ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರೂಪೇಶ್ ಪ್ರಾಯ 19 ವರ್ಷ ತಂದೆ ಎಂ ಗಣೇಶ ವಾಸ ಕೆಲಿಂಜ ಮಾಡದಾರು ಮನೆ  ವೀರಕಂಭ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 20-03-2022 ರಂದು 20-00 ಗಂಟೆಯ ಸಮಯದಲ್ಲಿ ಹೊಂಡಾ ಡ್ಯೂ ದ್ವಿ ಚಕ್ರ ವಾಹನ ಕೆಎ-05-ಕೆಎನ್-8028 ನೇಯದರಲ್ಲಿ ಪವನ್ ಕುಮಾರ್ ಸವಾರರಾಗಿ ಗಿರಿಯಪ್ಪ ಗೌಡ ರವರು ಸಹಸವಾರರಾಗಿ ಕುಳಿತುಕೊಂಡು ಕಲ್ಲಡ್ಕ- ಕಾಂಞಗಾಡ್  ರಾಜ್ಯ ಹೆದ್ದಾರಿಯಲ್ಲಿ ಕಲ್ಲಡ್ಕ ಕಡೆಯಿಂದ ವೀರಕಂಬ ಕಡೆಗೆ ಸವಾರಿ ಮಾಡಿಕೊಂಡು ಬಂದು ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಕೊಟ್ಟಾರಿ ಕಟ್ಟೆ ಎಂಬಲ್ಲಿಗೆ ತಲುಪಿದಾಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿದ ಪರಿಣಾಮ ಹೊಂಡಾ ಡ್ಯೂ ದ್ವಿ ಚಕ್ರ ವಾಹನ ಸವಾರನ ಹತೋಟ್ಟಿ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಹೊಂಡಾ ಡ್ಯೂ ದ್ವಿ ಚಕ್ರ ವಾಹನದ ಸವಾರ ಪವನ್ ಕುಮಾರ್ ನ ಬಲಕೈಗೆ ಗುದ್ದಿದ ಗಾಯ .ಸಹಸವಾರರಾಗಿ ಕುಳಿತ್ತಿದ್ದ ಗಿರಿಯಪ್ಪ ಗೌಡರ ಮೂಗಿಗೆ, ಹಣೆಯ ಭಾಗಕ್ಕೆ, ತುಟಿಗೆ ರಕ್ತ ಗಾಯ ಹಾಗೂ ತಲೆಯ ಮೇಲ್ಬಾಗಕ್ಕೆ ಗುದ್ದಿದ ಗಾಯ ಅಗಿ ಗಾಯಾಳು ಗಿರಿಯಪ್ಪ ಗೌಡರವರು ಪುತ್ತೂರಿನ ಪ್ರಗತಿ ಅಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 47/2022 ಕಲಂ:279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಿಶಾಂತ್ ಬಿಲ್ಲಂಪದವು,ಪ್ರಾಯ: 35 ವರ್ಷ, ತಂದೆ: ನಾರಾಯಣ ಭಟ್, ವಾಸ: ಸತ್ಯಸಾಯಿ ವಿಹಾರ ಅಳಿಕೆ ಮನೆ, ಅಳಿಕೆ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರಾದ ನಿಶಾಂತ್ ಬಿಲ್ಲಂಪದವು,ಪ್ರಾಯ: 35 ವರ್ಷ, ತಂದೆ: ನಾರಾಯಣ ಭಟ್, ವಾಸ: ಸತ್ಯಸಾಯಿ ವಿಹಾರ ಅಳಿಕೆ ಮನೆ, ಅಳಿಕೆ ಗ್ರಾಮ, ಬಂಟ್ವಾಳ ತಾಲೂಕುರವರು ಈ ದಿನ ದಿನಾಂಕ 21.03.2022 ರಂದು ಕೆಎ-19-ಎಮ್ಎಮ್-0446ನೇ ಕಾರಿನಲ್ಲಿ ಪುತ್ತೂರು-ಬುಳೇರಿಕಟ್ಟೆ-ಪುಣಚ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಮಯ ಸುಮಾರು 4.45 ಗಂಟೆಗೆ ಬುಳೇರಿಕಟ್ಟೆ ಜಂಕ್ಷನ್ ನ ಸಮೀಪ ತಲುಪಿದಾಗ ಎಡಬದಿಯಿಂದ ಏಕಾಏಕಿ ಮುಖ್ಯರಸ್ತೆಗೆ ನುಗ್ಗಿದ ಕೆಎ-03-ಹೆಚ್‌ಪಿ-9328 ನೇ ದ್ವಿಚಕ್ರ ವಾಹನವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಫಿರ್ಯಾದಿದಾರರು ಇದ್ದ  ಕಾರನ್ನು ನಿಲ್ಲಿಸಿದ್ದು, ಆ ಸಮಯ ಹಿಂಭಾಗದಿಂದ ಕೆಎ-21-ವೈ-9341 ನೇ ದ್ವಿಚಕ್ರ ವಾಹನವು ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಬಂದು ಫಿರ್ಯಾದಿದಾರರ ವಾಹನದ ಎಡಭಾಗಕ್ಕೆ ಢಿಕ್ಕಿಯಾಗಿದ್ದು, ಇದರಿಂದ ವಾಹನದ ಹಿಂಭಾಗಕ್ಕೆ ಹಾನಿಯಾಗಿರುತ್ತದೆ. ಮತ್ತು ವಾಹನದ ಒಳಗೆ ಇದ್ದವರಿಗೆ ಗುದ್ದಿದ ಗಾಯವಾಗಿರುತ್ತದೆ .ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 39/2022  ಕಲ0:279  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಠಾಣೆ  : ಪಿರ್ಯಾಧಿದಾರರಾದ ಮೂಸ, ಪ್ರಾಯ 54 ವರ್ಷ, ತಂದೆ: ದಿ|| ಇಬ್ರಾಹಿಂ, ವಾಸ: ನೆಕ್ಕಿಲು ಕುಪ್ಪೆಟ್ಟಿ ಮನೆ, ಕಲ್ಲೇರಿ ಅಂಚೆ, ಉರುವಾಲು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 20-03-2022 ರಂದು 18-30 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಸಂದೇಶ್‌ ಎಂಬವರು KA-19-HJ-1320 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ, ಉಪ್ಪಿನಂಗಡಿ ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕುಪ್ಪೆಟ್ಟಿ ಉಂಡೆ ಮನೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಕುಪ್ಪೆಟ್ಟಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EA-4570 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ, ಎರಡೂ ವಾಹನಗಳ ಸವಾರರು ವಾಹನ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲು ಪಾದಕ್ಕೆ ಗುದ್ದಿದ ರಕ್ತಗಾಯ, ಬಲಕೈಯ ತಟ್ಟಿಗೆ ಮತ್ತು ಬೆರಳುಗಳಿಗೆ ಗುದ್ದಿದ ರಕ್ತಗಾಯ, ತಲೆಯ ಮೇಲ್ಭಾಗ ಗುದ್ದಿದ ಗಾಯ ಮತ್ತು ದೇಹಕ್ಕೆ ಗುದ್ದಿದ ನೋವು  ಹಾಗೂ ಸಂದೇಶ್‌ ರವರಿಗೆ ಬಲಕಾಲು ಪಾದಕ್ಕೆ ಮತ್ತು ಬಲಕಾಲು ಮೊಣಗಂಟಿಗೆ, ಬಲಕೈಯ ಉಂಗುರ ಬೆರಳಿಗೆ ಮತ್ತು ದೇಹಕ್ಕೆ  ಗುದ್ದಿದ ನೋವಾಗಿರುತ್ತದೆ. ಪಿರ್ಯಾದುದಾರರು ಉಪ್ಪಿನಂಗಡಿಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  53/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಾಧವ ಪಿ  , ಪ್ರಾಯ:  46 ವರ್ಷ, ತಂದೆ: ರಾಮಣ್ಣ ಮಡಿವಾಳ,   ವಾಸ: ಮಧು ಫ್ಯಾನ್ಸಿ ರಾಮ್ ನೀಲಮ್ ಕಟ್ಟಡ, ಪಂಜ ಐವತ್ತೊಕ್ಲು ಗ್ರಾಮ ಸುಳ್ಯ  ತಾಲೂಕು ಎಂಬವರ ದೂರಿನಂತೆ ದಿನಾಂಕ 21-03-2022 ರಂದು ಪಿರ್ಯಾದಿದಾರರು 11:45 ಗಂಟೆ ಸಮಯಕ್ಕೆ ಅವರ ಮಗ ಭರತ್ ಕುಮಾರರವರೊಂದಿಗೆ ಅಂಚೆ ಇಲಾಖೆಯ ಜಮೀನು ಸರ್ವೆ ಬಗ್ಗೆ ಅವರಿಗೆ ನೋಟಿಸು ಬಂದಿದ್ದು ಸದ್ರಿ ಸರ್ವೇ ನಡೆಯುವ ಸ್ಥಳ ಐವತ್ತೊಕ್ಲು ಗ್ರಾಮದ ಪಂಜ ಪೇಟೆ ಬಳಿ ಹೋದಾಗ ಎದ್ರಿಗಳಾದ ಮೋನಪ್ಪ ನಾಯ್ಕ, ಆತನ ಹೆಂಡತಿ ಶ್ರೀಮತಿ ವೀಣಾ ಮತ್ತು ಮಗ ಪೃಥ್ವಿನ್ ಎಂಬವರು ಸದ್ರಿ ಸರ್ವೇ ನಡೆಯುವಾಗ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದು, ಪಿರ್ಯಾದಿಯ ಮಗ ಭರತ್ ಕುಮಾರನು ಕೂಡಾ  ವೀಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಮೋನಪ್ಪ ನಾಯ್ಕ ನು ಆತನನ್ನು ತಡೆದು ನಿಲ್ಲಿಸಿ ಅವ್ಯಾಚ ಶಬ್ಧಗಳಿಂದ ಬೈದು, ಇಲ್ಲಿ ಯಾಕೆ ವೀಡಿಯೋ ಮಾಡುತ್ತೀಯಾ” ಎಂದು ಬೈದು ಕಾಲಿನಿಂದ ಹೊಟ್ಟೆಯ ಭಾಗಕ್ಕೆ ತುಳಿದಿದ್ದು ನಂತರ ವೀಣಾ ಮತ್ತು  ಪೃಥ್ವಿನ್ ಕೂಡಾ ಮಗನ ಮುಖಕ್ಕೆ ಕೈಯಿಂದ ಹೊಡಿದಿದ್ದು ಆಗ ಪಿರ್ಯಾದಿಯ ಹೆಂಡತಿ ನಳಿನಾಕ್ಷಿ ಓಡಿ ಬಂದು ಮಗನಿಗೆ ಹೊಡೆಯುದನ್ನು ಬಿಡಿಸಿದಾಗ ಆಕೆಗೂ ಕೂಡಾ ಮೂರು ಜನರು ಕೈಯಿಂದ ತಲೆಗೆ ಮತ್ತು ಮೈ ಕೈಗೆ ಹೊಡೆದು ನೋವುಂಟು ಮಾಡಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ  : 34-2022 ಕಲಂ:341   323, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 21.03.2022 ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ  24/2022 ಕಲಂ 498(A),323,313, 34ಜೊತೆಗೆ  ಐಪಿಸಿ ಮತ್ತು ಕಲಂ 04 ವರದಕ್ಷಿಣೆ ನಿಷೇಧ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಆಶಾ ಎಸ್ ಹೆಗಡೆ ಪ್ರಾಯ 31 ವರ್ಷ ಗಂಡ ಶ್ರೀ ವತ್ಸ ವಾಸ: ಅಂಬಾಶ್ರಮ ಮನೆ, ಚಟ್ಟೆಕಲ್ಲು ಸಂಪಾಜೆ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಆಶಾ ಎಸ್ ಹೆಗಡೆ ರವರು ಒಂದೂವರೆ ತಿಂಗಳಿನಿಂದ ಗಂಡ ಮತ್ತು ಮಕ್ಕಳೊಂದಿಗೆ ಗಂಡನ ಮನೆಯಾದ ಸುಳ್ಯ ತಾಲೂಕು ಸಂಪಾಜೆ ಗ್ರಾಮದ  ಅಂಬಾಶ್ರಮ ಎಂಬಲ್ಲಿ ಮಾವ ಅಂಬರೀಶ್ ಭಟ್ ಅತ್ತೆ ಪುಷ್ಪಾ ಅಜ್ಜ ಗೋವಿಂದ ಭಟ್, ಅಜ್ಜಿ ಸರಸ್ವತಿ ಭಟ್ ವಾಸವಾಗಿದ್ದು, ದಿನಾಂಕ 20.03.2022 ರಂದು ಮಧ್ಯಾಹ್ನ 3.45 ಗಂಟೆಗೆ ಮಾವ ಅಂಬರೀಶ್ ಭಟ್ ಮತ್ತು ಗಂಡ ಶ್ರೀವತ್ಸರವರು ಮಡಿಕೇರಿಗೆ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದು, ಮನೆಯಲ್ಲಿ ಅತ್ತೆ ಮಾವ ಅಜ್ಜ, ಅಜ್ಜಿ ಮತ್ತು ಮಕ್ಕಳು ಇದ್ದು, ರಾತ್ರಿ ಸುಮಾರು 8.30 ಗಂಟೆ ಸಮಯಕ್ಕೆ ನಾಯಿ ಬೊಗಳಿದ ಶಬ್ದ ಕೇಳಿ ಪಿರ್ಯಾದಿದಾರರು ಮನೆಯ ಮದ್ಯದ ಕೋಣೆಗೆ ಬರುವಷ್ಟರಲ್ಲಿ 3 ಜನ 20 ರಿಂದ 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿದ್ದು,  ಇಬ್ಬರಲ್ಲಿ ಕೈಯಲ್ಲಿ ಮಾರಾಕಾಸ್ತ್ರಗಳಿದ್ದು ಒಬ್ಬನ ಕೈಯಲ್ಲಿ ದೊಡ್ಡ ಕತ್ತಿ ಹಾಗೂ ಇನ್ನೊಬ್ಬನ ಕೈಯಲ್ಲಿ ದೊಡ್ಡ ಚೂರಿ ಇದ್ದು ನೇರವಾಗಿ ಬಂದು ಪಿರ್ಯಾದಿದಾರರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದು, ಅಲ್ಲದೇ ಬಾಯಿಗೆ ಪ್ಲಾಸ್ಟರ್ ಹಾಕಿದಾಗ ಅಂಟದೆ ಕೆಳಗೆ ಬಿದ್ದಿದ್ದು, ಅವರೆಲ್ಲರೂ ತಮಿಳಿನಲ್ಲಿ ಮಾತನಾಡಿಕೊಂಡಿದ್ದು,  ನಂತರ ಒಳಗೆ ಬಂದು ಪಕ್ಕದ ಚಾವಡಿಯಲ್ಲಿದ್ದ ಅಜ್ಜ ಗೋವಿಂದ ಭಟ್‌ ರವರನ್ನು ಪಿರ್ಯಾದಿದಾರರ ಬಳಿ ಕರೆ ತಂದು 3 ಜನ ಒಳಗೆ ಇದ್ದು, ಅಜ್ಜಿ ಸರಸ್ವತಿ ಭಟ್‌ ಹೊರಗೆ ಬಂದಾಗ ಅವರ ಪೈಕಿ ಒಬ್ಬಾತ ಅಜ್ಜಿಯನ್ನು ಎಳೆದು ಬೀಳಿಸಿದನು. ನಂತರ ಕತ್ತಿಯನ್ನು ಅಜ್ಜಿಯ ಕುತ್ತಿಗೆಗೆ ಹಿಡಿದು ಹಣ ಎಲ್ಲಿ ಎಂದು ಕೇಳಿದ್ದಲ್ಲದೇ ಅಜ್ಜನ ಬಾಯಿಗೆ ಪ್ಲಾಸ್ಟರ್ ಹಾಕಿ ನಂತರ ಪಿರ್ಯಾದಿದಾರರ ಅತ್ತೆ,ಅಜ್ಜ, ಅಜ್ಜಿಯನ್ನು ಊಟದ ಕೋಣೆಯಲ್ಲಿ ಕೂರಿಸಿ ಪಿರ್ಯಾದಿದಾರರನ್ನು ಕೋಣೆಗೆ ಕೂಡಿ ಹಾಕಿ ತಮಿಳಿನಲ್ಲಿ ಮತ್ತು ಕೈ ಸನ್ನೆಯಲ್ಲಿ ಗೋದ್ರೇಜಿನ ಕೀಯನ್ನು ಕೇಳಿದಾಗ ಪಿರ್ಯಾದಿದಾರರು ಅತ್ತೆಯ ಬಳಿ ಇದೆ ಎಂದು ಹೇಳಿದಾಗ ಅತ್ತೆಯನ್ನು ಕರೆದುಕೊಂಡು ಬಂದು ಕೀ ತರಿಸಿ ಬಲಾತ್ಕಾರವಾಗಿ ಅವರ ಕೈಯಿಂದಲೇ ಬಾಗಿಲು ತೆಗೆಸಿ ಕಪಾಟಿನಲ್ಲಿದ್ದ ಚಿನ್ನವನ್ನು ತೆಗೆದಿದ್ದು, ಅಲ್ಲದೇ ಮೇಜಿನ ಮೇಲಿದ್ದ ಪಿರ್ಯಾದಿದಾರರ ಗಂಡನ ಪರ್ಸ್‌ನಿಂದ 2 ½  ಸಾವಿರ ಹಣ ಮಾವನ ಸಾಮ್‌ಸಾಂಗ್ ಮೊಬೈಲ್ ತೆಗೆದಿದ್ದು ಅದೇ ಸಮಯಕ್ಕೆ ದೇವರ ಕೋಣೆಯಲ್ಲಿರುವ ಕಪಾಟಿನಿಂದ 5 ವರಲ್ಲಿ ಇನ್ನಿಬ್ಬರು ಅಪರಿಚಿತರು 2 ಹುಂಡಿ ಮತ್ತು 2 ಬ್ಯಾಗಿನಲ್ಲಿದ್ದ 150,000/- ಹಣವನ್ನು ಎಗರಿಸಿ ಹೊರಗಿದ್ದು, ಒಂದು ಬಿಳಿ ವಸ್ತ್ರದಲ್ಲಿ ಸುತ್ತಿ ಹೊರಗೆ ಇನ್ನೊಬ್ಬನ ಕೈಗೆ ಹಸ್ತಾಂತರಿಸಿದರು. ನಂತರ ಟೇರೆಸಿಗೆ ಹೋಗಿ ಹಣಕ್ಕೆ ಹುಡುಕಾಡಿ ಏನೂ ಸಿಗದೇ ಇದ್ದಾಗ ವಾಪಾಸು ಬಂದು ಅವರ ಪೈಕಿ ಒರ್ವ ವ್ಯಕ್ತಿ 45 ರಿಂದ 50 ವಯಸ್ಸಿನವನಾಗಿದ್ದು, ಉಳಿದ 5 ಜನ 20 ರಿಂದ 30 ವರ್ಷ ಪ್ರಾಯದವರಾಗಿದ್ದು, ಇಬ್ಬರು ಕಪ್ಪು ಪ್ಯಾಂಟ್ ಒಬ್ಬ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದು, ಅವರು ಹೋಗುವಾಗ ಯಾರಿಗೂ ಹೇಳಿದಂತೆ ಬೆದರಿಕೆ ಹಾಕಿ ಹೋಗಿದ್ದು, ಈ ಘಟನೆಯು ರಾತ್ರಿ 8.30 ಗಂಟೆಯಿಂದ 9.00 ಗಂಟೆ ಮಧ್ಯೆ ನಡೆದಿದ್ದು, ಅವರುಗಳು ಹೋದ ನಂತರ ಪಿರ್ಯಾದಿದಾರರು ಪರಿಶೀಲಿಸಿದಾಗ ಲ್ಯಾಂಡ್ ಲೈನ್ ಫೋನ್ ಒಡೆದು ಹಾಕಿದ್ದು ಒಟ್ಟು ಅಂದಾಜು ರೂ 5,50,000/- ಮೌಲ್ಯದ ಚಿನ್ನಾಭರಣ, ನಗದು ಮತ್ತು ಸೊತ್ತುಗಳನ್ನು ದರೋಡೆಗೈದಿದ್ದು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ.ಕ್ರ 34/22 ಕಲಂ 395 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-03-2022 11:03 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080