಸ್ವತ್ರೆ ಹತ್ತಿರ ಬಿ ಮೂಡ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪರ್ಲಿಯಾ ನರ್ಸಿಂಗ್ ಆಸ್ವತ್ರೆ ಹತ್ತಿರ ಇರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಶಾಖೆಯ ವ್ಯವಸ್ಥಾಪಕರಾಗಿದ್ದು ದಿನಾಂಕ: 21-02-2022  ಬೆಳಿಗ್ಗೆ 7.00 ಗಂಟೆಗೆ ಶಾಖೆಯನ್ನು ತೆರದು ಸಿಬ್ಬಂದಿಗಳು ತಮ್ಮ ತಮ್ಮ ಕೆಲಸಗಳಿಗೆ ತೆರಳಿರುವುದಾಗಿದೆ, ಸದ್ರಿ ದಿನ ಮಧ್ಯಾಹ್ನ 12.00 ಗಂಟೆಗೆ ಎಲ್ಲಾ ಸಿಬ್ಬಂದಿಗಳು ಪುನಃ ವಾಪಾಸ್ಸು ಬಂದು ಕಚೇರಿಯ ಬಿಗಿದು ತೆಗೆದು ಒಳಗಡೆ ಹೋದಾಗ ಕಛೇರಿಯಲ್ಲಿ ಅಳವಡಿಸಿರುವ  ಸಿ ಸಿ ಕ್ಯಾಮರಾದ ಡಿ ವಿ ಆರ್ ಕಂಡು ಬಂದಿರುವುದಿಲ್ಲ, ನಂತರ ಕಛೇರಿಯ ಎಲ್ಲಾ ಭಾಗಗಳನ್ನು  ಹಾಗೂ ಕ್ಯಾಷ ಬಾಕ್ಸ್ ಇರುವ ಜಾಗವನ್ನು ಪರಿಶೀಲಿಸಿದಲ್ಲಿ ಅದರಲ್ಲಿ ಇದ್ದ 15,381/- ಹದಿನೈದು ಸಾವಿರದ ಮೂರು ನೂರಾ ಎಂಭತ್ತೊಂದು ರೂಪಾಯಿ  ಕಾಣೆಯಾಗಿರುವುದು ಕಂಡು ಬರುತ್ತದೆ. ದಿನಾಂಕ 21-02-2022 ರಂದು ಬೆಳಿಗ್ಗೆ 8.00 ಗಂಟೆಯಿಂದ 9.30 ಗಂಟೆಯ ಮಧ್ಯದಲ್ಲಿ ಕಛೇರಿಯಲ್ಲಿ ಯಾರು ಇಲ್ಲದಿರುವುದನ್ನು ನೋಡಿ ಯಾರೋ ಕಳ್ಳರು ಹಣವನ್ನು ಹಾಗೂ ಸಿ ಸಿ ಕ್ಯಾಮರಾದ ಡಿ ವಿ ಆರ್ ಕಳ್ಳತನ ಮಾಡಿಕೊಂಡಿ ಹೋಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಅ.ಕ್ರ 19-2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಮನುಷ್ಯ ಕಾಣೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಂಜುನಾಥ (೪೦) ತಂದೆ: ಸಣ್ಣನ ಹನುಮಂತ ವಾಸ: ಜಯನಗರ ಮನೆ, ಸುಳ್ಯ ಕಸಬಾ ಗ್ರಾಮದ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಮೇಸ್ತ್ರಿಯಾಗಿ ಕೆಲಸ ಮಾಡಿಕೊಂಡಿದ್ದು,  ಅವರ ಜೊತೆಗೆ ಶಿವರಾಯ, ಪ್ರಾಯ 21 ವರ್ಷ ತಂದೆ: ಭೀಮಪ್ಪ   ವಾಸ: ಪಶ್ಚಿಮಕಾಲುವೆ ಮನೆ ಮತ್ತು ಹೋಬಳಿ ಹೂವಿನಹಡಗಲಿ ತಾಲೂಕು ವಿಜಯನಗರ ಜಿಲ್ಲೆ ಎಂಬವರು ಸುಮಾರು 3 ವರ್ಷಗಳಿಂದ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ಸುಳ್ಯದ ಗಾಂಧಿನಗರದಲ್ಲಿ ಮುಂಡಾಸ್ ಹಾಜಿ ಎಂಬವರ ಬಾಡಿಗೆ ಮನೆಯಲ್ಲಿ ಆತನ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದ ಜಯನ್ , ಸಂಜು ಎಂಬವರೊಂದಿಗೆ ವಾಸ್ತವ್ಯವಿದ್ದು, ದಿನಾಂಕ 19-2-2021ರಂದು ರಾತ್ರಿ ಆತನ ಬಾಡಿಗೆ ಮನೆಯಾದ ಗಾಂಧಿನಗರದಲ್ಲಿ ಇದ್ದವನು ನಿನ್ನೆಯಿಂದ ನನ್ನ ಜೊತೆಗೆ ಕೆಲಸಕ್ಕೆ ಬಾರದೇ ಇದ್ದು, ಈ ಬಗ್ಗೆ ಎಲ್ಲಾ ಕಡೆ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 23/2022 ಕಲಂ:  ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 20.02.2022 ರಂದು ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಅ.ಕ್ರ 18/2022 ಕಲಂ: 504, 506, 324, 354(1) ಐಪಿಸಿ ಮತ್ತು ಕಲಂ: 8, 12 ಪೋಕ್ಸೋ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-02-2022 10:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080