ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ: 2

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಸವರಾಜ ಯರೇಶೀಮಿ (52)ತಂದೆ: ಎಸ್ ಎಸ್ ಯರೇಶೀಮಿ ವಾಸ: ಸಮೃದ್ದಿ, ಹಳೆ ಹರ್ಲಾಪುರಬನ್ನಿ ಮಹಾಕಾಳಿಯಮ್ಮ ದೇವಸ್ಥಾನ ಹತ್ತಿರ, ಹರಿಹರ ತಾಲೂಕು, ದಾವಣಗೆರೆ ಎಂಬವರ ದೂರಿನಂತೆ ದಿನಾಂಕ: 21.03.2021 ರಂದು  ಬೆಳಿಗ್ಗೆ 08-00 ಗಂಟೆಯಿಂದ 11-00ಗಂಟೆಯ ಮದ್ಯ ದಅವಧಿಯಲ್ಲಿ ಪಿರ್ಯಾದಿದಾರರ ಅಣ್ಣ ಗಂಗಾದರ ಸಂಗಪ್ಪ ಯರೇಶಿಮಿ ಪ್ರಾಯ 52 ವರ್ಷ ಎಂಬವರು ಲಾಯಿಲ ಪ್ರಸನ್ನ ಕಾಲೇಜಿನಲ್ಲಿ ಬಿಎಎಂಎಸ್ ವ್ಯಾಸಂಗ ಮಾಡುತ್ತಿದ್ದ ತನ್ನ ಮಗಳು ಪೂಜಾಳನ್ನು ನೋಡಿಕೊಂಡು ಬರುವರೇ  ತನ್ನ  ಚಿಕ್ಕಪ್ಪ ಹೇಮಗಿರಿಯಪ್ಪ ಎತ್ತಿನಹಳ್ಳಿ ಎಂಬವರೊಂದಿಗೆ  ಬೆಳಿಗ್ಗೆ 08.ಗಂಟೆಗೆ ದರ್ಮಸ್ಥಳದಿಂದ ಕಎಸ್‌ ಆರ್‌  ಟಿ ಸಿ ಬ ಸ್ಸಿನಲ್ಲಿ ಪ್ರಯಾಣಿಸಿಕೊಂಡು ಬರುತ್ತ ಉಜಿರೆ ಎಂಬಲ್ಲಿಗೆ ತಲುಪುವಾಗ ಗಂಗಾದರ ಸಂಗಪ್ಪ ಯರೇಶಿಮಿ ಯವರು  ಬಸ್ಸಿನಲ್ಲಿಯೇ ಆಕಸ್ಮಿಕವಾಗಿ ಕುಸಿದು ಬಿದ್ದವರನ್ನು    ಬಸ್ಸಿನಿಂದ  ಇಳಿಸಿ 108 ಅಂಬುಲೆನ್ಸ್‌ ಮುಖೇನ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದಲ್ಲಿ ಅಲ್ಲಿನ ವೈದ್ಯರು ಗಂಗಾದರ ಸಂಗಪ್ಪ ಯರೇಶಿಮಿ ರವರನ್ನು 11-00 ಗಂಟೆಗೆ ಪರೀಕ್ಷಿಸಿ ಸದ್ರಿಯವರು ಮೃತಪಟ್ಟಿರುವ ಬಗ್ಗೆ ತಿಳಿಸಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯುಡಿಆರ್‌ ನಂ.12 /2021 ಕಲಂ:  174 ಸಿಆರ್‌ಪಿಸಿ ಯಂತೆಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೇವಯ್ಯ ಸ್ವಾಮಿ ಪ್ರಾಯ:41 ವರ್ಷ ತಂದೆ; ಶಬರಯ್ಯ ಸ್ವಾಮಿ ವಾಸ: ಮಾರುತಿ ಗಾರ್ಮೆಂಟ್ಸ್‌  ಎದುರು ಪರಿಮಳ ನಗರ ನಂದಿನಿ ಲೇಔಟ್‌ ಬೆಂಗಳೂರು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 20-03-2021 ರಂದು ತನ್ನ ಕುಟುಂಬ ಹಾಗೂ ಸ್ನೇಹಿತರೊಂದಿಗೆ  ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದು ದಿನಾಂಕ;21-03-2021 ರಂದು ಬೆಳಗ್ಗಿನ ಜಾವ ಹರಕೆ ಮಂಡೆಯಲ್ಲಿ ಮುಡಿಯನ್ನು ಕೊಟ್ಟು ಸ್ನಾನಕ್ಕಾಗಿ ನೇತ್ರಾವತಿ ಹೊಳೆಗೆ ಹೋದಾಗ ವಿಪರೀತ ಜನಸಂದಣಿ ಇದ್ದುದ್ದರಿಂದ ನಿಡ್ಲೆ ಗ್ರಾಮದ ಅಣಿಯೂರು- ಹೊಳೆ ಕುದ್ರಾಯ ಎಂಬಲ್ಲಿ ಬೆಳಿಗ್ಗೆ 8.00 ಗಂಟೆ ಸಮಯಕ್ಕೆ ಸ್ನಾನಕ್ಕೆಂದು ಇಳಿದಾಗ ಪಿರ್ಯಾದುದಾರರ ಮಗಳು ಮಾನಸ ಡಿ ಹಿರೇಮಠ(15) ಎಂಬವಳು  ನದಿ ನೀರಿನಲ್ಲಿ  ಸ್ನಾನ ಮಾಡುತ್ತಿರುವ ಸಮಯ  ಆಕಸ್ಮಿಕವಾಗಿ ಕಾಲು ಜಾರಿ ನದಿ ನೀರಿಗೆ ಬಿದ್ದು ಈಜಲು ಬಾರದೇ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್‌ ನಂ:22/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-03-2021 10:00 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080