ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಶೋಕ (43), ತಂದೆ: ತಿಮ್ಮಪ್ಪ, ವಾಸ: ದೇವಿಕೃಪ ಕಲ್ಮಂಜ ಮನೆ, ಕಲ್ಮಂಜ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 21-12-2021 ರಂದು ತನ್ನ ಬಾಬ್ತು ಮೋಟಾರು ಸೈಕಲ್ನಲ್ಲಿ ಬೆಳ್ತಂಗಡಿಯಿಂದ ಉಜಿರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಪ್ರಸನ್ನ ಕಾಲೇಜು ಬಳಿ ತಲುಪುತ್ತಿದ್ದಂತೆ ಅವರ ಮುಂದಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಹೊಗುತ್ತಿದ್ದ ಕೆಎ 21 ಕೆ 3965 ನೇ ಮೋಟಾರು ಸೈಕಲನ್ನು ಅದರ ಸವಾರ ದುಡುಕುತನದಿಂದ ಚಲಾಯಿಸಿ ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಗೆ ಬಲಹಣೆಯ ಉಬ್ಬಿನ ಮೇಲೆ ಗುದ್ದಿದ ರಕ್ತ ಗಾಯವಾಗಿರುತ್ತದೆ, ಗಾಯಳು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 94/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮುರಳಿಕೃಷ್ಣ ವಿ. ಎಸ್., (39) ತಂದೆ: ಶೀನಪ್ಪ ಗೌಡ,  ವಾಸ: ಮುಳ್ಯ ವಾಲ್ತಾಜೆ ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ರವರು ದಿನಾಂಕ: 19.12.2021 ರಂದು ತನ್ನ ಬಾಬ್ತು ಲಾರಿಯನ್ನು ಚಲಾಯಿಸುತ್ತಾ ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಮಾಣಿ ಮೈಸೂರು ಹೆದ್ದಾರಿಯಲ್ಲಿ ಬರುತ್ತಾ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಡೆಪಾಲ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಎದುರುಗಡೆಯಿಂದ ಒಂದು ಮೋಟಾರ್ ಸೈಕಲನ್ನು ಅದರ ಬಾಬ್ತು ಸವಾರರು ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಚಲಾಯಿಸುತ್ತಾ ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ ಒಂದು ಲಾರಿ ಬರುವುದನ್ನು ಕಂಡು ಮೋಟಾರ್ ಸೈಕಲ್ ಸವಾರರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ರಸ್ತೆಯ ತೀರಾ ಎಡಬದಿ ಮಣ್ಣು ರಸ್ತೆಗೆ ತನ್ನ ಮೋಟಾರ್ ಸೈಕಲನ್ನು ಇಳಿಸಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ ಲಾರಿಯನ್ನು ನಿಲ್ಲಿಸಿ ಹೋಗಿ ಮೋಟಾರ್ ಸೈಕಲ್ ಸವಾರರನ್ನು ಉಪಚರಿಸಿ ನೋಡಲಾಗಿ ಸದ್ರಿಯವರು ಪಿರ್ಯಾದಿದಾರರ ಪರಿಚಯದ ದಿನೇಶ್ ಎಂಬವರಾಗಿದ್ದು, ಅವರ ಹಣೆ, ಮುಖಕ್ಕೆ ಮತ್ತು ಭುಜಕ್ಕೆ ಗಾಯವಾದವರನ್ನು ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ನಂತರ ದಿನಾಂಕ 20.12.2021 ರಂದು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 101/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹನೀಫ್ (47) ತಂದೆ:ಉಸ್ಮಾನ್ ವಾಸ:ಅಂಕಜಾಲು ಮನೆ ಕಾಯ್ಮಣ ಗ್ರಾಮ ಕಡಬ ತಾಲೂಕು ರವರು ಅವರ ಮನೆಯಿಂದ ಫಿರ್ಯಾಧಿದಾರರ ಹೆಂಡತಿಯ ತಂಗಿಯ ಬಾಬ್ತು  ಆಲ್ಟೋ ಕಾರಿನಲ್ಲಿ  ಫಿರ್ಯಾಧಿದಾರರ  ಮಗ  ಮೊಹಮ್ಮದ್‌ ರಹೀಝ್‌ ಮತ್ತು ಪತ್ನಿ  ಅಸ್ಮಾರವರು ಫಿರ್ಯಾಧಿದಾರರನ್ನು ಪೆರಿಯಶಾಂತಿ ಎಂಬಲ್ಲಿ ಬಿಟ್ಟು ವಾಪಾಸ್ಸು ಹೋಗಿದ್ದು ಪೆರಿಯಶಾಂತಿಯಲ್ಲಿ ಫಿರ್ಯಾಧಿದಾರರು ಬೆಳಗ್ಗಿನ ಜಾವ ಹಾಸನ ಕಡೆಗೆ ಹೋಗಲು ವಾಹನಕ್ಕೆ ಕಾಯುತ್ತಿರುವಾಗ 04-55 ಗಂಟೆಗೆ ಧರ್ಮಸ್ಥಳ ಕಡೆಯಿಂದ ಒಂದು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರು ಬಂದು ಫಿರ್ಯಾಧಿದಾರರ ಬಳಿ ನಿಲ್ಲಿಸಿ ಫಿರ್ಯಾಧಿದಾರರನ್ನು ಕಾರಿನಲ್ಲಿದ್ದವರು  ಬರುತ್ತೀರಾ ಎಂದು ಕೇಳಿದಾಗ ಫಿರ್ಯಾಧಿದಾರರು ಹಾಸನ ಕಡೆಗೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ಕಾರಿನಲ್ಲಿದ್ದವರು ಬನ್ನಿ ಎಂದು ಹೇಳಿ ಕಾರಿನಲ್ಲಿ ಫಿರ್ಯಾಧಿದಾರರನ್ನು ಕುಳ್ಳಿರಿಸಿಕೊಂಡು ಹಾಸನ ಕಡೆ ಹೋಗುತ್ತಾ ಬೆಳಗಿನ ಜಾವ 05-25 ರಿಂದ 05-30 ಗಂಟೆಯ ವೇಳೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ರಾ.ಹೆ-75 ರ ರಸ್ತೆಯ ಗುಂಡ್ಯ ಜಂಕ್ಷನ್ ನಿಂದ ಗುಂಡ್ಯ ಗಡಿ ದೇವಸ್ಥಾನದ ಮಧ್ಯೆ ಕಾಡು ಪ್ರದೇಶ ತಲುಪಿದಾಗ ಸ್ಕಾರ್ಪಿಯೋ ಕಾರನ್ನು ಅದರ ಚಾಲಕನು ನಿಲ್ಲಿಸಿ ಕಾರಿನಲ್ಲಿದ್ದ ಚಾಲಕ ಸೇರಿ 04 ಜನ ಅಪರಿಚಿತರು ಫಿರ್ಯಾಧಿದಾರರಿಗೆ ಚಾಕುವನ್ನು ತೋರಿಸಿ ಬೆದರಿಸಿ ಫಿರ್ಯಾಧಿದಾರರ ಬಳಿಯಲ್ಲಿದ್ದ ರೂ. 5000/- ನಗದು ಹಣ ಹಾಗೂ ಅಂದಾಜು 5000/- ರೂ ಮೌಲ್ಯದ ಮೊಬೈಲ್‌ ಫೋನ್,ಮತ್ತು 500/- ರೂ ಮೌಲ್ಯದ ಮೊಬೈಲ್ ಪವರ್‌ ಬ್ಯಾಂಕ್ ನ್ನು ದೋಚಿ ಸ್ಕಾರ್ಪಿಯೋ ಕಾರಿನಿಂದ ಫಿರ್ಯಾಧಿದಾರರನ್ನು ಹೊರಗಡೆ ದೂಡಿ ಹಾಕಿದ್ದು ಫಿರ್ಯಾಧಿದಾರರಿಂದ ದೋಚಿಕೊಂಡು ಹೋದ ನಗದು ಹಣ ಸೇರಿ ಸೊತ್ತುಗಳ ಅಂದಾಜು ಮೌಲ್ಯ ರೂ 10,500/- ಆಗಿರುತ್ತದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 167/2021 ಕಲಂ:392 ಭಾದಂಸಂ     ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗುರುವ ಪ್ರಾಯ:42 ವರ್ಷ  ತಂದೆ; ಮಾದ  ವಾಸ; ಮತ್ತಿಲ ಮನೆ ಕನ್ಯಾಡಿ-2 ಧರ್ಮಸ್ಥಳ  ಗ್ರಾಮ ಬೆಳ್ತಂಗಡಿ ತಾಲೂಕು ರವರ  ಮಗ ಸುಕುಮಾರ (24) ಎಂಬವರು   ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದು ದಿನಾಂಕ;20-12-2021 ರಂದು ಸಂಜೆ 7.00 ಗಂಟೆ ಸಮಯಕ್ಕೆ ಪಿರ್ಯಾದುದಾರರ ಮಗ ಮತ್ತು ಸೊಸೆಗೆ ಯಾವುದೋ ವಿಚಾರದಲ್ಲಿ  ತಕರಾರು ಉಂಟಾಗಿ   ಸೊಸೆ ತನ್ನ ತವರು ಮನೆಗೆ ಹೋಗಿರುತ್ತಾಳೆ.  ಪಿರ್ಯಾದುದಾರರ ಮಗ   ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ;20-12-2021 ರಂದು  ರಾತ್ರಿ 8.00 ಗಂಟೆಯಿಂದ ದಿನಾಂಕ;21-12-2021 ರಂದು ಬೆಳಿಗ್ಗೆ 10.00 ಗಂಟೆ ಮದ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ಎಂಬಲ್ಲಿರುವ ಮತ್ತಿಲ ಮನೆಯ ಮಲಗುವ ಕೊಠಡಿಯಲ್ಲಿ ಮನೆಗೆ ಅಳವಡಿಸಿದ ಕಬ್ಬಿಣದ ಪೈಪ್ ಗೆ ನೈಲಾನ್ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯು ಡಿ ಆರ್ 64/2021 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಭವಾನಿ (32) ಗಂಡ: ಬೋಜಪ್ಪ ಗೌಡ,   ವಾಸ: ಕಾಯರ ಮನೆ, ಮರ್ಕಂಜ ಗ್ರಾಮ, ಸುಳ್ಯ ತಾಲೂಕು ರವರ ಗಂಡ: ಬೋಜಪ್ಪ ಗೌಡ, (48), ತಂದೆ: ದಿ| ಮಾಧವ ಗೌಡ ಎಂಬವರು ಅರಂತೋಡು ಗ್ರಾಮದ ಅಡ್ತಲೆ ಎಂಬಲ್ಲಿ ಜೀನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ವಿಪರೀತ ಸಕ್ಕರೆ ಖಾಯಿಲೆ ಮತ್ತು ಬಿ. ಪಿ. ಖಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಕಿವಿ ನೋವಿನ ಕಾರಣ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಮಾನಸಿಕವಾಗಿ ನೊಂದಿದ್ದವರು ದಿನಾಂಕ: 21.12.2021 ರಂದು 14:00 ಗಂಟೆಗೆ ಮನೆಯಿಂದ ಅಂಗಡಿಗೆಂದು ಹೋಗಿದ್ದು, ಮದ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರು ಅಂಗಡಿಗೆ ಊಟ ತೆಗೆದುಕೊಂಡು ಹೋದಾಗ ಅಂಗಡಿಯ ಬಾಗಿಲು ಹಾಕಿದ್ದು, ಒಳಗಡೆ ಫೋನ್ ರಿಂಗಾಗುತ್ತಿದ್ದುದರಿಂದ ಪಿರ್ಯಾದಿದಾರರು ಮತ್ತು ವಿಲಾಸಿನಿ ಎಂಬವರು ಅಂಗಡಿಯ ಹಿಂಬದಿ ಬಾಗಿಲಿನ ಮೂಲಕ ಒಳಗೆ ನೋಡಿದಾಗ ಹಿಂಬದಿಯ ಕೋಣೆಯ ಅಡ್ಡಕ್ಕೂ ಬೋಜಪ್ಪರವರ ಕುತ್ತಿಗೆಗೂ ನೈಲಾನ್ ಸೀರೆಯಿಂದ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿದ್ದು ಮೃತಪಟ್ಟಿರುವುದಾಗಿದೆ. ಬೋಜಪ್ಪರವರು ತನಗಿದ್ದ ಕಿವಿನೋವು ಹಾಗೂ ಸಕ್ಕರೆ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ 56/2021 ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-12-2021 10:34 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080