ಅಪಘಾತ ಪ್ರಕರಣ: ೦4
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಜೇಶ್ ಪ್ರಾಯ: 35 ವರ್ಷತಂದೆ: ಜನಾರ್ಧನಾ ಪೂಜಾರಿ ವಾಸ: ಅರ್ಕುಳ ಬೈಲು ಮನೆ, ಅರ್ಕುಳ ಗ್ರಾಮ, ಮಂಗಳೂರು ಎಂಬವರ ದೂರಿನಂತೆ ದಿನಾಂಕ 22-12-2021 ರಂದು ಪಿರ್ಯಾದಿದಾರರು ತನ್ನ ಬಾಬ್ತು ಆಟೋರಿಕ್ಷಾವನ್ನು ಬಿ.ಸಿ.ರೋಡ್ ಕಡೆಯಿಂದ ತನ್ನ ಮನೆ ಅರ್ಕುಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು 18:45 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಬ್ರಹ್ಮರಕೂಟ್ಲು ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-70E-7803 ನೇ ಸ್ಕೂಟರನ್ನು ಅದರ ಸವಾರ ಕೃಷ್ಣಪ್ಪ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಅಪಘಾತವಾಗಿರುತ್ತದೆ. ಅಪಘಾತದಲ್ಲಿ ಸ್ಕೂಟರ್ ಸವಾರ ಕೃಷ್ಣಪ್ಪ ರವರ ತಲೆಗೆ, ಎದೆಗೆ, ಮೈಕೈಗೆ ಗುದ್ದಿದ ಹಾಗೂ ರಕ್ತ ಗಾಯ ಹಾಗೂ ತರಚಿದ ಗಾಯಗೊಂಡವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 145/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಝಬೈರ್ (34)ತಂದೆ: ಅಬ್ದುಲ ಖಾದರ್ ಮೂರುಗುಳಿ ಮನೆ ವಿಟ್ಲ ಪಡ್ನೂರು ಗ್ರಾಮ ಎಂಬವರ ದೂರಿನಂತೆ ದಿನಾಂಕ: 22-12-2021 ರಂದು ಸಮಯ 20:25 ಗಂಟೆಗೆ ಫಿರ್ಯಾದುದಾರರು ಪುತ್ತೂರಿನಲ್ಲಿ ಕೆಲಸ ಮುಗಿಸಿ ತನ್ನ ಬಾಬ್ತು ಕೆಎ-21 ಇಸಿ-0238 ನೇ ದ್ವಿಚಕ್ರ ವಾಹನದಲ್ಲಿ ಚಲಾಯಿಸಿಕೊಂಡು ವಿಟ್ಲ ಕಸಬ ಗ್ರಾಮದ ಬದನಾಜೆ ಎಂಬಲ್ಲಿ ತಲುಪಿದಾಗ ಎದುರು ಕಡೆಯಿಂದ ಅಂದರೆ ವಿಟ್ಲದಿಂದ ಕುಂಡಡ್ಕ ಕಡೆಗೆ ಟಿವಿಎಸ್ ಕಂಪೆನಿಯ ಕೆಎ 1—ಹೆಚ್ ಹೆಚ್ 7255 ನೇ ಬೈಕನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಯಾವುದೇ ಸನ್ನೆಯನ್ನು ನೀಡದೇ ಬೈಕನ್ನು ಚಲಾಯಿಸಿದ ಪರಿಣಾಮ ಫಿರ್ಯಾದುದಾರರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನವು ಡಾಮಾರು ರಸ್ತೆಗೆ ಮಗುಚಿ ಬಿದ್ದು ಫಿರ್ಯಾದುದಾರರ ಬಲಕೈಗೆ ಗುದ್ದಿದ ಗಾಯವಾದವರನ್ನು ಕೆಎ 19 ಹೆಚ್ ಹೆಚ್ 7255 ನೇ ವಾಹನ ಸವಾರ ಹೇಮಂತನು ಉಪಚರಿಸಿ ವಾಹನವೊಂದರಲ್ಲಿ ವಿಟ್ಲ ಬೆನಕ ಆಸ್ಪತ್ರೆಗೆ ಕರೆದುಕೊಂಡು ಪ್ರಥಮ ಚಿಕಿತ್ಸೆ ನೀಡಿ ಅಲ್ಲಿನ ವೈಧ್ಯರ ಸಲಹೆಯಂತೆ ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರು ಪರಿಶೀಲಿಸಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅಕ್ರ -168/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಿವಣ್ಣ ಗೌಡ, ಪ್ರಾಯ 61 ವರ್ಷ, ತಂದೆ: ದಿ|| ಪಕ್ರು ಗೌಡ, ವಾಸ: ಪರಪ್ಪಾದೆ ಮನೆ, ಮೊಗ್ರು ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 23-12-2021 ರಂದು 10-30 ಗಂಟೆಗೆ ಆರೋಪಿ ಕಾರು ಚಾಲಕ ಡಾ|| ಅಂತೋನಿ ಟಿ.ಪಿ ಎಂಬವರು KA-70-M-1129 ನೇ ನೋಂದಣಿ ನಂಬ್ರದ ಕಾರನ್ನು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕುಪ್ಪೆಟ್ಟಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಫಿರ್ಯಾದುದಾರರಾದ ಶಿವಣ್ಣ ಗೌಡ ರವರು, ಅವರ ಪತ್ನಿ ಜಾನಕಿ ಎಂಬವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಮೊಗ್ರು ಕಡೆಯಿಂದ ಪುತ್ತೂರು ಕೆದಿಲ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ-21-ಎಲ್-7481 ನೇ ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು ಮತ್ತು ಸಹಸವಾರೆ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿನ ತೊಡೆಗೆ, ಹಣೆಗೆ ಗುದ್ದಿದ ಗಾಯ ಮತ್ತು ಸಹಸವಾರೆಗೆ ಸೊಂಟಕ್ಕೆ, ಬೆನ್ನಿಗೆ ಗುದ್ದಿದ ಗಾಯ, ಬಲಕಾಲಿನ ಕೋಲು ಕಾಲಿಗೆ, ಬಲಕೈಯ ಮೊಣಕೈಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳಿಬ್ಬರೂ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 155/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹರ್ಷಿತ್ ಪ್ರಾಯ: 24 ವರ್ಷ ತಂದೆ: ಕುಶಾಳಪ್ಪ ಗೌಡ ವಾಸ: ಗೆಜ್ಜೆ ಮನೆ ಕುಕ್ಕುಜಡ್ಕ ಮನೆ ಸುಳ್ಯ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ದಿನಾಂಕ: 22.12.2021ರಂದು ಕುಂಬ್ರದಲ್ಲಿರುವ ತೋಟದ ಕೆಲಸಕ್ಕೆ ತನ್ನ ಬಾಬ್ತು ಕೆಎ-12-ಎಂ-6338 ನೇ ಜೀಪಿನಲ್ಲಿ ಕೆಲಸಗಾರರಾದ ಶಶಿಧರ್ ಹಾಗೂ ವಿಜಯ್‌ರವರನ್ನು ಬೆಳಿಗ್ಗೆ ಕೆಲಸಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋಗಿ ಸಂಜೆ ವಾಪಾಸು ಕುಂಬ್ರ ಕಡೆಯಿಂದ ಮಾಡಾವು ಕಡೆಗೆ ಬರುತ್ತಾ ಸಮಯ ಸುಮಾರು 6.30 ಗಂಟೆಗೆ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಕಟ್ಟತ್ತಾರು ಎಂಬಲ್ಲಿಗೆ ತಲುಪಿದಾಗ, ಫಿರ್ಯಾದಿದಾರರ ಎದುರು ದಿಕ್ಕಿನಿಂದ ಅಂದರೆ ಮಾಡಾವು ಕಡೆಯಿಂದ ಕುಂಬ್ರ ಕಡೆಗೆ ಪಿಕ್‌ಅಪ್ ವಾಹನವೊಂದನ್ನು ಅದರ ಚಾಲಕನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿಕ್‌ಅಪ್‌ನ ಮುಂದಿನಿಂದ ಹೋಗುತ್ತಿದ್ದ ಮೋಟಾರು ಸೈಕಲನ್ನು ಓವರ್‌ಟೇಕ್ ಮಾಡುವ ರಭಸದಲ್ಲಿ ಮೋಟಾರು ಸೈಕಲಿನ ಬಲಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಹಾಗೂ ಮೋಟಾರು ಸೈಕಲ್ ರಸ್ತೆಗೆ ಮಗುಚಿ ಬಿದ್ದಿತು. ಅಷ್ಟರಲ್ಲಿ ಪಿಕ್‌ಅಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ, ಫಿರ್ಯಾದಿದಾರರು ಚಲಾಯಿಸುತ್ತಿದ್ದ ಜೀಪಿನ ಬಲಭಾಗದ ಹಿಂಭಾಗದ ಟಯರ್‌ಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಫಿರ್ಯಾದಿದಾರರು ಚಲಾಯಿಸುತ್ತಿದ್ದ ಜೀಪು ಎಡಭಾಗಕ್ಕೆ ತಿರುಗಿ ನಿಂತಿತು. ಈ ಅಪಘಾತದಿಂದ ಫಿರ್ಯಾದಿದಾರರಿಗೆ ಯಾವುದೇ ಗಾಯವಾಗದೇ ಇದ್ದು, ಅವರು ತನ್ನ ಬಾಬ್ತು ಜೀಪಿನಿಂದ ಇಳಿದು ನೋಡಲಾಗಿ ಜೀಪಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರುವುದು ಕಂಡು ಬಂದಿರುವುದಿಲ್ಲ. ಬಳಿಕ ಎದುರು ಕಡೆಯಿಂದ ಬರುತ್ತಿದ್ದ ವೇಳೆ ಅಪಘಾತಕ್ಕೀಡಾದ ಬೈಕ್ ಸವಾರನ ಕಡೆಗೆ ಹೋಗಿ ನೋಡಲಾಗಿ ಆತನ ಬಲಕೈ ತಟ್ಟಿಗೆ ಮತ್ತು ಬಲಮೊಣಕಾಲಿಗೆ ರಕ್ತಗಾಯವಾಗಿದ್ದು, ಆತನ ಹೆಸರು ಕೇಳಲಾಗಿ ಮನೋಜ್ ಎಂಬುದಾಗಿ ತಿಳಿದಿದ್ದು, ಆತನು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ನಂ: ಕೆಎಲ್-14-ಇ-7399 ಆಗಿದ್ದು, ಅಪಘಾತ ಉಂಟು ಮಾಡಿದ ಪಿಕ್‌ಅಪ್ ವಾಹನ ಕೆಎ-21-ಎ-5618 ಆಗಿದ್ದು, ಅದರ ಚಾಲಕನ ಹೆಸರು ಮಹಮ್ಮದ್ ಎಂಬುದಾಗಿರುತ್ತದೆ. ಗಾಯಾಳು ಮನೋಜ್‌ರವರನ್ನು ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಕ್ರ 110/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ವೇಣೂರು ಪೊಲೀಸ್ ಠಾಣೆ : ದಿನಾಂಕ 23.12.2021 ರಂದು ಮದ್ಯಾಹ್ನ 15:30 ಗಂಟೆಗೆ ಲೋಲಾಕ್ಷ ಕೆ ಪೊಲೀಸ್ ಉಪ ನಿರೀಕ್ಷಕರು, ವೇಣೂರು ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ಹೊಸಂಗಡಿ ಗ್ರಾಮದ ಕೊಡೆಂಗೇರಿ ಎಂಬಲ್ಲಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಕಳವು ಮಾಡಿ ದೋಣಿಯಲ್ಲಿ ತುಂಬಿಸಿ ತಂದು ನದಿ ದಂಡೆಯಲ್ಲಿ ಲಾರಿಗೆ ಮರಳನ್ನು ತುಂಬಿಸುತ್ತಿದ್ದಾಗ ಧಾಳಿ ನಡೆಸಿ ಮರಳನ್ನು ಸಾಗಾಟಮಾಡಲು ಉಪಯೋಗಿಸಿದ ಅರ್ದ ಭಾಗದಷ್ಟು ಮರಳು ತುಂಬಿದ ಕೆಎ.70.4143 ನೇ ಟಿಪ್ಪರ್ ಲಾರಿ ಮತ್ತು 1-ಕಬ್ಬಿಣದ ದೋಣಿ, 4-ಪ್ಲಾಸ್ಟಿಕ್ ಬುಟ್ಟಿ, 2-ಕಬ್ಬಿಣದ ಹಾರೆ, 4-ಕಬ್ಬಿಣದ ಬಕೇಟ್ ಇವುಗಳನ್ನು ಸ್ವಾದೀನಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ರೂ.8,53,300/- ಆಗಿದ್ದು, ದಾಳಿ ಸಮಯ ಲಾರಿಯ ಚಾಲಕ ಮತ್ತು ಲಾರಿಗೆ ತುಂಬಿಸುತ್ತಿದ್ದ ಅರವಿಂದ ಮತ್ತು ದೋಣಿಯಲ್ಲಿ ಮರಳನ್ನು ತುಂಬಿಸುತ್ತಿದ್ದ ಹರೀಶ್ಚಂದ್ರ ಹೆಗ್ಡೆ ಇವರುಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 80/2021 ಕಲಂ: 379 ಐ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಘವ ಹೆಗ್ಡೆ ಪ್ರಾಯ 68 ವರ್ಷ ತಮದೆ ಸುಂದರ ಹೆಗಡೆ ಕಡೇಶ್ವಾಲ್ಯ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 19.12.2021 ರಂದು ಕೆಲಸದ ನಿಮಿತ್ತ ಮಂಗಳೂರು ಗೆ ಹೋಗಿ ಸಂಜೆ ಸುಮಾರು 5.00 ಗಂಟೆಗೆ ಪಿರ್ಯಾದುದಾರರ ಮನೆಗೆ ಹೋಗುವ ಗುಡ್ಡೆಯ ಮಧ್ಯದಲ್ಲಿರುವ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಪಿರ್ಯಾದುದಾರರ ಮನೆಯ ನೆರೆಯ ನಿವಾಸಿ ಹರೀಶ್ ಶೆಟ್ಟಿ ಎಂಬುವವರು ಏಕಾಏಕಿ ಪಿರ್ಯಾದುದಾರರ ಎದುರಿಗೆ ಬಂದು ಪಿರ್ಯಾದುದಾರರನ್ನು ತಡೆದು ಅವ್ಯಾಚ ಶಬ್ಧಗಳಿಂದ ಬೈದು ಅಲ್ಲಿದ್ದ ಕಲ್ಲನ್ನು ಹೆಕ್ಕಿ ಪಿರ್ಯಾದುದಾರರ ಮೂಗು ಮತ್ತು ಹಣೆಗೆ ಜಜ್ಜಿದ್ದು ಈ ಸಮಯ ಪಿರ್ಯಾದುದಾರರು ನೋವಿನಿಂದ ಬೊಬ್ಬೆ ಹಾಕಿದ್ದು ಅದೇ ವೇಳೆಗೆ ಪಿರ್ಯಾದುದಾರರ ಕುತ್ತಿಗೆಗೆ ದೊಣ್ಣೆಯಿಂದ ಹೊಡೆದಿದ್ದು ಆಗ ಪಿರ್ಯಾದುದಾರರ ಹಿಂದೆ ತಿರುಗಿ ನೋಡಿದಾಗ ಜನರಿದ್ದು ಅವರಲ್ಲಿ ಜನಾರ್ಧನಾ ಬಟ್ಟ ಕೈಯ್ಯಲ್ಲಿ ದೊಣ್ಣೆಯನ್ನು ಹಿಡಿದಿದ್ದು ಸದ್ರಿ ದೊಣ್ಣೆಯಿಂದಲೇ ಪಿರ್ಯಾದುದಾರರ ಕುತ್ತಿಗೆ ಹೊಡೆದಿದ್ದು ಜೊತೆಯಲ್ಲಿದ್ದ ಚಂದ್ರಶೇಖರ್ ಹೆಗ್ಡೆ ಮತ್ತು ಸುಭಾಸ್ ಹೆಗ್ಡೆ ಎಂಬುವವರು ಪಿರ್ಯಾದುದಾರರನ್ನು ದೂಡಿ ಹಾಕಿದ್ದು ಅ ಸಮಯ ಪಿರ್ಯಾದುದಾರರು ನೆಲಕ್ಕೆ ಬಿದ್ದಿದ್ದು ಆರೋಪಿತೆರಲ್ಲರು ಸೇರಿಕೊಂಡು ಜೀವಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ಪಿರ್ಯಾದುದಾರರು ಮನೆಗೆ ಹೋಗಿ ಪಿರ್ಯಾದುದಾರರ ತಂಗಿಗೆ ತಿಳಿಸಿ ನೋವಿನ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯ ಕರೆದುಕೊಂಡು ಬಂದಲ್ಲಿ ವೈದ್ಯರ ಸಲಹೆಯಂತೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 160/2021 ಕಲಂ 341,323,324, 504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ವಿಟ್ಲ ಪೊಲೀಸ್ ಠಾಣೆ : ದಿನಾಂಕ 23.12.2021 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ 167/2021 ಕಲಂ 448,ಐಪಿಸಿ ಮತ್ತುಕಲಂ , 8,12 ಪೊಕ್ಸೋ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ , ಪ್ರಾಯ: 50 ವರ್ಷ, ತಂದೆ ನಾಗಲಿಂಗಂ, ನೂಚಿಲ ಮನೆ, ಸುಬ್ರಹ್ಮಣ್ಯ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ನೂಚಿಲ ಮನೆ ಎಂಬಲ್ಲಿ ವಾಸವಾಗಿದ್ದು, ತಮ್ಮ ಮನೆಯ ಮಹಡಿಯ ಮೇಲಿನಿ ಒಂದು ರೂಮ್ ನಲ್ಲಿ ಅವರ ಪರಿಚಯದ ಪುತ್ತೂರಿನಲ್ಲಿ ಕೆಲಸ ಮಾಡುತ್ತಿರುವ ಮಹಾಲಿಂಗಂ ರವರ ಚಿಕ್ಕಪ್ಪನ ಮಗ ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ಕಲ್ಲಿಕೋಟೆ ಮನೆ ನಿವಾಸಿ ಪೆರಿಯಸ್ವಾಮಿ ಎಂಬವರ ಮಗ ಕುಮಾರ, ಪ್ರಾಯ 46 ವರ್ಷ ಎಂಬವರು ವಾಸವಾಗಿದ್ದು, ಆತನು ಪಿರ್ಯಾದಿದಾರರ ಜೊತೆಗೆ ಸುಬ್ರಹ್ಮಣ್ಯದ ಪಂಚಾಯತ್ ಕಟ್ಟಡದಲ್ಲಿ ಸೆಲೂನ್ ಕೆಲಸ ಮಾಡಿಕೊಂಡಿದ್ದು, ದಿನಾಂಕ:22-12-2021 ರಂದು ರಾತ್ರಿ 10-00 ಗಂಟೆಗೆ ರಾತ್ರಿ ಊಟ ಮಾಡಿ ಮಲಗಿದ್ದು, ಬೆಳಿಗ್ಗೆ 06-00 ಗಂಟೆಗೆ ಏಳದೇ ಇದ್ದುದರಿಂದ ಪಿರ್ಯಾದಿದಾರರು ಆತನ ಮೊಬೈಲ್ ಗೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸದೇ ಇದ್ದುದರಿಂದ ಪಿರ್ಯಾದಿದಾರರು ಭಯಗೊಂಡು ಅಲ್ಲಿನ ಸ್ಥಳೀಯರು ಸೇರಿ ರೂಂ ನ ಬಾಗಿಲನ್ನು ತಳ್ಳಿ ಒಳ ಹೋದಾಗ ಆತನು ಮಲಗಿದಲ್ಲಿಯೇ ಮೃತ ಪಟ್ಟಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್ ನಂಬ್ರ : 19-2021 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.