ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರೆನ್ನಿ ಸೆಬೆಸ್ಟಿಯನ್ (41) ತಂದೆ: ದೇವಸ್ಯ ವಾಸ: ಪುಳಿವೆಲಿ ಮನೆ, ಗಂಡಿಬಾಗಿಲು ನೆರಿಯ ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 23-06-2022 ರಂದು ಪಿರ್ಯಾದಿದಾರರು KA 21 5859 ನೇ ಜೀಪಿನಲ್ಲಿ ಸಹಪ್ರಯಾಣಿಕರಾಗಿ ಕುಳಿತುಕೊಂಡು ಜೀಪನ್ನು ಚಾಲಕ ಅಬೂಬ್ಬಕ್ಕರ್‌ ರವರು ಚಲಾಯಿಸಿಕೊಂಡು ಅಣಿಯೂರು ಕಡೆಯಿಂದ ಗಂಡಿಬಾಗಿಲು  ಕಡೆಗೆ ಬರುತ್ತಾ ಸಮಯ ಸುಮಾರು ಮದ್ಯಾಹ್ನ 12:00 ಗಂಟೆಗೆ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಗಂಡಿಬಾಗಿಲು ಕ್ರಾಸ್‌ ಎಂಬಲ್ಲಿಗೆ ತಲುಪುತ್ತಿದ್ದಂತೆ ವಿರುದ್ದ ದಿಕ್ಕಿನಿಂದ ಅಂದರೆ ಗಂಡಿಬಾಗಿಲು ಕಡೆಯಿಂದ ಅಣಿಯೂರು ಕಡೆಗೆ KA 19 MA 9549 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಜೀಪಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು  ಪಿರ್ಯಾದಿದಾರರಿಗೆ ತಲೆಗೆ ಗುದ್ದಿದ ರಕ್ತಗಾಯ , ಎಡಕಾಲಿನ ಪಾದಕ್ಕೆ ರಕ್ತಗಾಯ. ಅಬೂಬಕ್ಕರ್‌ ರವರಿಗೆ ತಲೆಗೆ ಗುದ್ದಿದ ರಕ್ತಗಾಯ, ಎದೆಗೆ ಗುದ್ದಿದ ಗಾಯ ಹಾಗೂ ಅಪಘಾತ ನಡೆಸಿದ ಕಾರು ಚಾಲಕ ರಿಹಾನುಲ್ಲಾ ಹಕೀಂ ರವರಿಗೆ ಮೂಗಿಗೆ ಗುದ್ದಿದ ಗಾಯ . ಕಾರಿನಲ್ಲಿದ್ದ ಸಹ ಪ್ರಯಾಣಿಕರಾದ ಫೈಝಾಲ್‌ ರವರಿಗೆ ಹಣೆಗೆ ಗುದ್ದಿದ ರಕ್ತಗಾಯ, ತುಟಿಗೆ ಗುದ್ದಿದ ಗಾಯವಾಗಿದ್ದು ಗಾಯಾಳುಗಳು ಕಕ್ಕಿಂಜೆ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು ಈ ಪೈಕಿ ಅಬೂಬಕ್ಕರ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಕೊಂಡು ಹೋಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 90/2022 ಕಲಂ: 279, 337 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ರಾಮ, ಪ್ರಾಯ 70 ವರ್ಷ, ತಂದೆ: ದಿ: ಚೀಪ್ರ, ವಾಸ: ಕರ್ಮಲ ಮನೆ, ಬನ್ನೂರು ಅಂಚೆ & ಗ್ರಾಮ ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 23-06-2022 ರಂದು 11-45 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಮಹಮ್ಮದ್‌ ಫಾರೂಕ್‌ ಎಂಬವರು KA-21-B-4985 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ  ಗ್ರಾಮದ ಹಾರಾಡಿ ಎಂಬಲ್ಲಿ ರೈಲ್ವೇ ಬ್ರಿಡ್ಜ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ರಸ್ತೆಯ ಎಡಬದಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ರಾಮರವರಿಗೆ ಅಪಘಾತವಾಗಿ ಮಣ್ಣು ರಸ್ತೆಗೆ  ಬಿದ್ದ ಪರಿಣಾಮ, ಹಣೆಗೆ, ಬಲಕಾಲಿನ ತೊಡೆಗೆ, ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯಗೊಂಡವರನ್ನು  ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  114/2022  ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರತ್ನರಾಜ ಪಡಿವಾಳ್ (58), ತಂದೆ: ಭುಜಬಲಿ ಹೆಗ್ಡೆ, ವಾಸ: ಪದ್ಮ ನಿಲಯ, ಬಾಡಾರು, ಬಜಿರೆ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ 22.06.2022 ರಂದು ತನ್ನ ಬಾಬ್ತು ಕಾರಿನಲ್ಲಿ ನೈನಾಡು ಪೇಟೆಗೆ ಹೋಗಿ ಮನೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ವಾಪಾಸು ಮನೆ ಕಡೆಗೆ ಹೊರಟು ಬಂದು ತಮ್ಮ ಮನೆಯ ಗೇಟಿನ ಬಳಿ ಕಾರು ನಿಲ್ಲಿಸಿದ ಸಮಯ ಸುಮಾರು 9:00 ಗಂಟೆಗೆ ಅಲ್ಲೇ ಗೇಟಿನ ಪಕ್ಕದಲ್ಲಿ ನಿಲ್ಲಿಸಿ ಇದ್ದ ಕೆಎ 53 ಎಂಎ 8685ನೇ ಕಾರಿನಿಂದ ಫಿರ್ಯಾದಿದಾರರ ತಂಗಿ ಮಾಲಿನಿ ಅವರ ಮಕ್ಕಳಾದ ಉತ್ತಮ, ಉಲ್ಲಾಸ ಎಂಬುವವರು ಇಳಿದು ಫಿರ್ಯಾದಿದಾರರ ಬಳಿಗೆ ಬಂದು ಅವರಲ್ಲಿ ಉತ್ತಮನು ಫಿರ್ಯಾದಿದಾರರ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಫಿರ್ಯಾದಿದಾರರ ಮುಖಕ್ಕೆ ಹೊಡೆದು ಕಾಲಿನಿಂದ ಎದೆಗೆ ತುಳಿದಿರುತ್ತಾರೆ ಆ ಸಮಯ ಉಲ್ಲಾಸನು ಕೋಲೊಂದನ್ನು ತೆಗೆದು ಫಿರ್ಯಾದಿದಾರರ ಸೊಂಟಕ್ಕೆ ಹೊಡೆದು ನೋವುಂಡು ಮಾಡಿರುತ್ತಾನೆ, ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದದ್ದನ್ನು ಕೇಳಿ ನೆರೆಯ ಹರೀಶ್, ವರ್ಗೀಸ್‌ರವರು ಬರುವುದನ್ನು ನೋಡಿ ಆಪಾದಿತರು ಫಿರ್ಯಾದಿದಾರರನ್ನು ಉದ್ದೇಶಿಸಿ ಈಗ ನೀನು ಬದುಕಿದ್ದೀಯಾ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಅವರು ಬಂದ ಕಾರಿನಲ್ಲಿ ಹೋಗಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 38-2022 ಕಲಂ: 504, 323, 324, 506 ಜೊತೆಗೆ 34 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 24-06-2022 12:02 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080