ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬೆಳ್ತಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಿರಿಜಾ ನಾಯ್ಕೆದಿ (60), ಗಂಡ: ದಿ. ಸಂಜೀವ ನಾಯ್ಕ, ವಾಸ: 8-2, ಸಿ.ಎ ಬ್ಯಾಂಕ್‌ ಬಳಿ, ಶಿವಾಜಿನಗರ ಕ್ರಾಸ್‌, ಉಜಿರೆ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 20-04-2021 ರಂದು ಸಮಯ ಸುಮಾರು ಸಂಜೆ 4.40 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಶಿವಾಜಿನಗರ ಎಂಬಲ್ಲಿ ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಬೆಳಾಲು ಕಡೆಯಿಂದ ಉಜಿರೆ ಕಡೆಗೆ ಕೆಎ 70 ಎಚ್‌ 4530 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡ ಕೈ ಮೊಣಗಂಟಿಗೆ ಮತ್ತು ಎಡಕೋಲು ಕಾಲಿಗೆ, ಬಲ ತೊಡೆಗೆ ಗುದ್ದಿದ ಗಾಯವಾಗಿರುತ್ತದೆ, ಗಾಯಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 41/2021, ಕಲಂ; 279,337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 2

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಕುಮಾರ( 39) ತಂದೆ: ಧನಂಜಯಗೌಡ ವಾಸ: ನರನಡ್ಕ ಮನೆ, ಉಬರಡ್ಕ ಮನೆ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಪರಿಚಯಸ್ಥನಾದ ಆಪಾಧಿತ ಚಿದ ಯಾನೆ ಚಿದಾನಂದ ಈ ಹಿಂದೆ ಹಲವು ಬಾರಿ ಸುಮ್ಮ ಸುಮ್ಮನೆ ಜಗಳ ಮಾಡುತ್ತಿದ್ದವನು, ಪಿರ್ಯಾದುದಾರರು ದಿನಾಂಕ: 21.04.2021 ರಂದು ಸಮಯ ಸುಮಾರು 17:45 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ  ದುಗ್ಗಲಡ್ಕ ಎಂಬಲ್ಲಿ ಮಧು ವೈನ್ ಶಾಪ್ ಎದುರು ನಿಂತುಕೊಂಡಿರುವಾಗ,ಏಕಾಏಕಿ ಪಿರ್ಯಾದುದಾರರ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ನಿನಗೆ ಈ ಹಿಂದೆಯೇ ಎರಡು ಬಿಡಬೇಕೆಂದು ಅಂದು ಕೊಂಡಿದೆ, ಈಗ ಸಿಕ್ಕಿದೆ, ಎಂದು ಹೇಳಿ’ ಅಲ್ಲಿಯೇ ಬಿದ್ದುಕೊಂಡಿದ್ದ ಹಳೆಯ ಚಯರಿನ ರಾಡಿನ ತುಂಡನ್ನು ತಗೆದುಕೊಂಡು ಎಡಕೈ ಗೆ ಮತ್ತು ಹಣೆಗೆ ಹೊಡೆದು ಹಲ್ಲೆಮಾಡಿ ರಕ್ತಗಾಯ ಮಾಡಿದ್ದು ಕೂಡಲೇ ಪಿರ್ಯಾದುದಾರರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 25/2021 ಕಲಂ: 504,324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸನತ್ ಪ್ರಾಯ 28 ತಂದೆ ಚಂದ್ರಪ್ಪ ಪೂಜಾರಿ  ಜೇರಲಗುಡ್ಡೆ ಮನೆ ಕರಿಯಾಂಗಳ ಗ್ರಾಮ ಎಂಬವರ ದೂರಿನಂತೆ ಪಿರ್ಯಾದುದಾರರು ತಂದೆ ತಾಯಿ ಜೊತೆ ವಾಸವಾಗಿದ್ದು ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ, ದಿನಾಂಕ:21/04/2021 ರಂದು ಪಿರ್ಯಾದುದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಚಹಾ ತಿಂಡಿ ತರಲೆಂದು ಸ್ನೇಹಿತ ರಾಜೇಶ್ ರವರ ಜೊತೆಯಲ್ಲಿ ಬಡಕಬೈಲುನಲ್ಲಿರುವ ಹೋಟೆಲ್ ಗೆ ಹೋಗಿ ಚಹಾ ತಿಂಡಿ ತೆಗೆದುಕೊಂಡು ಪಿರ್ಯಾದುದಾರರ ಸ್ಕೂಟರ್ ನ ಬಳಿ ಬಂದಾಗ ಪಿರ್ಯಾದುದಾರರ ಪರಿಚಯದ ಶಶಾಂಕನು ದುರಗುಟ್ಟಿ ನೋಡಿ ಸ್ಕೂಟರನ್ನು ನಿಲ್ಲಿಸುವಂತೆ ಹೇಳಿ ಆ ಸಮಯ ಪಿರ್ಯಾದುದಾರರು ಏನೇಂದು ಕೇಳಿದಾಗ ಶಶಾಂಕನು ಸ್ಕೂಟರ್ ನ ಎದುರು ನಿಂತು ಹೋಗದಂತೆ ತಡೆದು ಪಿರ್ಯಾದುದಾರರ ಕುತ್ತಿಗೆಯನ್ನು ಬಗ್ಗಿಸಿ ಎದೆಗೆ ಗುದ್ದಿದ್ದು ಹೊಟ್ಟೆಗೆ ತುಳಿದಿದ್ದು ಆ ಸಮಯ ಅಲ್ಲಿ ಸೇರಿದ್ದ ಕೆಲವರು ಗಲಾಟೆಯನ್ನು ನಿಲ್ಲಿಸಿದ್ದು ಶಶಾಂಕನು ಆತನ ಬೈಕಿನಲ್ಲಿ ಹೋಗಿರುತ್ತಾನೆ. ಶಶಾಂಕನು ಹೊಡೆದುದರಿಂದ ಉಂಟಾದ ಗುದ್ದಿದ ನೋವಿಗೆ ಚಿಕಿತ್ಸೆ ಬಗ್ಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 46/2021 ಕಲಂ 341 323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-04-2021 10:36 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080