ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಾಜಿದಾ ಗಂಡ: ಇಬ್ರಾಹಿಂ ವಾಸ: ಶೇಖಮಲೆ ಮನೆ ಒಳಮೊಗ್ರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ತಾಯಿ ಬೀಪಾತುಮ್ಮ ತಮ್ಮನ ಮಗ ಸೈಫುದ್ದೀನ್ ರವರೊಂದಿಗೆ ಕೇರಳದ ಕಟ್ಟತ್ತಡ್ಕ ಎಂಬಲ್ಲಿಗೆ ಹೋಗಿ ವಾಪಾಸು ದಿನಾಂಕ 24.03.2021 ರಂದು ರಾತ್ರಿ 21.30 ಗಂಟೆಗೆ ಅರ್ಲಪದವು ವರೆಗೆ ಸಂಬಂದಿಕರ ಕಾರಿನಲ್ಲಿ ಬಂದು ಅಲ್ಲಿಂದ ಮನೆಗೆ ಹೋಗಲು ಉಮ್ಮರ್ ಶಾಫಿರವರ ಬಾಬ್ತು ಅಟೋರಿಕ್ಷಾ ನಂಬ್ರ ಕೆಎ-21-ಸಿ-1802 ನೇರವರಲ್ಲಿ ಪ್ರಯಾಣಿಕರಾಗಿ ಶೇಖಮಲೆ ಕಡೆಗೆ ಬರುತ್ತಿದ್ದ ಸಮಯ ಸುಮಾರು 22.30 ಗಂಟೆಗೆ ಪಾಣಾಜೆ ಗ್ರಾಮದ ಉಡ್ಡಂಗಲ ಎಂಬಲ್ಲಿಗೆ ತಲುಪಿದಾಗ ಅಟೋರಿಕ್ಷಾ ಚಾಲಕ ಉಮ್ಮರ್ ಶಾಫಿ ಅಟೋರಿಕ್ಷಾವನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಗಡೆಗೆ ತಿರುಗಿಸಿ ಮಣ್ಣು ರಸ್ತೆಯಲ್ಲಿ ಚಲಾಯಿಸಿದ ಪರಿಣಾಮ ಅಟೋರಿಕ್ಷಾ ಎಡಗಡೆಗೆ ಮಗುಚಿ ಬಿದ್ದ ಪರಿಣಾಮ ಅಟೋರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ಎಡಕೈ ಮಣಿಗಂಟು, ಎಡಕಾಲು ಮೊಣಗಂಟಿಗೆ ರಕ್ತಗಾಯವಾಗಿದ್ದು, ಬೀಫಾತುಮ್ಮರವರಿಗೆ ಎಡ ಕೈಗೆ ಗುದ್ದಿದ ಗಾಯ, ತಲೆಯ ಎಡಭಾಗಕ್ಕೆ ರಕ್ತಗಾಯ ಕಾಲುಗಳಲ್ಲಿ ರಕ್ತಗಾಯವಾಗಿದ್ದು ಸೈಫುದ್ದೀನ್ ಎಂಬವರಿಗೆ ಎಡ ಕೈಗೆ ಗುದ್ದಿದ ಗಾಯವಾದವರನ್ನು ಹಿಂದಿನಿಂದ ಬಂದ ಕಾರಿನ ಚಾಲಕರು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಭೀಪಾತುಮ್ಮರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು ಪಿರ್ಯಾದಿದಾರರಿಗೆ ಮತ್ತು ಸೈಫುದ್ದೀನ್‌ರವರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಆ.ಕ್ರ 22/21 ಕಲಂ: 279,337  ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಚಂದ್ರಕಲಾ ಪ್ರಾಯ: 37 ವರ್ಷ ಗಂಡ ಹರೀಶ್ ಆಚಾರ್ಯ ವಾಸ: ಕಲ್ಲಡ್ಕ, ಗೋಳ್ತಮಜಲು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 23.03.2021 ರಂದು ಪಿರ್ಯಾದಿ ಶ್ರೀಮತಿ ಚಂದ್ರಕಲಾ  ರವರು ತನ್ನ ಮೈದುನಾ ನಾಗರಾಜ ರವರ ಬಾಬ್ತು KA-19-MK-6710 ನೇ ಕಾರಿನಲ್ಲಿ ಕುಳಿತುಕೊಂಡು  ಕೊಯ್ಯೂರು ಎಂಬಲ್ಲಿಗೆ ಕುಟುಂಬದ ದೈವ ಕಾರ್ಯಕ್ರಮಕ್ಕೆ ಹೋಗಿ  ಕಾರ್ಯಕ್ರಮ ಮುಗಿಸಿಕೊಂಡು ವಾಪಾಸು ಅದೇ ಕಾರಿನಲ್ಲಿ ಕುಳಿತುಕೊಂಡು ಮನೆ ಕಡೆಗೆ ಬರುತ್ತಾ ದಿನಾಂಕ: 24.03.2021 ರಂದು ರಾತ್ರಿ ಸಮಯ ಸುಮಾರು 01:50 ಗಂಟೆಗೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿಗೆ ತಲುಪುತ್ತಿದ್ದಂತೆ ಕಾರು ಚಾಲಕ ನಾಗರಾಜ ರವರು ಕಾರನ್ನು ತಿರುವು ರಸ್ತೆಯಲ್ಲಿ ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ  ಮುಂದಕ್ಕೆ ಹೋಗಿ ರಸ್ತೆಯಿಂದ ಕೆಳಗೆ ಅಳಕ್ಕೆ ಬಿದ್ದು, ಅಪಘಾತವಾಗಿರುತ್ತದೆ. ಅಪಘಾತದಲ್ಲಿ ಪಿರ್ಯಾದಿ ಶ್ರೀಮತಿ ಚಂದ್ರಕಲಾ ರವರ  ಎರಡೂ ಕೈಗಳಿಗೂ, ಬಲಕೋಲು ಕಾಲಿಗೆ ಜಜ್ಜಿದ ಜಖಂ ಆಗಿರುತ್ತದೆ. ಅಲ್ಲದೆ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ. ಕಾರು ಚಾಲಕ ನಾಗರಾಜ್ ರವರಿಗೆ ಮೈ ಕೈಗೆ ಗುದ್ದಿದ ನೋವಾಗಿರುತ್ತದೆ. ಗಾಯಗೊಂಡ ಗಾಯಾಳಗಳ ಪೈಕಿ ಪಿರ್ಯಾದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿಯೂ ಕಾರು ಚಾಲಕ ನಾಗರಾಜ್ ರವರು ಹೊರರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 33/2021 ಕಲಂ 279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೃಷ್ಣ ನಾಯ್ಕ್ 38 ವರ್ಷ ತಂದೆ: ಪುಟ್ಟ ನಾಯ್ಕ್ ವಾಸ: ತೂಂಬಡ್ಕ ಮನೆ, ಪಾಣಾಜೆ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರ ಅಕ್ಕ 40 ವರ್ಷ ಪ್ರಾಯದ ಸರಸ್ವತಿ ರವರು ದಿನಾಂಕ 23.03.2021 ರಂದು ರಾತ್ರಿ 10.00 ಗಂಟೆಗೆ ಊಟ ಮಾಡಿದ ಬಳಿಕ ಪಿರ್ಯಾದಿದಾರರು ಮತ್ತು ಪತ್ನಿ ಮಗು ಪಕ್ಕದಲ್ಲೆ ಇದ್ದ ಮಾವ ನಾರಾಯಣ ನಾಯ್ಕ ರವರ ಮನೆಗೆ ಮಲಗಲು ಹೋಗಿದ್ದು. ಮನೆಯಲ್ಲಿ ಸರಸ್ವತಿ ಮಾತ್ರ ಇದ್ದು, ಮರುದಿನ ಬೆಳಿಗ್ಗೆ ಸುಮಾರು 06.00 ಗಂಟೆಗೆ ಪಿರ್ಯಾದಿದಾರರು ವಾಪಾಸು ಮನೆಗೆ ಬಂದು ನೋಡಿದಾಗ ಸರಸ್ವತಿ ಮನೆಯ ಕೋಣೆಯ ಅಡ್ಡಕ್ಕೆ ಚೂಡಿದಾರದ ಶಾಲನ್ನು ಕುತ್ತಿಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು, ಪಿರ್ಯಾದಿದಾರರು ಕೂಡಲೇ ಶಾಲನ್ನು ತುಂಡು ಮಾಡಿ ಉಪಚರಿಸಿ ನೋಡಿದಾಗ ಸರಸ್ವತಿ ಮೃತಪಟ್ಟಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಯು ಡಿ ಆರ್ ನಂ: 12/21  ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-03-2021 11:13 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080