ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉಮ್ಮರ್‌ ಫಾರೂಕ್‌ (37)ತಂದೆ:ಬಿ ಮೊಹಮ್ಮದ್‌  ವಾಸ:ಲಕ್ಕಿ ಕಾಂಪೌಂಡ್‌ ಮನೆ ಬನ್ನೂರು ಗ್ರಾಮ ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ:17.05.2021 ರಂದು ಕೆಎ-21-ಡಬ್ಯು-4940ನಂಬ್ರದ ಸ್ಕೂಟರ್‌ನಲ್ಲಿ ಆರೋಪಿ ಅಬ್ದುಲ್‌ ರಿಯಾಜ್‌(39) ತನ್ನ ಹೆಂಡತಿ ಸಾಜೀದಾ(27)ಮತ್ತು 1 ½ ವರ್ಷದ (ರಿಝಾ) ಮಗುವಿನೊಂದಿಗೆ ದೇರಳಕಟ್ಟೆಯ ತನ್ನ ಹೆಂಡತಿಯ ತವರು ಮನೆಗೆ ಹೋಗಲೆಂದು ಮನೆಯಿಂದ ಬೆಳಿಗ್ಗೆ 06:00 ಗಂಟೆಗೆ ಮನೆಯಿಂದ ಮಾಣಿ–ಮಂಗಳೂರು ಹೆದ್ದಾರಿಯಲ್ಲಿ ಹೊರಟು ಸಮಯ 07:00 ಗಂಟೆಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮ ಸೂರಿಕುಮೇರು ಎಂಬಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಸ್ಕೂಟರ್‌ ಸವಾರಿ ಮಾಡುತ್ತಿದ್ದ ಆರೋಪಿ ತನ್ನ ಚಾಲನಾ ನಿಯಂತ್ರಣ ತಪ್ಪಿ ಸ್ಕೂಟರ್‌ ಸಮೇತ ರಸ್ತೆಯ ಮೇಲೆ ಬಿದ್ದು ಸ್ಕೂಟರ್‌ ಹಿಂಬದಿಯಲ್ಲಿ ಸಹ ಸವಾರಳಾಗಿ ಕುಳಿತಿದ್ದ ಸಾಜೀದಾ(27)ರವರ ಬಲ ಕೈ, ಮೇಲ್ಬಾಗದ ಮೂರು ಹಲ್ಲುಗಳು ಮುರಿತಕ್ಕೆ ಒಳಗಾಗಿದಲ್ಲದೇ ಕಾಲುಗಳು, ಕೈಗಳು ಎಡ ಕೆನ್ನೆಯಲ್ಲಿ ತರಚಿದ ಗಾಯವಾಗಿರುತ್ತದೆ.ಅಲ್ಲದೇ ಆರೋಪಿತನ ಕೈಗಳು ಮತ್ತು ಕಾಲುಗಳಲ್ಲಿ ತರಚಿದ ಗಾಯವಾಗಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 72/2021 ಕಲಂ:279,337 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಣ್ಣಿ  ಪೂಜಾರಿ ( 58)  ತಂದೆ:  ದಿ| ಬಾಡು  ಪೂಜಾರಿ  ವಾಸ: ಶ್ರೀ  ದೇವಿ  ಕೃಪಾ ಔಟ್ಲ ಮನೆ, ಸುಲ್ಕೇರಿ  ಗ್ರಾಮ,  ಬೆಳ್ತಂಗಡಿ  ತಾಲೂಕು ರವರು ದಿನಾಂಕ:20-05-2021 ರಂದು ರಾತ್ರಿ ಮನೆಯಲ್ಲಿದ್ದು ಆ ಸಮಯ  ಪಿರ್ಯಾದಿದಾರರ ಮನೆಯಿಂದ ಕೊಗಳತೆ ದೂರದಲ್ಲಿ ಸುಲ್ಕೇರಿ  ಗ್ರಾಮದ ಜೌಟ್ಲ ಎಂಬಲ್ಲಿ   ಮೋಟಾರ್  ಸೈಕಲ್ ರಸ್ತೆಗೆ  ಬಿದ್ದ  ಶಬ್ದ ಕೇಳಿದ್ದು , ಮನೆಯಲ್ಲಿದ್ದ  ತನ್ನ ಮಗನಾದ  ಪ್ರಕಾಶ್ ನೊಂದಿಗೆ  ಹೋಗಿ  ನೋಡಲಾಗಿ   ಅಲ್ಲಿ   ಪಿರ್ಯಾದಿದಾರರ 2 ನೇ  ಮಗ  ಪ್ರಸಾದ್  ನು  ಬೈಕ್  ಸ್ಕಿಡ್  ಆಗಿ  ಕಾಂಕ್ರೀಟ್  ರಸ್ತೆಗೆ   ಬಿದ್ದಿದ್ದು   ಕೂಡಲೇ  ಆತನನ್ನು  ಎತ್ತಿ  ಉಪಚರಿಸಿ   ನೋಡಲಾಗಿ  ಆತನ  ಹಣೆಯ  ಎಡಭಾಗದ  ಹುಬ್ಬಿನ   ಮೇಲೆ  ತರಚಿದ  ಗಾಯ   ಹಾಗೂ   ಎದೆಯ  ಎಡ ಬಾಗಕ್ಕೆ  ಗುದ್ದಿದ  ಗಾಯವಾಗಿದ್ದು, ಕೂಡಲೇ   ಅವರು    ನೆರೆಯ   ವಿಕಿತ್  ಎಂಬವರನ್ನು  ಕರೆಯಿಸಿ  ಆತನ  ಕಾರಿನಲ್ಲಿ  ಬೆಳ್ತಂಗಡಿ  ಬೆನಕ ಆಸ್ಪತ್ರೆಗೆ  ಕರೆದುಕೊಂಡು  ಹೋಗಿ   ಅಲ್ಲಿಂದ  ಹೆಚ್ಚಿನ   ಚಿಕಿತ್ಸೆಯ  ಬಗ್ಗೆ  ಮಂಗಳೂರು  ಎ ಜೆ   ಆಸ್ಪತ್ರೆಗೆ  ದಾಖಲಿಸಿ  ಅಲ್ಲಿಂದ ವಾಪಾಸು  ಮಂಗಳೂರು  ವೆನ್ ಲಾಕ್ ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 34 -2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪೂವಪ್ಪ ನಾಯ್ಕ್ ತಂದೆ: ಕುಮಾರ ನಾಯ್ಕ್ ವಾಸ: ಕುಂಞಿಕುಮೇರು ಮನೆ ಮಾಡ್ನೂರು ಗ್ರಾಮ ಪುತ್ತೂರು ತಾಲೂಕು ರವರ ಬಾಬ್ತು ಹೀರೋ ಹೊಂಡಾ ಕಂಪೆನಿಯ ಕೆಎ-19-ಎಕ್ಸ್‌-3260ನೇ ಮೋಟಾರು ಸೈಕಲನ್ನು ದಿನಾಂಕ 18-05-2021 ರಂದು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಮಿನೋಜಿಕಲ್ಲು ಬಸ್‌ಸ್ಟಾಂಡಿನ ಪಕ್ಕದಲ್ಲಿ ಸಂಜೆ 4-15 ಗಂಟೆಗೆ ನಿಲ್ಲಿಸಿ ಫಿರ್ಯಾದಿದಾರರು ಆಚಾರಿಮೂಲೆಯಲ್ಲಿರುವ ಸಂಬಂದಿಕರ ಮನೆಗೆ ಹೋಗಿ ಮರಳಿ ರಾತ್ರಿ ಸುಮಾರು 7-00 ಗಂಟೆಗೆ ಬೈಕ್‌ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಫಿರ್ಯಾದಿದಾರರ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾಗಿರುವ ಮೋಟಾರು ಸೈಕಲಿನ ಅಂದಾಜು ಮೌಲ್ಯ ಸುಮಾರು 15000/- ರೂಗಳಾಗ ಬಹುದು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಕ್ರ 44/21 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪುಂಜಾಲಕಟ್ಟೆ ಪೊಲೀಸ್‌ ಠಾಣೆ ಹೆಡ್‌ ಕಾನ್ಸ್ಟೇಬಲ್‌ ರವರು ರವರು  ದಿನಾಂಕ: 21.05.2021 ರಂದು ಪುಂಜಾಲಕಟ್ಟೆ ಠಾಣಾ ಸರಹದ್ದಿನಲ್ಲಿ ಕೋವಿಡ್-19 ರೋಗ ನಿಯಂತ್ರಣದ ಬಗ್ಗೆ ಸರಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವ ಕುರಿತು ಜನರಿಗೆ ಅರಿವು ಮೂಡಿಸುತ್ತಾ ಮೂವಿಂಗ್ ಹಾಗೂ  ಗುಪ್ತ ಮಾಹಿತಿ ಕಲೆ ಹಾಕುವ ಕರ್ತವ್ಯದಲ್ಲಿರುತ್ತಾ 18:00 ಗಂಟೆಗೆ ಬೆಳ್ತಂಗಡಿ ತಾಲೂಕು, ಪುತ್ತಿಲ ಗ್ರಾಮದ, ಚಿಮುಳ್ಳು ಎಂಬಲ್ಲಿರುವ ಹೆಚ್‌.ಎಂ ಸ್ಟೋರ್ ಎಂಬ ದಿನಸಿ ಅಂಗಡಿ ಬಳಿ ತಲುಪಿ ನೋಡಿದಾಗ ಅಂಗಡಿಯ ಮಾಲಕರಾದ ಇರ್ಷಾದ್ ಎಂಬವರು  ಸರಕಾರವು ಕೋವಿಡ್-19 ರೋಗದ ಹಿನ್ನಲೆಯಲ್ಲಿ ಬೆಳಿಗ್ಗೆ 09:00 ಗಂಟೆಯ ನಂತರ ದಿನಸಿ ಹಾಗೂ ಇತರೆ ಎಲ್ಲಾ  ಅಂಗಡಿಗಳನ್ನು  ತೆರೆಯದಂತೆ  ನಿಷೇದಾಜ್ಞೆ ಹೊರಡಿಸಿದ್ದರೂ ಕೂಡಾ ಅಂಗಡಿ ತೆರೆದು ಮುಖಕ್ಕೆ ಮಾಸ್ಕ್ ಧರಿಸದೇ ಸಾರ್ವಜನಿಕರಿಗೆ ದಿನಸಿ ಸಾಮಾನು ನೀಡಿ ಅಪರಾಧವೆಸಗಿರುತ್ತಾರೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 32/2021 ಕಲಂ: 269, 270 ಐಪಿಸಿ ಮತ್ತು ಕಲಂ: 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-05-2021 10:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080