ಅಪಘಾತ ಪ್ರಕರಣ: ೦4
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿಕ್ರಮ್ ರಾಜ್(30) ತಂದೆ: ಸುಂದರೇಶ್ ಕುಮಾರ್ ವಾಸ:ಚಿಕ್ಕಜೊಗೇಹಳ್ಳಿ ಗ್ರಾಮ ಕೂಡ್ಲಗಿ ತಾಲೂಕು, ವಿಜಯನಗರ ಜಿಲ್ಲೆ ರವರು ದಿನಾಂಕ: 23-12-2022 ರಂದು ಕೆಎ 51 AF 6779 ನೇ ಮಿನಿ ಬಸ್ಸಿನಲ್ಲಿ ಇತರರ ಜೊತೆ ಸಹಪ್ರಯಾಣಿಕರಾಗಿ ಕುಳಿತುಕೊಂಡು ಬಸ್ಸನ್ನು ಅದರ ಚಾಲಕ ಕೊಟ್ಟಿಗೆಹಾರ ಕಡೆಯಿಂದ ಉಜಿರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸುಮಾರು 6:00 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಉಳ್ಳಾಲ್ತಿಕಟ್ಟೆ ಬಳಿ ತಲುಪುತ್ತಿದ್ದಂತೆ ಮಿನಿ ಬಸ್ಸನ್ನು ಅದರ ಚಾಲಕ ರವಿಚಂದ್ರ ಯಾನೆ ಪವನ್ ಎಂಬುವರು ಒಮ್ಮೆಲೇ ದುಡುಕುತನದಿಂದ ಚಲಾಯಿಸಿ ರಸ್ತೆಯ ಬದಿಯಲ್ಲಿದ್ದ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಮೇಲ್ತುಟಿಗೆ ರಕ್ತಗಾಯ ಹಾಗೂ ಅಜ್ಜಪ್ಪ ಎಂಬವರಿಗೆ ಮೊಣಗಂಟಿಗೆ ಗುದ್ದಿದ ಹಾಗೂ ಬಲಕೈಗೆ ತರಚಿದ ಗಾಯ ಹಾಗೂ ಲೋಕಪ್ಪ ಎಂಬವರಿಗೆ ಎಡಕೈ ಮತ್ತು ಎಡಕಾಲಿಗೆ ಮೂಳೆ ಮುರಿತದ ಗಾಯ,ತನ್ಮಯ್ ರವರಿಗೆತಲೆಯ ಹಿಂಬದಿ ರಕ್ತಗಾಯ,ಮಂಜುನಾಥ ಎನ್ ಬಿ ರವರಿಗೆ ಬೆನ್ನಿಗೆ ಗುದ್ದಿದ ತರಹದ ತರಚಿದ ಗಾಯ,ಡಿ ಬಸವರಾಜ್ ರವರಿಗೆ ಎಡಕಾಲಿನ ಮೊಣಗಂಟಿಗೆತರಚಿದ ಗಾಯ,ಎನ್ ಕೆ ಬಸವರಾಜ್ ರವರಿಗೆ ಹಣೆಯ ಮುಂಭಾಗಕ್ಕೆ ರಕ್ತಗಾಯ,ಸೋಮಶೇಖರ್ ಎಂಬವರಿಗೆ ಬಲಕೈಗೆ ಗುದ್ದಿದ ಗಾಯ,ಮಂಜುನಾಥ ರವರಿಗೆ ಎದೆಗೆ ಬಲಕೈಗೆ ಗುದ್ದಿದ ಗಾಯ,ರಾಜು ನಾಯ್ಕ ರವರಿಗೆ ಬಲಕೈ ಮೂಳೆ ಮುರಿತದ ಗಾಯ,ಹೆಚ್ ಎಮ್ ಕಾರ್ತಿಕ್ ರವರಿಗೆ ಎಡಕಾಲಿಗೆ ಉಳುಕಿದ ಗಾಯ,ಕೆ ಎಸ್ ಕರೇಗೌಡ ರವರಿಗೆ ಬಲ ಮತ್ತು ಎಡಕೈ ಮುರಿತದ ಗಾಯ,ರಘುನಾಯ್ಕ ರವರಿಗೆ ಕುತ್ತಿಗೆ ಹಿಂಭಾಗಕ್ಕೆ ಗುದ್ದಿದ ಗಾಯ,ಅಜ್ಜಣ್ಣ ಹೋಬಯ್ಯ ರವರಿಗೆ ಕೈಗೆ ತರಚಿದ ಗಾಯ,ನಾಗಭೂಷಣ ರವರಿಗೆ ಹಣೆಗೆ ತರಚಿದ ಗಾಯ,ಬೋರೆ ಸ್ವಾಮಿ ರವರಿಗೆ ಎದೆಗೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯಲ್ಲಿ ದಾಖಲಾಗಿರುತ್ತಾರೆ ಹಾಗೂ ಪಾಂಡುರಂಗ ರವರಿಗೆ ಸೊಂಟಕ್ಕೆ ಗುದ್ದಿದ ಗಾಯ ,ಬಲಕಾಲಿನ ಮಣಿಗಂಟಿನ ಬಳಿ ತರಚಿದ ಗಾಯ,ಶಶಿಕುಮಾರ್ ರವರಿಗೆ ಮುಖಕ್ಕೆ ,ಮೂಗಿನ ಭಾಗಕ್ಕೆ,ಬಲಕಾಲಿನ ಮೊಣಗಂಟಿಗೆ ರಕ್ತಗಾಯ ವಾಗಿದ್ದು ಚಿಕಿತ್ಸೆ ಬಗ್ಗೆ SDM ಆಸ್ಪತ್ರೆ ಉಜಿರೆಯಲ್ಲಿ ದಾಖಲಾಗಿರುತ್ತಾರೆ ಹಾಗೂ ಜಲಂದರ್ ನಾಯ್ಕ ರವರಿಗೆ ತಲೆಯ ಬಲಬದಿಗೆ ರಕ್ತಗಾಯ,ಬಲಕೈ ಮೂಳೆ ಮುರಿತದ ಗಾಯ,ರಾಹುಲ್ ರವರಿಗೆ ಸೊಂಟಕ್ಕೆ ಹಾಗೂ ತಲೆಗೆ ರಕ್ತಗಾಯ, ಗೌತಮ್, ವೀರೇಶ, ಸುನೀಲ ನಾಯ್ಕ ರವರಿಗೂ ಗಾಯವಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಕಡೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 166/2022 ಕಲಂ; 279 ,337, 338, ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೌಶಿಕ್, ಪ್ರಾಯ 17 ವರ್ಷ,ತಂದೆ:ಕಿಟ್ಟು,ವಾಸ:ನೆಲ್ಲಿಂಗೇರಿ ಮನೆ,ಅಂಡಿಂಜೆ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 23.12.2022 ರಂದು ಸಂಜೆ ಸುಮಾರು 5.00 ಗಂಟೆಗೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ವೇಣೂರು ಮೇಲಿನ ಪೇಟೆ ನಮನ ಪೆಟ್ರೋಲ್ ಪಂಪ್ ಬಳಿ ವೇಣೂರು-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ಚೇತನ್ ರವರು ತನ್ನ ಬಾಬ್ತು ಹೊಸ ಪಲ್ಸರ್ ಬೈಕ್ ನಲ್ಲಿ ಪಿರ್ಯಾದಿ ಕೌಶಿಕ್ ಮತ್ತು ಕಾರ್ತಿಕ್ ರವರುಗಳನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ವೇಣೂರು ಕಡೆಯಿಂದ ಗುರುವಾಯನಕೆರೆ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುವ ಸಮಯ ಎದುರಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಒಂದು ಕೆ.ಎಸ್.ಅರ್.ಟಿ.ಸಿ. ಬಸ್ಸು ಬರುವುದನ್ನು ಕಂಡು ಒಮ್ಮೇಲೆ ರಸ್ತೆಯ ಎಡಬದಿಗೆ ಬೈಕ್ ಚಲಾಯಿಸಿ ತನ್ನ ಎದುರುನಿಂದ ಹೋಗುತ್ತಿದ್ದ ಬೈಕ್ ನಂಬ್ರ ಕೆಎ.03.ಇ.ಡಬ್ಲ್ಯು.4001 ನೇ ಯದರ ಹಿಂಬದಿಗೆ ಡಿಕ್ಕಿ ಹೊಡೆದು ಬೈಕ್ ನೊಂದಿಗೆ ರಟ್ಟಿ ರಸ್ತೆಗೆ ಬಿದ್ದ ಪರಿಣಾಮ ಬೈಕ್ ನಲ್ಲಿ ಸಹಸವಾರರಾಗಿದ್ದ ಪಿರ್ಯಾದಿ ಕೌಶಿಕ್ ಮತ್ತು ಕಾರ್ತಿಕ್ ರವರ ಕೈಕಾಲುಗಳಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು, ಬೈಕ್ ಸವಾರ ಅಪಾದಿತ ಚೇತನ್ ರವರ ಮುಂದಲೆಗೆ, ಎಡಕಾಲಿಗೆ ಗಾಯಗಳಾಗಿ ಬಾಯಿ ಹಾಗೂ ಕಿವಿಯಲ್ಲಿ ರಕ್ತ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಗಳೂರು ಫಾದರ್ ಮುಲ್ಲರ್ಸ್ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ: 84/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸ್ವರೂಪ್ ಕೆ, ಪ್ರಾಯ 36 ವರ್ಷ, ತಂದೆ: ಕೆ ಗೋಪಾಲಕೃಷ್ಣ ರಾವ್, ವಾಸ: ಅನ್ನಪೂರ್ಣ, ಪಂಜಿಗುಡ್ಡೆ ಮನೆ, ಪಡ್ನೂರು ಅಂಚೆ & ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 22-12-2022 ರಂದು 16-:15 ಗಂಟೆಗೆ ಆರೋಪಿ ಕಾರು ಚಾಲಕ ಸದಾನಂದ ಮೇಲಾಂಟ ಎಂಬವರು ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ನೆಲ್ಲಿಕಟ್ಟೆ ಸಾಯಿ ಇಂಟರ್ನ್ಯಾಷನಲ್ ಲಾಡ್ಜ್ ಬಳಿ, ಸುದ್ದಿ ಕಛೇರಿ ಕಡೆಯಿಂದ ಪುತ್ತೂರು ಸಿಟಿ ಆಸ್ಪತ್ರೆ ಕಡೆಗೆ ಹೋಗುವ ನೆಲ್ಲಿಕಟ್ಟೆ ಸಾರ್ವಜನಿಕ ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದ KA-19-MJ-6886 ನೇ ನೋಂದಣಿ ನಂಬ್ರದ ಕಾರಿನ ಚಾಲಕನ ಬದಿಯ ಬಾಗಿಲನ್ನು ರಸ್ತೆಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ತೆರೆದಾಗ, ಪಿರ್ಯಾದುದಾರರ ತಂದೆ ಗೋಪಾಲಕೃಷ್ಣ ರಾವ್ ಎಂಬವರು ಸುದ್ದಿ ಕಛೇರಿ ಕಡೆಯಿಂದ ಪುತ್ತೂರು ಸಿಟಿ ಆಸ್ಪತ್ರೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-70-E-6066 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಕಾರಿನ ಬಾಗಿಲು ಅಪಘಾತವಾಗಿ, ಗೋಪಾಲಕೃಷ್ಣ ರಾವ್ ರವರು ರಸ್ತೆಗೆ ಬಿದ್ದು, ಅವರ ಎಡ ಉಂಗುರ ಬೆರಳಿಗೆ ಹಾಗೂ ತಲೆಯ ಹಿಂಭಾಗ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆತಂದು, ಪ್ರಥಮ ಚಿಕಿತ್ಸೆ ಬಳಿಕ, ಹೆಚ್ಚಿನ ಚಿಕಿತ್ಸೆ ಬಗ್ಗೆ ಪಿರ್ಯಾದುದಾರರು ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 194/2022 ಕಲಂ: 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ರಿಯಾಝ್ ಪ್ರಾಯ:36 ವರ್ಷ ತಂದೆ:ದಿ|| ಆದಂ ಸಾಹೇಬ್ ವಾಸ: ಅಡ್ಡಗದ್ದೆ ಮನೆ,ಕಾಲೇಜು ರಸ್ತೆ ಕಡಬ ಗ್ರಾಮ ಕಡಬ ತಾಲೂಕು ರವರ ಚಿಕ್ಕಪ್ಪನಾದ ಬುಡಾನ್ ಸಾಹೇಬ್ ರವರು ದಿನಾಂಕ:22.12.2022 ರಂದು ಸಂಜೆ ಆದಂ ಬ್ಯಾರಿ ಎಂಬವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿ ನಂತರ ಕೆಲಸ ಮುಗಿಸಿ ವಾಪಾಸ್ಸು ಮನೆಗೆ ನಡೆದುಕೊಂಡು ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಕಡಬ ಗ್ರಾಮದ ಅನುಗ್ರಹ ಹಾಲ್ ಬಳಿ ಕಚ್ಚಾ ಮಣ್ಣು ರಸ್ತೆಯಲ್ಲಿ ಹೋಗುವರೇ ಸಮಯ ಸಂಜೆ 05.30 ಗಂಟೆಗೆ ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಡಾಮಾರು ರಸ್ತೆಯಲ್ಲಿ ಆರೋಪಿತನು MH 05 AX 3898ನೇ ಕಾರು ವಾಹನವನ್ನು ತೀರಾ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಕ್ಕೆ ಬಂದು ಕಚ್ಚಾ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತಿದ್ದ ಪಿರ್ಯಾದುದಾರರ ಚಿಕ್ಕಪ್ಪನಾದ ಬುಡಾನ್ ಸಾಹೇಬ್ ಎಂಬವರಿಗೆ ಅಪಘಾತವನ್ನುಂಟು ಮಾಡಿದ ಪರಿಣಾಮ ಬುಡಾನ್ ಸಾಹೇಬ್ ಎಂಬವರು ಕಚ್ಚಾ ಮಣ್ಣು ರಸ್ತೆಗೆ ಎಸೆಯಲ್ಪಟ್ಟು ಹಣೆಗೆ ರಕ್ತಗಾಯ ಮತ್ತು ಎಡಕೈ ಭುಜಕ್ಕೆ ಗುದ್ದಿದ ಗಾಯ ಹಾಗೂ ಎಡಕಾಲಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 105/2022 ಕಲಂ: ಕಲಂ:279,337, ಐಪಿಸಿ ಜೊತೆಗೆ ಕಲಂ:134 (A&B) IMV Act-1988 ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦1
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಧಾಕೃಷ್ಣ ಎ ಪ್ರಾಯ 50 ವರ್ಷ ತಂದೆ: ಗುಡ್ಡಪ್ಪ ಗೌಡ, ವಾಸ: ಅಡ್ಕಬಳೆ ಮನೆ, ಅರಂತೋಡು ಗ್ರಾಮ ಸುಳ್ಯ ತಾಲೂಕು ರವರು ದಿನಾಂಕ 22.12.2022 ರಂದು ಅಣ್ಣ ಗೋಪಾಲಕೃಷ್ಣ ರವರೊಂದಿಗೆ ವಿಟ್ಲ ಕೇಪು ದೇವಸ್ಥಾನಕ್ಕೆ ಹೋಗಿ ಜೀಪಿನಲ್ಲಿ ಬಂದು ನಂತರ ಅರಂತೋಡಿನಲ್ಲಿ ನಿಲ್ಲಿಸಿದ್ದ ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-21-ಇ-3725 ನೇದರಲ್ಲಿ ಅಣ್ಣ ಗೋಪಾಲಕೃಷ್ಣ ರವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಮನೆಯಾದ ಅಡ್ಕಬಳೆ ಕಡೆಗೆ ಹೋಗುತ್ತಿರುವ ಸಮಯ ರಾತ್ರಿ ಸುಮಾರು 8.45 ಗಂಟೆಗೆ ಸುಳ್ಯ ತಾಲೂಕು ಅರಂತೋಡು ಗ್ರಾಮದ ಅಂಗಡಿ ಮಜಲು ಸೇತುವೆ ದಾಟಿ ಹೋಗುತ್ತಿದ್ದಂತೆ ಪಿರ್ಯಾದಿದಾರರ ಅಣ್ಣ ಲೇಖನಾಥ್‌ರ ಮಗ ಅಶ್ವಥ್ ಮತ್ತು ಇನ್ನೊಬ್ಬ ಅಣ್ಣ ಭಾಸ್ಕರನ ಮಗ ಶಿವಪ್ರಸಾದ್ ಎಂಬವರು ಪಿರ್ಯಾದಿದಾರರ ಮೋಟಾರ್ ಸೈಕಲ್ ಸವಾರಿ ಮಾಡದಂತೆ ಅಡ್ಡಗಟ್ಟಿದ್ದರಿಂದ ಪಿರ್ಯಾದಿದಾರರು ಮತ್ತು ಗೋಪಾಲಕೃಷ್ಣ ರವರು ಹತೋಟಿ ತಪ್ಪಿ ಮೋಟಾರ್ ಸೈಕಲ್ ಸಮೇತ ಮಣ್ಣು ರಸ್ತೆಗೆ ಬಿದ್ದಿದ್ದು, ಆ ಸಮಯ ಅಶ್ವಥ್ ಮತ್ತು ಶಿವಪ್ರಸಾದ್ ಅಲ್ಲೆ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರಿನಿಂದ ಒಂದೊಂದು ದೊಣ್ಣೆಯನ್ನು ತೆಗೆದುಕೊಂಡು ಬಂದು ಆಶ್ವಥನು ಪಿರ್ಯಾದಿದಾರರ ತಲೆಗೆ, ಎಡ ಕೆನ್ನಗೆ ಮತ್ತು ಎಡ ಕಿವಿಗೆ ಹೊಡೆದಿದ್ದು, ಶಿವಪ್ರಸಾದನು ಪಿರ್ಯಾದಿದಾರರ ಬೆನ್ನಿಗೆ ಮತ್ತು ತಲೆಗೆ ದೊಣೆಯಿಂದ ಹೊಡೆದಿದ್ದು ಇದನ್ನು ನೋಡಿದ ಗೋಪಾಲಕೃಷ್ಣ ಅವರು ಹೊಡೆಯದಂತೆ ತಡೆದಿರುತ್ತಾರೆ. ಆ ಸಮಯ ಆರೋಪಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ “ಇವಾಗ ನೀನು ಬಚಾವಾಗಿದ್ದೀಯ ಮುಂದಕ್ಕೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿ ದೊಣ್ಣೆಯನ್ನು ಅಲ್ಲಿಯೇ ಬಿಸಾಡಿ ಅವರು ಬಂದಿದ್ದ ಮಾರುತಿ ಓಮ್ನಿ ಕಾರು ನಂಬ್ರ ಕೆಎ-21-ಎನ್-7925 ನೇದರಲ್ಲಿ ಹೋಗಿದ್ದು, ಆರೋಪಿಗಳು ಹಲ್ಲೆ ನಡೆಸಿದ್ದರ ಪರಿಣಾಮ ಪಿರ್ಯಾದಿದಾರರ ಎಡ ಕೆನ್ನೆಗೆ, ಎಡಕಿವಿಗೆ ತಲೆಗೆ ಹಾಗೂ ಬೆನ್ನಿಗೆ ಗಾಯವಾಗಿದ್ದಲ್ಲದೇ ದೇಹದ ಇತರ ಕಡೆಗಳಲ್ಲಿ ನೋವುಂಟಾಗಿದ್ದು, ಪಿರ್ಯಾದಿದಾರರು ಅಣ್ಣ ಕಮಲಾಕ್ಷನ ಮಗ ಕಿಶೋರನಿಗೆ ದೂರವಾಣಿ ಮಾಡಿ ವಿಚಾರ ತಿಳಿಸಿದಂತೆ ಅತನು ಬಂದು ಪಿರ್ಯಾದಿದಾರರನ್ನು ಸುಳ್ಯ ಚಿಕಿತ್ಸೆ ಬಗ್ಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿದೆ. ಈ ಕೃತ್ಯಕ್ಕೆ ಪಿರ್ಯಾದಿದಾರರಿಗೂ ಅಣ್ಣ ಲೇಖನಾಥನ ಮನೆಯವರಿಗೂ ಇರುವ ಹಳೆಯ ವೈಷಮ್ಯ ಕಾರಣವಾಗಿರುತ್ತದೆ ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 151/2022 ಕಲಂ 341, 324, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ, ಸೀತಾರಾಮ (35) ತಂದೆ: ಕೊರಗಪ್ಪ ಗೌಡ ವಾಸ: ಕುದ್ಪಾಜೆ ಮನೆ, ಜಯನಗರ ,ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ರವರ ತಂದೆ ಕೊರಗಪ್ಪ ಗೌಡ (75) ಎಂಬವರು ದಿನಾಂಕ 23.12.2022 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕುದ್ಪಾಜೆ ,ಜಯನಗರ ಎಂಬಲ್ಲಿ ಮರದಿಂದ ಕರಿಮೆಣಸು ಕೊಯ್ಯೂವ ಸಮಯ ಸುಮಾರು 17:30 ಗಂಟೆಗೆ ಮರದಿಂದ ಬಿದ್ದು ಗಾಯಗೊಂಡವರನ್ನು ಪಿರ್ಯಾದುದಾರರು ಆಟೋ ರಿಕ್ಷಾವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಕೊರಗಪ್ಪ ಗೌಡರನ್ನು ಪರೀಕ್ಷಿಸಿ ಸಮಯ ಸುಮಾರು 18:00 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ UDR No: 56/2022 ಕಲಂ 174 Crpc. ಯಂತೆ ಪ್ರಕರಣ ದಾಖಲಾಗಿರುತ್ತದೆ.