ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜೊಹರಾ, ಪ್ರಾಯ:41 ವರ್ಷ, ಗಂಡ: ಇಸ್ಮಾಯಿಲ್ ವಾಸ :ಸುಜೀರ್ ಸಾನದ ಬಳಿ ಮನೆ ಪುದು ಗ್ರಾಮ, ಫರಂಗಿಪೇಟೆ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 22-02-2022 ರಂದು KA-19-AC-9116 ನೇ ಅಟೊರಿಕ್ಷಾದಲ್ಲಿ ಸೊಸೆ ಶಬನಾ ಬಾನು ರೊಂದಿಗೆ ಸಂಬಂದಿಕರ ಮನೆಯಾದ ಸಜೀಪನಡುವಿಗೆ ಹೋಗಿದ್ದು ಅಲ್ಲಿಂದ ವಾಪಾಸು ಮನೆ ಕಡೆಗೆ ಬೆಂಗಳೂರು –ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಾ ಸಮಯ ಸುಮಾರು 21:30 ಗಂಟೆಗೆ ಬಂಟ್ವಾಳ ತಾಲುಕು ಪಾಣೆಮಂಗಳೂರು ಗ್ರಾಮದ ಪಾಣೆಮಂಗಳೂರು ನೇತ್ರಾವತಿ ಸೇತುವೆಯಲ್ಲಿ  ಹೋಗುತ್ತಿದ್ದಾಗ ಆಟೊರಿಕ್ಷಾವನ್ನು ಅದರ  ಚಾಲಕ ಅನ್ವರ್ ಸಾದತ್ ರವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಹೋಗಿ ಬಿಸಿ ರೋಡ್ ಕಡೆಯಿಂದ ಶರೀಕ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ  ಸ್ಕೂಟರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಆಟೋರಿಕ್ಷಾದ ಹಿಂಬದಿ ಬಲಬದಿಯಲ್ಲಿ ಕುಳಿತಿದ್ದ ಶಬನಾ ಬಾನು ರವರ ಬಲ  ಕೈಗೆ, ಬಲ ಭುಜಕ್ಕೆ. ಎದೆಗೆ, ಬಲ ಸೊಂಟಕ್ಕೆ ಗುದ್ದಿದ ಗಾಯವಾಗಿರುವುದಲ್ಲದೇ ಸ್ಕೂಟರ್ ಸವಾರ ಸ್ಕೂಟರ್  ಸಮೇತ ರಸ್ತೆಗೆ ಬಿದ್ದು ಬಲ ಬದಿ ಮುಖಕ್ಕೆ, ಬಲ ಕಣ್ಣಿನ ಬಳಿ, ಬಲ ಬದಿ ಹಣೆಗೆ ,ಬಲ ಭುಜಕ್ಕೆ, ಬಲ ಕೋಲು ಕೈಗೆ, ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು, ಗಾಯಾಳು ಶಬನಾ ಬಾನು ರವರು  ಮಂಗಳೂರು ಹೈಲ್ಲ್ಯಾಂಡ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿದ್ದು ಶರೀಕ್ ರವರು ಬಿಸಿರೋಡ್ ಸೋಮಯಾಜಿ ಅಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 27/2022 ಕಲಂ 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 24-0-2022 ರಂದು ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ 11/2022 ಕಲಂ: 295 ಐ.ಪಿ,ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 24-02-2022 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 16/2022  ಕಲಂ:448,427,504,324,354,506, ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮುದರ ಪ್ರಾಯ:65 ವರ್ಷ ತಂದೆ; ದಿ/ ಮಂಚ ಮುಗೇರ ವಾಸ: ಪಾದೆ ಮನೆ ಪುದುವೆಟ್ಟು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರ ಮಗಳು ಶ್ರೀಮತಿ ಮೀನಾಕ್ಷಿ ರವರು  ದಿನಾಂಕ;11-02-2022 ರಂದು ಮದ್ಯಾಹ್ನ 3.00 ಗಂಟೆ ಸಮಯಕ್ಕೆ  ತನ್ನ ಗಂಡನ ಮನೆಯಾದ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ  ಮೇಲಿನಡ್ಕ ಎಂಬಲ್ಲಿ  ಓಲೆಗೆ ಬೆಂಕಿ ಹಚ್ಚಿ ಮಡಿಕೆಯನ್ನು ಇಟ್ಟು ಅದಕ್ಕೆ ಅಕ್ಕಿ ಹಾಕುತ್ತಿರುವ ಸಮಯ ಆಕಸ್ಮಿಕವಾಗಿ ಒಲೆಯ ಬೆಂಕಿಯು ಮೀನಾಕ್ಷಿ ರವರ ಧರಿಸಿದ ಡ್ರೆಸ್‌ಗೆ ತಾಗಿ ಹೊತ್ತಿಕೊಂಡು ಉರಿದಿದ್ದು ಮೀನಾಕ್ಷಿ ರವರು ಜೋರಾಗಿ ಬೊಬ್ಬೆ ಹೊಡೆದಾಗ ಎದುರು ಮನೆಗೆ ಬಂದಿದ್ದ  ಪಿರ್ಯಾದುದಾರರು ಹಾಗೂ  ಆ ಮನೆಯ ಅಪ್ಪಿ ಎಂಬವರು ಓಡಿಬಂದಾಗ ಮೀನಾಕ್ಷಿಯು ಬೆಂಕಿಯನ್ನು ನಂದಿಸುವುದೋಸ್ಕರ  ನೀರನ್ನು ಮೈಮೇಲೆ ಚೆಲ್ಲಿ ಬೆಂಕಿ ನಂದಿಸಿದ್ದು ಬೆಂಕಿ ಹತ್ತಿಕೊಂಡು ಉರಿದ ಪರಿಣಾಮ ಮೀನಾಕ್ಷಿಯ ದೇಹದಲ್ಲಿ ಸುಟ್ಟಗಾಯವಾಗಿದ್ದು ಗಾಯಾಳು ಮೀನಾಕ್ಷಿ ಆಸ್ಪತ್ರೆಗೆ  ಹೋಗಲು ಒಪ್ಪದೇ ಇದ್ದ ಕಾರಣ   ಹಳ್ಳಿ ಮದ್ದು ಮಾಡಿದ್ದು ಆದರೂ ಕೂಡಾ ಆಕೆಯ ಗಾಯ ವಾಸಿಯಾಗದೇ ಇದ್ದುದರಿಂದ  ದಿನಾಂಕ:19-02-2022 ರಂದು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಕೆಯ ಗಂಡ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಆಕೆಯ ಗಂಡ  ಆಕೆಯನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದು ಆಕೆ ಚಿಕಿತ್ಸೆಯಲ್ಲಿದ್ದಂತೆ  ದಿನಾಂಕ;24-02-2022 ರಂದು ರಾತ್ರಿ 02.54  ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ ಯು ಡಿ ಆರ್ 12/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-02-2022 03:33 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080