ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೋನಪ್ಪ ಪ್ರಾಯ: 40ವರ್ಷ ತಂದೆ:ದಿವಂಗತ ಶಿವಪ್ಪ ಮೂಲ್ಯ ವಾಸ:ಕಬ್ಬಿಣಹಿತ್ಲು  ಮನೆ ವಿಟ್ಲ ಕಸಬಾ ಗ್ರಾಮ ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 20-10-2021 ರಂದು ಆರೋಪಿ ಸ್ಕೂಟರ್ ಸವಾರ ಉಮ್ಮರ್ ಶಾಫಿ ಎಂಬವರು KA-21-EA-6392 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಹೈದರ್ ಕೆ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಅಡ್ಯಲಾಯ ದೇವಸ್ಥಾನದ ದ್ವಾರದ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತೀರಾ ರಾಂಗ್ ಸೈಡಿಗೆ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಮಣ್ಣು ರಸ್ತೆಯಲ್ಲಿ ಕಬಕ ಬಸ್ಸು ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ಮೋನಪ್ಪರವರಿಗೆ ಅಪಘಾತವನ್ನುಂಟು ಮಾಡಿದ ಪರಿಣಾಮ ಫಿರ್ಯಾದಿದಾರರ ಮೂಗು ಹಾಗೂ ಹಣೆಗೆ ಗುದ್ದಿದ ಮತ್ತು ರಕ್ತ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ಗಾಯವಾದವರನ್ನು ನೌಫಾಲ್ರವರು ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಫಿರ್ಯಾದಿದಾರರಿಗೆ ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  128/2021 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸನೀಸ್‌ ಮಾರ್ಕೋಸ್‌, (37) ತಂದೆ ಮರ್ಕೋಸ್‌ ಕೆ ಕೆ ವಾಸ: ಕಲ್ಲೋರಿಕಲ್‌ ಮನೆ,  ಶಿರಾಡಿ ಗ್ರಾಮ  ಕಡಬ ತಾಲೂಕು ರವರು ನೀಡಿದ ದೂರಿನಂತೆ   ದಿನಾಂಕ 21-10-2021 ರಂದು ಬೆಳಿಗ್ಗೆ 7.00ಗಂಟೆ ಸಮಯಕ್ಕೆ  ಪಿರ್ಯಾದಿದಾರರು ತನ್ನ ಬಾಬ್ತು  ಕೆಎ03-ಎಂಯು 2109ನೇ ಶಿಪ್ಟ್‌ ಕಾರನ್ನು   ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಕಡಬ ತಾಲೂಕು ಕೌಕ್ರಾಡಿ ಗ್ರಾಮದ  ಹೊಸಮಜಲು ಎಂಬಲ್ಲಿಗೆ ನೆಲ್ಯಾಡಿ ಕಡೆಯಿಂದ ಕೆಎ 21  ಪಿ 0214ನೇ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಪಿರ್ಯಾದಿದಾರರ ಮಕ್ಕಳಾದ  ದೀಕ್ಷಾಳಿಗೆ ಗಲ್ಲಕ್ಕೆ, ತಲೆಯ ಎಡಬದಿಗೆ ಗುದ್ದಿದ ಗಾಯವಾಗಿದ್ದು ದಿಯಾಳಿಗೆ  ತಲೆಯ ಬಲಬದಿಗೆ ಗುದ್ದಿದ ಗಾಯ ಹಾಗೂ ದೀಪಾಳಿಗೆ ಎಡಕಾಲಿಗೆ ಗುದ್ದಿದ ಗಾಯ, ಹಾಗೂ ಪಿರ್ಯಾದಿದಾರರಿಗೆ ಎದೆಗೆ ಗುದ್ದಿದ ನಮೂನೆಯ ಗಾಯವಾಗಿರುವುದಲ್ಲದೆ  ಎರಡೂ ಕಾರುಗಳಿಗೆ ಜಖಂ ಉಂಟಾಗಿರುವುದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 112/2021  ಕಲಂ  279 337  ಐ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 3

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೊಹಮ್ಮದ್ ಆಶೀರ್ ಪ್ರಾಯ 42 ವರ್ಷ , ವಾಸ; ತಡಗಜೆ ಮನೆ , ಬೆಳ್ಳಾರೆ ಗ್ರಾಮ ಸುಳ್ಯ ತಾಲೂಕು ರವರು ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿ ಜಮಾತ್ ಗೆ ಒಳಪಟ್ಟ ಆಡಳಿತ  ಸಮಿತಿಯ ಮಾಜಿ ಸದಸ್ಯರಾಗಿದ್ದು ಸಮಿತಿಯ ಚುನಾವಣಾ ಬಗ್ಗೆ ಗುರುತಿ ಚೀಟಿ ಪಡೆಯುವರೇ ದಿನಾಂಕ 20-10-2021  ರಂದು ಬೆಳ್ಳಾರೆಯ ಹಾರೀಶ್ ,ಸಿಧ್ಧಿಕ್ ,ಹಸೈನಾರ್ ,ಖದೀರ್ , ಮನ್ಸಾದ್ ,  ಅನ್ಸಾರ್ ರವರೊಂದಿಗೆ ಮಸೀದಿಯ ಆಡಳಿತ ಕಛೇರಿಗೆ ಹೋಗಿ ಅರ್ಜಿ ಫಾರ್ಮ್ ನೀಡುತ್ತಿರುವ ಸಮಯ ಆರೋಪಿತರುಗಳಾದ ಮಹಮ್ಮದ್ ಅಜರುದ್ದೀನ್. ಜಮಾಲುದ್ದೀನ್ ಕೆ.ಎಸ್ , ಅಬ್ದುಲ್ ಜಮಾಲ್ ಹಾಗೂ ಇತರ ಮೂವರು  ಜಮಾತಿನ ಕಛೇರಿಗೆ  ಏಕಾಏಕಿ ನುಗ್ಗಿ ಆಡಳಿತಾಧಿಕಾರಿಯವರ ಸಹಾಯಕ ಹೈದರಾಲಿ ಎಂಬವರಿಗೆ ಅವ್ಯಾಚ್ಯ ಶಬ್ದ ಗಳಿಂದ ಬೈದು ಆರೋಪಿತರುಗಳು ಕಬ್ಬಿಣದ ರಾಡಿನಿಂದ ತಲೆಗೆ ಮತ್ತು ಮೈಗೆ ಹೊಡೆದಾಗ ಬಿಡಿಸಲು ಹೋದ ಪಿರ್ಯಾದಿದಾರರಿಗೂ ಕಬ್ಬಿಣದ ರಾಡಿನಿಂದ ಗುದ್ದಿ ಗಾಯಗೊಳಿಸಿರುವುದಲ್ಲದೇ ಆರೋಪಿತರಾದ  ಅಜರುದ್ದೀನ್ ಎಂಬವರು ಪಿರ್ಯಾದಿದಾರರ ಎಡಗಡೆಯ ತೋಳಿಗೆ ಚೂರಿಯಿಂದ ತಿವಿದ ಪರಿಣಾಮ ರಕ್ತಗಾಯವುಂಟಾಗಿದ್ದು ಬಳಿಕ ಅಲ್ಲಿ ಸೇರಿದ ಜನರನ್ನು ಕಂಡು ಮೂವರು ಆರೋಪಿತರುಗಳು ಅಲ್ಲಿಂದ ಹೋಗುತ್ತಾ “ ಮುಂದಕ್ಕೆ ಹೈದರಾಲಿಯನ್ನು ಈ ಕಛೇರಿಯಲ್ಲಿ ಕೆಲಸ ಮಾಡಲು ಬಿಡುವುದಿಲ್ಲ, ನಿಮ್ಮಿಬ್ಬರನ್ನು ಕೊಲ್ಲದೇ ಬಿಡುವುದಿಲ್ಲ , ಎಂದು ಮಲೆಯಾಳಂ ಭಾಷೆಯಲ್ಲಿ ಬೆದರಿಕೆ ಹಾಕಿ ಅವರು ತಂದ ಕಬ್ಬಿಣದ ರಾಡ್ ಹಾಗೂ ಚೂರಿಯನ್ನು ಜೊತೆಯಲ್ಲಿಯೇ ತೆಗೆದುಕೊಂಡು ಹೋಗಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 52/2021  ಕಲಂ  504,324,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಮಹಮ್ಮದ್ ಝಿಯಾದ್  ತಂದೆ: ಅಬ್ದುಲ್ ರಜಾಕ್  ವಾಸ: ತಾರಿಗುಡ್ಡೆ ಮನೆ ಸಾಲ್ಮರ  ಚಿಕ್ಕಮೂಡ್ನುರು ಗ್ರಾಮ  ಪುತ್ತೂರು ತಾಲೂಕು  ರವರು ಪುತ್ತೂರು ಕಸಬಾ ಗ್ರಾಮದ ಕೊಂಬೆಟ್ಟು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದು, ದಿನಾಂಕ: 21.10.2021 ರಂದು ಕಾಲೇಜು ಬಿಟ್ಟು ಕಾಲೇಜಿನ ಗ್ರೌಂಡ್ ಬಳಿಯ ಗೇಟ್ ಮೂಲಕ ರಸ್ತೆಯಲ್ಲಿ ಮನೆ ಕಡೆಗೆ ನಡೆದುಕೊಂಡು ಬರುತ್ತಿರುವ ಸಮಯ ಕೆಎ 19 ಇಜಿ 7087 ನೇ ಮೋಟಾರು ಸೈಕಲಿನಲ್ಲಿ ಬಂದ ಇಬ್ಬರು ಯುವಕರು ಫಿರ್ಯಾದಿದಾರರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ತುಳು ಭಾಷೆಯಲ್ಲಿ “ನಿಕ್ಕ್ ದಾನೆ ಕಣ್ಣ್ ತೋಜುಜಾ” ಎಂದು ಬೈದು ಕೈಯಿಂದ ಹಾಗೂ ಹೆಲ್ಮೆಟ್ ನಿಂದ ಫಿರ್ಯಾಶದಿದಾರರ ಹೊಟ್ಟೆಗೆ ಬೆನ್ನಿಗೆ ಹಾಗೂ ಎಡಕೈಗೆ ಹೊಡೆಯುತ್ತಿದ್ದ ಸಮಯ ಇದನ್ನು ನೋಡಿದ ಕೆಎ 21 ಎಸ್ 5696 ನೇ ದ್ವಿ ಚಕ್ರ ವಾಹನ ಸವಾರ  ಫಿರ್ಯಾದಿದಾರರ ನೆರೆಯ ನಿವಾಸಿ ಮೊಹಮ್ಮದ್ ಇಜಾಜ್ ರವರು ತನ್ನ ಬಾಬ್ತು ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಘಟನೆಯ ಕುರಿತು ವಿಚಾರಿಸಿದ  ಸಮಯ ಆರೋಪಿಗಳು ಅವರಿಗೆ  ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅದೇ ಹೆಲ್ಮೆಟ್ ನಿಂದ ಹಾಗೂ ಕೈಯಿಂದ ಹೊಡೆದಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಫಿರ್ಯಾದಿದಾರರು ಹಾಗೂ ಮೊಹಮ್ಮದ್ ಇಜಾಜ್ ರವರು ಚಿಕಿತ್ಸೆಯ ಬಗ್ಗೆ ಪತ್ತೂರು ಸಾರ್ವಜನಿಕ ಸರಕಾರಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಫಿರ್ಯಾದಿದಾರರು ಆರೋಪಿಗಳಿಗೆ ಸೈಡ್ ಕೊಡಲಿಲ್ಲ ಎಂಬ ನೆಪವೊಡ್ಡಿ ಈ ಕೃತ್ಯ ನಡೆಸಿರುವುದಾಗಿದೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 82/2021 ಕಲಂ:341,504, 323,324, ಜೊತೆಗೆ34ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹೊನ್ನಪ್ಪ ದಾಸಯ್ಯ (65) ತಂದೆ:ದಿ|| ಕೃಷ್ಣದಾಸ ವಾಸ:ಮುದಲೆಗುಂಡಿ ಮನೆ ಕರಾಯ ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 03.10.2021 ರಂದು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಮುದಲೆಗುಂಡಿ ಎಂಬಲ್ಲಿ ಪಿರ್ಯಾದಿದಾರರು 2ನೇ ಹೆಂಡತಿ ಹಾಗೂ ಮಗ ತಾರನಾಧ ರವರ ಜೊತೆಯಲ್ಲಿ ಮನೆಯಲ್ಲಿರುವ ಸಮಯ ತಾರನಾಥನು  ಬೇರೆ ಯಾವುದೋ ವಿಚಾರಕ್ಕೆ ಪಿರ್ಯಾದಿದಾರರ ಜೊತೆ ಜಗಳ ತೆಗೆದು  ಮಾತಿಗೆ ಮಾತು ಬೆಳೆದು ತಾರನಾಥನು ಪಿರ್ಯಾದಿದಾರರಿಗೆ ಅಲ್ಲಿಯೇ ಇದ್ದ ದೊಣ್ಣೆಯಿಂದ ಪಿರ್ಯಾದಾರರ ಎಡಕಾಲಿನ ತೊಡೆಯ ಬಾಗಕ್ಕೆ ದೊಣ್ಣೆಯಿಂದ ಹೊಡೆದಾಗ ಪಿರ್ಯಾದಿದಾರರು ನೋವಿನಿಂದ ಕೆಳಕ್ಕೆ ಬಿದ್ದಾಗ ಪಿರ್ಯಾದಿದಾರರ ಸೊಂಟಕ್ಕೆ ಕಾಲಿನಿಂದ ತುಳಿದನು ಪಿರ್ಯಾದಿದಾರರು ನನಗೆ ವಿಪರೀತ ನೋವಾಗಿದ್ದು ಚಿಕಿತ್ಸೆ ನೀಡುವಂತೆ ಆತನಲ್ಲಿ ಕೇಳಿಕೊಂಡಲ್ಲಿ ನಿನಗೆ ಯಾವ ಚಿಕಿತ್ಸೆಯ ಅಗತ್ಯ ಇಲ್ಲ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ  ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ  ಎಂಬುದಾಗಿ ಹೇಳಿ ಹೊರಟು ಹೋದವನು ದಿನಾಂಕ 17.10.2021 ರ ವರೆಗೆ ನೋವಿನ ಬಗ್ಗೆ ಎಲ್ಲಿಂದಲೋ ಔಷದಿಯನ್ನು ತಂದು ಕೊಡುತ್ತಿದ್ದನು  ನಂತರ ಪಿರ್ಯಾದಿದಾರರು ಈ ವಿಚಾರವನ್ನು ದಿನಾಂಕ 17.10.2021 ರಂದು ತನ್ನ ಮೊದಲ ಹೆಂಡತಿಯ ಮಗ ರವಿದಾಸ್ ಎಂಬವನಿಗೆ ದೂರವಾಣಿ ಕರೆಮಾಡಿ  ತಿಳಿಸಿದ್ದು ಅವರುಗಳು ಪಿರ್ಯಾದಿದಾರರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪಿರ್ಯಾದಿದಾರರನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮಂಗಳೂರಿಗೆ ಕಳುಹಿಸಿದ್ದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 113/2021  ಕಲಂ  324, 504, 506 ಐ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಧರ್ಣಮ್ಮ ಪ್ರಾಯ;53 ವರ್ಷ ತಂದೆ; ಶಂಕರ ಪೂಜಾರಿ ವಾಸ; ಸತೀಶ್ ನಿವಾಸ ಗರಡಿ ಬಳಿ ಮನೆ ಶಿರ್ಲಾಲು ಮನೆ  ಬೆಳ್ತಂಗಡಿ ತಾಲೂಕು ರವರ ಮಗಳು ಶ್ರೀಮತಿ ಸೌಮ್ಯ (29) ಎಂಬವರು ಕೆಲವು ವರ್ಷಗಳಿಂದ ಅಸ್ವಸ್ಥಳಾಗಿದ್ದು ವೈದ್ಯರಲ್ಲಿ ತೋರಿಸಿ ಚಿಕಿತ್ಸೆ  ನೀಡಿರುತ್ತೇವೆ. ಈ ಮೊದಲು ಮಗಳ ಸೌಮ್ಯಳು ಹಲವು ಬಾರಿ ಮಾನಸಿಕ ಸ್ಥಿಮಿತ  ಕಳೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾಳೆ. ದಿನಾಂಕ;21-10-2021 ರಂದು ಅಳಿಯ ಮೋಹನ ಕರ್ತವ್ಯದ ನಿಮಿತ್ತ ಉಜಿರೆಗೆ ಹೋಗಿದ್ದು  ಬೆಳಿಗ್ಗೆ 11.00 ಗಂಟೆ ಸಮಯಕ್ಕೆ ನೆರೆಯ ಅಂಗಡಿ ಮಾಲಿಕರಾದ ಶ್ರೀಮತಿ ಸರಿತಾ ಎಂಬವರು ದೂರವಾಣಿ ಮೂಲಕ ಕರೆಮಾಡಿ ಮಕ್ಕಳು ಅಳುತ್ತಿರುವುದಾಗಿ ತಿಳಿಸಿದ್ದು ಕೂಡಲೇ ಅಳಿಯನು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಮಲಗುವ ಕೂಠಡಿಯಲ್ಲಿ  ಕಬ್ಬಿಣದ ಕೊಂಡಿಗೆ ನೈಲಾನ್ ಸೀರೆಯನ್ನು ಕಟ್ಟಿ ಕುತ್ತಿಗೆಗೆ  ನೇಣು ಬಿಗಿದು ನೇತಾಡುತ್ತಿದ್ದು ಕೂಡಲೇ ಅಳಿಯನು ಸೀರೆಯನ್ನು ಚಾಕುವಿನಿಂದ ತುಂಡು ಮಾಡಿ ಕೆಳಗೆ ಇಳಿಸಿ ಕುತ್ತಿಗೆಯಿಂದ ಸೀರೆಯನ್ನು ಬಿಚ್ಚಿ ಆರೈಕೆ ಮಡಲಾಗಿ ಮೃತಪಟ್ಟಿರುವುದಾಗಿ ಪಿರ್ಯಾದುದಾರರಿಗೆ ಅಳಿಯ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದಂತೆ ಬಂದು ನೋಡಿದಾಗಿ ಮೃಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್  52/2021 ಕಲಂ:174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-10-2021 10:49 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080