ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಪುಷ್ಪಾ(33)ಗಂಡ: ಅಬ್ರಾಹಂ  ವಾಸ:ಗುಂಡಿಗದ್ದೆ  ಮನೆ, ಕಳೆಂಜ ಗ್ರಾಮ, ಕಾಯರ್ತಡ್ಕ ಅಂಚೆ, ಬೆಳ್ತಂಗಡಿ  ತಾಲೂಕು ಎಂಬವರ ದೂರಿನಂತೆ ದಿನಾಂಕ: 21-08-2021 ರಂದು ಪಿರ್ಯಾದಿದಾರರು ತನ್ನ ಬಾಬ್ತು ಕೆಎ70 ಹೆಚ್‌ 5595 ನೇ ದ್ವಿಚಕ್ರ ವಾಹನದಲ್ಲಿ ಸಹಸವಾರಳನ್ನಾಗಿ ರೇವತಿ ಎಂಬವರನ್ನು ಕುಳ್ಳಿರಿಸಿಕೊಂಡು ಹಳ್ಳಿಂಗೇರಿ ಕಡೆಯಿಂದ ಕೊಕ್ಕಡ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಮಧ್ಯಾಹ್ನ 12.30 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕೊಕ್ಕಡ ಕೆ.ಜೆ ಚಿಕನ್‌ ಸೆಂಟರ್‌ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಹಳ್ಳಿಂಗೇರಿ ಕಡೆಯಿಂದ ಕೊಕ್ಕಡ ಕಡೆಗೆ ಕೆಎ 21 ಪಿ 5546 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಪಿರ್ಯಾದಿದಾರರ ದ್ವಿಚಕ್ರ ವಾಹನವನ್ನು ಹಿಂದಿಕ್ಕುವಾಗ ಕಾರಿನ ಎಡ ಬದಿ ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸಹಸವಾರಳು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರು ಬಲಕೈ ಭುಜಕ್ಕೆ ಗುದ್ದಿದ ಗಾಯ, ಬಲಕಾಲಿನ ಪಾದಕ್ಕೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 65/2021, ಕಲಂ; 279,337ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಯಶಂಕರ  ಹೆಗ್ಡೆ (40)  ತಂದೆ: ದಿ| ರಾಘವ ಹೆಗ್ದೆ  ವಾಸ: ಮಂಗಿನಿ   ಮನೆ ಬಜಿರೆ  ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪ್ರಸನ್ನ ಕುಮಾರ್ (41) ತಂದೆ:ವಿಠಲ್  ಹೆಗ್ಡೆ  ಇವರು  ದಿನಾಂಕ 20-08-2021 ರಂದು  ತನ್ನ  ಹೆಂಡತಿ  ಸುಚಿತಾ ಇವರನ್ನು  ಬಜಿರೆಯಿಂದ   ಕಾರ್ಕಳ ದ ಅವರ  ತಾಯಿ ಮನೆಗೆ ಬಿಟ್ಟು    ಕೆ ಎ  70 ಹೆಚ್  5291 ನೇ   ದ್ವಿಚಕ್ರ ವಾಹನದಲ್ಲಿ  ವಾಪಾಸು   ಮೂಡಬಿದ್ರೆ   ಮಾರ್ಗವಾಗಿ    ದ್ವಿ- ಚಕ್ರ ವಾಹನದಲ್ಲಿ  ಬರುತ್ತಾ, ರಾತ್ರಿ ಸುಮಾರು   20:00  ಗಂಟೆ  ಸಮಯಕ್ಕೆ  ಬೆಳ್ತಂಗಡಿ ತಾಲೂಕು  ಹೊಸಂಗಡಿ  ಗ್ರಾಮದ  ಪಡಂದಡ್ಕ  ಎಂಬಲ್ಲಿ   ತನ್ನ   ಬಾಬ್ತು  ದ್ವಿ  ಚಕ್ರ  ವಾಹನವನ್ನು  ಅತೀ  ವೇಗ  ಮತ್ತು  ಅಜಾಗರೂಕತೆಯಿಂದ  ಚಲಾಯಿಸಿದರಿಂದ  ದ್ವಿ  ಚಕ್ರ  ವಾಹನ    ಸ್ಕಿಡ್  ಆಗಿ  ರಸ್ತೆಗೆ   ಬಿದ್ದು  , ಪರಿಣಾಮವಾಗಿ  ಪ್ರಸನ್ನ   ಕುಮಾರ್ ರವರಿಗೆ  ಮುಖಕ್ಕೆ, ಹಣೆಗೆ, ಕೈ-ಕಾಲುಗಳಿಗೆ  ರಕ್ತ  ಗಾಯವಾಗಿದ್ದು ,  ಅವರು  ಮೂಡಬಿದ್ರೆಯ ಆಳ್ವಾಸ್  ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ . ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ: 53-2021 ಕಲಂ:279,337  ಬಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-08-2021 09:14 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080