ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಯನ ಬಿ ಬಿ ವಾಸ: ಬಂಗಾರಕೋಡಿ ಮನೆ, ಪೆರಾಜೆ ಅಂಚೆ, ಕುಂದಾಲ್ಪಾಡಿ ಗ್ರಾಮ, ಮಡಿಕೇರಿ ತಾಲೂಕು ಕೊಡಗು ಎಂಬವರ ದೂರಿನಂತೆ ಪಿರ್ಯಾದುದಾರರು ತಮ್ಮ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 12 ಆರ್ 5444 ನೇದರಲ್ಲಿ ದಿನಾಂಕ 17.11.2021 ರಂದು ಸವಾರಿಮಾಡಿಕೊಂಡು ಸಹ ಸವಾರರಾಗಿ ಚಾರ್ವಿ ಮತ್ತು ಹರ್ಷಿಣಿ ಎಂಬರನ್ನು ಕುಳಿರಿಸಿಕೊಂಡು, ಸುಳ್ಯದ ಕಟ್ಟೆ ಜಂಕ್ಷನ್ ನಿಂದ ಕೆ,ವಿ,ಜಿ ಕಡೆಗೆ ಹೋಗುವರೇ ಸಮಯ ಸುಮಾರು 16:00 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಚನ್ನಕೇಶವ ದೇವಸ್ಥಾನದ ಬಳಿಯಲ್ಲಿರುವ ಮಾರುತಿ ಬುಕ್ ಹೌಸ್ ಬಳಿ ತಲುಪುತ್ತಿದ್ದಂತೆ, ಹಿಂಬದಿಯಿಂದ ಬಂದ ಆಟೋ ರಿಕ್ಷಾ ನಂಬ್ರ ಕೆಎ 21 ಸಿ 2118 ನೇದರ ಚಾಲಕ ಜಯಪ್ರಕಾಶ್ ಎಂಬಾತನು ಆಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲ್ ಓವರ್ ಟೇಕ್ ಮಾಡುವ ಬರದಲ್ಲಿ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಸಹಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುರಾರರಿಗೆ ಬಲಕಾಲಿನ ಕೋಲುಕಾಲಿಗೆ, ಮತ್ತು ಸಹಸವಾರಳಾದ ಚಾರ್ವಿಗೆ ಮುಖಕ್ಕೆ, ಹರ್ಷಿಣಿಗೆ ಕಾಲಿಗೆ ರಕ್ತಗಾವಾಗಿದ್ದವರನ್ನು ಅಲೇ ಇದ್ದ ಸ್ಥಳಿಯರು ಉಪಚರಿಸಿ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣೆ  ನಂಬ್ರ 89/2021  ಕಲಂ 279.337 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಾಮಪ್ರಕಾಶ್, ಪ್ರಾಯ-37ವರ್ಷ, ತಂದೆ-ಜಯರಾಮ ಎಸ್. ವಾಸ- ಟಪಾಲುಕಟ್ಟೆ ಮನೆ, ಕಾವು ಮಾಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಕುಡ್ಪುನಡ್ಕ ಎಂಬಲ್ಲಿ ಮಣ್ಣಿನ ಮಡಕೆ, ಸಾವಯವ ಉತ್ಪನ್ನ ಹಾಗೂ ಇತರ ಗೃಹೋಪಯೋಗಿ ವಸ್ತುಗಳನ್ನು  ಮಾರಾಟ ಮಾಡುವ “ಸಿರಿ ಭೂಮಿ” ಎಂಬ ಹೆಸರಿನ ಮಾರಾಟ ಮಳಿಗೆಯನ್ನು ಹೊಂದಿದ್ದು, ದಿನಾಂಕ:-21.11.2021ರಂದು ರಾತ್ರಿ ಸುಮಾರು 7.30 ಗಂಟೆಗೆ ಸದ್ರಿ ಅಂಗಡಿಗೆ ಬೀಗ ಹಾಕಿ ಅಂಗಡಿಯ ಬಳಿಯಲ್ಲಿಯೇ ಇರುವ ಅವರ ಮನೆಗೆ ಹೋಗಿರುತ್ತಾರೆ. ಈ ದಿನ ದಿನಾಂಕ:- 22.11.2021ರಂದು ಬೆಳಿಗ್ಗೆ ಸುಮಾರು 7.30 ಗಂಟೆಗೆ ಫಿರ್ಯಾದಿದಾರರ ಪತ್ನಿ ರಮ್ಯಾರವರು ಸದ್ರಿ ಅಂಗಡಿಗೆ ಹೋಗಿ ನೋಡಿದಾಗ, ಸದ್ರಿ ಅಂಗಡಿಯ ಹಿಂಬದಿಯ ಬಾಗಿಲಿನ ಚಿಲಕವನ್ನು ಯಾರೋ ಮುರಿದಿರುವುದು ಕಂಡು ಬಂದಿದ್ದನ್ನು ಫಿರ್ಯಾದಿದಾರರಿಗೆ ತಿಳಿಸಿದ್ದು, ಅವರು ಕೂಡಲೇ ಅಂಗಡಿಗೆ ತೆರಳಿ ನೋಡಲಾಗಿ ಸದ್ರಿ ಅಂಗಡಿಯ ಹಿಂಬದಿಯ ಬಾಗಿಲಿನ ಚಿಲಕವನ್ನು ಯಾವುದೋ ವಸ್ತುವಿನಿಂದ ಮೀಟಿ ಬೀಗವನ್ನು ಮುರಿದಿರುವುದು ಕಂಡು ಬಂದಿದ್ದು, ಅಂಗಡಿಯ ಒಳಗೆ ಹೋಗಿ ನೋಡಲಾಗಿ ಸದ್ರಿ ಅಂಗಡಿಯ ಒಳಗಿದ್ದ C.C.T.V. ಗೆ ಸಂಬಂಧಿಸಿದ D.V.R. (ಅಂದಾಜು ಮೌಲ್ಯ ರೂ. 8,000.00), Canon Camera, (ಅಂದಾಜು ಮೌಲ್ಯ ರೂ. 16,000.00) ಹಾಗೂ ಒಟ್ಟು ಸುಮಾರು 16,000/- ರೂಪಾಯಿ ಮೌಲ್ಯದ ಸೋಪು, ಶ್ಯಾಂಪೂ, ಟೂತ್‌ಪೇಸ್ಟ್, ಡೈಫ್ರುಟ್ಸ್ ಮತ್ತು ಅಂಗಡಿಯಲ್ಲಿದ್ದ ಕ್ಯಾಶ್ ಡ್ರಾವರನ್ನು ಮುರಿದು ಅದರಲ್ಲಿದ್ದ ಸುಮಾರು ರೂಪಾಯಿ 700.00ನ್ನು  ಕಳವು ಮಾಡಿರುವುದು ಕಂಡು ಬಂದಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 40,700/-ಆಗಬಹುದು. ಈ ಕೃತ್ಯವು ದಿನಾಂಕ:-21.11.2021ರಂದು ರಾತ್ರಿ ಸುಮಾರು 7.30 ಗಂಟೆಯಿಂದ ಈ ದಿನ ದಿನಾಂಕ:-22.11.2021ರಂದು ಬೆಳಿಗ್ಗೆ ಸುಮಾರು 7.30 ಗಂಟೆಯ ಮಧ್ಯೆ ನಡೆದಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 104/2021 ಕಲo: 454, 457, 380  ಐಪಿಸಿ            ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 22.11.2021 ರಂದು ಸಮಯ ಸಂಜೆ 5.15 ಗಂಟೆಗೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಕಲ್ಪನೆ ಎಂಬಲ್ಲಿಯ ಅಂಗಡಿಯ ಬಳಿ ವ್ಯಕ್ತಿಯೊಬ್ಬನು  ಗಿರಾಕಿಗಳಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ಸಿಬ್ಬಂದಿಗಳೊಂದಿಗೆ ಅಲ್ಲಿಗೆ ದಾಳಿ ನಡೆಸಿದ ಕಲೈಮಾರ್ ಪಿ ಪೊಲೀಸ್ ಉಪನಿರೀಕ್ಷಕರು       (ತನಿಖೆ  1) ಬಂಟ್ವಾಳ ನಗರ ಠಾಣೆರವರು ಅಲ್ಲಿದ್ದ ವ್ಯಕ್ತಿಯನ್ನು ಸುತ್ತುವರಿದು ಹಿಡಿದು ವಿಚಾರಿಸಿದಾಗ ಅತನ ತನ್ನ ಹೆಸರು ಮೆಲ್ವಿನ್ ರಾಡ್ರಿಗಸ್, ಪ್ರಾಯ; 40 ವರ್ಷ, ತಂದೆ: ದಿ, ಪೆಡ್ರಿಕ್ ರಾಡ್ರಿಗಸ್, ವಾಸ: ಕಲ್ಪನೆ ಮನೆ, ಕಳ್ಳಿಗೆ ಗ್ರಾಮ, ಬಂಟ್ವಾಳ ತಾಲೂಕು  ಎಂದು ತಿಳಿಸಿದ್ದು ಆತನಲ್ಲಿ ಅಲ್ಲಿ ಹಸಿರು  ಬಣ್ಣದ ಪಾಲಿಥಿನ್ ಚೀಲದಲ್ಲಿರುವ ಮದ್ಯದ ಬಗ್ಗೆ ವಿಚಾರಿಸಿದಾಗ ಗಿರಾಕಿಗಳಿಗೆ ಮದ್ಯವನ್ನು ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು ಪಿರ್ಯಾಧಿದಾರರು ಸದ್ರಿ ಮದ್ಯವನ್ನು ಗಿರಾಕಿಗಳಿಗೆ ಮಾರಾಟ ಮಾಡುವರೇ ಯಾವುದಾದರೂ ಪರವಾನಿಗೆ ಇದೇಯೇ ಎಂದು ಕೇಳಿದಲ್ಲಿ ಇಲ್ಲವಾಗಿ ನುಡಿದಿದ್ದು, ಸದ್ರಿ ಚೀಲದಲ್ಲಿದ್ದ ಮದ್ಯವನ್ನು ಪರಿಶೀಲಿಸಿದಲ್ಲಿ ಮೈಸೂರು ಲ್ಯಾನ್ಸರ್  90 ಮಿಲಿ ಲೀಟರ್ ನ 8 ಸ್ಯಾಚೆಟ್ ಗಳು, ಓರಿಜಿನಲ್ ಚಾಯ್ಸ್  90 ಯಂ ಯಲ್ ನ 9 ಸ್ಯಾಚೆಟ್ ಗಳು,  ಹಾಗೂ ಪ್ರಿಸ್ಟೇಜ್  90 ಮಿಲಿ ಲೀಟರ್ ನ  2 ಸ್ಯಾಚೆಟ್ ಗಳು  ಮತ್ತು 180 ಮಿಲಿ ಲೀಟರ್ ನ 2 ಪ್ಲಾಸ್ಟಿಕ್ ಬಾಟ್ಲಿಗಳು ಹಾಗೂ  360 ಯಂ ಯಲ್ ನ  ಒಂದು ಪ್ಲಾಸ್ಟಿಕ್ ಬಾಟ್ಲಿಗಳಿದ್ದು (280+315+70+144+145) ಇದರ ಒಟ್ಟು ಮೌಲ್ಯ 954/- ರೂ ಆಗಿರುತ್ತದೆ. ಅಲ್ಲದೇ ಸದ್ರಿ ಸ್ಥಳದಲ್ಲಿ ಸದ್ರಿ ಒರಿಜಿನಲ್‌ ಚಾಯ್ಸ್ ಸ್ಯಾಚೇಟ್ 1, ಒ ಟಿ ಖಾಲಿ ಸ್ಯಾಚೇಟ್  -1,  ಮೈಸೂರ್ ಲ್ಯಾನ್ಸರ್ ನ ಖಾಲಿ ಪೌಚ್ ಗಳು 4, ಅರ್ಧ ನೀರು ತುಂಬಿದ ಪ್ಲಾಸ್ಟಿಕ್ ಬಾಟ್ಲಿ , ಮೂರು ಗ್ಲಾಸ್ ಗಳಿದ್ದು. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 135/2021  ಕಲಂ: 15(a), 32(3) ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹೇಮಾವತಿ ಪ್ರಾಯ 40 ವರ್ಷ ಗಂಡ: ನಾಗೇಶ್ ಅಮಿನ್ ವಾಸ: ಬದನಾಜೆ ಮನೆ ವಿಟ್ಲ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:19-11-2021 ರಂದು ಪಿರ್ಯಾಧಿದಾರರು ಸಿಪಿಸಿಆರ್‌ಐನಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಸುಮಾರು 5.00 ಗಂಟೆಗೆ ಬಂಟ್ವಾಳ ತಾಲೂಕು ವಿಟ್ಲಕಸಬ ಗ್ರಾಮದ ಬದನಾಜೆ ಎಂಬಲ್ಲಿರುವ ತಮ್ಮ ಮನೆಗೆ ಬಂದಾಗ ಅದೇ ವೇಳೆಗೆ ಪಿರ್ಯಾಧಿಯ ಮಾವ ಸೇಸಪ್ಪ ಪೂಜಾರಿರವರು ಕೆಲಸ ಮುಗಿಸಿಕೊಂಡು ಮನೆಗೆ ಬಂದಿರುತ್ತಾರೆ. ಈ ವೇಳೆಗೆ ಮನೆಯ ಒಳಗೆ ಅಟ್ಟಕ್ಕೆ ಹತ್ತುವ ಜಾಗದಲ್ಲಿ ಏಣಿ ಇಟ್ಟಿದ್ದು. ಪಿರ್ಯಾಧಿದಾರರ ಗಂಡ ನಾಗೇಶ್ ಅಮಿನ್ (43) ಏಣಿಯ ಕೆಳಗೆ ಬಿದ್ದಿರುವುದನ್ನು ಕಂಡಾಗ ನೆಲದಲ್ಲಿ ವಾಲಿಕೊಂಡ ಸ್ಥಿತಿಯಲ್ಲಿ ಬಿದ್ದಿದ್ದು.  ಬಲ ಕಾಲಿಗೆ ರಕ್ತ ಗಾಯವಾಗಿದ್ದು, ಕಿವಿಯಿಂದ ರಕ್ತ ಸೋರುತ್ತಿತ್ತು. ನಂತರ ನಾವು ಪಿರ್ಯಾಧಿದಾರರು ಗಂಡನವರನ್ನು ಅಂಬ್ಯುಲೆನ್ಸ್ ಮೂಲಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು. ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಅದೇ ಅಂಬ್ಯುಲೆನ್ಸ್ ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ  ವೈದ್ಯರು ಪರೀಕ್ಷಿಸಿ  ಒಳರೋಗಿಯನ್ನಾಗಿ  ದಾಖಲು ಮಾಡಿದರು. ಈ ದಿನ ದಿನಾಂಕ: 21-11-2021 ರಂದು ಸಮಯ ಸುಮಾರು 18.45 ಗಂಟೆಗೆ ಪಿರ್ಯಾಧಿದಾರರ ಗಂಡ ನಾಗೇಶ್ ಅಮಿನ್ ರವರು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 34/2021  ಕಲಂ 174   ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-11-2021 10:28 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080