ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೇಶವ ಕೆ, ಪ್ರಾಯ 44 ವರ್ಷ, ತಂದೆ: ಪದ್ಮಯ್ಯ ಗೌಡ, ವಾಸ: ಕಂಡತ್ತಡ್ಕ ಮನೆ, ಕುಂತೂರು ಗ್ರಾಮ, ಪೆರಾಬೆ ಅಂಚೆ, ಕಡಬ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 20-12-2022 ರಂದು 21:00 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಮೊಹಮ್ಮದ್ ಅಬುತ್ವಾಹರ್ ಎಂಬವರು  KA-21-EC-7135 ನೇ ನೋಂದಣಿ ನಂಬ್ರದ ಸ್ಕೂಟರನ್ನು ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ  ಕಡೆಯಿಂದ ಕೊಯಿಲ ಕಡೆಗೆ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ನೆಡ್ಚಿಲ್ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಕೇಶವ ಕೆ ರವರು ಚಾಲಕರಾಗಿ, ಗಣೇಶ, ಸಚಿನ್ ಮತ್ತು ನಿತೇಶ್ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಕುಂತೂರುಪದವು ಕಡೆಯಿಂದ  ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-N-5165 ನೇ ನೋಂದಣಿ ನಂಬ್ರದ ಓಮ್ನಿ ಕಾರಿನ ಮುಂಭಾಗಕ್ಕೆ ಸ್ಕೂಟರ್ ಅಪಘಾತವಾಗಿ,  ಕಾರು ಹತೋಟಿ ತಪ್ಪಿ ರಸ್ತೆಯ ಬಲಭಾಗದ ಚರಂಡಿಗೆ ಇಳಿದು, ಸ್ಕೂಟರ್ ಸವಾರನಿಗೆ ಕಾಲುಗಳಿಗೆ, ಮೂಗಿಗೆ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಬಳಿಕ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.  ಪಿರ್ಯಾದುದಾರರು ಮತ್ತು ಕಾರಿನ ಪ್ರಯಾಣಿಕರಿಗೆ  ಯಾವುದೇ ಗಾಯಗಳಾಗಿರುವುದಿಲ್ಲ. ಈ ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 192/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಣ್ಣಿ ಪೂಜಾರಿ, ಪ್ರಾಯ 66 ವರ್ಷ, ತಂದೆ: ದಿ.ಕೋಟಿಯಪ್ಪ ಪೂಜಾರಿ, ವಾಸ: ಒತ್ತೆಮಯಂಡೂರು ಮನೆ, ನರಿಮೊಗರು ಗ್ರಾಮ & ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 29-11-2022 ರಂದು 09:00 ಗಂಟೆಗೆ ಆರೋಪಿ ಕಾರು ಚಾಲಕ ಸಂತೋಷ್ ಎಸ್ ಎಂಬವರು  KA-19-MJ-8218  ನೇ ನೋಂದಣಿ ನಂಬ್ರದ ಕಾರನ್ನು ಸುಬ್ರಹ್ಮಣ್ಯ-ಪುತ್ತೂರು ರಾಜ್ಯ ಹೆದ್ದಾರಿಯಲ್ಲಿ ನರಿಮೊಗರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿ ಮಜಲುಮಾರು ದೇವಸ್ಥಾನದ ಬಳಿ, ಪಿರ್ಯಾದುದಾರರಾದ ಅಣ್ಣಿ ಪೂಜಾರಿ ರವರು ನರಿಮೊಗರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Y-2849 ನೇ ನೋಂದಣಿ ನಂಬ್ರದ ಸ್ಕೂಟರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಓವರ್ ಟೇಕ್ ಮಾಡಿ ತೀರಾ ಎಡಭಾಗಕ್ಕೆ  ಚಲಾಯಿಸಿದ ಪರಿಣಾಮ ಕಾರಿನ ಎಡಭಾಗವು  ಪಿರ್ಯಾದುದಾರರ ಸ್ಕೂಟರಿನ ಬಲಭಾಗಕ್ಕೆ  ಅಪಘಾತವಾಗಿ,  ಸ್ಕೂಟರ್ ಹತೋಟಿ ತಪ್ಪಿ ಪಿರ್ಯಾದುದಾರರು ಬಿದ್ದು, ತಲೆಗೆ, ಬಲಕೈಗೆ, ದೇಹದ ಬಲಭಾಗಕ್ಕೆ ಗುದ್ದಿದ ಮತ್ತು ತರಚಿದ ಗಾಯಗಳಾಗಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಬಂದಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 193/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಉಷಾ(43) ಗಂಡ: ಹರೀಶ್ ಕೆ,ಎಸ್  ವಾಸ: ಜಯನಗರ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ರವರ ಗಂಡ ಹರೀಶ್ ಕೆ, ಎನ್  (56) ಎಂಬಾತನು ವಿಪರೀತ ಮದ್ಯಪಾನ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಕೆಳೆದ ಮೂರು ದಿನಗಳಿಂದ ಆತನ ಕೈ ಮತ್ತು ಕಾಲುಗಳಲ್ಲಿ ನೀರು  ಬಂದು  ಆರೋಗ್ಯದಲ್ಲಿ  ಅಸೌಖ್ಯಗೊಂಡು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜಯನಗರ ಎಂಬಲ್ಲಿರುವ ತಮ್ಮ ಮನೆಯಲ್ಲಿಯೇ ಇರುವ ಸಮಯ  ದಿನಾಂಕ 21.12.2022 ರಂದು 15:30 ಗಂಟೆಗೆ ಆರೋಗ್ಯದಲ್ಲಿ ತೀರ್ವ ಅಸೌಖ್ಯಗೊಂಡವರನ್ನು ಪಿರ್ಯಾದುದಾರರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಹರೀಶ್ ಕೆ,ಎನ್ ರವರನ್ನು ಪರೀಕ್ಷಿಸಿ ಸಮಯ ಸುಮಾರು 15:55 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಹರೀಶ್  ಕೆ,ಎನ್ ರವರು ಹೃದಯಘಾತ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ UDR ನಂ: 55/2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ರೇವತಿ, ಪ್ರಾಯ 53 ವರ್ಷ, ಗಂಡ:ದಿ|| ವೀರಪ್ಪ ನಾಯ್ಕ ವಾಸ: ಮೊಟ್ಟೆತ್ತಡ್ಕ ಕೆದುಮೂಲೆ ಮನೆ ಪುಣಚ ಗ್ರಾಮ, ಬಂಟ್ವಾಳ ತಾಲೂಕು ರವರ ಮಗ ಕಮಲಾಕ್ಷ (32) ಎಂಬಾತನು ದಿನಾಂಕ 25-10-2022 ರಂದು ಮನೆಯಲ್ಲಿ ಪಿರ್ಯಾದಿದಾರರು ಮತ್ತು ಮಗಳು ಸುಮಿತ್ರ ಇರುವಾಗ ಬೆಳಿಗ್ಗೆ 10.00 ಗಂಟೆಗೆ ಕಮಲಾಕ್ಷನು ಮೈಸೂರಿಗೆ ಕೆಲಸಕ್ಕೆಂದು  ಹೋಗುವುದಾಗಿ ಹೇಳಿ ಕವರಿನಲ್ಲಿ ಒಂದು ಜೊತೆ ಬಟ್ಟೆ ತೆಗೆದುಕೊಂಡು ಹೋಗಿದ್ದು ಆತ ಯಾವುದೇ ಫೊನ್ ಕರೆ ಮಾಡದ ಕಾರಣ ಪಿರ್ಯಾದಿದಾರರ ಸುಮಿತ್ರಳು ಕರೆ ಮಾಡಿದಾಗ ಸ್ವಿಚ್ ಅಪ್ ಆಗಿದ್ದು.  ಆತ ಮನೆಗೆ  ಬರಬಹುದೆಂದು ತಿಳಿದು ಯಾವುದೇ ದೂರು ನೀಡದೇ  ಸುಮ್ಮನೆ ಇದ್ದು ದಿನಾಂಕ 21-12-2022 ರ ಬೆಳಿಗ್ಗೆ 09.00 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ನೆಲ್ಲಿಗುಡ್ಡೆ ಸರಕಾರಿ ಕಾಡಿನಲ್ಲಿ  ಶವ   ಇರುವ ವಿಷಯ ತಿಳಿದು ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರ ಮಗಳು ಸುಮಿತ್ರ ಳು ಶವದ ಹತ್ತಿರ ಹೋಗಿ ನೋಡಲಾಗಿ ಆತನು ಧರಿಸಿದ ಬಟ್ಟೆ, ಚಪ್ಪಲಿ, ಫೋನ್ ಇರುವುದು ಕಂಡು ಬಂದಿದ್ದು  ಆದರ ಅದಾರದ ಮೇಲೆ ಇದು ಪಿರ್ಯಾದಿದಾರ ಮಗ ಕಮಲಾಕ್ಷನ ಮೃತ ದೇಹ ಎಂದು ಗುರುತಿಸಿದ್ದು   ಪಿರ್ಯಾದಿದಾರ ಮಗ ಯಾವುದೋ ವಿಚಾರಕ್ಕೆ ದಿನಾಂಕ 25-10-2022 ರಂದು ಬೆಳಿಗ್ಗೆ  10.00 ಗಂಟೆಗೆ ಮನೆ ಯಿಂದ ಹೋದವನು  ಜೀವನದಲ್ಲಿ ಜಿಗುಪ್ಸೆ ಹೊಂದಿ ಸಾಯುವ ಉದ್ದೇಶದಿಂದ ಯಾವುದೋ ಒಂದು ದಿನ ನೆಲ್ಲಿಗುಡ್ಡೆ ಕಾಡು ಪ್ರದೇಶದಲ್ಲಿ ಅಕೇಶಿಯಾ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 50/2022 ಕಲಂ 174  ಸಿ ಅರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-12-2022 11:11 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080