ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿಕೇಶ್ ಪ್ರಾಯ 27 ವರ್ಷ ತಂದೆ:ರಾಜು ಕೋಟ್ಯಾನ್ ವಾಸ:ಕಲ್ಲಿಗುಡ್ಡೆ ಕಂಬಳ ಮನೆ ಮೂರುಕಾವೇರಿ ಬಳಿ ಕಿನ್ನಿಗೋಳಿ ಅಂಚೆ ಮೆನ್ನೆ ಬೆಟ್ಟು ಗ್ರಾಮ ಮಂಗಳೂರು ರವರು ನೆರೆಮನೆಯ ಅನುಪಮಾ ಅವರ ಅಕ್ಕ ಅಂಬಿಕಾ ಮತ್ತು ಭಾವ ಪ್ರತಾಪ್ ಶೆಟ್ಟಿ ರವರ ಜೊತೆ ಅಗತ್ಯ ಕೆಲಸದ ನಿಮಿತ್ತ ಅನುಪಮಾ ರವರ ಬಾಬ್ತು ಕೆಎ.19.ಎಂಜಿ.7668ನೇ ನಂಬ್ರದ ಬ್ರೀಝಾ ಕಾರಿನಲ್ಲಿ ಕಿನ್ನಿಗೋಳಿಯಿಂದ ಬೆಂಗಳೂರಿಗೆ ಹೋಗುವರೇ, ಮಂಗಳೂರು-ಬೆಂಗಳೂರು ರಾ. ಹೆ 75 ರಲ್ಲಿ ಪಿರ್ಯಾದಿದಾರರು ಕಾರನ್ನು ಚಲಾಯಿಸಿಕೊಂಡು ಕಡಬ ತಾಲೂಕು ಶಿರಾಡಿ ಗ್ರಾಮದ ಶಿರಾಡಿ ಜಂಕ್ಷನ್ ಎಂಬಲ್ಲಿಗೆ ತಲುಪುತ್ತಿದ್ದಂತೆ ,ಕೆಎ 21 ಸಿ 1437 ನೇ ನಂಬ್ರದ ಅಟೋ ರಿಕ್ಷಾವನ್ನು ಅದರ ಚಾಲಕನು ಯಾವುದೇ ಸೂಚನೆ ಅಥವಾ ಇಂಡಿಕೇಟರ್ ಹಾಕದೇ ಒಮ್ಮೆಲೇ ಎದುರಿನಿಂದ ಬಲಬದಿಗೆ ತಿರುಗಿಸಿದ ಪರಿಣಾಮ ಫಿರ್ಯಾದಿದಾರರ ಕಾರಿನ ಬಲಬದಿಗೆ ಗುದ್ದಿ ಕಾರಿನ ಬಲಬದಿ ಜಖಂ ಆಗಿರುವುದಲ್ಲದೇ, ಅಟೋರಿಕ್ಷಾವು ಜಖಂ ಗೊಂಡು ಅದರಲ್ಲಿದ್ದ ರಿಕ್ಷಾ ಚಾಲಕನಿಗೆ ಮತ್ತು ಎರಡು ಜನ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ 108 ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ: 79/2021  ಕಲಂ:279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅನಿಲ್ ಕುಮಾರ ಶೆಟ್ಟಿ ಪ್ರಾಯ 31 ವರ್ಷ ತಂದೆ:ಅಣ್ಣಿ ಶೆಟ್ಟಿ ವಾಸ:ಕಜ್ಜೆಕಾರು ಮನೆ ಉಪ್ಪಿನಂಗಡಿ ಗ್ರಾಮ ಪುತ್ತೂರು ತಾಲೂಕು ರವರು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಸುಬ್ರಹ್ಮಣ್ಯ ಕ್ರಾಸ್ ಬಳಿ ಕೆಲ ಸಮಯಗಳಿಂದ  ತನ್ನ  ಬಾಬ್ತು ಹಸಿ ಮೀನಿನ ಮಾರಾಟ ಮಳಿಗೆಯನ್ನು ಹೊಂದಿದ್ದು, ದಿನಾಂಕ:22.08.2021ರಂದು ವಿಕೆಂಡ್ ಕರ್ಪ್ಯೂ ಇದ್ದ ಕಾರಣ ಹಸಿ ಮೀನಿನ ಮಾರಾಟ ಮಳಿಗೆಯನ್ನು ಮದ್ಯಾಹ್ನದ ವೇಳೆ ಮುಕ್ತಾಯಗೊಳಿಸಿ ಮನೆಗೆ ಹೋಗಿದ್ದು, ಪಿರ್ಯಾದಿದಾರರು ಮನೆಯಲ್ಲಿ ಮಲಗಿದ್ದ ಸಮಯ ದಿನಾಂಕ:23.08.2021 ರಂದು ಬೆಳಿಗ್ಗಿನ ಜಾವ  ಸುಮಾರು 01.30 ಗಂಟೆಯಿಂದ 02.00 ಗಂಟೆಯ ಮದ್ಯೆ ಯಾರೋ ದುಷ್ಕರ್ಮಿಗಳು ಮೀನಿನ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಕೂಡಲೇ ಮನೆಯಿಂದ ಹೊರಟು ಅಂಗಡಿಯ ಬಳಿಗೆ ಬಂದು ನೋಡಿದಾಗ ಅಂಗಡಿಯು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು,  ಅಂಗಡಿಯ ಒಳಗಿದ್ದ ಎರಡು ಪ್ರಿಡ್ಜ್, ಎಂಟು ಮೀನಿನ ಟ್ರೇ, ಒಂದು ಟೇಬಲ್ ಹಾಗೂ ಒಂದು  ತೂಕದ ಯಂತ್ರ, ಇತರ ಸಾಮಗ್ರಿಗಳು ಮತ್ತು ಸುಮಾರು 40,000/- ರೂ ಮೌಲ್ಯದ ಹಸಿ ಮೀನು ಬೆಂಕಿಗೆ ಸುಟ್ಟು ಹೋಗಿರುತ್ತದೆ. ಈ ಘಟನೆಯಿಂದ ಒಟ್ಟು ಸುಮಾರು 1,40,000/- ರೂ ಮೌಲ್ಯದ  ಸೊತ್ತು ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ 78/2021 ಕಲಂ:436, 295, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ದ.ಕ ಮಹಿಳಾ ಪೊಲೀಸ್ ಠಾಣೆ : ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 498 (ಎ), 324, 323, 504, 506 ಜೊತೆಗೆ 34  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: ೦1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಇಸುಬು ಪ್ರಾಯ 45 ತಂದೆ:ಮಮುಂಞ ಬ್ಯಾರಿ ವಾಸ:ಪಂಜಿಗುಳಿ ಮನೆ ,ಪುಣಚ ಗ್ರಾಮ ಬಂಟ್ವಾಳ ತಾಲೂಕು ರವರ ಅಕ್ಕನ ಮಗ ಅಬ್ದುಲ್ ಸಂಸದ್‌ ಪ್ರಾಯ 26 ವರ್ಷ ಎಂಬಾತನು ಸುಮಾರು 25 ವರ್ಷಗಳಿಂದ ಪಿರ್ಯಾಧಿದಾರರ ಜೊತೆಯಲ್ಲಿ ಆತನ ತಾಯಿಯೊಂದಿಗೆ ವಾಸವಾಗಿದ್ದು. ಅಬ್ದುಲ್ ಸಂಸದ್ ನು ದಿನಾಂಕ;11.08.2021 ರಂದು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪೈಸಿರಿ  ಫಾರೂಕ್ ಎಂಬವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿದ್ದನು. ಅಲ್ಲಿನ ತೋಟದಲ್ಲಿರುವ  ಅಡಿಕೆ ಮರಗಳಿಗೆ ಸೊಪ್ಪು ಕಡಿಯಲೆಂದು  ಒಂದು ಮರಕ್ಕೆ ಹತ್ತಿ ಮರದ ಕೊಂಬೆಗಳನ್ನು ಕಡಿಯುತ್ತಿರುವಾಗ ಆತನ ಕೈಕಾಲು ಜಾರಿ ಆಕಸ್ಮಿಕವಾಗಿ ಕೆಳಗೆ ನೆಲಕ್ಕೆ ಬಿದ್ದು ಗಾಯವಾದ ಬಗ್ಗೆ ಫೋನು ಮುಖಾಂತರ ತಿಳಿಸಿದ ಮೇರೆಗೆ ಪಿರ್ಯಾಧಿದಾರರು ಅಲ್ಲಿಗೆ ಹೋಗಿ ತನ್ನ ಅಕ್ಕನ ಮಗನನ್ನು ಒಂದು ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈಧ್ಯರಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರು ಅಬ್ದುಲ್ ಸಂಸದ್ ನನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಮರದಿಂದ ಕೆಳಗೆ ಬಿದ್ದು ಆತನ ಹೊಟ್ಟೆಯ ಹಾಗೂ ಎದೆಯ ಭಾಗಕ್ಕೆ ಗುದ್ದಿದ ತರಹದ ತೀವ್ರ ನೋವುಂಟಾಗಿತ್ತು. ಮಂಗಳೂರಿನ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ ಸಂಸದ್ ನು  ವೈಧ್ಯರ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ:22-08-2021 ರಂದು ಮೃತಪಟ್ಟಿರುವುದಾಗಿದೆ ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 23/2021  ಕಲಂ 174  ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-08-2021 10:58 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080