ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಾಸೀರ್ ಪ್ರಾಯ 42 ವರ್ಷ ಹೊಳೆ ಬದಿ ಮನೆ. ಪುದು ಗ್ರಾಮ ಫರಂಗಿಪೇಟೆ   ಬಂಟ್ವಾಳ ತಾಲೂಕು ರವರಿಗೆ ಫರಂಗಿಪೇಟೆ  ಹಳೆ ರಸ್ತೆಯಲ್ಲಿ ಮೊಹಿದ್ದೀನ್  ಕುಂಞ ಎಂಬ  ಹೆಸರಿನ ಜಿನಸಿ ಅಂಗಡಿ ಇದ್ದು ಪಿರ್ಯಾದಿದಾರರ ಜೊತೆ  ಸಂಶುದ್ದೀನ್ ಮತ್ತು ನಾಸಿರ್ ರವರು ಕೂಲಿ ಕೆಲಸ ಮಾಡಿಕೊಂಡಿದ್ದು . ಪಿರ್ಯಾದಿದಾರರು  ಪ್ರತಿ ದಿನ ಬೆಳಿಗ್ಗೆ 8.00 ಗಂಟೆಗೆ ತೆರೆದು  ವ್ಯಾಪಾರ ಮಾಡಿ ರಾತ್ರಿ 9.30 ಗಂಟೆಗೆ ಬಂದ್ ಮಾಡಿ ಹೋಗುವುದಾಗಿದ್ದು ಅಂತೆಯೇ ದಿನಾಂಕ 22-11-2021 ರಂದು ಪಿರ್ಯಾದಿದಾರರು  ವ್ಯಾಪಾರ  ಮಾಡಿ ರಾತ್ರಿ 9.30 ಗಂಟೆಗೆ ಅಂಗಡಿಗೆ ಬೀಗ ಹಾಕಿ ಹೋಗಿದ್ದು ಮರುದಿನ ಬೆಳಿಗ್ಗೆ 8.00  ಗಂಟೆಗೆ ಪಿರ್ಯಾದಿದಾರರು  ಅಂಗಡಿಗೆ ಬಂದಾಗ  ಅಂಗಡಿಯ  ಎದುರಿನ ಶಟರನ್ನು ಮೇಲಕ್ಕೆತ್ತಿದ್ದು  ಕಂಡು ಬಂದು ಯಾರೋ ಕಳ್ಳರು ಅಂಗಡಿಯ ಒಳಗೆ ಕಳವು ಮಾಡಿರುವ ಬಗ್ಗೆ ಸಂಶಯಗೊಂಡು  ಪಿರ್ಯಾದಿದಾರರು  ಅಂಗಡಿಯ ಇನ್ನೊಂದು ಭಾಗದ ಶಟರಿನ ಬೀಗವನ್ನು ತೆರೆದು ಅಂಗಡಿಯ ಒಳಗೆ ಹೋಗಿ ನೋಡಿದಾಗ  ಅಂಗಡಿಯ ಒಳಗೆ ಇದ್ದ ಕ್ಯಾಶ್ ಟೇಬಲ್ ನ  ಡ್ರಾಯರನ್ನು  ಮುರಿದು ಅದರ ಒಳಗೆ ಇಟ್ಟಿದ್ದ  ನಗದು ರೂಪಾಯಿ 500/ ನನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 150/2021 ಕಲಂ 454,457,380   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಹರಿಪ್ರಸಾದ್ ಶೆಟ್ಟಿ (30), ತಂದೆ: ವಿಠ್ಠಲ್ ಶೆಟ್ಟಿ, ವಾಸ:  ಮುಗೇರಡ್ಕ ಮನೆ, ಈದು ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ರವರು ಸುಮಾರು 7 ವರ್ಷಗಳಿಂದ ನಾರಾವಿಯ ಪಾರಿಜಾತ ಕಾಂಪ್ಲೆಕ್ಸ್‌ ನಲ್ಲಿ ಶ್ರೀನಿಧಿ ಮೊಬೈಲ್ ಸೆಂಟರ್ ಎಂಬ ಮೊಬೈಲ್ ಸೇಲ್ ಮತ್ತು ರಿಪೇರಿ ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದು, ಪ್ರತಿ ದಿನ ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 08:00  ಗಂಟೆವರೆಗೆ ಅಂಗಡಿಯಲ್ಲಿದ್ದು ವ್ಯವಹಾರ ನಡೆಸುತ್ತಿರುವುದಾಗಿದೆ. ದಿನಾಂಕ 21.11.2021 ರಂದು ಎಂದಿನಂತೆ ಬೆಳಿಗ್ಗೆ 08:00 ಗಂಟೆಗೆ ಬಂದು 10:30 ಗಂಟೆವರೆಗೆ ವ್ಯವಹಾರ ನಡೆಸಿ ನಂತರ ಬೀಗ ಹಾಕಿ ಹೋಗಿರುತ್ತಾರೆ ದಿನಾಂಕ 22.11.2021ರಂದು ಬೆಳಿಗ್ಗೆ ಎಂದಿನಂತೆಯೆ ಅಂಗಡಿಗೆ ಬಂದಾಗ ಶಟರ್‌ಗೆ ಹಾಕಿದ ಬೀಗ ಒಡೆದಿರುವುದು ಕಂಡು ಬಂದಿರುತ್ತದೆ. ಶಟರ್‌ ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಅಂಗಡಿ ಒಳಗಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಸಿಸಿ ಟಿವಿ ಒಡೆದಿರುವುದು ಕಂಡು ಬಂದಿರುತ್ತದೆ. ಹಾಗೂ ಶೋಕೇಸಿನಲ್ಲಿ ಇದ್ದ ಮೊಬೈಲಿನ ಖಾಲಿ ಬಾಕ್ಸ್‌ ಗಳು ಕೆಳಗೆ ಬಿದ್ದಿರುವುದು ಕಂಡು ಬಂದಿರುತ್ತದೆ. ಅಂಗಡಿಯಲ್ಲಿ ಸುಮಾರು 30ಕ್ಕೂ ಹೆಚ್ಚು ರಿಪೇರಿಗೆ ಬಂದ ಮೊಬೈಲ್‌ಗಳಿದ್ದು, ಹೊಸ ಮೊಬೈಲ್‌ಗಳು ಯಾವುದೂ ಇಟ್ಟಿರುವುದಿಲ್ಲ. ಶೋಕೇಸಿನಲ್ಲಿ ಇಟ್ಟಿದ್ದ ಸೆಕೆಂಡ್ ಹ್ಯಾಂಡ್ ಮೊಬೈಲ್‌ಗಳನ್ನು ಪರಿಶೀಲಿಸಲಾಗಿ ಅದರಲ್ಲಿ ಒಟ್ಟು 10 ಮೊಬೈಲ್‌ಗಳು ಕಳವಾಗಿರುವುದು ಕಂಡುಬಂದಿರುತ್ತದೆ. ಕಳವಾದ ಮೊಬೈಲ್‌ಗಳ ಹೆಸರು ಈ ಕೆಳಗಿನಂತಿದ್ದು, 1) REDME A2 – ಮೌಲ್ಯ ಅಂದಾಜು 5,000/- , 2) SAMSUNG J2- ಮೌಲ್ಯ ಅಂದಾಜು 1,000/-, 3) VIVO S1- ಮೌಲ್ಯ ಅಂದಾಜು 4,000/-, 4) REALME - ಮೌಲ್ಯ ಅಂದಾಜು 4,000/-, 5) I KALL - ಮೌಲ್ಯ ಅಂದಾಜು  1,000/-, 6) GIONI A1- ಮೌಲ್ಯ ಅಂದಾಜು  3,000/-, 7) I PHONE PRO - ಮೌಲ್ಯ ಅಂದಾಜು 10,000/-, 8) HONOR 9X - ಮೌಲ್ಯ ಅಂದಾಜು 2,000/-, 9) MOTOROLA G7- ಮೌಲ್ಯ ಅಂದಾಜು 2,000/-, 10) SAMSUNG GALAXY J7- ಮೌಲ್ಯ ಅಂದಾಜು 2,000/-, ಇವೆಲ್ಲವುಗಳ ಒಟ್ಟು ಅಂದಾಜು ಮೊತ್ತ 34,000/- ಆಗಿದ್ದು, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 73-2021 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 1

 

ಪೊಲೀಸ್ ಠಾಣೆ : ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ಕಲಂ: 153, 117, 504, 506, 189 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 24-11-2021 10:51 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080