ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎ. ಮಹಮ್ಮದ್ ಇಸಾಕ್[31] ತಂದೆ ಜಿ ಆದಂ ವಾಸ: ಹಳದಿ ಕೊಟ್ಟಿಗೆ ಮನೆ, ಗುರುವಾಯನ ಕೆರೆ ಅಂಚೆ, ಕುವೆಟ್ಟು ಗ್ರಾಮ ಬೆಳ್ತಂಗಡಿ  ತಾಲೂಕು  ರವರು ದಿನಾಂಕ 21-09-2021 ರಂದು  ರಿಕ್ಷಾದಲ್ಲಿ ಗುರುವಾಯನಕೆರೆಯಿಂದ ಅಬ್ದುಲ್ ಮುನಾಜ್ ರವರನ್ನು ಕಳ್ಳಿರಿಸಿಕೊಂಡು  ನಾರಾವಿಗೆ ಗುಜಿರಿ ಸಾಮಾನುಗಳನ್ನು ತರಲೆಂದು ಹೊರಟು ಗುರುವಾಯನಕೆರೆ-ಕಾರ್ಕಾಳ ರಸ್ತೆಯಾಗಿ ತೆಂಕಕಾರಂದೂರು ಗ್ರಾಮದ ಆಲಡ್ಕ ಎಂಬಲ್ಲಿಗೆ  ತಲುಪುವಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಮಾರುತಿ ಸ್ವಿಪ್ಟ್ ಕಾರೊಂದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆ ಯಿಂದ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಅಲ್ಪಾ ಗೂಡ್ಸ್ ರಿಕ್ಷಾ ಕ್ಕೆ ಬಲ ಭಾಗಕ್ಕೆ  ಡಿಕ್ಕಿ ಹೊಡೆದಿದ್ದು ಪರಿಣಾಮವಾಗಿ ರಿಕ್ಷಾ ರಸ್ತೆಯ ಎಡಬದಿಯ ಚರಂಡಿಗೆ ಬಿದ್ದಿರುತ್ತದೆ, ಪರಿಣಾಮ ರಿಕ್ಷಾದಲ್ಲಿದ್ದ ಪಿರ್ಯಾದಿದಾರರು ಮತ್ತು ಅಬ್ದುಲ್ ಮುನಾಜ್ ರವರು ಚರಂಡಿಗೆ ಎಸೆಯಲ್ಪಟ್ಟು ಪಿರ್ಯಾದಿದಾರರ ಎಡ ತೊಡೆಯ ಭಾಗಕ್ಕೆ ಬೆನ್ನಿನ ಹಿಂಬದಿಗೆ ಗುದ್ದಿದ ನೋವು ಅಬ್ದುಲ್ ಮುನಾಜ್ ಎಂಬವನಿಗೆ ಎಡ ಕೈ ಗೆ ರಕ್ತ ಗಾಯ ಹಾಗೂ ಎರಡೂ ಕಾಲುಗಳಿಗೆ ಕುತ್ತಿಗೆಯ ಎಡ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ.  ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅ ಕ್ರ: 59/2021 ಕಲಂ:279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ತೇರಕುಮಾರ   ಪ್ರಾಯ:48 ವರ್ಷ,   ತಂದೆ: ಕುಶಾಲಪ್ಪ ಗೌಡ,   ವಾಸ: ಮಾದನ ಮನೆ, ಏನೇಕಲ್ಲು ಗ್ರಾಮ,ಕಡಬ ತಾಲೂಕು ರವರು ದಿನಾಂಕ:20.09.2021 ರಂದು  ಅಗತ್ಯ ಕೆಲಸದ ನಿಮಿತ್ತ ತಮ್ಮ ಬಾಬ್ತು ಕೆಎ 21 ಹೆಚ್ 1252 ನೇದರಲ್ಲಿ ತಮ್ಮ ಪರಿಚಯದ ರಾಮಣ್ಣ ನಾಯ್ಕ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸುಳ್ಯ ತಾಲೂಕು ಗುತ್ತಿಗಾರು ಪೇಟೆಗೆ ಹೋಗುತ್ತಿರುವಾಗ ಗುತ್ತಿಗಾರು ಗ್ರಾಮದ ಕಮಿಲ ಎಂಬಲ್ಲಿಗೆ ತಲುಪುತ್ತಿದ್ದಾಗ ಎದುರಿನಿಂದ ಅಂದರೆ ಗುತ್ತಿಗಾರು –ಬಳ್ಪ ರಸ್ತೆಯಲ್ಲಿ ನಂಬರ್ ಇಲ್ಲದ ಹೊಸ ಮೋಟಾರ್ ಸೈಕಲ್ ಸವಾರನು ರಸ್ತೆಯ ತೀರ ಬಲ ಬದಿಗೆ ತನ್ನ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರಿಗೆ ಮತ್ತು ಸಹ ಸವಾರನಾದ ರಾಮಣ್ಣ ನಾಯ್ಕ ಎಂಬವರ ಕಾಲಿಗೆ ಮತ್ತು ತಲೆಗೆ ರಕ್ತದ ಗಾಯವಾಗಿದ್ದು. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಅ.ಕ್ರ : 64-2021 ಕಲಂ: 279,337 ಐಪಿಸಿ  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ವೇಣೂರು ಪೊಲೀಸ್ ಠಾಣೆ : ದಿನಾಂಕ: 18./19.09.2021 ರಂದು ರಾತ್ರಿ ಕಾಲದಲ್ಲಿ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ನಾರಾವಿ ಪೇಟೆಯಲ್ಲಿ ಮಲಗಿದ್ದ ಜಾನುವಾರುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸ್ ಉಪ ನಿರೀಕ್ಷಕರು ವೇಣೂರು ಪೊಲೀಸ್ ಠಾಣೆ, ರವರು ತಮ್ಮ ಸಿಬ್ಬಂದಿಯವರ ಜೊತೆ ನಾರಾವಿಯ ಅಂಗಡಿಗೆ ಅಳವಡಿಸಿದ ಸಿಸಿ ಟಿವಿ ಪ್ಯೂಟೆಜ್ ನ್ನು ಪರಿಶೀಲಿಸಿದಾಗ ದಿನಾಂಕ: 19.09.2021ರ ರಾತ್ರಿ 01.35 ಗಂಟೆಯಿಂದ 01.55 ಗಂಟೆಯ ಮದ್ಯ ಕಾಲದಲ್ಲಿ ಯಾರೋ 4 ಜನ ಅಪರಿಚಿತರು ಬಿಳಿ ಬಣ್ಣದ ರಿಡ್ಜ್ ಕಾರಿನಲ್ಲಿ ಬಂದು  ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ನಾರಾವಿ ಪೇಟೆಯಲ್ಲಿ ಮಲಗಿದ್ದ ಜಾನುವಾರಗಳನ್ನು ಹಿಡಿದು ಬಿಳಿ ರಿಡ್ಜ್ ಕಾರಿನ ಡಿಕ್ಕಿಗೆ ಹಾಕಿ ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ಹಾಕಿಕೊಂಡು ಹೋಗುವುದು ಕಂಡು ಬಂದಿದ್ದು ವೇಣೂರು ಪೊಲೀಸ್ ಠಾಣಾ ಅ ಕ್ರ: 60/2021 ಕಲಂ: 379 ಐಪಿಸಿ ಮತ್ತು ಕಲಂ: 5,12  ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಮತ್ತು ಸಂರಕ್ಷಣಾ ಕಾಯ್ದೆ 2020  ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿ ಎಸ್ ಐ ಬಂಟ್ವಾಳ ನಗರ ಠಾಣೆ ರವರು ಸಿಬ್ಬಂದಿಯವರೊಂದಿಗೆ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಬಡ್ಡಕಟ್ಟೆ ಜಂಕ್ಷನ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಮಯ ಬಂಟ್ವಾಳ ಪೇಟೆ ಕಡೆಯಿಂದ KA-19-ES-1690 ನೇ ಮೋಟಾರ್ ಸೈಕಲಿನಲ್ಲಿ ಸವಾರ ಸವಾಡಿಕೊಂಡು ಬರುತ್ತಿದ್ದುದನ್ನು ಕಂಡು ಮೋಟಾರ್ ಸೈಕಲನ್ನು  ತಡೆದು ನಿಲ್ಲಿಸಿ  ಪಂಚರ ಸಮಕ್ಷಮ ಪರಿಶೀಲಿಸಿದಾಗ  ಮೋಟಾರ್ ಸೈಕಲ್ ಸವಾರ ರಮೇಶ್ ಪೂಜಾರಿ ಎಂಬಾತನು ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡವ ಬಗ್ಗೆ ತನ್ನ ಬಾಬ್ತು KA-19-ES-1690 ನೇ ಮೋಟಾರ್ ಸೈಕಲಿನಲ್ಲಿ  90 ಮೀ ಲೀಟರ್ ಮೈಸೂರು ಲ್ಯಾನ್ಸರ್ ವಿಸ್ಕಿ ತುಂಬಿದ ಪೌಚುಗಳು ಒಟ್ಟು 58 ಹಾಗೂ  180 ಎಂ.ಎಲ್ ನ ಓಲ್ಡ್ ಟವೆರಿನ ವಿಸ್ಕಿ ತುಂಬಿದ ಪೌಚುಗಳು ಒಟ್ಟು 10. ಹೀಗೇ  ರೂಪಾಯಿ  7,620/- ಮೌಲ್ಯದ ಒಟ್ಟು 7.2 ಲೀಟರ್ ಮದ್ಯವನ್ನು  ಸಾಗಾಟ ಮಾಡಿದ್ದು ಈ ಬಗ್ಗೆ   ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ. 111/2021 ಕಲಂ: 32, 34, 43(ಎ)  ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಗಾಯಿತ್ರಿ  ಭಾಯಿ(58) ಮಕ್ಕಳ ಅಭಿವೃದ್ದಿ  ಯೋಜನಾದಿಕಾರಿ ಬಂಟ್ವಾಳ ತಾಲೂಕು  ರವರು ದಿನಾಂಕ 21.09.2021 ರಂದು ಶಿಶು ಅಬಿವೃಧಿ ಯೋಜನಾಧಿಕಾರಿಗಳು ಬಂದು  ನೀಡಿದ ದೂರಿನಂತೆ ತುಂಬೆ  ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಳಿಪಡ್ಪು ಮನೆ ನಂಬ್ರ 2-185-1 ಎಂಬಲಿಯ ಶ್ರೀ ಮನೋಹರ  ಮತ್ತು ಶ್ರೀಮತಿ ಯಮುನಾ  ಎಂಬುವರ ಮಗನ ಜನ್ಮ ದಿನಾಂಕ  05.11.2000 ಅಂದರೆ 20 ವರ್ಷ 10 ತಿಂಗಳು  16 ದಿನ ಗಳ  ಹುಡುಗನಿಗೆ 19 ವರ್ಷದ ಯುವತಿಯೊಂದಿಗೆ  ತುಂಬೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ  ದಿನಾಂಕ 19.09.2021 ರಂದು ಬಾಲ್ಯ ವಿವಾಹ  ನಡೆಸಿದ್ದು   ಈ  ಬಗ್ಗೆ ಚೈಲ್ಡ್ ಲೈನ್  ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಹೋಗಿದ್ದು  ಅವರು ನೀಡಿದ ದೂರಿನಂತೆ  ಮನೆ ಬೇಟಿ ಮಾಡಿ  ಪರಿಶೀಲಿಸಲಾಗಿ  ಹುಡುಗ ಅಪ್ರಾಪ್ತ  ವಯಸ್ಕನಾಗಿರುವುದು ಶಾಲಾ ಮುಖ್ಯೋಪಾದ್ಯಾಯರ  ಧೃಡಿಕರಣದಿಂದ ತಿಳಿದು ಬಂದಿರುತ್ತದೆ.  ಅದರಂತೆ ಹುಡುಗನ ತಂದೆ ತಾಯಿ ಹಾಗೂ ಇತರರ ಮೇಲೆ  ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   111/2021 ಕಲಂ: 10.11 ಬಾಲ್ಯ ವಿವಾಹ ನಿಷೇದ ಕಾಯ್ದೆ 2006, ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಇಕ್ಬಾಲ್ ಸುಜೀರ್ ಬದಿಗುಡ್ಡೆ ಮನೆ ಪುದು ಗ್ರಾಮ  ಬಂಟ್ವಾಳ ತಾಲೂಕು  ರವರು   ದಿನಾಂಕ 21.09.2021 ರಂದು ಸಮಯ 11.00 ಗಂಟೆಗೆ  ಫರಂಗಿಪೇಟೆಯಲ್ಲಿ ಇದ್ದ ಸಮಯ  ತನ್ನ  ಪರಿಚಯದ  ಶರೀಫ್ ಎಂಬುವವರು  ಪೋನ್ ಮಾಡಿ  ಸುಜೀರ್ ಎಂಬಲ್ಲಿ ನೇತ್ರಾವತಿ  ನದಿಯಲ್ಲಿ ಗಂಡಸಿನ ಮೃತ ದೇಹ  ತೇಲುತ್ತಿರುವುದಾಗಿ ತಿಳಿಸಿದ್ದು ಕೂಡಲೇ  ಸುಜೀರ್ ನೇತ್ರಾವತಿ ನದಿ ಬಳಿ  ಬಂದು ನೋಡಿದಾಗ  ಮೃತ ದೇಹವು ನದಿ ನೀರಿನಲ್ಲಿ  ಕವಚಿದ ಸ್ಥಿತಿಯಲ್ಲಿ  ತೆಲಿಕೊಂಡಿರುವುದನ್ನು  ನೋಡಿದೆನು. ಮೃತ ದೇಹದ ಬಗ್ಗೆ ವಿಚಾರಿಸಲಾಗಿ  ಮೃತ ದೇಹವು  ಯಾರದೆಂದು ತಿಳಿಯದೆ  ಇದ್ದು  ಇದೊಂದು ಸುಮಾರು 45 ರಿಂದ 50 ವರ್ಷ ಪ್ರಾಯದ  ಅಪರಿಚಿತ ಗಂಡಸಿನ  ಮೃತ ದೇಹವಾಗಿರುತ್ತದೆ. ಸದ್ರಿ ವ್ಯೆಕ್ತಿಯು ಎಲ್ಲಿಯೋ ನದಿಗೆ ಹಾರಿ ಅಥವಾ ಕಾಲುಜಾರಿ ನದಿ ನೀರಿಗೆ ಬಿದ್ದು ಆತ್ಮಹತ್ಯೆ ಅಥವಾ ಆಕಸ್ಮಿಕವಾಗಿ  ನೀರಿಗೆ ಬಿದ್ದದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 38-2021 ಕಲಂ 174   ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಗಣೇಶ್‌ ಪ್ರಾಯ  29 ವರ್ಷ ತಂದೆ. ಶ್ರೀನಿವಾಸ ಗೌಡ ವಾಸ:  ಪುರಿಯ ಮನೆ ಬಿಳೀಯೂರು ಗ್ರಾಮ, ಬಂಟ್ವಾಳ ತಾಲೂಕು ರವರ ತಮ್ಮ ಗಿರೀಶನು ವಿಪರೀತ ಮದ್ಯಪಾನ ಮಾಡುವ  ಚಟವನ್ನು ಹೊಂದಿದ್ದು ಇದೇ ವಿಚಾರದಲ್ಲಿ  ಜಿಗುಪ್ಸೆಗೊಂಡು ದಿನಾಂಕ:19-09-2021ರಂದು ರಾತ್ರಿ 08.00ಗಂಟೆಯಿಂದ ದಿನಾಂಕ: 20-09-2021ರಂದು ಬೆಳಿಗ್ಗೆ 06.45 ಗಂಟೆಯ ಮದ್ಯದ ಅವಧಿಯಲ್ಲಿ  ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಪುರಿಯ ಎಂಬಲ್ಲಿ ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 29/2021 ಕಲಂ:174 ಸಿಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-09-2021 11:13 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080