ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕ್ಲಿಂಟನ್ ಬ್ಯಾಪ್ಟಿಸ್ಟ್ :24 ವರ್ಷ ತಂದೆ: ವಿಕ್ಟರ್ ಬ್ಯಾಪ್ಟಿಸ್ಟ್ ವಾಸ: ಅಡೆಪಿಲ ಮನೆ, ಶಂಭೂರು ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರೀನಂತೆ ದಿನಾಂಕ 20-01-2022 ರಂದು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಅಡೆಪಿಲ ಎಂಬಲ್ಲಿ ಶಂಭೂರು-ಪಾಣೆಮಂಗಳೂರು ಸಾರ್ವಜನಿಕ ರಸ್ತೆಯಲ್ಲಿ ಆಕ್ಟೀವಾ ವಾಹನ ನಂಬ್ರ KA-19-EQ-3791 ನೇಯದನ್ನು ಪಿರ್ಯಾದಿದಾರರಾದ ತಂದೆ ವಿಕ್ಟರ್ ಬ್ಯಾಪ್ಟಿಸ್ಟ್ ರವರು ತಿರುವು ರಸ್ತೆಯಲ್ಲಿ ದುಡುಕುತನ  ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಸದ್ರಿಯವರ ಚಾಲನಾ ಹತೋಟಿ ತಪ್ಪಿ ಆಕ್ಟೀವಾ ವಾಹನ ಸ್ಕಿಡ್ ಆಗಿ ಬಿದ್ದು, ಸವಾರ ವಿಕ್ಟರ್ ಬ್ಯಾಪ್ಟಿಸ್ಟ್ ರವರ ತಲೆಗೆ ಗುದ್ದಿದ ಹಾಗೂ ತರಚಿದ ಗಾಯಗಳಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 09/2022 ಕಲಂ 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ಅಮೀರ್ ಪ್ರಾಯ:26 ವರ್ಷ ತಂದೆ: ಹಮ್ಮಬ್ಬ ವಾಸ: ಹಳೆಯ ಶಾಲೆಯ ಬಳಿ ಲಕ್ಷ್ಮಣ ಕಟ್ಟೆ, ಸಜಿಪನಡು ಗ್ರಾಮ ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 21-01-2022 ರಂದು ಬಂಟ್ವಾಳ ತಾಲೂಕು ಸಜಿಪ ನಡು ಗ್ರಾಮದ ಕೊಲ್ಯ ಎಂಬಲ್ಲಿ ಮೆಲ್ಕಾರ್-ಮುಡಿಪು ಸಾರ್ವಜನಿಕ ರಸ್ತೆಯಲ್ಲಿ ಆಟೋ ರಿಕ್ಷಾ ನಂಬ್ರ KA 70 1606  ನೇ ಯದನ್ನು ಅದರ ಚಾಲಕ ಮುಡಿಪು ಕಡೆಯಿಂದ ಮೆಲ್ಕಾರ್ ಕಡೆಗೆ ನಿರ್ಲಕ್ಷ್ಯತನದಿಂದ ಹಾಗೂ ದುಡುಕುತನದಿಂದ ಒಮ್ಮೆಲೆ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿ ಮೆಲ್ಕಾರ್ ಕಡೆಯಿಂದ ಹೋಗುತ್ತಿದ್ದ ಫಿರ್ಯಾದಿದಾರರ ಬಾಬ್ತು ಆಕ್ಟಿವಾ ವಾಹನ ನಂಬ್ರ KA 70H-7151 ನೇಯದಕ್ಕೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಜಖಂಗೊಂಡು ಆಕ್ಟಿವ ವಾಹನದಲ್ಲಿ ಸಹಸವಾರರಾಗಿದ್ದ T H ನಿಸಾರ್ ನಿಗೆ ಮುಖಕ್ಕೆ, ಬಲಕಾಲಿಗೆ ತರಚಿದ ರಕ್ತಗಾಯ, ಮೊಹಮ್ಮದ್ ನಮಾನ ನಿಗೆ ಹಣೆಗೆ, ಹೊಟ್ಟೆಗೆ, ಎಡಕಾಲಿಗೆ ಗಾಯಗಳಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೀವ್ರ ಗಾಯಗೊಂಡ ಮೊಹಮ್ಮದ್ ನಮಾನ್ ಮಂಗಳೂರು ಐಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 10/2022 ಕಲಂ 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಾಯಿಲಪ್ಪ ಎ ಪ್ರಾಯ 55 ವರ್ಷ, ತಂದೆ: ದಿ: ಬೇಡು, ವಾಸ: ಅರ್ಬಡ್ಕ ಮನೆ, ಜಾಲ್ಸೂರು ಗ್ರಾಮ, ಸುಳ್ಯ ತಾಲೂಕು, ರವರು ನೀಡಿದ ದೂರಿನಂತೆ ದಿನಾಂಕ 20-01-2022 ರಂದು ಬೆಳ್ಳಾರೆ-ಸವಣೂರು ರಸ್ತೆಯಲ್ಲಿ ಆರೋಪಿ ಕಾರು ಚಾಲಕ ಜಯಂತ ಎಂಬವರು ಕಾರು ನಂಬ್ರ ಕೆಎ-19-ಎಂಇ-0654 ನೇಯದನ್ನು ಪೆರುವಾಜೆ ಜೆ.ಡಿ ಹಾಲ್ ಕಡೆಯಿಂದ ಸವಣೂರು ಕಡೆಗೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಪೆರುವಾಜೆ ಕಾಲೇಜು ಬಸ್ಸು ನಿಲ್ದಾಣದ ಬಳಿ  ರಸ್ತೆಯ ಎಡಬದಿಯ ಮೋರಿಯೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಮಗುಚಿ ಬಿದ್ದು, ಕಾರಿನಲ್ಲಿದ್ದ ಶೀನಪ್ಪ, ಶ್ವೇತಾ ಹಾಗೂ ಅಖಿಲ ರವರಿಗೆ ರಕ್ತ ಗಾಯ ಹಾಗೂ ಗುದ್ದಿದ ನಮೂನೆಯ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಪುತ್ತೂರು ಕಡೆಗೆ ಹೋಗಿದ್ದು, ಫಿರ್ಯಾದಿದಾರರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಲ್ಲಿನ ವೈದ್ಯರು ಸೂಚಿಸಿದಂತೆ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 11/2022  ಕಲಂ 279, 337,  338 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹನೀಫ್‌ ಜಿ ಪ್ರಾಯ 39 ವರ್ಷ, ತಂದೆ: ಆದಂ ಕುಂಞ, ವಾಸ: ಗುಂಡಿನಾರು ಮನೆ, ಬೆಳಂದೂರು ಗ್ರಾಮ, ಕಡಬ ತಾಲೂಕು, ದ.ಕ. ಜಿಲ್ಲೆ ರವರು ಕಡಬ ತಾಲೂಕು ಬೆಳಂದೂರು ಗ್ರಾಮದ ಗುಂಡಿನಾರು ಎಂಬಲ್ಲಿಯ ನಿವಾಸಿಯಾಗಿದ್ದು, ಅವರ ವಾಸದ ಮನೆಯಲ್ಲಿ ಮಗಳು ಅಯಿಷತ್‌ ಹನ್ನತ್‌ ಒರ್ವಳೆ ಇರುವ ಸಮಯ ಮಧ್ಯಾಹ್ನ 12-30 ಗಂಟೆಗೆ ಹೆಲ್ಮೆಟ್‌ ಧರಿಸಿದ್ದ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ಬಂದು ಕುಡಿಯಲು ನೀರು ಕೇಳುವ ನೆಪದಲ್ಲಿ ನೀರು ಕುಡಿದು ಫಿರ್ಯಾದಿದಾರರ ಮಗಳು ಅಯಿಷತ್‌ ಹನ್ನತಳು ಅಲ್ಲಿಯೇ  ಪಕ್ಕದ ಅಜ್ಜಿ ಮನೆಗೆ ಹೋದಾಗ ಅಪರಿಚಿತ ವ್ಯಕ್ತಿಯು ಮನೆಯ ಒಳಗಡೆ ಹೋಗಿ ರೂಮ್‌ ಗಳಲ್ಲಿದ್ದ ವಸ್ತುಗಳನ್ನೆಲ್ಲಾ ಹುಡುಕಿ ಚೆಲ್ಲಾ ಪಿಲ್ಲಿ ಮಾಡಿ ಬಳಿಕ ಫಿರ್ಯಾದಿದಾರರು ಮಲಗುವ ಕೋಣೆಯಲ್ಲಿ ಮಂಚದ ಹಾಸಿಗೆಯ ಅಡಿಯಲ್ಲಿ ಇರಿಸಿದ್ದ ರೂ 22,000/- ನಗದು ಹಣವನ್ನು ಕಳವು ಮಾಡಿ ಅಲ್ಲಿಂದ ಯಾವುದೋ ಮೋಟಾರು ಸೈಕಲಿನಲ್ಲಿ ಪರಾರಿಯಾಗಿರುವುದಾಗಿದೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 10/2022 ಕಲಂ 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಪೂತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ರಫೀಕ್ ತಂದೆ: ಇಬ್ರಾಹಿಂ ವಾಸ: ಕಾವುಂಜ ಪಡವನ್ನೂರು ಗ್ರಾಮ ಪುತ್ತೂರು ತಾಲೂಕು ರವರು  ದಿನಾಂಕ:- 21.01.2022ರಂದು ಪುತ್ತೂರಿನಲ್ಲಿ  ತನ್ನ ಬಾಬ್ತು ಕೆಎ21ಸಿ0834 ಆಟೋ ರಿಕ್ಷಾದಲ್ಲಿ  ಬಾಡಿಗೆ ಮಾಡಿಕೊಂಡಿದ್ದು, ಆ ಸಮಯ ಈಶ್ವರಮಂಗಲ ಮಸೀದಿಗೆ ಪಾರ್ಸೆಲ್  ಕೊಡಲು ಪುತ್ತೂರಿನಿಂದ ಕಾವುಂಜದ ಮನೆಗೆ ತೆರಳಿ, ಮನೆಯಿಂದ ಮೈಂದನಡ್ಕ ಸಾರ್ವಜನಿಕ ಡಾಂಬಾರು ರಸ್ತೆಯಲ್ಲಿ ಈಶ್ವರಮಂಗಲಕ್ಕೆ ಹೋಗುವರೇ ಪಡುವನ್ನೂರು ಗ್ರಾಮದ ಮೈಂದನಡ್ಕ ಎಂಬಲ್ಲಿಗೆ ಸಮಯ ಸುಮಾರು ಸಂಜೆ 5:50 ಗಂಟೆಗೆ ತಲುಪಿದಾಗ ಫಿರ್ಯಾದಿದಾರರಿಗೆ ಪರಿಚಯನಾದ ಜೈನುಲ್ ಆಬಿದ್ ಪಡುಮಲೆ ಕಡೆಯಿಂದ  ಬೈಕಿನಲ್ಲಿ ಬಂದು ಫಿರ್ಯಾದುದಾರರು ಚಲಾಯಿಸುತ್ತಿದ್ದ ಆಟೋರಿಕ್ಷಾ ಮುಂದಕ್ಕೆ ಚಲಿಸದಂತೆ ಆತನ ಮೋಟಾರ್ ಸೈಕಲ್ ನ್ನು  ಅಡ್ಡಲಾಗಿ ನಿಲ್ಲಿಸಿದ್ದು, ಅಷ್ಟರಲ್ಲಿ  ಫಿರ್ಯಾದುದಾರರು ಆಟೋರಿಕ್ಷಾದಿಂದ ಕೆಳಗೆ ಇಳಿದು ಬೈಕ್ ಯಾಕೆ ಅಡ್ಡ ನಿಲ್ಲಿಸಿದ್ದು ಎಂದು ಕೇಳಿದಾಗ ಆರೋಪಿ ಬೈಕ್ ಅಡ್ಡ ನಿಲ್ಲಿಸುತ್ತೇನೆ ನೀನು  ಯಾರು ಕೇಳಲು, ಎಂಬುದಾಗಿ ಅವಾಚ್ಯ ಆಬ್ದಗಳಿಂದ ಬೈದು, ಕೈಯಿಂದ ಪಿರ್ಯಾಧಿಯ ಟೀ ಶರ್ಟ್ ಎಳೆದಾಡಿ ಬಲಕೈಯ ಬೆರಳನ್ನು ಹಿಡಿದು ತಿರುಗಿಸಿ  ಎಡಬದಿಯ ಎದೆಗೆ ಕೈಯಿಂದ ಗುದ್ದಿರುತ್ತಾನೆ . ಅಷ್ಟರಲ್ಲಿ ಫಿರ್ಯಾದಿಯ ಮಾವ ಉಮ್ಮರ್ ಎಂಬುವರು ಮೈಂದನಡ್ಕದಿಂದ ಫಿರ್ಯಾದಿಯ ಬಳಿಗೆ ಬರುವುದನ್ನು ಕಂಡು ಆರೋಪಿ ಜೈನುಲ್ ಆಬಿದ್ ನು ಅಲ್ಲಿಂದ ಬೈಕಿನಲ್ಲಿ ಹೋಗಿರುತ್ತಾರೆ,  ಈ ಬಗ್ಗೆ  ಪೂತ್ತೂರು ಗ್ರಾಮಾಂತರ ಅಕ್ರ 13/2021 ಕಲಂ 323, 504, 341 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-01-2022 07:09 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080