ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀ ಎಂ.ವಿ. ಮುರಳಿ (46) ತಂದೆ: ವಸಂತ ಗೌಡ ವಾಸ: ಕಾಂತಮೂಲೆ  ವಿಟ್ಲಮುಡ್ನೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 23.02.2020 ರಂದು ರಾತ್ರಿ ಸುಮಾರು 20.45 ಗಂಟೆಗೆ  ಪಿರ್ಯಾದಿದಾರರ ಕುಟುಂಬದವರಾದ ನೀಲಪ್ಪ ಗೌಡರವರು ಪಿರ್ಯಾದಿದಾರರಿಗೆ ಮೊಬೈಲ್ ಕರೆ ಮಾಡಿ ನಿನ್ನ ತಂದೆಯವರು ದಿನೇಶನು ಇನ್ನು ಮುಂದಕ್ಕೆ ನನ್ನಲ್ಲಿ ಗಲಾಟೆ ಮಾಡಲಿಕ್ಕಿಲ್ಲ ಅವನನ್ನು ಕೊಂದು ಹಾಕಿರುತ್ತೇನೆ ಎಂಬುದಾಗಿ  ತಿಳಿಸಿದ ಮೇರೆಗೆ ಪಿರ್ಯಾದಿದಾರರು ಕೂಡಲೇ ಅವರ ತಂದೆ ವಾಸವಿದ್ದ ಮನೆಗೆ ಬಂದಾಗ ಪಿರ್ಯಾದಿದಾರರ ತಂದೆ ವಸಂತ ಗೌಡ ಮನೆಯ ಹೊರಗಡೆ ಇದ್ದು, ಅವರ ಕಾಲಿನ ಭಾಗದಲ್ಲಿ, ಧರಿಸಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳು ಇದ್ದು ತಮ್ಮ ದಿನೇಶನ ಬಗ್ಗೆ ವಿಚಾರಿಸಿದಾಗ ಒಳಗೆ ಹೋಗಿ ನೋಡುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಮನೆಯ ಒಳಗೆ ಹೋಗಿ ನೋಡಿದಾಗ ದಿನೇಶನು ಮರದ ಮಂಚದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದು, ಕರೆದಾಗ ದಿನೇಶನು ಮಾತನಾಡುತ್ತಿರಲಿಲ್ಲ. ದಿನೇಶನ ತಲೆಯ ಹಾಗೂ ಮುಖದ ಭಾಗಕ್ಕೆ ರಕ್ತ ಗಾಯವಾಗಿ ಮೃತಪಟ್ಟಿರುವುದು ಕಂಡು ಬಂದಿದ್ದು ಮೃತ ದಿನೇಶನು ಪ್ರತಿ ದಿನ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದು ಪಿರ್ಯಾದಿದಾರರ ತಂದೆಯವರಲ್ಲಿ ಗಲಾಟೆ ಮಾಡುತ್ತಿದ್ದು ಇದರಿಂದ ಪಿರ್ಯಾದಿದಾರರ ತಂದೆ ವಸಂತ ಗೌಡ ಅದೇ ಕೋಪದಿಂದ ರಾತ್ರಿ 20.26 ಗಂಟೆಯ ಮೊದಲು ಕೊಡಲಿಯ ಮರದ ಹಿಡಿಯಿಂದ ದಿನೇಶನ ತಲೆ ಹಾಗೂ ಮುಖದ ಭಾಗಕ್ಕೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ತೀವ್ರ ತರಹದ ಗಾಯವುಂಟಾಗಿ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆ ಠಾಣಾ ಅ ಕ್ರ 32/2021 ಕಲಂ:302 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 23-02-2022 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 15/2022  ಕಲಂ:406,408,420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಮಹಿಳಾ ಪೊಲೀಸ್ ಠಾಣೆ : ದಿನಾಂಕ : 23.02.2022 ರಂದು ದ.ಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 10/2022 ಕಲಂ: 354, 323, 504, 506  r/w  34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ  ಬೆನಡಿಕ್ಟ್ ಡಿಸೋಜ ಪ್ರಾಯ 56 ವರ್ಷ ಗಂಡ; ವಲೇರಿಯನ್ ಡಿಸೋಜ ವಾಸ;  ಪಾಂಗೋಡಿ ಮನೆ ನಾವೂರು ಗ್ರಾಮ ಎಂಬವರ ದೂರಿನಂತೆ ಪಿರ್ಯಾದುದಾರರು  ಸಂಸಾರದ ಜೊತೆ ವಾಸವಾಗಿದ್ದು  ಪಿರ್ಯಾದುದಾರರ ಗಂಡ ಕೃಷಿ ಕೆಲಸ ಮಾಡಿಕೊಂಡಿರುವುದಾಗಿದೆ.  ಪಿರ್ಯಾದುದಾರರ ಮಗಳು ಪ್ರೀಮಾಳನ್ನು ಸಜೀಪ ಶೆಟ್ಲಕೋಡಿ   ಎಂಬಲ್ಲಿಗೆ  ಮದುವೆ ಮಾಡಿಕೊಟ್ಟಿದ್ದು  ದಿನಾಂಕ 23-02-2022 ರಂದು  ವಾರ್ಷಿಕ ಹಬ್ಬ ಇದ್ದುದರಿಂದ ಪಿರ್ಯಾದುದಾರರು  ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ  ಹೋಗಿದ್ದು ಮನೆಯಲ್ಲಿ ಪಿರ್ಯಾದುದಾರರ ಗಂಡ ಮತ್ತು  ಕೆಲಸದವರಿದ್ದರು .ಮನೆಯಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ  ಪಿರ್ಯಾದುದಾರರಿಗೆ ಸೇರಿದ ಅಡಿಕೆ ತೋಟ ಇರುತ್ತದೆ.  ಮದ್ಯಾಹ್ನ ಪಿರ್ಯಾದುದಾರರ  ಮಗಳ ಮನೆಯಿಂದ ಹೊರಟು ಬರುತ್ತಾ 3.30 ಗಂಟೆಗೆ  ಪಿರ್ಯಾದುದಾರರ ಮನೆಯ ನೆರೆಯ  ಜೋಸೆಪ್   ರವರು  ಪೋನು ಮಾಡಿ ನಿಮ್ಮ ಗಂಡ  ಮನೆಯಲ್ಲಿ  ಅಡಿಕೆ ತೋಟದಲ್ಲಿ  ಅಡಿಕೆ ಮರವನ್ನು ಹತ್ತಿ ಅಡಿಕೆ ತೆಗೆಯುತ್ತಿದ್ದ ಸಮಯ  ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ   ಬಿದ್ದಿರುತ್ತಾರೆ ಮಾತಾಡುವುದಿಲ್ಲ  ಎಂದು ಪಿರ್ಯಾದುದಾರರಲ್ಲಿ  ಹೇಳಿದ್ದು,ಪಿರ್ಯಾದುದಾರರು  ಕೂಡಲೇ   ಹೋದಾಗ ಗಂಡ  ಮಾತಾಡದೇ ಇದ್ದು  ಅವರನ್ನು ಒಂದು ವಾಹನದಲ್ಲಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  4.30 ಗಂಟೆಗೆ ವೈದ್ಯರು   ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ  ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ 12-2022 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-02-2022 03:31 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080