ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನವೀನ ಡಿ (36) ತಂದೆ:ದೊಡ್ಡಯ್ಯ ವಾಸ:ಹನುಮಂತಪುರ ಗ್ರಾಮ ಮರಳವಾಡಿ ಹೋಬಳಿ ಕನಕಪುರ ತಾಲೂಕು ರಾಮನಗರ ಜಿಲ್ಲೆ ರವರು ತನ್ನ ಸ್ನೇಹಿತನ ಬಾಬ್ತು ಕೆಎ-53-ಸಿ-3911 ನೇ ನಂಬ್ರ ದ ಇತಿಯೋಸ್ ಕಾರಿನಲ್ಲಿ  ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ  ಬೆಂಗಳೂರಿನಿಂದ ಸುಬ್ರಮಣಿ, ಕುಮಾರ್ ಆರ್, ಕಿರಣ್ ಕುಮಾರ ಬಿ.ವಿ ಹಾಗೂ ವಿಶ್ವನಾಥ ಎಂಬುವರನ್ನು ಕುಳ್ಳಿರಿಸಿಕೊಂಡು, ರಾ.ಹೆ. 75ರಲ್ಲಿ ಚಲಾಯಿಸಿಕೊಂಡು ಹೋಗುತ್ತಾ, ದಿನಾಂಕ 22-10-2021 ರಂದು ಕಡಬ ತಾಲೂಕು ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿಗೆ ತಲುಪುತಿದ್ದಂತೆ, ಪಿರ್ಯಾದಿಯ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಕೆಎ-19-ಎ ಬಿ-9259 ನೇ ಕಂಟೈನರ್ ಲಾರಿಯನ್ನು ಅದರ ಚಾಲಕ ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿದ್ದು, ಕಾರು ಮತ್ತು ಲಾರಿ ಜಖಂಗೊಂಡು, ಪಿರ್ಯಾದಿದಾರರ ಬಲ ಕೈ ಹಾಗೂ ಹಣೆಗೆ ಗುದ್ದಿದ ಗಾಯವಾಗಿದ್ದು, ಪ್ರಯಾಣಿಕರಾದ ಸುಬ್ರಮಣಿ ರವರಿಗೆ ಎಡ ಕಾಲಿಗೆ ಹಾಗೂ ಕುಮಾರ್ ಆರ್ ರವರಿಗೆ ಬಲ ತೋಳು ಹಾಗೂ ಎದೆಗೆ ಗುದ್ದಿದ ಗಾಯವಾಗಿರುತ್ತದೆ. ಕಿರಣ್ ಕುಮಾರ ಬಿ.ವಿ ಮತ್ತು ವಿಶ್ವನಾಥ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ.  ಗಾಯನೋವು ಆಗಿದ್ದವರನ್ನು ಆಬ್ಯುಂಲೆನ್ಸ್ ಲ್ಲಿ  ಮಂಗಳೂರಿಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಯಿತು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ  93/2021 ಕಲಂ:279 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಯಂತಿ (56) ಗಂಡ: ದಿ| ಸುಂದರ ಮೂಲ್ಯ ವಾಸ: ಮನೆ ನಂ 3-66/1 ಮಂಗಳಡ್ಕ ಮನೆ ಪೆರಿಂಜೆ ಅಂಚೆ, ಹೊಸಂಗಡಿ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರು ಹೊಸಂಗಡಿ ಗ್ರಾಮದ ಮಂಗಳಡ್ಕ ಎಂಬಲ್ಲಿ  ಒಬ್ಬಳೆ ವಾಸವಾಗಿದ್ದು, ದಿನಾಂಕ: 21.09.2021 ರಂದು ಸಂಜೆ ಊಟ ಮುಗಿಸಿ, ಮನೆಗೆ ಬೀಗ ಹಾಕಿ, ಹತ್ತಿರದ್ದಲ್ಲಿ ಅವರ ಅಣ್ಣನ ಮನೆಗೆ ಹೋಗಿ, ದಿನಾಂಕ: 22.09.2021 ರಂದು ಬೆಳಿಗ್ಗೆ ಮನೆಗೆ ಬಂದಾಗ ಮನೆಯ ಬಾಗಿಲ ಬೀಗ ಒಡೆದಿದ್ದು,ಬಾಗಿಲು ಅರ್ಧ ತೆರದಿರುವುದನ್ನು ಕಂಡು, ಮನೆಯ ಒಳೆಗೆ ಹೋಗಿ ನೋಡಿದಾಗ ಮನೆಯ ಮಧ್ಯದ ರೂಂ ನಲ್ಲಿ ಅಳವಡಿಸಿದ ಕಬ್ಬಿಣದ ಗಾಡ್ರೇಜನ್ನು ಒಡೆದು ಅದರೊಳಗೆ  ಇಟ್ಟಿದ್ದ ಬಟ್ಟೆ ಬರೆಗಳನ್ನು ಹೊರಗೆಳೆದು ಹಾಕಿದ್ದು, ಇನ್ನೊಂದು ಬೆಡ್ ರೂಮಿನಲ್ಲಿದ್ದ ಕಪಾಟನ್ನು ಯಾವುದೋ ಆಯುಧದಿಂದ ಒಡೆದು, ಅದರೊಳಗಿದ್ದ ದಿವ್ಯಶ್ರೀ ಜ್ಯುವಲರ್ಸ್ ಮೂಡಬಿದ್ರೆ ಎಂದು ಬರೆದಿರುವ ಪರ್ಸ್ ನಲ್ಲಿ ಇಟ್ಟಿದ್ದ  ಸುಮಾರು 3 ½ ಪವನ್ ಅಂದರೆ ಸುಮಾರು 28 ಗ್ರಾಂ ತೂಕದ   ವೆಂಕಟರಮಣ ದೇವರ ಪೆಂಡೆಂಟ್ ಇರುವ ಡಿಸೈನ್ ಚಿನ್ನದ ಚೈನ್ ಮತ್ತು 6,000/- ರೂ ನಗದು ಹಣವನ್ನು ಯಾರೋ ಕಳ್ಳರು ರಾತ್ರಿ ಕಾಲದಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಚಿನ್ನ ಹಾಗೂ ಹಣ ಸೇರಿ ಒಟ್ಟು ಮೌಲ್ಯ 1,00,000/- ರೂ ಆಗಬಹುದು. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅ ಕ್ರ: 61/2021 ಕಲಂ: 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ವಿನೋದ ಪ್ರಾಯ 43 ವರ್ಷ ಗಂಡ:ದಿ|| ಆನಂದ ವಾಸ:ಕೊಪ್ಪಳ ಮನೆ ಉಪ್ಪಿನಂಗಡಿ ಗ್ರಾಮ ಪುತ್ತೂರು ತಾಲೂಕು ಎಂಬವರು ಉಪ್ಪಿನಂಗಡಿ ಶ್ರೀ ಸಹಸ್ತ್ರಲಿಂಗೇಶ್ವರ  ದೇವಸ್ಥಾನದಲ್ಲಿ  ಕೂಲಿ   ಕೆಲಸ ಮಾಡಿಕೊಂಡಿದ್ದು, ತಾರೀಕು: 21-09-2021 ರಂದು   ದೇವಸ್ಥಾನದಲ್ಲಿ  ಕೆಲಸ ಮುಗಿಸಿ  ಸಂಜೆ  ಮನೆಗೆ   ಹೋಗಿ  ನಂತರ  ರಾತ್ರಿ 7-30 ಗಂಟೆ ಸಮಯಕ್ಕೆ  ಮಗಳಾದ ಕು! ಧನ್ಯ ಹಾಗೂ ಅಕ್ಕನ  ಮಗನಾದ  ಪ್ರವೀಣ್ ರವರೊಂದಿಗೆ  ಮನೆಗೆ   ಬೀಗ  ಹಾಕಿ  ಭದ್ರ ಪಡಿಸಿ  ಕುಕ್ಕಜೆ ಎಂಬಲ್ಲಿರುವ ಫಿರ್ಯಾಧಿಯ ಅಕ್ಕನ ಮನೆಗೆ ಅಗತ್ಯ ಕೆಲಸದ ಬಗ್ಗೆ  ಹೋಗಿ  ರಾತ್ರಿ ಉಳಕೊಂಡು  ತಾರೀಕು: 22-09-2021  ರಂದು  ಬೆಳಗ್ಗೆ 6-30 ಗಂಟೆಗೆ  ತನ್ನ ಮಗಳೊಂದಿಗೆ  ಅಕ್ಕನ ಮನೆಯಿಂದ   ಹೊರಟು ಬಂದು  ಮಗಳಲ್ಲಿ ಮನೆಯ  ಬೀಗದ ಕೀಯನ್ನು  ಕೊಟ್ಟು   ಫಿರ್ಯಾಧಿ ತನ್ನ ಕೆಲಸ ಬಗ್ಗೆ  ಶ್ರೀ ಸಹಸ್ತ್ರಲಿಂಗೇಶ್ವರ  ದೇವಸ್ಥಾನಕ್ಕೆ  ಬಂದಾಗ   ಮಗಳು ಧನ್ಯಳು  ಮನೆಯ  ಬೀಗವನ್ನು  ಮುರಿದು ಒಳಪ್ರವೇಶಿಸಿದ  ಬಗ್ಗೆ   ಫಿರ್ಯಾಧಿದಾರರಿಗೆ   ಪೋನ್ ಮಾಡಿ ವಿಚಾರ  ತಿಳಿಸಿದ್ದು, ಫಿರ್ಯಾಧಿದಾರರು   ಮನೆಗೆ ಬಂದು ನೋಡಿದಾಗ  ಮನೆಯ ಮುಂಬಾಗದ ಬಾಗಿಲಿಗೆ  ಹಾಕಿದ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ  ಮೀಟಿ ಮುರಿದು   ಒಳಪ್ರವೇಶಿಸಿ   ಮನೆಯ ಬೆಡ್  ರೂಮ್  ಗಳಲ್ಲಿದ್ದ  ಗೋದ್ರೇಜ್  ಗಳನ್ನು  ತೆರೆದು  ಅದರಲ್ಲಿದ್ದ ಬಟ್ಟೆ ಬರೆಗಳನ್ನು  ಚೆಲ್ಲಾ ಪಿಲ್ಲಿಯಾಗಿ   ಮಾಡಿ  ಮನೆಯ  ಒಳಭಾಗದ ಬಲಭಾಗದ ಬೆಡ್  ರೂಮ್  ನಲ್ಲಿದ್ದ  ಗೋದ್ರೇಜ್ ನಲ್ಲಿದ್ದ  ನಗದು  ರೂ 600/-ನ್ನು ಕಳವು  ಮಾಡಿಕೊಂಡು  ಹೋಗಿರುವುದಲ್ಲದೇ,  ಮನೆಯ ಹಿಂಬಾಗದಲ್ಲಿದ್ದ  ಪಿಕಾಸ್  ನ್ನು  ಕೂಡ  ಕಳ್ಳತನ  ಮಾಡಿಕೊಂಡು   ಹೋಗಿರುವುದಾಗಿದೆ. ಅಲ್ಲದೇ  ನೆರೆಯ ಮನೆಯ ವಾಸಿಗಳಾದ  ಅದ್ದು ರವರ ಮನೆಗೆ ಮತ್ತು ಖೈಸಿ ರವರ  ಮನೆಯಲ್ಲಿ ಕೂಡ   ಕಳ್ಳತನ ಮಾಡುವುದಕ್ಕೆ  ಪ್ರಯತ್ನಿಸಿರುವುದಾಗಿದೆ .ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ  94/2021 ಕಲಂ:454, 457, 380 ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 2

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿ ಎಸ್ ಐ ಬೆಳ್ತಂಗಡಿ ಪೊಲೀಸ್ ಠಾಣೆ ರವರು ದಿನಾಂಕ 22.09.2021 ರಂದು  ಠಾಣಾ ಸಿಬ್ಬಂಧಿಗಳೊಂದಿಗೆ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕೊಯ್ಯೂರು ಕ್ರಾಸ್ ಎಂಬಲ್ಲಿ ವಾಹನ ತಪಾಸಣೆ ಮಾಡಿಕೊಂಡಿರುವ ಸಮಯ ಲಾಯಿಲ ಕಡೆಯಿಂದ  ಬರುತ್ತಿದ್ದ KA 21 B 2763 ನೇ ಆಟೋ ರಿಕ್ಷಾವನ್ನು ನಿಲ್ಲಿಸಿ ತಪಾಸಣೆ ನಡೆಸುವ ಸಮಯ ಚಾಲಕ ರಿಯಾಜ್ ಮತ್ತು ಸಾಕೀರ್ ಇಬ್ಬರು ಸೇರಿ ಯಾವುದೇ ಪ್ರಾಧಿಕಾರದಿಂದ ಪರವಾನಗಿ ಪಡೆಯದೆ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವದನ್ನು ಪತ್ತೆ ಹಚ್ಚಿ ಪಂಚರ ಸಮಕ್ಷಮ ಅಟೋರಿಕ್ಷಾದ ಹಿಂಬದಿ ಸೀಟಿನ ಕೆಳಗಡೆ ಪಾಲಿಥೀನ್ ಚೀಲದಲ್ಲಿ ಇದ್ದ ತಲಾ 1 ಕೆಜಿಯಂತೆ 23 ಕೆಜಿ ದನದ ಮಾಂಸದ ಕಟ್ಟುಗಳನ್ನು, ಆಟೋ ರಿಕ್ಷಾವನ್ನು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಶಪಡಿಸಿ ಕೊಂಡ ದನದ ಮಾಂಸದ ಮೌಲ್ಯ ರೂ 5060/- ರೂ ಮತ್ತು ಸಾಗಾಕ್ಕೆ ಬಳಸಿದ ಆಟೋ ರಿಕ್ಷಾದ ಮೌಲ್ಯ ರೂ 60,000/- ಆಗಬಹುದು  ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ  76/2021 ಕಲಂ: 4,5,8  ಮತ್ತು 12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಆದ್ಯಾದೇಶ ಅಧಿನಿಯಮ 2020 ಮತ್ತು 66(1) ಜೊತೆಗೆ 192(ಎ) ಭಾರತಿಯ ಮೊಟಾರ್ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ : ಸಹಾಯಕ ಪೊಲೀಸ್ ಉಪನಿರೀಕ್ಷಕರು, ಬೆಳ್ತಂಗಡಿ ಪೊಲೀಸ್ ಠಾಣೆ ರವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ದಿನಾಂಕ:22.09.2021 ರಂದು ಬೆಳ್ತಂಗಡಿ  ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮ ಚರ್ಚ್ ಕ್ರಾಸ್ ಬಳಿ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿರುವಾಗ ಬೆಳ್ತಂಗಡಿ ಕಡೆಯಿಂದ ಕೆ ಎ 21 ಇ 3089ನೇ ಪಿಕಪ್ ವಾಹನದಲ್ಲಿ ಆರೋಪಿ ಚಾಲಕ ಮದುಕರ ಪ್ರಭು ಎಂಬಾತನು ಯಾವುದೇ ಪರವಾನಿಗೇ ಇಲ್ಲದೇ 2 ಹಸು ಮತ್ತು 2 ಕರುಗಳನ್ನು  ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ವಶಕ್ಕೆ ಪಡಕೊಂಡಿರುವು ದಾಗಿದೆ. ವಶ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,42,000/- ಆಗಿರುತ್ತದೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ  ಅ.ಕ್ರ 75/2021 ಕಲಂ: 4,8,9,ಮತ್ತು 11 ಕರ್ನಾಟಕ ಜಾನುವಾರ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ 1964 ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಕಾಶ್ ಪೂಜಾರಿ (35 ) ತಂದೆ: ದಿ|| ಲಿಂಗಪ್ಪ ಪೂಜಾರಿ, ವಾಸ: ಸಜೀಪ ಮೂಡ ಜೂನಿಯರ್ ಕಾಲೇಜು ಬಳಿ, ಸಜೀಪ ಮೂಡ ಗ್ರಾಮ, ಬಂಟ್ವಾಳ ತಾಲೂಕು ರವರ ಅಣ್ಣ ಹರೀಶನು ವಿಪರೀತ ಮದ್ಯ ಸೇವಿಸುವ ಚಟವಿದ್ದು, ಹರೀಶನು ಜ್ವರದಿಂದ ಬಳುತ್ತಿದ್ದು,  ಪಿರ್ಯಾದಿದಾರರು ದಿನಾಂಕ: 22.09.2021 ರಂದು ಬಂಟ್ವಾಳ ತಾಲೂಕು  ಸಜೀಪ ಮೂಡ ಜೂನಿಯಾರ್ ಕಾಲೇಜು ಬಳಿ ಇರುವ ತನ್ನ ಮನೆಯಿಂದ ಅಣ್ಣ ಹರೀಶನನ್ನು ಬೆಳಿಗ್ಗೆ 10:45 ಗಂಟೆಗೆ  108 ಆಂಬುಲೈನ್ಸ್ ವಾಹನದಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ  ಕರೆ ತರುವ ಸಮಯ ದಾರಿ ಮದ್ಯೆ ಮೃತಪಟ್ಟಿರುವುದಾಗಿದೆ.   ಹರೀಶನು ದಿನಾಂಕ: 19.09.2021 ರಂದು ಆದಿತ್ಯವಾರದಂದು ಬೆಳಿಗ್ಗೆ ಯಾ ಸಂಜೆಯ ಸಮಯದಲ್ಲಿ ವಿಪರೀತ  ಕುಡಿದು ಎಲ್ಲಿಯೋ ಬಿದ್ದು, ಮೈಕೈಗೆ ನೋವುಂಟು ಮಾಡಿ ಇದರಿಂದ ಜ್ವರ ಬಂದಿದ್ದು, ಸರಿಯಾದ ಚಿಕಿತ್ಸೆಯನ್ನು ಪಡೆಯದೇ  ಜ್ವರ ಹಾಗೂ ನೋವು ಉಲ್ಬಣಗೊಂಡು ಹರೀಶನು ಈ ದಿನ ದಿನಾಂಕ: 29.09.2021 ರಂದು ಬೆಳಿಗ್ಗೆ 10:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅಕ್ರ. 32/2021 ಕಲಂ 174 ಸಿ ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೃಷ್ಣ ಮೂರ್ತಿ ಪ್ರಾಯ: 45 ವರ್ಷ  ತಂದೆ: ರಾಮ ನಾಯ್ಕ ವಾಸ: ದಾರಂದಕುಕ್ಕು ಮನೆ ಕೋಡಿಂಬಾಡಿ ಗ್ರಾಮ ಪುತ್ತೂರು ತಾಲೂಕು ರವರ ಹೆಂಡತಿ ಲೀಲಾರವರು ಸುಮಾರು 4 ವರ್ಷಗಳಿಂದ ಕಾಲು ಗಂಟು ನೋವಿನಿಂದ ಬಳಲುತ್ತಿದ್ದು  ಬೇರೆ ಬೇರೆ ಮೆಡಿಕಲ್ ಶಾಫ್ ನಿಂದ ಔಷಧಿ ತೆಗೆದುಕೊಳ್ಳುತ್ತಿದ್ದು, ದಿನಾಂಕ: 17-09-2021 ರಂದು ವಿಪರೀತ ಗಂಟು ನೋವು ಪ್ರಾರಂಭವಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ  ಚಿಕಿತ್ಸೆ ಪಡೆದುಕೊಂಡು ವೈದ್ಯರ ಸಲಹೆಯಂತೆ ದಿನಾಂಕ: 19-09-2021 ರಂದು ಡಿಸ್ಚಾರ್ಜ್ ಆಗಿದ್ದವರಿಗೆ ದಿನಾಂಕ: 20-09-2021 ರಂದು  ಖಾಯಿಲೆ ಉಲ್ಭಣಗೊಂಡು ಚಿಕಿತ್ಸೆಯ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರಲ್ಲಿ ಕರೆದುಕೊಂಡು ಹೋದಾಗ ಒಳರೋಗಿಯಾಗಿ ದಾಖಲು ಮಾಡಿಕೊಂಡು ಸಂಜೆಯ 5 ಗಂಟೆಯ ಸಮಯಕ್ಕೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ. ಪಿರ್ಯಾದಿದಾರರು ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲುಮಾಡಿಕೊಂಡಿರುತ್ತಾರೆ. ಆ ಬಳಿಕ ಚಿಕಿತ್ಸೆ ನೀಡಿದ ವೈದ್ಯರು ಕಿಡ್ನಿ ವೈಫಲ್ಯವಿರುವುದರಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು  ಹೋಗುವಂತೆ ತಿಳಿಸಿದ ಮೇರೆಗೆ ದಿನಾಂಕ: 21-09-2021 ರಂದು ಸಂಜೆ ಸಮಯ ಹೊರಟು ಸಂಜೆ 7:45 ಗಂಟೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಯು.ಡಿ.ಆರ್ ನಂ: 26/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೋನಪ್ಪ ಗೌಡ ಪ್ರಾಯ 54 ವರ್ಷ ತಂದೆ ಶೀನಪ್ಪ ಗೌಡ ಕಡಬ ಗ್ರಾಮ. ಕಡಬ ತಾಲೂಕು ರವರ ಪತ್ನಿ ಪ್ರೇಮಾವತಿ ಯವರಿಗೆ ದಿನಾಂಕ:11.09.2021 ರಂದು ಮುಟ್ಟು ಆಗಿ ರಕ್ತ ಸ್ರಾವವಾಗಿದ್ದು ನಂತರ ದಿನಾಂಕ:19.09.2021 ರಂದು ತೀವ್ರ ರಕ್ತ ಸ್ರಾವವಾಗಿದ್ದರಿಂದ ಪಿರ್ಯಾದುದಾರರು ಪ್ರೇಮಾವತಿಯವರನ್ನು ನೆಲ್ಯಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆದುಕೊಂಡು  ಮನೆಗೆ ಬಂದು ನಂತರ ದಿನಾಂಕ:21.09.2021 ರಂದು ಮತ್ತೆ ತೀವ್ರ ರಕ್ತ ಸ್ರಾವವಾಗಿದ್ದರಿಂದ ಪುನ: ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೀಸಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಪಿರ್ಯಾದುದಾರರು  ಹೆಚ್ಚಿನ ಚಿಕಿತ್ಸೆಗಾಗಿ ಪ್ರೇಮಾವತಿಯವರನ್ನು ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಸಮಯ ದಾರಿ ಮದ್ಯದಲ್ಲಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯನ್ನು ತಲುಪುವ ಮುಂಚೆಯೇ ಪಿರ್ಯಾದುದಾರರ ಪತ್ನಿ ಪ್ರೇಮಾವತಿಯವರು ಮೃತಪಟ್ಟಿರುತ್ತಾರೆ  ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 20/2021 ಕಲಂ: 174  ಸಿಆರ್‌ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 23-09-2021 11:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080