ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುದರ್ಶನ, ಪ್ರಾಯ:29 ವರ್ಷ ತಂದೆ: ದೇಜಪ್ಪ ಸಾಲ್ಯಾನ್ ವಾಸ: ಶೆಟ್ಟಿಕಟ್ಟೆ ಮನೆ, ಸಂಗಬೆಟ್ಟು ಗ್ರಾಮ, ಸಿದ್ದಕಟ್ಟೆ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 21-01-2022 ರಂದು ಸಮಯ ಸುಮಾರು 23:30 ಗಂಟೆಗೆ ಬಂಟ್ವಾಳ ಮೂಡಬಿದ್ರೆ ರಸ್ತೆಯಲ್ಲಿ ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ಬರುತ್ತಾ ಬಂಟ್ವಾಳ ತಾಲೂಕು ರಾಯಿ ಗ್ರಾಮದ ಕೊಯಿಲ ಕುದ್ಮಾನಿ ಎಂಬಲ್ಲಿಗೆ ತಲುಪಿದಾಗ ತನ್ನ ಹಿಂದಿನಿಂದ ಅಂದರೆ ಬಂಟ್ವಾಳ ಕಡೆಯಿಂದ KA-05-KR-8941 ನೇ ಮೋಟಾರ್ ಸೈಕಲನ್ನು ಅದರ ಸವಾರ ಆದರ್ಶ್ ಎಂಬಾತನು ಸಹಸವಾರ ದರ್ಶನ್ ರವರನ್ನು ಕುಳ್ಳಿರಿಸಿಕೊಂಡು ಪಿರ್ಯಾದಿದಾರರ ಬೈಕ್ ನ್ನು ಓವರ್ ಟೇಕ್ ಮಾಡಿ ಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತ  ಮೋಟಾರ್ ಸೈಕಲ್ ಹತೋಟಿ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು  ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಮೋಟಾರ್ ಸೈಕಲ್ ಸವಾರ ಆದರ್ಶ್ ರವರ ಎಡಕೈಗೆ, ಹೊಟ್ಟೆಗೆ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು , ಸಹಸವಾರ ದರ್ಶನ್  ನಿಗೆ ಎಡಕೈಗೆ, ಎಡಕಾಲಿಗೆ ಗುದ್ದಿದ ಹಾಗೂ ರಕ್ತ ಗಾಯವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 11/2022 ಕಲಂ 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಶ್ವನಾಥ (47)  ತಂದೆ:ಕುಶಾಲಪ್ಪ   ವಾಸ:ಕಿಜನ ಮನೆ ರೇಖ್ಯಾ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿ ವಿಶ್ವನಾಥ ಎಂಬವರು  ದಿನಾಂಕ:22-01-2021 ರಂದು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA21 EA 4932 ನೇದರಲ್ಲಿ ನೆಲ್ಯಾಡಿ ತೋಮಸ್ ರವರ ಪೆಟ್ರೋಲ್ ಪಂಪ್ ಕಡೆಯಿಂದ ರೆಖ್ಯಾ ಕಡೆಗೆ ರಾ ಹೆ 75 ನೇದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಸಂಜೆ 5.30 ಗಂಟೆಗೆ ಕಡಬ ತಾಲೂಕು ನೆಲ್ಯಾಡಿ  ಗ್ರಾಮದ ಮರಕಳ ಎಂಬಲ್ಲಿಗೆ  ತಲುಪಿದಾಗ ಮರಕಳ ಒಳಗಡೆಯಿಂದ ಜೀಪು ನಂಬ್ರ KA19 P 5526 ನೇದನ್ನು  ಅದರ ಚಾಲಕ ಸುಂದರ ಗೌಡ ಸದ್ರಿ ಜೀಪನ್ನು ನಿರ್ಲಕ್ಷ ಹಾಗೂ ಅಜಾಗರೂಕತೆ ಒಮ್ಮಲೇ ಮತ್ತು  ಚಲಾಯಿಸಿಕೊಂಡು ಬಂದ  ಪರಿಣಾಮ ಮೋಟಾರು ಸೈಕಲ್ ನಂಬ್ರ KA21 EA 4932 ನೇದಕ್ಕೆ  ಡಿಕ್ಕಿಯಾಗಿ  ಮೋಟಾರು ಸೈಕಲ್ ಸಮೇತ ಸವಾರನು ಪಿರ್ಯಾದಿ ವಿಶ್ವನಾಥ ರಸ್ತೆಗೆ ಬಿದ್ದು ಪರಿಣಾಮ ಎಡ ಕಾಲಿನ ಬಳಿ ಗುದ್ದದ ನಮೂನೆಯ ಎಲುಬು ಮುರಿದ ಗಾಯ ಎಡ ಪಾದದ ಹಿಂಭಾಗ ಬಳಿ ರಕ್ತ ಗಾಯ ಹಾಗೂ ಎಡ ಭುಜದ ಚರ್ಮಕಿತ್ತ ಗಾಯವಾಗಿದ್ದು ಗಾಯಗೊಂಡ ಪಿರ್ಯಾದಿ  ವಿಶ್ವನಾಥ  ರವರು ಪುತ್ತೂರು ಆದರ್ಶ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 15/2022 ಕಲಂ:279 ,337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗೋಪಾಲ ಶೇಟ್ ಕೆ ಪ್ರಾಯ 47 ವರ್ಷ ತಂದೆ: ವೆಂಕಟ್ರಮಣ ಶೇಟ್ ವಾಸ: ಬೈದರ ಕೊಳಂಜಿ ಮನೆ, ಜಾಲ್ಸೂರು ಗ್ರಾಮ ಸುಳ್ಯ ತಾಲೂಕು  ಎಂಬವರ ದೂರಿನಂತೆ ಪಿರ್ಯಾದಿದಾರರಾದ ಗೋಪಾಲ ಶೇಟ್ ಕೆ ರವರು ದಿನಾಂಕ 23.01.2022 ರಂದು ಪರಿಚಯದ ಸುಳ್ಯ ಕಸಬಾ ಗ್ರಾಮದ ಜ್ಯೂನಿಯರ್ ಕಾಲೇಜು ರಸ್ತೆಯ ಹತ್ತಿರ ಇರುವ ಉತ್ತಮ್ ಶೇಟ್ ಎಂಬವರ ಮಾಲಿಕತ್ವದ ಸಿದ್ದನಾಥ ಚಿನ್ನ ಬೆಳ್ಳಿ ಕೋಟಿಂಗ್ ಅಂಗಡಿಗೆ ಬೆಳ್ಳಿಯ ಚೈನಿಗೆ ಲೇಪನ ಮಾಡಿಸಲು ಬೆಳಿಗ್ಗೆ 10.15 ಗಂಟೆಗೆ ಹೋಗಿದ್ದು ಉತ್ತಮ ಶೇಟ್‌ನಲ್ಲಿ ಬೆಳ್ಳಿಯ ಚೈನಿಗೆ ಲೇಪನ ಮಾಡಿಸಿ ಕೊಡಿ ಎಂದು ಹೇಳಿದಾಗ ಆಸಮಯ ಅಂಗಡಿಗೆ 2 ಜನ ಮಹಿಳಾ ಗಿರಾಕಿಗಳು ಬಂದಿದ್ದನ್ನು ಕಂಡು ಉತ್ತಮ್ ಶೇಟನು ಪಿರ್ಯಾದಿದಾರರಲ್ಲಿ ನಿಮ್ಮ ಕೆಲಸ ಮತ್ತೆ ಮಾಡಿಕೊಡುತ್ತೇನೆ ಬದಿಯಲ್ಲಿ ನಿಲ್ಲಿ ಎಂದು ಹೇಳಿದಾಗ ಇಬ್ಬರಿಗೂ ಮಾತಿನ ಚಕಮಕಿ ನಡೆದಿದ್ದು, ನಂತರದಲ್ಲಿ ಉತ್ತಮ್ ಶೇಟ್‌ನು ಪಿರ್ಯಾದಿದಾರರಿಗೆ ಕೆಲಸವನ್ನು ಮಾಡಿಕೊಟ್ಟಿದ್ದು ಪಿರ್ಯಾದಿದಾರರು ಹಣ ನೀಡುವ ಸಮಯದಲ್ಲಿ ಪಿರ್ಯಾದಿದಾರರು ಉತ್ತಮ ಶೇಟ್ ನಲ್ಲಿ “ನಾನು ಮೊದಲು ಬಂದರೂ ಕೂಡಾ ನನ್ನ ಕೆಲಸವನ್ನು ಮಾಡದೇ ನಾನು ನಿಮ್ಮ ಮಾಮೂಲಿ ಗಿರಾಕಿಯಾಗಿದ್ದರೂ ಸಹಾ ಬದಿಗೆ ನಿಲ್ಲಿಸಿದ್ದ ಬಗ್ಗೆ ವಿಚಾರಿಸಿದ್ದಕ್ಕೆ ಕೋಪಗೊಂಡ ಉತ್ತಮ ಶೇಟನು ಪಿರ್ಯಾದಿದಾರರನ್ನು ಕೈಯಿಂದ ದೂಡಿ ಅಂಗಡಿಯ ಒಳಗಿದ್ದ ಕಬ್ಬಿಣದ ಪೈಪಿನಿಂದ ಹೊಡೆಯಲು ಬಂದಾಗ ಪಿರ್ಯಾದಿದಾರರು ಎಡಕೈಯನ್ನು ಅಡ್ಡ ಹಿಡಿದಾಗ, ಪರಿಣಾಮ ಪಿರ್ಯಾದಿದಾರರ ಎಡ ಕೈ ಬೆರಳಿಗೆ, ತುಟಿಗೆ ಮತ್ತು ಹಲ್ಲಿಗೆ ರಕ್ತಗಾಯವಾಗಿದ್ದು, ಆಸಮಯ ಸ್ಥಳಕ್ಕೆ ಬಂದ ಪರಿಚಯದ ಗುರುದತ್ತ ಶೆಟ್ ಮತ್ತು ಮೋಹನ್ ಶೇಟ್ ಹಲ್ಲೆ ಮಾಡದಂತೆ ತಡೆದಿದ್ದು, ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅಕ್ರ  13/2022 ಕಲಂ:  323, 324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿ ಜೆ ಅಹಮ್ಮದ್ ಪ್ರಾಯ 63 ವರ್ಷ ತಂದೆ: ದಿ ಎನ್ ಯೂಸುಫ್    ವಾಸ: ನೆಹರು ನಗರ ಮನೆ ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ದಿನಾಂಕ 23-01-2022 ರಂದು ಬೆಳಿಗ್ಗೆ 7.00 ಗಂಟೆಗೆ ನರಿಕೊಂಬು ಗ್ರಾಮದ ಬಿ ಹೆಚ್ ಕಾಂಪ್ಲೇಕ್ಸ್ ನಲ್ಲಿರುವ ಮಗಳ ಮನೆಗೆ ಹೋಗುತ್ತಿರುವಾಗ  ಸದ್ರಿ ಕಾಂಪ್ಲೇಕ್ಸ್ ನ ಎದುರು ರಸ್ತೆ ಬದಿಯಲ್ಲಿ ಓರ್ವನು ಮಲಗಿದ ರೀತಿಯಲ್ಲಿ ಇರುವುದನ್ನು ಕಂಡು, ಪಿರ್ಯಾಧಿದಾರರು ಹತ್ತಿರ ಹೋಗಿ ನೋಡಲಾಗಿ ಸದ್ರಿಯಾತನು ಮೃತಪಟ್ಟಿರುವುದು ಕಂಡು ಬರುತ್ತದೆ. ಈ ಬಗ್ಗೆ ಸುತ್ತಲೂ ವಿಚಾರಿಸಿದಲ್ಲಿ ಆತನ ಬಗ್ಗೆ ಹೆಸರು, ವಿಳಾಸ, ಗುರುತು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 04-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚರಣ್ ರಾಜ್  (26) ತಂದೆ: ಚೆನ್ನಪ್ಪ ಬಂಗೇರ ವಾಸ; ಪರನೀರು ಮನೆ, ಮುಂಡೂರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ಚೆನ್ನಪ್ಪ ಬಂಗೇರ (55) ರವರು ಸುಮಾರು 3 ವರ್ಷಗಳಿಂದ ವೈಯಕ್ತಿಕ ಕಾರಣಗಳಿಗೆ ಬೇಸರದಿಂದ ಇದ್ದು ಇದೇ ಬೇಸರದಲ್ಲಿ ವಿಪರೀತ ಅಮಲು ಪದಾರ್ಥ ಸೇವನೆ ಮಾಡಿಕೊಂಡಿದ್ದು, ದಿನಾಂಕ:22-01-2022 ರಂದು ಹಗಲು 11-00 ಗಂಟೆಗೆ ತನ್ನ ವಾಸ್ತವ್ಯದ ಮನೆಯಾದ ಬೆಳ್ತಂಗಡಿ ತಾಲೂಕು ಮುಂಡೂರು ಗ್ರಾಮದ ಪರನೀರು ಎಂಬಲ್ಲಿ ಯಾವುದೋ ವಿಷಪದಾರ್ಥ ಸೇವಿಸಿದವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಗದೇ ದಿನಾಂಕ:23-01-2022 ರಂದು ಸಂಜೆ 4-35 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯುಡಿಆರ್  01/2022 ಕಲಂ: 174 ಸಿಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-01-2022 10:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080