ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಶೀರ್‌ ಪ್ರಾಯ 53 ವರ್ಷ ತಂದೆ:ದಿ||ಅಬ್ದುಲ್ಲ ವಾಸ:ವಾಣಿಮಲ್‌ ಪೋಸ್ಟ್‌ ಮತ್ತು ಗ್ರಾಮ ಕಲ್ಲಾಚಿ ,ಕೊಯೊಕೊಡ್‌ ಕೇರಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:18-03-2022 ರಂದು ಲಾರಿ ನಂಬ್ರ ಕೆಎ-51-ಸಿ-5582 ನೇದರಲ್ಲಿ ಕೇರಳದ ಮಲಪ್ಪುರಮ್ ನಿಂದ ,ಚಾಲಕ ನೌಶದ್ ಮತ್ತು ಕುಟ್ಟಿ ಆಲಿ ಎಂಬವರು ಲಾರಿಯ ಚಾಲಕನ ಎಡ ಬದಿ ಕುಳಿತುಕೊಂಡು ಮರದ ಲೋಡ್ ಮಾಡುವ ಬಗ್ಗೆ ಹೊರಟು ಕಾಂಞಗಾಡ್-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸಿಕೊಂಡು ಸಮಯ ಸುಮಾರು 19-00 ಗಂಟೆಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುದ್ದುಪದವು ಕಬ್ಬಿನ ಹಿತ್ಲು ಎಂಬಲ್ಲಿಗೆ ತಲುಪಿದಾಗ ಲಾರಿ ಚಾಲಕ ನೌಶಾದ್‌ ಲಾರಿಯನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮಗುಚಿ ಬಿದ್ದಿರುತ್ತದೆ. ಪರಿಣಾಮ ಚಾಲಕ ನೌಶದ್ ನಿಗೆ ಸಣ್ಣ ಪುಟ್ಟ ತರಚಿದ ಗಾಯ ಮತ್ತು ಪಿರ್ಯಾಧಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ. ಲಾರಿಯಲ್ಲಿದ್ದ ಕುಟ್ಟಿ ಆಲಿ ಬಲಕುತ್ತಿಗೆಯ ಭಾಗಕ್ಕೆ ರಕ್ತ ಗಾಯ,ದೇಹದ ಹೊಟ್ಟೆಯ ಎಡ ಮತ್ತು ಬಲ ಎರಡು ಕಡೆ ತೀವ್ರ ಗುದ್ದಿದ ರಕ್ತ ಗಾಯವಾಗಿದ್ದು.  ಹಾಗೂ ಎಡ ಕಣ್ಣಿನ ಭಾಗಕ್ಕೆ ರಕ್ತ ಗಾಯವಾಗಿರುತ್ತದೆ. ಗಾಯಾಳು ಕುಟ್ಟಿ ಆಲಿರವರು ಮಂಗಳೂರು ಕೆ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 48/2022 ಕಲಂ:279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ಖಾದರ್ ಪ್ರಾಯ: 30 ವರ್ಷ ತಂದೆ: ಹಸನಬ್ಬ @ ಅದ್ರಾಮನ್ ವಾಸ: ಪಟ್ಲ ಮನೆ, ನಾವೂರು ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 20-03-2022 ರಂದು ತನ್ನ ಬಾಬ್ತು ಹೊಸ ನೊಂದಣಿಯಾಗದ ಮೋಟಾರ್ ಸೈಕಲಿನಲ್ಲಿ ಅಗತ್ಯ ಕೆಲಸದ ನಿಮಿತ್ತ ಮನೆಯಿಂದ ವಗ್ಗ ಕಡೆಗೆ ಹೋಗುತ್ತಾ ಸಮಯ ಸುಮಾರು 16:00 ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಪೊಯಿಲೋಡಿ ಎಂಬಲ್ಲಿಗೆ ತಲುಪಿದಾಗ ಬೆಳ್ತಂಗಡಿ  ಕಡೆಯಿಂದ KA-03-AD-0110 ನೇ ಅಂಬುಲೆನ್ಸ್ ವಾಹನವನ್ನು ಅದರ ಚಾಲಕ ಮಂಜು ಗೌಡರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿಯ ಬಲ ಕಾಲಿನ ಪಾದಕ್ಕೆ ಹಾಗೂ ಬೆರಳುಗಳಿಗೆ ರಕ್ತಗಾಯವಾಗಿದ್ದು, ಬಲ ಕಾಲಿನ ಮೊಣಗಂಟಿಗೆ, ಹಿಂಬದಿ ಸೊಂಟಕ್ಕೆ ಹಾಗೂ ಬೆನ್ನಿಗೆ ತರಚಿದ ಗಾಯಗೊಂಡವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ  ಅ.ಕ್ರ 34/2022 ಕಲಂ 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಮೇಶ್ ಬಿ ಕಿರಿಯ ಇಂಜಿನಿಯರ್ (ವಿ) ಮೇಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ ನೆಲ್ಯಾಡಿ ಶಾಖೆ ಕಡಬ ಉಪ ವಿಭಾಗ ಎಂಬವರ ದೂರಿನಂತೆ ಫಿರ್ಯಾದಿದಾರರಾದ ರಮೇಶ್.ಬಿ. ರವರು ನೆಲ್ಯಾಡಿ ಮೆಸ್ಕಾಂ ಶಾಖೆಯ ಕಿರಿಯ ಇಂಜಿನಿಯರ್ (ವಿ) ಆಗಿದ್ದು  ನೆಲ್ಯಾಡಿ ಮೆಸ್ಕಾಂ ಶಾಖೆಯಲ್ಲಿ ಶಾಖಾಧಿಕಾರಿಯಾಗಿ ಕರ್ತ್ಯವ್ಯ ನಿರ್ವಹಿಸುತ್ತಿದ್ದು, ಈ ದಿನ ದಿನಾಂಕ: 22.03.2022 ರಂದು ಬೆಳಿಗ್ಗೆ 06.20 ಗಂಟೆಗೆ  ಕಡಬ ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಪೇಟೆಯ ಕುಮಾರ ಕೃಪ ದಿನಸಿ ಅಂಗಡಿಯ ಎದುರುಗಡೆ ಇರುವ ನೆಲ್ಯಾಡಿ ಟೌನ್ 100 ಕೆ.ವಿ. ವಿದ್ಯುತ್ ಪರಿವರ್ತಕ ಕೇಂದ್ರಕ್ಕೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎ 19 ಎಂಇ 9783 ನೇ ನಂಬ್ರದ ಕಾರಿನ ಚಾಲಕನು ಕಾರನ್ನು ನಿರ್ಲಕ್ಷ್ಯತನ ಮತ್ತು  ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ವಿದ್ಯುತ್ ಪರಿವರ್ತಕ ಕೇಂದ್ರದ ಎರಡೂ ಕಂಬಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಅಂದಾಜು ಸುಮಾರು ರೂ 60,000/-ನಷ್ಟವುಂಟಾಗಿರುವುದಲ್ಲದೇ ವಿದ್ಯುತ್ ವ್ಯತ್ಯಾಯವಾಗಿದ್ದು ಹಾಗು ಅಪಘಾತ ಪಡಿಸಿದ ಕಾರು ಕೂಡಾ ಜಖಂ ಗೊಂಡಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 42/2022 ಕಲಂ:279 427 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಉಮೇಶ್ ಡಿ ಪ್ರಾಯ 34 ವರ್ಷ, ತಂದೆ: ದಿ: ಸೂರಪ್ಪ ಗೌಡ, ವಾಸ: ದೋಳದಗುಂಡಿ ಮನೆ, ಮುಪ್ಪೇರಿಯಾ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 21-03-2022 ರಂದು ಮಧ್ಯಾಹ್ನ ಸಮಯ ಫಿರ್ಯಾದಿದಾರರ ಗೆಳೆಯ ಶಿವಪ್ರಸಾದ್ ರವರು ಅಗತ್ಯ ಕೆಲಸದ ಬಗ್ಗೆ ಪಿರ್ಯಾದಿದಾರರ ಮನೆಯಾದ ದೋಳದಗುಂಡಿ ಎಂಬಲ್ಲಿಗೆ ಬಂದಿದ್ದು ಬಳಿಕ ವಾಪಾಸ್ ಶಿವಪ್ರಸಾದ್ ರವರ ಮೋಟಾರು ಸೈಕಲ್ ನಂಬ್ರ  ಕೆಎ-21-ಇಬಿ-1457 ನೇಯದರಲ್ಲಿ ಫಿರ್ಯಾದಿದಾರರು ಹಿಂಬದಿ ಸವಾರರಾಗಿ ಕುಳಿತುಕೊಂಡು ಕಲ್ಲೇರಿ-ನಿಂತಿಕಲ್ಲು-ಬೆಳ್ಳಾರೆ ಮಾರ್ಗವಾಗಿ ಬರುತ್ತಿದ್ದ ಸಮಯ ಸುಮಾರು 13-45 ಗಂಟೆಗೆ ಸುಳ್ಯ ತಾಲೂಕು ಮುಪ್ಪೇರಿಯಾ ಗ್ರಾಮದ ನಿಂತಿಕಲ್ಲು ಎಂಬಲ್ಲಿಗೆ ತಲುಪಿದಾಗ ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದ ಮೋಟಾರು ಸೈಕಲ್ ನಂಬ್ರ ಕೆಎ-21-ವೈ-0721 ನೇಯದನ್ನು ಅದರ ಸವಾರ ಮಂಜುನಾಥ ರವರು ಯಾವುದೇ ಸೂಚನೆಯನ್ನು ನೀಡದೇ ಒಮ್ಮೇಲೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬಲಕ್ಕೆ ಚಲಾಯಿಸಿದ ಪರಿಣಾಮ ಫಿರ್ಯಾದಿದಾರರು ಹೋಗುತ್ತಿದ್ದ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದು ಎರಡೂ ಮೋಟಾರು ಸೈಕಲ್ ಗಳು ಮಗುಚಿ ಬಿದ್ದು ಫಿರ್ಯಾದಿದಾರರ ಎಡಕೆನ್ನೆ, ಎಡ ಕಣ್ಣಿನ ಬಳಿ, ಎಡ ಕೈ ಮಣಿಗಂಟಿನ ಬಳಿ , ಎಡಕಾಲಿನ ಮೊಣಗಂಟಿನ ಬಳಿ ತರಚಿದ ಹಾಗೂ ರಕ್ತ ಗಾಯಗಳು ಮತ್ತು ಸವಾರ ಶಿವಪ್ರಸಾದ್ ರವರ ತಲೆಗೆ ಗುದ್ದಿದ ಹಾಗೂ ರಕ್ತ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ಒಂದರಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಹೋದಾಗ ಫಿರ್ಯಾದಿದಾರರನ್ನು ವೈದ್ಯರು ಪರೀಕ್ಷಿಸಿ ಹೋರರೋಗಿಯನ್ನಾಗಿ ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 21/2022 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಂ. ಆರ್‌. ಮಹಾಲಿಂಗ ಭಟ್‌, ಪ್ರಾಯ 64 ವರ್ಷ, ತಂದೆ: ದಿ|| ಎಂ.ಆರ್‌. ಭಟ್‌,  ವಾಸ: ಗಣೇಸ್‌ ಕೃಪಾ, ದರ್ಬೆ ಅಂಚೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು  ಎಂಬವರ ದೂರಿನಂತೆ ದಿನಾಂಕ 17-02-2022 ರಂದು ಸಮಯ ಸುಮಾರು  05-45 ಗಂಟೆಗೆ ಆರೋಪಿ ಕಾರು ಚಾಲಕ ಜತ್ತಪ್ಪ ರೈ ಎಂಬವರು KA-19-N-0978 ನೇ ನೋಂದಣಿ ನಂಬ್ರದ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪರ್ಲಡ್ಕ ಕಡೆಯಿಂದ ಪತ್ರಾವೋ ಸರ್ಕಲ್‌ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪತ್ರಾವೋ ಸರ್ಕಲ್‌ ಎಂಬಲ್ಲಿ ಮಾತಾ ಸರ್ವಿಸ್‌ ಸ್ಟೇಶನ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ರಸ್ತೆಯ ಬದಿಯಲ್ಲಿ ಹರೀಶ್‌ ಎಂಬವರೊಂದಿಗೆ ಮಾತನಾಡಿಕೊಂಡು ನಿಂತಿದ್ದ ಪಿರ್ಯಾದುದಾರರಾದ ಎಂ.ಆರ್‌ ಮಹಾಲಿಂಗ ಭಟ್‌ ರವರಿಗೆ  ಕಾರು ಅಪಘಾತವಾಗಿ, ಅವರು ರಸ್ತೆಗೆ ಬಿದ್ದು ಎಡಕಾಲಿನ ಮಣಿಗಂಟಿಗೆ, ಎಡಕಾಲಿನ ಮೊಣಕಾಲಿಗೆ ಬಲಕೈಯ ಹೆಬ್ಬೆರಳಿಗೆ ಮತ್ತು ಭುಜಕ್ಕೆ, ಎಡಕೈಯ ಮೊಣಕೈಗೆ, ಎದೆಯ ಎಲುಬಿಗೆ ಮತ್ತು ಇತರ ಕಡೆಗಳಿಗೆ ಗಾಯಗಳಾಗಿ ಪುತ್ತೂರು ಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  54/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 2

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿಡಿಓ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಪುತ್ತುರು ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರು ಉಪ್ಪಿನಂಗಡಿ ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಟೇಲು ಎಂಬಲ್ಲಿ ನೀರಿನ ಪಂಪ್ ಇರುವ ಶೆಡ್ ನಲ್ಲಿ  ಸುಮಾರು 15 ವರ್ಷಗಳ ಹಿಂದೆ 10 ಹೆಚ್ ಪಿ ಸಾಮರ್ಥ್ಯದ ಪಂಪ್ ಅಳವಡಿಸಿದ್ದು ಸದ್ರಿ ಪಂಪ್ ಶೆಡ್ಡಿಗೆ ವಾಟರ್ ಮ್ಯಾನ್ ಆಗಿ ಉಮೇಶ್ ನಾಯಕ್ ರವರನ್ನು ಪಂಚಾಯತ್ ವತಿಯಿಂದ ನೇಮಿಸಿದ್ದು, ಸದ್ರಿಯವರು ದಿನಾಂಕ:18.03.2022 ರಂದು ರಾತ್ರಿ 8-30 ಗಂಟೆಗೆ ಪಂಪ್ ಶೆಡ್ಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದು ನಂತರ ದಿನಾಂಕ:19.03.2022 ರಂದು ಬೆಳಿಗ್ಗೆ 6-15 ಗಂಟೆಗೆ ಪಂಪ್ ಶೆಡ್ಡಿಗೆ ಉಮೇಶ್ ನಾಯಕ್ ರವರು ಹೋಗಿ ನೋಡಿದಾಗ ಪಂಪ್ ಶೆಡ್ಡಿನ  ಬಾಗಿಲಿನ ಬೀಗ ಮುರಿದಿದ್ದು ನಂತರ ಒಳಗೆ ಹೋಗಿ ನೋಡಲಾಗಿ 10 ಹೆಚ್.ಪಿ ಸಾಮರ್ಥ್ಯದ ಪಂಪು ಕಳುವಾಗಿರುವುದು ಕಂಡು ಬಂದಿರುತ್ತದೆ.ಈ ಬಗ್ಗೆ ಫಿರ್ಯಾಧಿದಾರರಿಗೆ ಉಮೇಶ್ ನಾಯಕ್ ರವರು ಕರೆಮಾಡಿ ಮಾಹಿತಿ ತಿಳಿಸಿದ್ದು ಫಿರ್ಯಾಧಿದಾರರು ಬೆಳಿಗ್ಗೆ 10-00 ಗಂಟೆಗೆ ಸ್ಥಳ ಪರಿಶೀಲನೆ ನಡೆಸಿದಾಗ ಶೆಡ್ಡಿನಲ್ಲಿದ್ದ 10 ಹೆಚ್.ಪಿ ಸಾಮರ್ಥ್ಯದ ಪಂಪ್ ಕಳುವಾಗಿರುವುದು ಕಂಡು ಬಂದಿರುತ್ತದೆ. ಕಳುವಾಗಿರುವ ಪಂಪಿನ ಅಂದಾಜು ಮೌಲ್ಯ 50,000/- ರೂ ಮೌಲ್ಯವಾಗಿದ್ದು.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 43/2022 ಕಲಂ:457, 380  ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್‌  ಮುಸ್ತಾಫಾ ಪ್ರಾಯ:33 ವರ್ಷ ತಂದೆ; ಶೇಖ್‌ ದಾವುದ್‌ ಸಾಹೇಬ್‌ ವಾಸ: ಬೆಳ್ಳಗುಡ್ಡೆ ಮನೆ ಮುಂಡೂರು ಅಂಚೆ ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು  ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:22-03-2022 ರಂದು ಬೆಳಿಗ್ಗೆ 08.30 ಗಂಟೆಗೆ  ಅಬ್ದುಲ್‌ ಕುಂಞ ರವರ ಓಮ್ನಿ  ಕಾರು KA 19Z1405 ನೇದರಲ್ಲಿ ಅವರ ಪರಿಚಯದ ವೆಂಕಪ್ಪ ಅವರ ಹೆಂಡ್ತಿ ,ತಾಯಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಿಂದ ಹೊರಟು 11.30 ಗಂಟೆಗೆ  ಧರ್ಮಸ್ಥಳಕ್ಕೆ ತಲುಪಿ ಧರ್ಮಸ್ಥಳ ದೇವಸ್ಥಾನದ ಬಳಿ ಇರುವ ಬರೋಡಾ ಬ್ಯಾಂಕಿನ ಎದುರು ರಸ್ತೆಯ ಬದಿ ಇರುವ ಪಾರ್ಕಿಂಗ್‌ ಜಾಗದಲ್ಲಿ ಓಮ್ನಿಯನ್ನು ನಿಲ್ಲಿಸಿ ದೇವಸ್ಥಾನಕ್ಕೆ ಹೋಗಿದ್ದು, ದೇವರ ದರ್ಶನ ಹಾಗೂ  ಅನ್ನ ಪ್ರಸಾದ ಸ್ವೀಕರಿಸಿ ಮರಳಿ ಮದ್ಯಾಹ್ನ 14.30 ಗಂಟೆ ಸಮಯಕ್ಕೆ ಪಿರ್ಯಾದುದಾರರು ಓಮ್ನಿ ನಿಲ್ಲಿಸಿದ ಜಾಗಕ್ಕೆ ಬಂದು ನೋಡಿದಾಗ ಪಿರ್ಯಾದುದಾರರು ನಿಲ್ಲಿಸಿದ ಜಾಗದಲ್ಲಿ ಓಮ್ನಿ ಕಾರು ಇಲ್ಲದೇ ಇದ್ದುದರಿಂದ ಧರ್ಮಸ್ಥಳ ದೇವಸ್ಥಾನದ ವಠಾರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದ ಕಾರಣ. ಸದ್ರಿ ಕಾರಿನ ಮಾಲಕರಲ್ಲಿಈ ವಿಚಾರವನ್ನು ತಿಳಿಸಿ ಠಾಣೆಗೆ ಬಂದು  ಸದ್ರಿ ಕಾರು ಕಳ್ಳತನವಾದ ಬಗ್ಗೆ  ದೂರು ನೀಡಿದಾಗಿರುತ್ತದೆ. ಕಳ್ಳತನವಾದ ಕೆಎ 19 ಝೆಡ್  1405 ನೇ ಮಾರುತಿ ಓಮ್ನಿ ಕಾರಿನ ಅಂದಾಜು ಮೌಲ್ಯ 80,000 ರೂ ಅಗಬಹುದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 22/2022 ಕಲಂ:379ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಪ್ಲೋರಿನ್ ಸಂತ್ ಮೇಯರ್(54), ಗಂಡ: ರಾಬರ್ಟ್ ಸಂತ್ ಮೇಯರ್ ವಾಸ: ಗುಂಪಲಾಜೆ ಮನೆ, ಬೆಳ್ತಂಗಡಿ ಕಸಬ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರಿಗೆ ನೊಂದಾಯಿಸಲ್ಪಟ್ಟಿರುವ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬ ಗ್ರಾಮದ ಗುಂಪಲಾಜೆ ಎಂಬಲ್ಲಿರುವ ಜಮೀನಿಗೆ  ಆರೋಪಿಗಳು ದಿನಾಂಕ 23.02.2022 ರಂದು ಅಕ್ರಮ ಪ್ರವೇಶ ಮಾಡಿ ಸದ್ರಿ ಜಮೀನಿನಲ್ಲಿ ಪಿರ್ಯಾದಿದಾರರು ಕಟ್ಟಿದ್ದ ಮನೆಯನ್ನು ಕೆಡವಿ,  ಭೂಮಿಯ ಸುತ್ತ ಹಾಕಿದ್ದ ತಂತಿ ಬೇಲಿ ಹಾಗೂ ಕಲ್ಲು ಕಂಬಗಳನ್ನು ಕೆಡವಿ ಜೆ.ಸಿ,ಬಿಯಿಂದ ಭೂಮಿ ಅಗೆದು ಸುಮಾರು 5 ಲಕ್ಷ  ನಷ್ಟ ಉಂಟು ಮಾಡಿರುವುದಲ್ಲದೇ,  ಜೀವ ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ ಕ್ರ ನಂ: 19/2022 ಕಲಂ 447,427,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 23-03-2022 11:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080