ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗೋಪಾಲ ಗೌಡ ಪ್ರಾಯ 38 ವರ್ಷ, ತಂದೆ: ಬಾಬು ಗೌಡ, ವಾಸ:  ವಾಟೆತ್ತಿಲ ಮನೆ, ಉಳಿ ಅಂಚೆ ಮತ್ತು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 22-08-2021 ರಂದು 13-15 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಹರೀಶ್ ಕೆ ಎಂಬವರು KA-21-W-5521 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ HM ಹಾಲ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರಾದ ಗೋಪಾಲಗೌಡ ಎಂಬವರು ವಿಟ್ಲ ಕಡೆಯಿಂದ ಉಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EF-5561ನೇ ನಂಬ್ರದ ಮೋಟಾರ್ ಸೈಕಲಿಗೆ ಹಿಂದಿನಿಂದ ಅಪಘಾತವಾಗಿ, ಪಿರ್ಯಾದುದಾರರು ಹಾಗೂ ಆರೋಪಿ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಬಲಕಾಲಿನ ಹಿಮ್ಮಡಿ ಬಳಿ ಗುದ್ದಿದ ರಕ್ತಗಾಯ, ದೇಹಕ್ಕೆ ಗುದ್ದಿದ ನೋವಾಗಿ ಪತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಮತ್ತು ಆರೋಪಿ ಸವಾರ ಹರೀಶ್ ಕೆ ರವರಿಗೆ ದೇಹಕ್ಕೆ ತರಚಿದ ಗಾಯವಾಗಿರುತ್ತದೆ. ಎರಡೂ ವಾಹನಗಳು ಜಖಂಗೊಂಡಿರುತ್ತವೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  105/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಸ್ ಜಗದೀಶ್ ಐತಾಳ್, ಪ್ರಾಯ: 41 ವರ್ಷ, ತಂದೆ: ದಿ, ಯಸ್ ಆನಂದ ಐತಾಳ್, ವಾಸ: ಪೊಸೊಟ್ಟು ಮನೆ, ಲಾಯಿಲಾ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 22.08.2021 ರಂದು ಪಿರ್ಯಾದಿರವರು ಬೆಳಿಗ್ಗೆ 10.30 ಗಂಟೆಯ ವೇಳೆಗೆ  ಬಂಟ್ವಾಳ ತಾಲೂಕು ಬಿ ಮೂಡಾ ಗ್ರಾಮದ ಸೋಮಯಾಜಿ ಆಸ್ಪತ್ರೆಯ ಬಳಿ ಇರುವ ವೈದ್ಯರಾದ  ರಮೇಶಾನಂದ ಸೋಮಾಯಾಜಿ ರವರ  ಮನೆಗೆ  ಪುರೋಹಿತ ಕಾರ್ಯಕ್ಕೆ  ಬಂದಿದ್ದು ತನ್ನ ಬಾಬ್ತು ಕೆ ಎ 21 ಡಬ್ಲ್ಯು  3506 ನೇ ಮೋಟಾರ್ ಸೈಕಲನ್ನು  ಆಸ್ಪತ್ರೆಯ ಅವರಣದಲ್ಲಿಟ್ಟು  ವೈದ್ಯರ  ಮನೆಗೆ ಹೋಗಿ ಪೂಜಾಕಾರ್ಯಗಳನ್ನು ಮುಗಿಸಿಕೊಂಡು  ವಾಪಾಸು ಅಪರಾಹ್ನ 1.30ಗಂಟೆಯ ಸಮಯಕ್ಕೆ  ಮೋಟಾರು ಸೈಕಲ್ ನ ಬಳಿ ಬಂದಾಗ ಸದ್ರಿ ಮೋಟಾರು ಸೈಕಲ್ ಸ್ಥಳದಲ್ಲಿ ಇಲ್ಲದೇ ಇದ್ದು ಸದ್ರಿ ಸ್ಥಳದಲ್ಲಿ ನೋಡಿದಾಗ ಯಾರೋ ಕಳ್ಳರು  ಮೋಟಾರು ಸೈಕಲನ್ನು ಕಳವು ಮಾಡಿಕೊಂಡು ಹೋಗಿದ್ದು ಸದ್ರಿ ಮೋಟಾರು ಸೈಕಲನ್ನು  ಪರಿಸರದಲ್ಲಿ , ಬಸ್ಸು ನಿಲ್ದಾಣದಲ್ಲಿ ಹುಡುಕಾಟ ನಡೆಸಿಕೊಂಡು ಪತ್ತೆಯಾಗದೇ ಇದ್ದು, ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ: 98/2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 22-08-2021 ರಂದು 15-30 ಗಂಟೆಗೆ ಸುಧಾಕರ.ಎಸ್, ಎಎಸ್ಐ ಬೆಳ್ಳಾರೆ ಪೊಲೀಸ್ ಠಾಣೆ ರವರು ಸಿಬ್ಬಂದಿಗಳ ಜೊತೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಲ್ತಾಡು ಕಾಲನಿ ಎಂಬಲ್ಲಿಗೆ 16-30 ಗಂಟೆಗೆ ದಾಳಿ ನಡೆಸಿ ಯಾವುದೇ ಪರವಾನಿಗೆ ಹೊಂದದೇ, ಸರಕಾರವು ನಿಗದಿಪಡಿಸಿದ ಪರಿಮಾಣಕ್ಕಿಂತ ಹೆಚ್ಚಿನ ಪರಿಮಾಣದ ಮದ್ಯವನ್ನು ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ವಶದಲ್ಲಿಟ್ಟುಕೊಂಡ ಸುಂದರ.ಕೆ, 40 ವರ್ಷ, ವಾಸ: ಪಾಲ್ತಾಡು ಕಾಲನಿ ಮನೆ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು ಎಂಬವರನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ  4 ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ತುಂಬಿಸಿದ್ದ 1) 90 ಮಿ.ಲೀ ಮದ್ಯ ಇರುವ ಮೈಸೂರು ಲ್ಯಾನ್ಸರ್ ವಿಸ್ಕಿ ಟೆಟ್ರಾ ಪ್ಯಾಕೇಟ್ ಗಳು- 71, 2) 90 ಮಿ.ಲೀ ಮದ್ಯ ಇರುವ ಒರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ ಟೆಟ್ರಾ ಪ್ಯಾಕೇಟ್ ಗಳು - 6, ನ್ನು ಪತ್ತೆ ಹಚ್ಚಿ ( ಮದ್ಯದ ಅಂದಾಜು ಮೌಲ್ಯ ರೂ 2,695/-) ವಶಕ್ಕೆ ಪಡೆದುಕೊಂಡು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 40/2021 ಕಲಂ : 32, 34 ಕರ್ನಾಟಕ ಅಬಕಾರಿ ಅಧಿನಿಯಮ 1965.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ; 22-08-2021  ಪ್ರಸನ್ನ ಎಮ್ ಎಸ್. ಪೊಲೀಸ್ ಉಪನೀರಿಕ್ಷಕರು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ಸುಮಾರು ಸಂಜೆ 4.30  ಗಂಟೆಗೆ ಬಂಟ್ವಾಳ ತಾಲೂಕು ಪಂಜಿಕಲ್ಲು ಗ್ರಾಮದ  ನಡಾಯಿ ಎಂಬಲ್ಲಿ ಸಾರ್ವಜನಿಕ ಗುಡ್ಡ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಜೂಜಾಟ ನಡೆಯುತ್ತಿದ್ದಾಗ ಧಾಳಿ ನಡೆಸಿದಾಗ  ಅಲ್ಲಿ ಸೇರಿದವರ ಪೈಕಿ 6  ಜನರನ್ನು ಸಿಬ್ಬಂದಿಗಳು ಹಿಡಿದುಕೊಂಡು ಹಾಗೂ ಸ್ಥಳದಲ್ಲಿದ್ದ ಕೋಳಿಗಳ ಬಗ್ಗೆ ಕೇಳಲಾಗಿ ಕೋಳಿ   ಅಂಕಕ್ಕೆ ತಂದಿದ್ದ  ಕೋಳಿಗಳನ್ನು ಬಿಟ್ಟು ಹೋಗಿರುವುದಾಗಿ ತಿಳಿಸಿದ್ದು ಕಾದಾಟಕ್ಕೆ ಬಿಟ್ಟಿದ್ದ ಕೋಳಿಗಳೆರಡನ್ನು ಹಿಡಿದುಕೊಂಡು ಸುಮಾರು 15-20 ಜನರು ಓಡಿಹೋಗಿರುತ್ತಾರೆ.  ಆರೋಪಿಗಳ , 1) ಹೆರಾಲ್ಡ್ 2) ಬಾಳಪ್ಪ ಶೆಟ್ಟಿ 3)  ಗೋಪಾಲ ಗೌಡ 4) ವಸಂತ 5) ರೋನಿ ಡಿಸೋಜ 6) ಜಯಂತ ಎಂಬುದಾಗಿ ತಿಳಿಸಿದ್ದು, ಕೋಳಿ  ಅಂಕದ  ಜೂಜಾಟ ನಡೆಸುತ್ತಿದ್ದವನ ಹೆಸರು ಕೇಳಲಾಗಿ ದೀಪಕ್  ಎಂಬಾತನು ನಡೆಸುತ್ತಿರುವುದಾಗಿ ತಿಳಿಸಿದ್ದು ಸದ್ರಿ ಪರಿಸರದಲ್ಲಿದ್ದ  ಕೋಳಿಗಳನ್ನು ಕಟ್ಟಿಕೊಂಡಿದ್ದು  ಸದ್ರಿ ಕೋಳಿಗಳ  ಬಗ್ಗೆ  ಕೇಳಿದಾಗ ಸದ್ರಿ ಕೋಳಿಗಳನ್ನು ಜೂಜಾಟ   ಆಡಲು ತಂದಿರುವುದಾಗಿ ತಿಳಿಸಿದ್ದು  ಆರೋಪಿಗಳ ಸ್ವಾಧೀನದಲ್ಲಿದ್ದ ಕೋಳಿ ಜೂಜಾಟಕ್ಕೆ ಬಳಸಿದ  ಒಟ್ಟು 5100/-  ರೂಪಾಯಿ, ಹಾಗೂ 16 ಹುಂಜ ಕೋಳಿಗಳು ಇವುಗಳ ಅಂದಾಜು ಮೌಲ್ಯ 8,000/- ರೂಪಾಯಿಗಳಾಗಿದ್ದು  2 ಕೋಳಿ ಬಾಳಿನ ಬೆಲೆ  ರೂ 200/ ಆಗಬಹುದು ಮೇಲಿನ 6 ಜನ ಆರೋಪಿಗಳು ಹಾಗೂ  ದೀಪಕ್  ಎಂಬಾತನು  ಕೋವಿಡ್ -19 ಪ್ರಯುಕ್ತ  ಜಿಲ್ಲಾದ್ಯಂತ  ಸಾರ್ವಜನಿಕ ಸ್ಥಳದಲ್ಲಿ  ಗುಂಪು ಸೇರದ ಹಾಗೆ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಲಾಕ್ ಡೌನ್ ಹೇರಿದ್ದರೂ ಕೂಡ ಜಿಲ್ಲಾಡಳಿತದ ಆದೇಶವನ್ನು ನಿರ್ಲಕ್ಷಿಸಿ  ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕದ ಜೂಜಾಟ ನಡೆಸುತ್ತಿದ್ವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   96-2021 ಕಲಂ 269 ಐಪಿಸಿ ಮತ್ತು 87 ಕೆ ಪಿ ಆಕ್ಟ್  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-08-2021 09:44 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080