ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಮರನಾಥ ಪ್ರಾಯ: 28 ವರ್ಷ ತಂದೆ: ಸಂಜೀವಪ್ಪ  ವಾಸ:ಮನೆ ನಂ:198 ಬೆಳ್ಳೂರು ಗ್ರಾಮ, ನರಸಾಪೂರ ಅಂಚೆ, ಕೋಲಾರ ತಾಲೂಕು, ಕೋಲಾರ ಜಿಲ್ಲೆ ರವರು ದಿನಾಂಕ: 23-09-2021 ರಂದು ಕೆಎ 57 ಎಫ್ 4543‌ ನೇ ಕೆ.ಎಸ್.ಆರ್‌ .ಟಿ.ಸಿ ಬಸ್‌ ನಲ್ಲಿ ಕುಟುಂಬದವರೊಂದಿಗೆ ಧರ್ಮಸ್ಥಳದಿಂದ ಕುಕ್ಕೆ ಸುಬ್ರಮಣ್ಯ ಕ್ಕೆ ಪ್ರಯಾಣಿಸುತ್ತಿದ್ದು, ಸಮಯ ಸುಮಾರು ಸಂಜೆ 5.00  ಗಂಟೆಗೆ ಬೆಳ್ತಂಗಡಿ ತಾಲೂಕು ರೇಖ್ಯ ಗ್ರಾಮದ ನೇಲಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ ಬಸ್ ಚಾಲಕನ ಚಾಲನಾ ಹತೋಟಿ ತಪ್ಪಿ ರಸ್ತೆಯ ಬದಿಗೆ ಎಡ ಮಗ್ಗುಲಾಗಿ ಮುಗುಚಿ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಪಿರ್ಯಾದುದಾರರಿಗೆ ಹಾಗೂ ಸರಸ್ವತಿ, ವೆಂಕಟೇಶಪ್ಪ, ರಾಜಮ್ಮ, ಶ್ರೀನಿವಾಸ, ಹಾಗೂ ಚಾಲಕ ಸಿ ಕೆ ಭವಾನಿ, ನಿರ್ವಾಹಕ ನಾಗರಾಜ ರವರಿಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 71/2021, ಕಲಂ; 279, 337 ಭಾದಂಸಂ.  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ರೀಟಾ ಡಿಸೋಜ @ ರೀಟಾ ಮಿಸ್ಕಿತ್ ಪ್ರಾಯ 59 ವರ್ಷ ಗಂಡ: ಫ್ರಾನ್ಸಿಸ್ ಡಿಸೋಜ,  ವಾಸ: ಮುಂಡೇಲು ಲಾಯಿಲ, ಗ್ರಾಮ ಬೆಳ್ತಂಗಡಿ ತಾಲೂಕು ರವರಿಗೆ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಮುಂಡೇಲು ಎಂಬಲ್ಲಿ ಸರ್ವೇ ನಂ 120/1, 158/1ಎಪಿ1,4-10 ಎಕರೆ ಜಮೀನು ಎನ್ ಸಿ ಆರ್  ಸಿ ಆರ್ 518/91-92 ರಂತೆ ಮಂಜೂರ್ ಆಗಿದ್ದು ಈ ಜಮೀನಿನಲ್ಲಿ ರಬ್ಬರ್ ಕೃಷಿ ಮಾಡಿರುತ್ತಾರೆ ಈ ಜಮೀನುಗಳ ಪೈಕಿ ಸರ್ವೇ ನಂ 121/1 ರಲ್ಲಿ 0.20 ಎಕರೆ ಜಮೀನು ಉಳಿದ ಜಮೀನುಗಳಿಗಿಂತ  ಸುಮಾರು 100 ಮೀಟರ್ ದೂರದಲ್ಲಿದ್ದು ಈ ಜಮೀನಿಗೆ ಆರೋಪಿ ಪ್ರಕಾಶ್ ಡಿ ಪದೇ ಪದೇ ತೊಂದರೆ ನೀಡುತ್ತಿದ್ದು ದಿನಾಂಕ 23/09/2021 ಮದ್ಯಾಹ್ನ 12:00 ರಿಂದ 13:00 ಗಂಟೆಯ ಸಮಯದಲ್ಲಿ  ಪಿರ್ಯಾದಿದಾರರ ಜಮೀನಿನಲ್ಲಿ ಅಕ್ರಮ ಪ್ರವೇಶಿಸಿ ಪಿರ್ಯಾದಿದಾರರ ಪಟ್ಟಾ ಸ್ಥಳದಲ್ಲಿ ಬೆಳೆದು ನಿಂತ ರಬ್ಬರ್ ಟ್ಯಾಪಿಂಗ್ ಮಾಡಲು ತಯಾರಾಗಿದ್ದ 42 ರಬ್ಬರ್ ಮರಗಳನ್ನು ಬುಡದಿಂದಲೇ ಕಡಿದು ನಾಶ ಪಡಿಸಿದ್ದು ಈ ಬಗ್ಗೆ ವಿಷಯ ತಿಳಿದ ಪಿರ್ಯಾದಿದಾರು ತನ್ನ ಮಗ ಫ್ರೇನಿಲ್ ನೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಆರೋಪಿಯು ತನ್ನ ಕೆಲಸದವರೊಂದಿಗೆ ಮಷಿನ್ ಗರಗಸದಿಂದ ಮರಗಳನ್ನು ತುಂಡು ಮಾಡುತ್ತಿದ್ದು, ಪಿರ್ಯಾದಿದಾರರು ಪ್ರಶ್ನಿಸಿದಕ್ಕೆ  “ನಾವು ಏನೂ ಮಾಡುತ್ತೇವೆ ನೀವು ಯಾರು ಕೇಳುವುದಕ್ಕೆ  ನನ್ನ ವಿಷಯಕ್ಕೆ ಬಂದರೆ ಜಾಗ್ರತೆ” ಎಂದು ಭೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ  77/2021 ಕಲಂ: 447,427,506 r/w 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚೇತನ್ (21) ತಂದೆ:ವಾಸಪ್ಪ ವಾಸ:ತೋಟ ಮನೆ ನೆಲ್ಯಾಡಿ ಗ್ರಾಮ ಕಡಬ ತಾಲೂಕು ಎಂಬವರು ತನ್ನ ಮನೆಯಲ್ಲಿದ್ದ ಸಮಯ ರಾತ್ರಿ 08-15 ಗಂಟೆಗೆ ಆಲಂಕಾರು ದಾರಿ ಮಧ್ಯೆದಲ್ಲಿ ತೋಟ ಎಂಬಲ್ಲಿ ವಾಹನ ಪಲ್ಟಿಯಾದ ಶಬ್ದ ಕೇಳಿ ಸ್ಥಳಕ್ಕೆ ಹೋಗಿ ನೋಡಲಾಗಿ KA-21-B-1958 ನೇ ನಂಬ್ರದ ಆಪೆ ರಿಕ್ಷಾದ ಎರಡು ಚಕ್ರಗಳು ಮೇಲಾಗಿ ನಿಂತಿದ್ದು ಆಪೆ ರಿಕ್ಷಾದ ಕೆಳಗಡೆ ರಸ್ತೆಯಲ್ಲಿ ದನ ಮತ್ತು ಹೋರಿ ಕೈ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಕೆಳಗೆ ಬಿದ್ದ ದನ ಮತ್ತು ಹೋರಿಯನ್ನು ಆರೋಪಿಗಳು ಪುನಃ ಆಪೆ ರೀಕ್ಷಾದಲ್ಲಿ ತುಂಬಿಸಲು ಪ್ರಯತ್ನಿಸುತ್ತಿರುವ  ಸಮಯ ಫಿರ್ಯಾಧಿದಾರರನ್ನು ನೊಡಿದ ತಕ್ಷಣ ಆಪೆ ರಿಕ್ಷಾ ಚಾಲಕ ರಿಕ್ಷಾ ಸಮೇತ ಪರಾರಿಯಾಗಿರುತ್ತಾನೆ. ಸದ್ರಿ ಸ್ಥಳದಲ್ಲಿದ್ದ ಮತ್ತೊಬ್ಬನನ್ನು ಫಿರ್ಯಾಧಿಯವರು  ವಿಚಾರಿಸಿ ಹೆಸರು ವಿಳಾಸ ಕೇಳಲಾಗಿ ಗುರುಪ್ರಸಾದ್ (20) ತಂದೆ:ದಿ/ಕುಂಞ ವಾಸ:ಪಿಜಿನಡ್ಕ ಮನೆ ಕೊಕ್ಕಡ ಗ್ರಾಮ ಬೆಳ್ತಂಗಡಿ ತಾಲೂಕು ದ.ಕ ಜಿಲ್ಲೆ ಎಂದು ಫಿರ್ಯಾಧಿಯವರಿಗೆ ತಿಳಿಸಿದ್ದು ಆಪೆ ರಿಕ್ಷಾದೊಂದಿಗೆ ಪರಾರಿಯಾದ  ಇನ್ನೊಬ್ಬನ ಹೆಸರು ವಿಳಾಸ ಕೇಳಲಾಗಿ ಸಫೀಕ್ ತಂದೆ:ಇಬ್ರಾಹಿಂ ಎಂಬುದಾಗಿ ತಿಳಿಸಿದ್ದು ಪುನಃ ಫಿರ್ಯಾಧಿಯವರು ವಿಚಾರಿಸಿದಾಗ ದನ ಮತ್ತು ಹೋರಿಯನ್ನು ಆಲಂಕಾರು ಪರಿಸರದಿಂದ ಕದ್ದುಕೊಂಡು ಮಾಂಸ ಮಾಡುವ ಉದ್ದೇಶದಿಂದ ಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ. ಸದ್ರಿ ಸ್ಥಳದಲ್ಲಿ ಆರೋಪಿಯ ಆಂಡ್ರಾಯ್ಡ್ ಮೊಬೈಲ್ ಸಿಕ್ಕಿರುತ್ತದೆ. ದನ ಮತ್ತು ಹೊರಿಯ ಅಂದಾಜು ಮೌಲ್ಯ 22,000/- ರೂ ಆಗಬಹುದು.ಈ ಬಗ್ಗೆ ಉಪ್ಪಿನಂಗಡಿ ಪೊಲೀಸು ಠಾಣಾ ಅ ಕ್ರ 95/2021 U/s 379 IPC U/s 5,7 KARNATAKA PREVENTION OF SLAUGHTER AND PRESERVATION OF CATTLE ORDINANCE-2020 U/s 11 (D) PREVENTION OF CRUELTY TO ANIMALS ACT And U/s 66(1), R/w 192 (A) IMV Act. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ ಶೆಖರ ಗೌಡ ಪ್ರಾಯ 45 ವರ್ಷ ತಂದೆ ;ಕರಿಯಪ್ಪ ಗೌಡ ವಾಸ ;ಪರಂಗಜೆ ಮನೆ  ಕೊಯಿಲಾ ಗ್ರಾಮ. ಕಡಬ ತಾಲೂಕು ರವರ ಅಣ್ಣನಾದ ಚಂದಪ್ಪ ಗೌಡ ರವರರು ದಿನಾಂಕ:21-09-2021ರಂದು ಮಧ್ಯಾಹ್ನ 12:30 ಗಂಟೆಗೆ ಸ್ನಾನಕ್ಕೆಂದು ಶ್ಯಾಮ್ ಎಂಬಾತನೊಂದಿಗೆ ಕೊಯಿಲಾ ಗ್ರಾಮದ ಪರಂಗಾಜೆ ಎಂಬಲ್ಲಿಗೆ ಕುಮಾರಧಾರ ನದಿಗೆ ಹೋದವರು ಬಾರದೇ ಇದ್ದುದ್ದರಿಂದ ಪಿರ್ಯಾದುದಾರರ ಮನೆಯವರು ಆತನನ್ನು ಹುಡುಕಿದರು ಸಿಗದೇ ಇದ್ದುದ್ದರಿಂದ ದಿನಾಂಕ: 22-09-2021 ರಂದು ಕಡಬ ಪೊಲೀಸ್ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದಂತೆ ಪ್ರಕರಣ ದಾಖಲಾಗಿ ತನಿಖೆಲಿದ್ದು ದಿನಾಂಕ 23-09-2021 ರಂದು ಮಂಗಳೂರಿನಿಂದ  ತಣ್ಣೀರು ಬಾವಿಯ ಮುಳುಗು ತಜ್ಷರನ್ನು  ಹಾಗೂ ಅಗ್ನಿಶಾಮಕ ಸಿಬ್ಭಂದಿಗಳುನ್ನು ಕರೆಸಿ  ಪರಂಗಾಜೆ ಸ್ಥಳಿಯ ನುರಿತ ಮುಳುಗುಗಾರರ ಸಮಕ್ಷಮದಲ್ಲಿ ಕುಮಾರಧಾರ ನದಿಯಲ್ಲಿ ಹುಡುಕಿದಲ್ಲಿ ಪರಂಗಾಜೆಯಿಂದ ಕೆಳಗೆ ಕೂಟೇಲು ಎಂಬಲ್ಲಿ ಮಧ್ಯಾಹ್ನ 3:00 ಗಂಟೆಗೆ ಅಣ್ಣ ಚಂದಪ್ಪ ಗೌಡರ ಮೃತ ದೇಹವು ನೀರಿನೊಳಗೆ ಸಿಕ್ಕಿರುತ್ತದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 21/2021 ಕಲಂ: 174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮಿ ಪ್ರಾಯ  60 ವರ್ಷ ಗಂಡ ಲೇ| ಅಣ್ಣು ಮೇರ ಅತ್ತಳಿಕೆ ಮನೆ ದೇವಸ್ಯಪಡೂರು ಗ್ರಾಮ ಬಂಟ್ವಾಳ ತಾಲೂಕು  ರವರ ಮಗ ವಾಸು (ಪ್ರಾಯ 30 ವರ್ಷ ) ರವರು ದಿನಾಂಕ 22.09.2021 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದವರು ಸಂಜೆ 7.00 ಗಂಟೆಯ ಸುಮಾರಿಗೆ ಅಲ್ಲಿಪಾದೆ ಕಡೆಗೆ ಹೋಗಿದ್ದವರು ರಾತ್ರಿ 10.00 ಗಂಟೆಯಾದರು ಮನೆಗೆ ಬಾರದೇ ಇದ್ದು  ಪಿರ್ಯದುದಾರರ  ತಡರಾತ್ರಿವರೆಗು ಕಾದು  ಮತ್ತೆ ಮಲಗಿದ್ದು ಬೆಳಿಗ್ಗೆ ಕೂಡ ಬಾರದೇ ಇದ್ದುದ್ದನ್ನು ಕಂಡು  ಪಿರ್ಯದುದಾರರು ನೆರೆಕೆರಯವರಲ್ಲಿ ವಿಚಾರಿಸಿ ಪತ್ನಿ ಗೀತಾ ರವರಿಗೆ ಕರೆ ಮಾಡಿ  ಮನೆಗೆ ಬಂದಿರುವುದಾಗಿ ಕೇಳಲಾಗಿ  ಅಲ್ಲಿಯು ಕೂಡ ಬಾರದಿರುವುದಾಗಿ ತಿಳಿಸಿದ್ದು ನಂತರ ಸಂಬಂದಿಕರಲ್ಲಿ ಹಾಗೂ ನೆರೆಕೆರಯವರಲ್ಲಿ  ತಿಳಿಸಿ ಪರಿಸರದಲ್ಲಿ  ಹುಡುಕಾಡಿದಲ್ಲಿ ಪಿರ್ಯಾದುದಾರರಿಗೆ ಸೇರಿದ ಮನೆಯ ಪಕ್ಕದಲ್ಲಿದ್ದ  ಬಾವಿಯಲ್ಲಿ  ಬೀಡಿಯ ಪ್ಯಾಕೇಟ್  ನೀರಿನಲ್ಲಿ ತೇಲಿಕೊಂಡಿದ್ದನ್ನು ಕಂಡು ಸಂಶಯಗೊಂಡು ಬಾವಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಸುಮಾರು ಮಧ್ಯಾಹ್ನ 3.30 ಗಂಟೆಗೆ ಬಾವಿಯಲ್ಲಿ ವಾಸು ರವರ ಮೃತದೇಹ ಇದ್ದು ಮಗ ವಾಸು ಪ್ರತೀ ದಿನ ಕೂಲಿ ಕೆಲಸ ಮಾಡಿ  ಅಲ್ಲಿಪಾದೆಗೆ ಹೋಗಿ ಬರುವ ಅಭ್ಯಾಸ ಇಟ್ಟುಕೊಂಡಿದ್ದು ಅಂತೆಯೇ ನಿನ್ನೆ ರಾತ್ರಿ 7.00 ಗಂಟೆಗೆ ಮನೆಯಿಂದ ಅಲ್ಲಿಪಾದೆಗೆ ಹೋದವನು ವಾಪಸ್ಸು  ಮನೆಗೆ ಬರುವ ಕಾಲು ದಾರಿಯಲ್ಲಿ  ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 39-2021 ಕಲಂ 174   ಸಿ ಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 24-09-2021 11:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080