ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಂಬವರ ದೂರಿನಂತೆ ಪಿರ್ಯಾದುದಾರರ ಗಂಡ ನಿತ್ಯಾನಂದ ತಮ್ಮ ಬಾಬ್ತು ಸ್ಕೂಟರನ್ನು ಸವಾರಿ ಮಾಡಿಕೊಂಡು ಸುಳ್ಯ ತಾಲೂಕು ಅರಂತೋಡು ಗ್ರಾಮದ ಅರಂತೋಡು ಪೇಟೆಗೆಯಲ್ಲಿ ಸಮಯ ಸುಮಾರು 09.50 ಗಂಟೆಗೆ ಬರುತ್ತಿರುವ ಸಮಯ ಮಡಿಕೇರಿ ಕಡೆಯಿಂದ ಸುಳ್ಯದ ಕಾರು ನಂಬ್ರ ಕೆಎ 09 ಎಮ್ ಎಫ್  2661 ನೇ ಕಾರು ಚಾಲಕ ಸಸ್ಪಿನ್ ಎಂಬಾತನು ಕಾರನ್ನು  ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಪಡಿಸಿದ ಕಾರಣ ಪಿರ್ಯಾದುದಾರರ ಗಂಡ ನಿತ್ಯಾನಂದರವರಿಗೆ  ತಲೆಯ ಹಿಂಬದಿ , ಬಲಕಾಲು ಮಣಿಗಂಟಿನ ಬಳಿ, ಎಡ ಕೈ ಭುಜದ ಬಳಿ ರಕ್ತ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ನಂತರ ಬಿಡುಗಡೆಗೊಂಡು ಮನೆಗೆ ಹೋಗಿದ್ದು ದಿನಾಂಕ 20.06.2021 ರಂದು ಬೆಳಿಗ್ಗೆ 02.30 ಗಂಟೆಗೆ ಸ್ಮೃತಿ ಕಳೆದುಕೊಂಡಿದ್ದವರನ್ನು ಪುನಃ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು  ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ.ಕ್ರ 45/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ:22-06-2021 ರಂದು ಬೆಳಿಗ್ಗೆ 10.45 ಗಂಟೆಗೆ ಬಿ ಕಸಬಾ ಗ್ರಾಮದ ಬಂಟ್ವಾಳ ಪೇಟೆ ಎಂಬಲ್ಲಿ ತಲುಪಿದಾಗ ಅಲ್ಲಿಯ ಮನೋಹರ್ ಟೆಕ್ಸ್ ಟೈಲ್ಸ್ ಅಂಗಡಿಯ ಮಾಲೀಕನು ಬಟ್ಟೆ ಅಂಗಡಿಯನ್ನು ತೆರೆದು  7-8 ಜನರನ್ನು ಸೇರಿಸಿ ವ್ಯಾಪಾರವನ್ನು ಮಾಡುತ್ತಿರುವುದು ಕಂಡು ಬಂದಿದ್ದು, ಬಟ್ಟೆ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಬಾರದು ಎಂದು ತಿಳಿದು ಸದ್ರಿ ಬಟ್ಟೆ ಅಂಗಡಿಯನ್ನು ಮುಚ್ಚದೇ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಆತನ ಹೆಸರು ವಿಳಾಸ ಕೇಳಲಾಗಿ ಗಿರೀಶ್ ರಾವ್ (64) ತಂದೆ: ಲಕ್ಷ್ಮಣ ರಾವ್ ವಾಸ: ಸರಕಾರಿ ಆಸ್ಪತ್ರೆ ಹತ್ತಿರ, ಬಂಟ್ವಾಳ ಪೇಟೆ, ಬಿ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಆಗಿರುತ್ತದೆ. ಆದುದರಿಂದ ಟೆಕ್ಸ್ ಟೈಲ್ಸ್ ಅಂಗಡಿಯನ್ನು ತೆರೆದು ಮಾಲೀಕರಾದ ಗಿರೀಶ್ ರಾವ್ ರವರು ಸರಕಾರ ವಿಧಿಸಿದ್ದ ನಿಷೇದಾಜ್ಞೇಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿ ಸಮಯ ಮೀರಿ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿ ಅಪರಾಧವೆಸಗಿರುತ್ತಾರೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ:71/2021 ಕಲಂ: 269, 270 ಐಪಿಸಿ ಮತ್ತು ಕಲ: 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ ಕಾಯ್ದೆ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೌಲಾ ಸಾಬ್  ತಂದೆ: ಜಮಾಲ್ ಸಾಬ್ ಬರ್ದುವಾಡ ಮನೆ, ಕೊಡ್ಲಿವಾಡ ಕುಂದಗೋಳ ತಾಲೂಕು ಧಾರವಾಡ ಜಿಲ್ಲೆ ಹಾಲಿವಾಸ: ಕರ್ನೂರು ನೆಟ್ಟಣಿಗೆ ಮುಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಮೌಲಾ ಸಾಬ್ ಧಾರವಾಡ ಜಿಲ್ಲೆ ರವರು ಪ್ರಸ್ತುತ ಸಂಬಂಧಿಕರ ಜೊತೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಶಾಲಾ ಬಳಿ ವಾಸವಾಗಿದ್ದು 1 ½ ತಿಂಗಳ ಹಿಂದೆ ಧಾರಾವಾಡದಿಂದ ಪುತ್ತೂರಿಗೆ ಬಂದು, ಗುತ್ತಿಗೆ ಆಧಾರದಲ್ಲಿ ರಸ್ತೆಗೆ ಡಾಂಬಾರು ಆಳವಡಿಸುವ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ಸೋದರ ಸಂಬಂಧಿ 49 ವರ್ಷ ಪ್ರಾಯದ ಲಾಲ್‌ ಸಾಬ್ ಎಂಬವರು ಕೂಡ ಕೆಲಸ ಮಾಡಿಕೊಂಡಿದ್ದು, ದಿನಾಂಕ 21.06.2021 ರಂದು ಪಂಚೋಡಿ ಗಾಳಿಮುಖ ರಸ್ತೆಗೆ ಡಾಂಬಾರು ಅಳವಡಿಸುವ ಕೆಲಸ ಮುಗಿಸಿ ಕೆಲಸಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪುತ್ತೂರಿಗೆ ತಲುಪಿಸಲು ಪಿರ್ಯಾದಿದಾರರು ಇತರರೊಂದಿಗೆ ಹೋಗಿದ್ದು ಲಾಲ್‌ಸಾಬ್ ಕರ್ನೂರಿನಲ್ಲಿಯೇ ಉಳಿದುಕೊಂಡಿದ್ದು ರಾತ್ರಿ 7 ಗಂಟೆಗೆ ಪಿರ್ಯಾದಿದಾರರು ವಾಪಾಸು ಬಂದಾಗ ಲಾಲ್‌ಸಾಬ್ ಅಮಲು ಪದಾರ್ಥ ಸೇವೆನ ಮಾಡಿಕೊಂಡು ಮಲಗಿದ್ದು ಊಟ ಮಾಡಲು ಹೇಳಿದಾಗ ಬೆಳಿಗ್ಗೆ ಮಾಡುತ್ತೇನೆ ಎಂದು ವಾಪಾಸು ಮಲಗಿದ್ದು, ಈ ದಿನ ದಿನಾಂಕ 22.06.201 ರಂದು ಬೆಳಿಗ್ಗೆ 08.30 ಗಂಟೆಗೆ ಪಿರ್ಯಾದಿದಾರರು ಲಾಲ್‌ಸಾಬ್‌ನನ್ನು ಎಬ್ಬಿಸಿ ತಿಂಡಿ ತಿನ್ನಲು ತಿಳಿಸಿದಾಗ ಆಮೇಲೆ ತಿಂಡಿ ತಿನ್ನುತ್ತೇನೆ ಎಂದು ವಾಪಾಸು ಮಲಗಿದ್ದು ಬೆಳಿಗ್ಗೆ 09.30 ಗಂಟೆಗೆ ಪಿರ್ಯಾದಿದಾರರು ಲಾಲ್‌ ಸಾಬ್‌ ನನ್ನು ಎಬ್ಬಿಸಿದಾಗ ಏಳದೆ ಇದ್ದು, ಮಾತು ಕೂಡಾ ಆಡದೇ ಇದ್ದವನನ್ನು ಪಿರ್ಯಾದಿದಾರರು ಜೊತೆಯಲ್ಲಿದ್ದವರೊಂದಿಗೆ ಚಿಕಿತ್ಸೆ ಬಗ್ಗೆ ಈಶ್ವರ ಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಮಧ್ಯಾಹ್ನ 1.30 ಗಂಟೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋದಲ್ಲಿ  ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಅರ್ ನಂಬ್ರ 23/21  ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅನಿತಾ ಗಂಡ ಶಿವರಾಜ್ ವಾಸ:  ಅಜಿಲ ದರ್ಖಾಸು ಮನೆ, ಬಾರ್ಯ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಾಯಿ ಶ್ರೀಮತಿ ದೇವಕಿ ಪ್ರಾಯ 59  ಗಂಡ  ಶಾಂತಪ್ಪ ಪೂಜಾರಿ  ವಾಸ:  ವಜ್ರಪಲ್ಕೆ  ಪುತ್ತಿಲ ಗ್ರಾಮ ಬೆಳ್ತಂಗಡಿ ತಾಲೂಕು ರವರು   ಕರೆದಲ್ಲಿಗೆ ಬಾಣಂತಿ ಆರೈಕೆಗೆ ಹೋಗುತ್ತಿದ್ದು ಸುಮಾರು 1 ತಿಂಗಳ ಹಿಂದೆ  ಬಾರ್ಯ ಗ್ರಾಮದ ಪಿಲಿಗೂಡು ಎಂಬಲ್ಲಿ ರಾಮಕೃಷ್ಣ ಕರ್ಕೆರ ರವರ  ಮನೆಯಲ್ಲಿ  ಬಾಣಂತೀ ಅರೈಕೆ ಕೆಲಸಕ್ಕೆ ಹೋಗಿ ಕೆಲಸದಲ್ಲಿದ್ದವರು ದಿನಾಂಕ:22.06.2021 ರಂದು 16.00 ಗಂಟೆಗೆ ರಾಮಕೃಷ್ಣ ಕರ್ಕೇರ ರವರ ಮನೆಯಲ್ಲಿ ಮಲಗಿ ನಿದ್ದೆಯಿಂದ ಎದ್ದು ಕುಳಿತುಕೊಂಡು  ಎದೆನೋವು ಎಂದು ಹೇಳುತ್ಥಾ ಆಕಸ್ಮಿಕವಾಗಿ ಕುಸಿದು ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ವೈದ್ಯಾದಿಕಾರಿಯವರ ಮುಂದೆ  17.00 ಗಂಟೆಗೆ   ಕರೆದುಕೊಂಡು ಹಾಜರುಪಡಿಸಿದಲ್ಲಿ ಅಲ್ಲಿನ ವೈದ್ಯರು ದೇವಕಿ(59) ರವರನ್ನು ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ ತಿಳಿಸಿರುವುದು.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯು.ಡಿ.ಆರ್‌ ಸಂಖ್ಯೆ 21/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸರಿತ ಗಂಡ: ರಾಮಚಂದ್ರ ನಾಯ್ಕ, ವಾಸ: ಶಾಂತಿಮೂಲೆ ಮನೆ, ಐರ್ವನಾಡು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ರಾಮಚಂದ್ರ ನಾಯ್ಕ ಪ್ರಾಯ 53 ವರ್ಷ ರವರು ಸುಳ್ಯ ತಾಲೂಕು ಐರ್ವನಾಡು ಗ್ರಾಮದ ಶಾಂತಿಮೂಲೆ ಎಂಬಲ್ಲಿಯ ನಿವಾಸಿಯಾಗಿದ್ದು ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದವರು ಹಿಂದಿನಿಂದಲೂ ಖಾಯಿಲೆಯಿಂದ ಬಳಲುತ್ತಿದ್ದು ಕಳೆದ ವರ್ಷ ಖಾಯಿಲೆ ಬಂದು ತೀವ್ರ ಅನಾರೋಗ್ಯಕ್ಕಿಡಾಗಿ ಚಿಕಿತ್ಸೆಯನ್ನು ನೀಡಿದ್ದು, ದಿನಾಂಕ 22.06.2021 ರಂದು ಮಧ್ಯಾಹ್ನ 2.15 ಗಂಟೆಗೆ ಸುಳ್ಯ ತಾಲೂಕು ಐರ್ವನಾಡು ಗ್ರಾಮದ ಪಾಲೆಪ್ಪಾಡಿ ಅರಬ್ಬಿ ಎಂಬವರ ಅಂಗಡಿ ಬಳಿ ಆನಾರೋಗ್ಯಕ್ಕೀಡಾಗಿ ಕುಸಿದು ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ರಾಮಚಂದ್ರ ನಾಯ್ಕ ರವರು ಮೃತಪಟ್ಟಿರುವುದಾಗಿ ಧೃಢಪಡಿಸಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ 16/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-06-2021 10:40 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080