ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 6

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೇಶವ (28) ವರ್ಷ. ತಂದೆ: ಧರ್ಮೇಂದ್ರ. ವಾಸ: ಕುಪ್ಪಿಲ ಮನೆ, ಬಿ ಮೂಡ ಗ್ರಾಮ. ಮೊಡಂಕಾಪು ಅಂಚೆ, ಬಂಟ್ವಾಳ ತಾಲೂಕು ರವರು ದಿನಾಂಕ 22-01-2023 ರಂದು ಸಹಸವಾರನಾಗಿ  ಅವರ ಸ್ನೇಹಿತ ಸುನಿಲ್ ಸವಾರನಾಗಿ KA-19-HK-4720 ನೇ ಮೋಟಾರ್ ಸೈಕಲಿನಲ್ಲಿ ಅಗತ್ಯ ಕೆಲಸದ ನಿಮಿತ್ತ ಕುಕ್ಕಾಜೆ ಎಂಬಲ್ಲಿಗೆ ಹೋಗಿ ಅಲ್ಲಿ ಕೆಲಸ ಮುಗಿಸಿ ವಾಪಾಸು ಮನೆ ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಕಾರಾಜೆ ಎಂಬಲ್ಲಿಗೆ ತಲುಪುತ್ತಿದಂತೆ ಮೆಲ್ಕಾರ್ – ಕುಕ್ಕಾಜೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮೆಲ್ಕಾರ್ ಕಡೆಯಿಂದ KA 21 Z 2486 ನೇ  ಕಾರೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾಧಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡದು  ಅಪಘಾತಪಡಿಸಿದ ಪರಿಣಾಮ ಪಿರ್ಯಾಧಿದಾರರು ಮತ್ತು ಮೋಟಾರ್ ಸೈಕಲ್ ಸವಾರ ಸುನಿಲ್ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿದಾರರಿಗೆ ಬಲ ಕೋಲು ಕಾಲಿಗೆ ಗುದ್ದಿದ ಮತ್ತು ತರಚಿದ ಗಾಯ ಹಾಗೂ ಮೋಟಾರ್ ಸೈಕಲ್ ಸವಾರನಿಗೆ ಬಲ ಮೊಣಕಾಲಿಗೆ ಅಂಗಾಲಿಗೆ ಗುದ್ದಿದ ಮತ್ತು ರಕ್ತ ಗಾಯ, ಹಿಂಬದಿ ತಲೆಗೆ ಗುದ್ದಿದ ಗಾಯ, ಮೈ ಕೈಗಳಲ್ಲಿ ತರಚಿದ ಗಾಯಗಳಾಗಿದ್ದು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 15/2023  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರಮೋದ್‌ ಶೆಟ್ಟಿ ಕೆ ಪ್ರಾಯ (27) ತಂದೆ:ಸದಾನಂದ ಶೆಟ್ಟಿ ಕೆ ವಾಸ:ಕೆಳಗಿನ ಮನೆ, ಪೆರುವಾಯಿ ಗ್ರಾಮ ಬಂಟ್ವಾಳ ತಾಲೂಕು ರವರು ತನ್ನ ಬಾಬ್ತು ಕಾರಿನಲ್ಲಿ ದಿನಾಂಕ:22-01-2023 ರಂದು ಸಾರ್ವಜನಿಕ ರಸ್ತೆಯಲ್ಲಿ ಅಂತರಗುತ್ತು ಕಡೆಯಿಂದ ಅಡ್ಕ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಮುಳ್ಳಗುಡ್ಡೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿ ಎದುರಿನಿಂದ ಅಂದರೆ ಅಡ್ಕ ಕಡೆಯಿಂದ KA-70-E-2759ನೇ ಮೋಟಾರ್‌ ಸೈಕಲ್‌ನ್ನು ಮೊಕ್ಷೀತ್‌ ಸವಾರನಾಗಿ, ಅಖಿಲ್ ಶೆಟ್ಟಿ ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಅಜಾಗರೂಕತೆ ಹಾಗೂ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾಧಿಯ ಮುಂದೆ 10 ಮೀಟರ್‌ ದೂರದಲ್ಲಿ ಕಾಂಕ್ರಿಟ್ ರಸ್ತೆಯಲ್ಲಿ ಮೋಟಾರ್‌ ಸೈಕಲ್‌ ಸಮೇತ ಮಗುಚಿ ಬಿದ್ದ ಪರಿಣಾಮ ಮೋಕ್ಷಿತ್‌ನ ಎದೆಗೆ ಮತ್ತು ಕೃಗಳಿಗೆ ಗುದ್ದಿದ ನೋವಾಗಿದ್ದು. ಸಹ ಸವಾರ ಅಖಿಲ್‌ ಶೆಟ್ಟಿಗೆ ಹಣೆಯ ಭಾಗಕ್ಕೆ ತರಚಿದ ಗಾಯ, ಬೆಣ್ಣಿಗೆ ಮತ್ತು ಹಿಂಬದಿ ಸೊಂಟಕ್ಕೆ ಗುದ್ದಿದ ನೋವು ಆಗಿರುತ್ತದೆ. ಗಾಯಾಳುಗಳನ್ನು ಪಿರ್ಯಾಧಿ ತನ್ನ ಕಾರಿನಲ್ಲಿ ವಿಟ್ಲ ಕ್ಲಿನಿಕ್‌ಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಅಂಬುಲೆನ್ಸನಲ್ಲಿ ಮಂಗಳೂರು ಮಂಗಳ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಯವರು ಚಿಕಿತ್ಸೆಯ ಬಗ್ಗೆ ಅಖಿಲ್‌ ಶೆಟ್ಟಿರವರನ್ನು ಒಳರೋಗಿಯಾಗಿ ದಾಖಲಿಸಕೊಂಡಿದ್ದು. ಮೋಕ್ಷಿತ್‌ ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 12/2023  ಕಲಂ: 279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ಶೋಭಾ ಪ್ರಾಯ 32 ವರ್ಷ ಗಂಡ:ದಿ||ರವಿ ವಾಸ:ಮಿತ್ತೂರು ಮನೆ, ಇಡ್ಕಿದು ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ:22-01-2023 ರಂದು ಬೆಳಿಗ್ಗೆ ತನ್ನ ತಾಯಿ ಹಾಗೂ ಮಗ ಧನುಷ (10) ನೊಂದಿಗೆ ಕೆಎ-70-4098ನೇ ಅಟೋ ರಿಕ್ಷಾದಲ್ಲಿ ಆನೆಕಲ್‌ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ವಾಪಾಸು ಮನೆ ಕಡೆಗೆ ವಿಟ್ಲದಿಂದಾಗಿ ಕಬಕ ರಸ್ತೆಯಲ್ಲಿ ಅಟೋ ರಿಕ್ಷಾವನ್ನು ಅದರ ಚಾಲಕರು ನಿಧಾನವಾಗಿ ರಸ್ತೆ ಎಡ ಬದಿಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಸಂಜೆ 4.45 ಗಂಟೆಗೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಅಳಕೆ ಮಜಲು ಅನಿಲ್‌ರವರ ನರ್ಸರಿ ಬಳಿಗೆ ತಲುಪಿದಾಗ ಕಬಕ ಕಡೆಯಿಂದ ಕೆಎ-30-ಎಂ-9426ನೇ ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತಪ್ಪು ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಪ್ರಯಾಣಿಸುತ್ತಿದ್ದ ಅಟೋ ರಿಕ್ಷಾಕ್ಕೆ ಅಪಘಾತಪಡಿಸಿದ ಪರಿಣಾಮ ಅಟೋ ರಿಕ್ಷಾದಲ್ಲಿದ್ದ ಪಿರ್ಯಾಧಿಯ ಎಡ ಕೈ ಭುಜಕ್ಕೆ, ಬಲಕೈ ಭುಜಕ್ಕೆ ಹಾಗೂ ಎದೆಗೆ  ಗುದ್ದಿದ ನೋವಾಗಿದ್ದು. ಮಗ ಧನುಷನ ಎಡಕೋಲು ಕೈಗೆ, ಹಾಗೂ ಬಲ ಕೈ ಹೆಬ್ಬೆರಳಿಗೆ ಗುದ್ದಿದ ನೋವಾಗಿರುತ್ತದೆ. ರಿಕ್ಷಾ ಚಾಲಕ ಹಾಗೂ ಪಿರ್ಯಾಧಿಯ ತಾಯಿ  ಗಾಯಾಳುಗಳನ್ನು ಉಪಚರಿಸಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 13/2023  ಕಲಂ: 279,337 ಬಾಧಂಸಂ ಮತ್ತು 134 (ಎ&ಬಿ) ಐಎಂವಿ ಕಾಯ್ದೆ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್‌ ಎ ಪ್ರಾಯ: 40 ವರ್ಷ ತಂದೆ: ಅಬ್ದುಲ ಗಫೂರ ವಾಸ: ವಿಸಿ ಕಾಲೇಜು ರಸ್ತೆ ಕರ್ಮಳ  ಮನೆ ಬನ್ನೂರು  ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ:22.01.2023 ರಂದು ಕಡಬದ ಅನುಗ್ರಹ ಹಾಲ್‌ ನಲ್ಲಿ ಸಂಬಂಧಿಕರ ಮದುವೆ ಇದ್ದುದ್ದರಿಂದ ತನ್ನ ಬಾಬ್ತು ಕಾರಿನಲ್ಲಿ ಪುತ್ತೂರಿನಿಂದ ಕಡಬಕ್ಕೆ ಬಂದಿದ್ದು ಪಿರ್ಯಾದಿದಾರರ ತಂದೆಯವರಾದ ಅಬ್ದುಲ್‌ ಗಪೂರ್‌ ರವರು ಸಹ ಮದುವೆಗೆ KA-21 EB-4857 ನೇ ಸ್ಕೂಟಿಯಲ್ಲಿ ಕಡಬಕ್ಕೆ ಬಂದಿದ್ದು ನಂತರ ಪಿರ್ಯಾದಿದಾರರ ತಂದೆಯವರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ಸು ಮನೆಯಾದ ಪುತ್ತೂರಿಗೆ ಹೋಗುವರೇ ಅನುಗ್ರಹ ಹಾಲ್‌ ನ ಎದುರು ಹಾದುಹೋಗಿರುವ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ರಸ್ತೆಯ ಎಡಬದಿಯಲ್ಲಿ ಸ್ಕೂಟಿಯನ್ನು ನಿಧಾನವಾಗಿ ತಿರುಗಿಸಲು ನಿಂತಿರುವಾಗ ಕಡಬ ಕಡೆಯಿಂದ ಹೊಸ್ಮಠ ಕಡೆಗೆ ಆರೋಪಿತನಾದ KA-21 EB-9621 ನೇ ಸ್ಕೂಟಿ ಸವಾರನಾದ ಕಾರ್ತಿಕ್‌ ಎಂಬಾತನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ತನದಿಂದ ಸ್ಕೂಟಿಯನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ತಂದೆಯವರು ತಿರುಗಿಸಲು ನಿಲ್ಲಿಸಿದ್ದ ಸ್ಕೂಟಿಯ ಬಲಬದಿಯ ಮಧ್ಯಭಾಗಕ್ಕೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಪಿರ್ಯಾದಿದಾರರ ತಂದೆಯವರು ಸ್ಕೂಟಿ ಸಮೇತ ಡಾಮಾರು ರಸ್ತೆಗೆ ಬಿದ್ದಿರುತ್ತಾರೆ ಕೂಡಲೇ ಪಿರ್ಯಾದಿದಾರರು ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಸೇರಿಕೊಂಡು ಮೇಲಕ್ಕೆತ್ತಿ ಉಪಚರಿಸಿ ನೋಡಲಾಗಿ ಅಬ್ದುಲ್‌ ಗಪೂರ್‌ ರವರಿಗೆ ಬಲಕೋಲು ಕಾಲಿಗೆ ಗುದ್ದಿದ ನೋವಾಗಿರುತ್ತದೆ ನಂತರ ಪಿರ್ಯಾದಿದಾರರು ಹಾಗೂ ಆರೋಪಿತನಾದ ಕಾರ್ತಿಕ್‌ ಸೇರಿಕೊಂಡು ಪಿರ್ಯಾದಿದಾರರ ಕಾರು ವಾಹನದಲ್ಲಿ ಗಾಯಾಳುವನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲುಮಾಡಿರುವುದಾಗಿದೆ ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ :05/2023 ಕಲಂ:279,337, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ಅಶ್ರಫ್ ಪ್ರಾಯ: 40 ವರ್ಷ ತಂದೆ:ಅಬ್ದುಲ್ ಕುಂಞ ಕೆ ಎಮ್ ವಾಸ: ನೆಕ್ಕಿತ್ತಡ್ಕ  ಮನೆ ಬಂಟ್ರ  ಗ್ರಾಮ ಮರ್ಧಾಳ ಅಂಚೆ ಕಡಬ ತಾಲೂಕು  ರವರು ನೀಡಿದ ದೂರಿನಂತೆ ಮಹಮ್ಮದ್ ಅಶ್ರಫ್ ಪ್ರಾಯ:47 ವರ್ಷ ಎಂಬುವರು  ದಿನಾಂಕ: 22.01.2023 ರಂದು ತನ್ನ ಬಾಬ್ತು ಜೀಪಿನಲ್ಲಿ ಬಾಡಿಗೆಯ ನಿಮಿತ್ತ  ಪ್ರಯಾಣಿಕರನ್ನು ಕೂರಿಸಿಕೊಂಡು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಮರ್ಧಾಳ ಕಡೆಯಿಂದ ಕಡಬ ಕಡೆಗೆ ಹೋಗುತ್ತಿರುವ ಕಡಬ ತಾಲೂಕು ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ಎಂಬಲ್ಲಿ ತಲುಪಿದಾಗ ಪಿರ್ಯಾದುದಾರರ ಮುಂದೆ KA.21.C.1247 ನೇ ಆಟೋ ರಿಕ್ಷಾವೊಂದನ್ನು ಅದರ ಚಾಲಕನು ಕಡಬ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದು ಆ ಸಮಯ  ಪಿರ್ಯಾದಿದಾರರ ಮುಂದೆ ಹೋಗುತ್ತಿದ್ದ ಆಟೋ ರಿಕ್ಷಾದ ಎದುರಿಗೆ ರಸ್ತೆಗೆ ಅಡ್ಡವಾಗಿ ಎರಡು ನಾಯಿಗಳು ಓಡಿ ಬಂದಿದ್ದು  ಆ ಸಮಯ ಆಟೋ ರಿಕ್ಷಾ ಚಾಲಕನಾದ ಆರೋಪಿಯು ಒಮ್ಮೆಲೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಬ್ರೇಕ್ ಹಾಕಿದ ಪರಿಣಾಮ ಆಟೋ ರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ಚರಂಡಿಯ ಹತ್ತಿರದ ಮೋರಿಗೆ ಹೋಗಿ ಗುದ್ದಿದ್ದು ಆ ಸಮಯ ಕೂಡಲೇ ಪಿರ್ಯಾದುದಾರರು ಜೀಪನ್ನು ನಿಲ್ಲಿಸಿ ಆಟೋ ರಿಕ್ಷಾದ ಬಳಿ ಹೋಗಿ ನೋಡಲಾಗಿ  ಆಟೋ ರಿಕ್ಷಾ ಚಾಲಕನು ಪಿರ್ಯಾದುದಾರರ ತಮ್ಮ ಮುಸ್ತಾಫಾ ಎಂಬವನಾಗಿದ್ದು ಆತನನ್ನು ಪಿರ್ಯಾದಿದಾರರು ಮತ್ತು ಅಲ್ಲಿಯೇ ಇದ್ದ ಅಬ್ಬಾಸ್ ಹಾಗೂ ಹೈದರ್ ರವರು ಉಪಚರಿಸಿ ನೋಡಲಾಗಿ ಆತನ ಎಡಕಾಲಿಗೆ ಪಾದದ ಹತ್ತಿರ ರಕ್ತ ಗಾಯವಾಗಿರುತ್ತದೆ. ನಂತರ ಆರೋಪಿ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಪಿರ್ಯಾದುದಾರರ ಬಾಬ್ತು ಜೀಪಿನಲ್ಲಿ ಪುತ್ತೂರಿನ ಹಿತಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ :06/2023 ಕಲಂ:279,337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನಾರಾಯಣ (56) ತಂದೆ: ಅರಸಪ್ಪ ಪೂಜಾರಿ ವಾಸ: ಕೂಡ್ಲು ಗಂಗೆ ನಗರ, ಆರ್ ಡಿ ನಗರ ಕೂಡ್ಲು ಗ್ರಾಮ, ಕಾಸರಗೋಡು ತಾಲೂಕು ಮತ್ತು ಜಿಲ್ಲೆ ಕೇರಳ ರಾಜ್ಯ ರವರು ಬೇಬಿ ಎಸ್ ನಾಯ್ಕ ರವರ ಮಾಲಿಕತ್ವದ ಬಸ್ ನಂಬ್ರ ಕೆಎಲ್ 14 ಎಲ್ 7779 ನೇದರ ಚಾಲಕರಾಗಿದ್ದು, ದಿನಾಂಕ: 23.01.2023 ರಂದು ಪಿರ್ಯಾದುದಾರರು ಬಸ್ಸಿನ ಚಾಲಕರಾಗಿ ಕಾಸರಗೋಡಿನಿಂದ ಪ್ರಯಾಣಿಕರನ್ನು ಬಸ್ಸಿನಲ್ಲಿ  ಕುಳಿರಿಸಿಕೊಂಡು ಸುಳ್ಯ ಕ್ಕೆ ಬರುತ್ತಿರುವರೇ ಸಮಯ ಸುಮಾರು 12:15 ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಜಾಲ್ಸೂರು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಮಡಿಕೇರಿ ಕಡೆಯಿಂದ ಕೆಎ 01 ಎಕೆ 7470 ನೇದರ ಇನೋವಾ ಕಾರಿನ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ತನ್ನ ಬಾಬ್ತು ಕಾರನ್ನು ಪುತ್ತೂರು ಕಡೆಗೆ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಬಸ್ಸಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಬಸ್ಸಿನ ಎಡಬದಿ ಹಾಗೂ ಕಾರಿನ ಎಡಬದಿ ಜಖಂ ಗೊಂಡಿರುವುದಾಗಿ, ಈ ಅಪಘಾತದಲ್ಲಿ ಯಾರಿಗೂ ಸಹ ಗಾಯವಾಗಿರುವುದಿಲ್ಲವಾಗಿ ಈ ಬಗ್ಗೆ ಸುಳ್ಯ ಪೊಲೀಸ್    ಠಾಣಾ ಅ,ಕ್ರ   ನಂ: 10/2023 ಕಲಂ: 279 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರಿಮತಿ ಅಶ್ವಿನಿ ಪ್ರಾಯ: 28 ವರ್ಷ ಗಂಡ: ವಸಂತ ವಾಸ: ಕದ್ರ ಮನೆ ಹಳೇನೆರಂಕಿ ಗ್ರಾಮ ಕಡಬ ತಾಲೂಕು ರವರ ತಂದೆ ಶಾಂತಪ್ಪ ಪೂಜಾರಿ ರವರಿಗೆ ಸುಮಾರು 2 ವರ್ಷದಿಂದ ಕಿಡ್ನಿ ಸಮಸ್ಯೆ ರಕ್ತದೊತ್ತಡ, ಮಧು ಮೇಹ ಕಾಯಿಲೆಯಿಂದ ಬಳಲುತ್ತಿದ್ದು ಔಷದಿ ಮಾಡಿಕೊಂಡಿದ್ದು ಕಳೆದ 4 ದಿನಗಳಿಂದ ಪಿರ್ಯಾದಿದಾರರ ತಂದೆಯವರಿಗೆ ಜ್ನಾಪನ ಶಕ್ತಿ ಇಲ್ಲವಾಗಿದ್ದು ದಿನಾಂಕ: 22.01.2023 ರಂದು ಪಿರ್ಯಾದುದಾರರ ತಂದೆ ತಾಯಿ ಹಾಗೂ ಪಿರ್ಯಾದುದಾರರು ಮನೆಯಲ್ಲಿದ್ದು ಪಿರ್ಯಾದುದಾರರ ಗಂಡನವರಾದ ವಸಂತರವರು ಪುತ್ತೂರಿಗೆ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ 14.30 ಗಂಟೆಯ ಸಮಯಕ್ಕೆ ಪಿರ್ಯಾದುದಾರರ ತಾಯಿಯವರು ಊಟ ಮಾಡಿದ ನಂತರ ಜೋರಾಗಿ ವಾಂತಿ ಮಾಡಿಕೊಂಡಾಗ ಪಿರ್ಯಾದಿದಾರರು ಹೆದರಿ ಗಾಬರಿಗೊಂಡು ನೋಡಿದಾಗ ಯಾವುದೋ ವಿಷ ಪದಾರ್ಥದ ವಾಸನೆ ಬರುತ್ತಿದ್ದು ಕೂಡಲೇ ಲಲಿತಾರವರನ್ನು ಒಂದು ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ 108 ಆಂಬುಲೆನ್ಸಿನಲ್ಲಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದುದಾರರ ತಾಯಿ ಶ್ರೀಮತಿ ಲಲಿತಾ ರವರಿಗೆ ಚಿಕಿತ್ಸೆ ನೀಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:22.01.2023 ರಂದು ಸಂಜೆ 05.00 ಗಂಟೆಗೆ ಶ್ರೀಮತಿ ಲಲಿತ ಪ್ರಾಯ:60 ಮೃತಪಟ್ಟಿರುವುದಾಗಿರುತ್ತದೆ, ಪಿರ್ಯಾದುದಾರರ ತಂದೆಯವರಿಗೆ ಅನಾರೋಗ್ಯ ಉಂಟಾಗಿದ್ದರಿಂದ ಪಿರ್ಯಾದುದಾರರ ತಾಯಿಯವರು ತನ್ನ ಗಂಡನ ಬಗ್ಗೆ ಚಿಂತಿಸುತ್ತ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿಕೊಂಡು ಮೃತಪಟ್ಟಿದ್ದು ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 03/2023 ಕಲಂ:174  ಸಿ ಆರ್‌ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ  ಶ್ರೀಮತಿ ರುಕ್ಮಿಣಿ ಪ್ರಾಯ: 55 ವರ್ಷ ಗಂಡ:ದಾಮೋದರ ಗೌಡ ವಾಸ: ಕುಂಜತ್ತಾಡಿ ಮನೆ, ಬಳ್ಪ ಗ್ರಾಮ, ಕಡಬ ತಾಲೂಕು ರವರ ಗಂಡ ದಾಮೋದರ ಗೌಡ, ಪ್ರಾಯ:57 ವರ್ಷ  ರವರು ಕೃಷಿಕರಾಗಿದ್ದು, ಎಂದಿನಂತೆ ದಿನಾಂಕ: 23-01-2023 ರಂದು ಕಡಬ ತಾಲೂಕು ಬಳ್ಪ ಗ್ರಾಮದ ಕುಂಜತ್ತಾಡಿ ಎಂಬಲ್ಲಿ ತಮ್ಮ ಮನೆಯ ಬಳಿಯಿರುವ ಅವರ ತೋಟದಲ್ಲಿ ಪಿರ್ಯಾದಿದಾರರು ಮತ್ತು ಅವರ ಗಂಡ ದಾಮೋದರ ಗೌಡರವರು ಕೃಷಿ ಕೆಲಸ ಮಾಡಿಕೊಂಡಿದ್ದು, ಬಳಿಕ  ಪೂರ್ವಾಹ್ನ ಸಮಯ ಸುಮಾರು 11:30 ಗಂಟೆಗೆ ಅವರ ಮನೆಯ ಬಳಿ ಇರುವ ರಾಮ ಪತ್ರೆ ಕೊಯ್ಯಲು ದಾಮೋದರ ಗೌಡರವರು ರಾಮ ಪತ್ರೆ ಮರವನ್ನು ಹತ್ತಿ ಕುಯ್ಯುತ್ತಿದ್ದಾಗ ಅವರು ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಗೆ ಬಿದ್ದವರನ್ನು ಉಪಚರಿಸಿ ನೋಡಿದಾಗ ಅವರು ಅಸ್ವಸ್ಥಗೊಂಡಿದ್ದು, ಕೂಡಲೇ ಅಲ್ಲಿಗೆ ಬಂದ ನೆರೆಯವರಾದ ರಾಧಾಕೃಷ್ಣ ಮತ್ತು ಜಗನ್ನಾಥರೊಂದಿಗೆ ದಾಮೋದರ ರವರನ್ನು ಚಿಕಿತ್ಸೆಯ ಬಗ್ಗೆ ಕಾರೊಂದರಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಪಂಜದಲ್ಲಿ ಸಿಕ್ಕಿದ ಖಾಸಗಿ ಅಂಬುಲೆನ್ಸ್ ಗೆ ಶಿಪ್ಟ್ ಮಾಡಿ 12:00 ಗಂಟೆಗೆ ಕಡಬ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆ ಯುಡಿಆರ್‌ ನಂಬ್ರ  : 05-2023 ಕಲಂ: 174 ಸಿಆರ್‌ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-01-2023 12:05 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080