ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗಣೇಶ (43) ತಂದೆ: ದುಗ್ಗ ನಲಿಕೆ ವಾಸ: ಗಾಂಧಿನಗರ ಮನೆ ಚಾರ್ಮಾಡಿ ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 20-07-2022 ರಂದು KA 18 EB 4087 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ಡೀಕಯ್ಯ ಎಂಬವರು ಸಹಸವಾರನನ್ನಾಗಿ ನಾರಾಯಣ ಪೂಜಾರಿ ರವರನ್ನು ಕುಳ್ಳಿರಿಸಿಕೊಂಡು ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ ಹೋಗುತ್ತಾ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಅರೆಕ್ಕಲ್‌ ಎಂಬಲ್ಲಿ ದ್ವಿ ಚಕ್ರ ವಾಹನವನ್ನು ದುಡುಕುತನದಿಂದ ಸವಾರಿ ಮಾಡಿದ ಪರಿಣಾಮ ದ್ವಿ ಚಕ್ರ ವಾಹನ ಸಹಸವಾರ ನಾರಾಯಣ ಪೂಜಾರಿ  ದ್ವಿ ಚಕ್ರ ವಾಹನದಿಂದ ಹಿಮ್ಮುಖವಾಗಿ ರಸ್ತೆಗೆ ಎಸೆಯಲ್ಪಟ್ಟದ್ದಲ್ಲದೇ ದ್ವಿ ಚಕ್ರ ವಾಹನ ಸವಾರ ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದಿರುತ್ತಾರೆ ಪರಿಣಾಮ ದ್ವಿ ಚಕ್ರ ವಾಹನ ಸಹಸವಾರ ನಾರಾಯಣ ಪೂಜಾರಿ ತಲೆಗೆ, ಬಲಕಾಲಿಗೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:  101/2022 ಕಲಂ: 279 337 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಾಥ್ಯು ಟಿ ಕೆ ಪ್ರಾಯ 52 ವರ್ಷ, ತಂದೆ: ಟಿ ಎಂ ಕುರಿಯಕೋಸ್ ವಾಸ:ತಿರುವನ್ ಮೂಲ ಮನೆ, ಕುಟ್ರುಪ್ಪಾಡಿ ಗ್ರಾಮ ಕಡಬ ತಾಲೂಕು ರವರು ದಿನಾಂಕ 20.07.2022 ರಂದು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಕಳಾರ ಎಂಬಲ್ಲಿ ರಬ್ಬರ್ ಟ್ಯಾಪಿಂಗ್  ಕೆಲಸ ಮಾಡಿಕೊಂಡಿದ್ದ ಸಮಯ ಪೇರಡ್ಕ ಕಡೆಯಿಂದ ಕಳಾರ ಕಡೆಗೆ ಒಂದು ಮೋಟಾರು ಸೈಕಲ್ ಸವಾರನು ಚಲಾಯಿಸಿಕೊಂಡು ಬರುತ್ತಿದ್ದ ಸಮಯ ಕಳಾರ ಕಡೆಯಿಂದ ಪೇರಡ್ಕ ಕಡೆಗೆ ಸ್ಕೂಟಿ ಸವಾರನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೀರ ಬಲ ಬದಿಗೆ ಹೋಗಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಉಂಟುಮಾಡಿದ ಪರಿಣಾಮ ಮೋಟಾರು ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದವನನ್ನು ನೋಡಿದ ಪಿರ್ಯಾದಿದಾರರು ತಕ್ಷಣ ಅಲ್ಲಿಗೆ ಬಂದು ನೋಡಲಾಗಿ ರಸ್ತೆಗೆ ಬಿದ್ದವರು ಪಿರ್ಯಾದಿ ಪರಿಚಯದ ದೀಪಕ್ ಜೋನ್ ಆಗಿದ್ದು ಆತನಿಗೆ ಎಡಕಾಲಿನ ಮೊಣಗಂಟಿಗೆ,ಎಡಕೈ ಬೆರಳಿಗೆ ಗಾಯವಾಗಿದ್ದು, ಹಾಗೂ ಸ್ಕೂಟಿ ಸವಾರನಿಗೂ ತಲೆಗೆ ಮತ್ತು ಇತರೆ ಭಾಗಗಳಿಗೆ ಗಾಯವಾಗಿದ್ದು ಗಾಯಗೊಂಡವರನ್ನು ಉಪಚರಿಸಿ ಚಿಕಿತ್ಸೆಗೆ ಆಟೋ ರಿಕ್ಷಾದಲ್ಲಿ ಕಳುಹಿಸಿಕೊಟ್ಟು ಅಪಘಾತಕ್ಕೊಳಗಾದ ಬೈಕನ್ನು ನೋಡಲಾಗಿ KA-21 Z-1025 ನೇ ಮೋಟಾರು ಸೈಕಲ್ ಆಗಿದ್ದು, ಅಪಘಾತ ಉಂಟುಮಾಡಿದ ಸ್ಕೂಟರ್ ನಂಬ್ರ KA-21 EB-0402 ಆಗಿರುತ್ತದೆ ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 62/2022 ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಶೋಭಾ ಪ್ರಾಯ 42 ವರ್ಷ ಗಂಡ:ಗಂಗಾಧರ ಶೆಟ್ಟಿ ವಾಸ:ಅಡ್ಕಹಿತ್ಲು ಮನೆ ಪೆರ್ನೆ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ: 20-07-2022 ರಂದು ಪೆರ್ನೆ ಹೊಸಮನೆ ಎಂಬಲ್ಲಿಯ ಶಂಕರ ಮೋಹನ್ ಪೂಂಜಾ ಎಂಬವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ ವಿಶ್ರಾಂತಿ ಸಮಯ ಮನೆಗೆ ಬಂದು ಹಟ್ಟಿಯಲ್ಲಿ ದನಕರುಗಳಿಗೆ ನೀರು ಹಾಗೂ ಮೇವು ಹಾಕಿ ಹಳೆಯ ಮನೆಯ ಹತ್ತಿರ ಇರುವಾಗ ಪಿರ್ಯಾದುದಾರರ ಗಂಡ ಅಲ್ಲಿಗೆ ಬಂದು ಕೈಯಿಂದ ಬೆನ್ನಿಗೆ ಹೊಡೆದು ಇಲ್ಲಿಂದ ಹೋಗು ಎಂಬುದಾಗಿ ಬೈದು ಮಾನಸಿಕವಾಗಿ ಕಿರುಕಳ ನೀಡಿರುತ್ತಾರೆ. ಆ ಸಮಯ ಗಂಡನ ಅಕ್ಕನ ಮಗ ಹರಿಪ್ರಸಾದ್ ಎಂಬಾತನು ಅಲ್ಲಿಗೆ ಬಂದು ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಹರಿಪ್ರಸಾದ್ ಪ್ಯಾಂಟ್ ನ ಬೆಲ್ಟ್ ನಿಂದ ಕೆನ್ನೆಗೆ ಕೈಗೆ ಹೊಡೆದು, ಹಲ್ಲೆ ನಡೆಸಿದಾಗ ಪಿರ್ಯಾದುದಾರರು ಬೊಬ್ಬೆ ಹಾಕಿದಾಗ ಮಗ ಪವಿತ್ ಅಲ್ಲಿಗೆ ಬಂದಾಗ ಮಗನ ಮೇಲು ಹಲ್ಲೆ ನಡೆಸಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ಎಂಬುದಾಗಿ ಬೆದರಿಕೆ ಹಾಗೂ ಅವರು ಅಲ್ಲಿಂದ ಹೋಗಿರುತ್ತಾರೆ. ಹಲ್ಲೆಗೆ ಜಮೀನಿನ ವಿಚಾರ ಆಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 81/2022 ಕಲಂ: 504, 324, 323, 506, 354 ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲೋಕೇಶ್‌ ಪ್ರಾಯ (30) ತಂದೆ: ದಿ. ಬಾಬು ವಾಸ:  ಕುರ್ನಾಡು ಬೆಟ್ಟು ಮನೆ,& ಅಂಚೆ& ಗ್ರಾಮ ಬಂಟ್ವಾಳ  ತಾಲೂಕು ರವರ ಮಾವ ಆನಂದ ಪ್ರಾಯ 45 ವರ್ಷರವರು ದಿನಾಂಕ:21-07-2022 ರಂದು ಬೆಳಿಗ್ಗೆ 10.00 ಗಂಟೆಗೆ ಪರಿಚಯದ ಜಯರಾಜ್‌ರವರ ಸಾಲೆತ್ತೂರು ಗ್ರಾಮದ ಪಾಲ್ತಾಜೆ ಜಯರಾಜ್‌ರವರ ಮನೆಯ ಸುತ್ತುಮುತ್ತಲಿನ  ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ಕೀಳುವ ಸಮಯ ಆಕಸ್ಮಿಕವಾಗಿ ಕೈಕಾಲು ಜ್ಯಾರಿ ಆಯತಪ್ಪಿ ಸುಮಾರು 25 ಅಡಿ ಎತ್ತರದಿಂದ ಕೆಳಗೆ ಬಿದ್ದು ಎದೆಯ ಭಾಗಕ್ಕೆ ತೀವ್ರ ತರಹದ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಮಂಚಿ ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಅದರಂತೆ ಪಿರ್ಯಾಧಿದಾರರು ವಿಷಯ ತಿಳಿದು ಮಾವ ಆನಂದರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋದ ಬಗ್ಗೆ ತಿಳಿದು ಪಿರ್ಯಾಧಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಹೋಗಿ ನೋಡಲಾಗಿ ಆನಂದರವರು ಮಾತನಾಡುವ  ಸ್ಥಿತಿಯಲ್ಲಿರಲಿಲ್ಲ ಅವರ ಎದೆಯ ಭಾಗಕ್ಕೆ ತೀವ್ರ ತರಹದ ಗುದ್ದಿದ ಗಾಯವಾಗಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ:21.07.2022 ರಂದು ಮಧ್ಯಾಹ್ನ 14.40 ಗಂಟೆಗೆ ಮೃತಪಟ್ಟಿರುತ್ತಾರೆ ಈ ಬಗ್ಗೆ ವಿಟ್ಲ ಠಾಣಾ  ಯು ಡಿ ಅರ್ ನಂಬ್ರ 30/2022  ಕಲಂ 174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ  ಪಂಚಾಯತ್‌ ಅಭಿವೃದ್ದಿ ಅಧಿಕಾರಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಗ್ರಾಮ, ಕಡಬ ತಾಲೂಕು ರವರು ನೀಡಿದ ದೂರಿನಂತೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಸುಬ್ರಹ್ಮಣ್ಯ ಮಹಿಳಾ ಶೌಚಾಲಯದಲ್ಲಿ ಕೆಲಸ ಮಾಡುತ್ತಿದ್ದ ಈಶ್ವರಮ್ಮ, ಪ್ರಾಯ: 50 ವರ್ಷ ಎಂಬವರು ದಿನಾಂಕ: 16.07.2022 ರಂದು ಅಸ್ವಸ್ಥರಾಗಿ ಬಿದ್ದವರನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ದಿನಾಂಕ: 20.07.2022 ರಂದು ಮದ್ಯಾಹ್ನ 2:30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಯುಡಿಆರ್    ನಂಬ್ರ  : 12/2022 ಕಲಂ  174 ಸಿಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-07-2022 01:45 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080