ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉದಯ (42) ಲಕ್ಷ್ಮಣ ಗುಡಿಗಾರ್ ವಾಸ: ಕಟ್ಟದಬೈಲು ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು  ರವರು ದಿನಾಂಕ: 22-06-2022 ರಂದು ಅವರ ಬಾಬ್ತು KA 19 EF 3475  ನೇ ದ್ವಿ ಚಕ್ರ ವಾಹನವನ್ನು ಧರ್ಮಸ್ಥಳ –ಮುಂಡಾಜೆ ರಸ್ತೆಯಲ್ಲಿ ಸವಾರಿಮಾಡಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಮುಂಡಾಜೆ ಕಡೆಯಿಂದ ಧರ್ಮಸ್ಥಳ ಕಡೆಗೆ KA 21 S 6567 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ವರ್ಗೀಸ್ ರವರು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ವರ್ಗೀಸ್ ರವರು ವಾಹನಗಳೊಂದಿಗೆ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡ ಮತ್ತು ಬಲ ಕಾಲಿನ ಕೋಲು ಕಾಲಿಗೆ ತರಚಿದ ಗಾಯ, ತಲೆಯ ಹಿಂಬಾಗಕ್ಕೆ ಗುದ್ದಿದ ಗಾಯ ಹಾಗೂ ವರ್ಗೀಸ್ ರವರಿಗೆ ಮುಖಕ್ಕೆ ಗುದ್ದಿದ ರಕ್ತ ಗಾಯ, ತಲೆಗೆ ಗುದ್ದಿದ ಗಾಯವಾಗಿದ್ದು ಗಾಯಾಳುಗಳ ಪೈಕಿ ಪಿರ್ಯಾದಿದಾರರು ಉಜಿರೆ ಬೆನಕಆಸ್ಪತ್ರೆಯಲ್ಲಿ ಹಾಗೂ ವರ್ಗೀಸ್ ರವರು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 89/2022 ಕಲಂ: 279, 337 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ತೇಜಪಾಲ, ಪ್ರಾಯ: 24 ವರ್ಷ, ತಂದೆ: ದಿ. ಜಯರಾಮ ಪೂಜಾರಿ, ವಾಸ: 3-123, ಕೇಪುಲಗುಡ್ಡೆ ಮನೆ, ಕುಕ್ಕಿಪಾಡಿ ಗ್ರಾಮ  ಬಂಟ್ವಾಳ ತಾಲೂಕು ರವರು ದಿನಾಂಕ: 19-06-2022 ರಂದು ರಾತ್ರಿ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ನೈನಾಡು ಎಂಬಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಕಾರ್ಯಕ್ರಮಕ್ಕೆಂದು ಸ್ನೇಹಿತರಾದ  ಧೀರಜ್, ಕಿರಣ್ ಎಂಬವರೊಂದಿಗೆ ಪ್ರದೀಪ್ ರವರ ಬಾಬ್ತು ಆಟೋರಿಕ್ಷಾ KA703985 ರಲ್ಲಿ ಪ್ರಯಾಣಿಕರಾಗಿ ಹೋದವರು, ರಾತ್ರಿ ಕಾರ್ಯಕ್ರಮ ಮುಗಿಸಿ ಮರಳಿ  ಮನೆಯ ಕಡೆಗೆ ಅಟೋ ರಿಕ್ಷಾದಲ್ಲಿ ಬರುತ್ತಾ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ನೇರಳಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರು ಹಾಗೂ ಅವರ ಸ್ನೆಹಿತರು  ಪ್ರಯಾಣಿಸುತ್ತಿದ್ದ ಅಟೋ ರಿಕ್ಷಾಕ್ಕೆ ನಾಯಿಯೊಂದು ಅಡ್ಡ ಬಂದಾಗ ಅಟೋ ರಿಕ್ಷಾದ ಚಾಲಕನು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಅಟೋ ರಿಕ್ಷಾವು  ನಿಯಂತ್ರಣ ಕಳೆದುಕೊಂಡು ಪಿರ್ಯಾದಿದಾರರು ಹಾಗೂ ಸ್ನೇಹಿತರು ಆಟೋರಿಕ್ಷಾದ ಸಮೇತಾ ಡಾಮಾರು ರಸ್ತೆಯ ಮೇಲೆ ಮಗುಚಿ ಬಿದ್ದಾಗ ಸಾರ್ವನಿಕರು ಓಡಿ ಬಂದು ಅಟೋರಿಕ್ಷಾವನ್ನು  ಮೆಲಕ್ಕೆತ್ತಿ ಪಿರ್ಯಾದಿದಾರರನ್ನು ಪಿರ್ಯಾದಿದಾರರ ಸ್ನೇಹಿತರನ್ನು ಮೆಲಕ್ಕೆತ್ತಿ ಆರೈಕೆ ಮಾಡಿದ್ದು, ಸದ್ರಿ ಅಪಘಾತದಿಂದ   ಪಿರ್ಯಾದಿದಾರರ ಬಲಕಾಲಿನ ಮಣಿಗಂಟಿನ ಬಳಿ,  ಧೀರಜ್ ರವರ ಎಡಕೈಯ ಭುಜದ ಬಳಿ  ಹಾಗೂ  ಕಿರಣ್ ಎಡಕೈಯ ಬೆರಳಿಗೆ ರಕ್ತಗಾಯ ಮತ್ತು  ರಿಕ್ಷಾದ ಚಾಲಕನಿಗೆ ತಲೆಗೆ, ಸೊಂಟದ ಬಳಿ ಗುದ್ದಿದ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಖಾಸಾಗಿ ವಾಹನದಲ್ಲಿ  ವಾಮದಪದವು ಸರಕಾರಿ ಆಸ್ಪತ್ರೆಗೆ ಹೋದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 39/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕಿಶೋರ್.ಕೆ  ಪ್ರಾಯ 23ವರ್ಷ, ತಂದೆ: ಕೃಷ್ಣ ಜಿ, ವಾಸ: ವಾಸುದೇವ ಕೃಪ ಕಂಪೌಂಡ್, 2 ನೇ ಕ್ರಾಸ್, ಕೆಮ್ಮಿಂಜೆ, ದರ್ಬೆ ಅಂಚೆ, ಕೆಮ್ಮಿಂಜೆ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 21-06-2022 ರಂದು 21-00 ಗಂಟೆಗೆ ಆರೋಪಿ ಕಾರು ಚಾಲಕ ರಘು ಎಂಬವರು KA-03-MC-3236  ನೇ ನೋಂದಣಿ ನಂಬ್ರದ ಕಾರನ್ನು ಸುಳ್ಯ-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ದರ್ಬೆ ಕಡೆಯಿಂದ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ  ಗ್ರಾಮದ ದರ್ಬೆ ಎಂಬಲ್ಲಿ ನಿರೀಕ್ಷಣಾ ಮಂದಿರದ ಬಳಿ ದ್ವಿ ಪಥ ರಸ್ತೆಯ ಇನ್ನೊಂದು ಬದಿಗೆ ಹೋಗಲು ನಿಂತು ಮುಂದುವರಿಯುವ ನಿಯಮವನ್ನು ಪಾಲಿಸದೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯು ಟರ್ನ್‌  ಮಾಡಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಕಿಶೋರ್‌ ಕೆ ರವರು ಸವಾರರಾಗಿ ಫಿಲೋಮಿನಾ ಕಾಲೇಜ್‌ ಕಡೆಯಿಂದ ದರ್ಬೆ  ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-21-EB-6868 ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ  ಅಪಘಾತವಾಗಿ, ಪಿರ್ಯಾದುದಾರರು ರಸ್ತೆಗೆ  ಬಿದ್ದ ಪರಿಣಾಮ, ಬಲ ಕೈ ಗುದ್ದಿದ ಒಳ ನೋವಿರುವ ಗಾಯವಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  113/2022  ಕಲಂ: 279, 337, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-06-2022 03:14 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080