ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಾಜು ಶೆಟ್ಟಿ, ಪ್ರಾಯ: 43 ವರ್ಷ, ತಂದೆ: ಸಂಜೀವ ಶೆಟ್ಟಿ, ವಾಸ: ಬಲ್ಲೆಂಗೇರಿ ಮನೆ, ಹೊಸಂಗಡಿ ಗ್ರಾಮ, ಬೆಳ್ತಂಗಡಿ  ತಾಲೂಕು ರವರು ದಿನಾಂಕ; 24.05.2021 ರಂದು ತನ್ನ ಬಾಬ್ತು ದ್ವಿಚಕ್ರ ವಾಹನ ನಂಬ್ರ KA19HD5234 ನೇದರಲ್ಲಿ ಪುಂಜಾಲಕಟ್ಟೆಯಿಂದ ಪಿರ್ಯಾದಿದಾರರ ಪರಿಚಯದ ಮಲ್ಯ ಎಂಬವರನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ತನ್ನ ಮನೆಯ ಕಡೆಗೆ ಹೊರಟು ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪುರಿಯಾ ಎಂಬಲ್ಲಿಗೆ ತಲುಪಿದಾಗ ರೇವತಿ ಶೆಟ್ಟಿ ಎಂಬವರ ಮನೆ ಕಡೆಗೆ ಹೋಗುವ ಕಚ್ಚಾ ಮಣ್ಣು ರಸ್ತೆಯಿಂದ KA19MH7869 ನೇ ಜೆಸಿಬಿ ಯಂತ್ರವನ್ನು ಅದರ ಚಾಲಕನು ನಿರ್ಲಕ್ಷ್ಯತನದಿಂದ ಒಮ್ಮೆಲೇ ಡಾಮಾರು ರಸ್ತೆಗೆ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು, ದ್ವಿಚಕ್ರ ವಾಹನ ಜಖಂ ಗೊಂಡಿರುವುದಲ್ಲದೇ ಹಿಂಬದಿ ಸವಾರ ಮಲ್ಯ ಎಂಬವರ ಎಡಕಾಲಿನ ಮೊಣಗಂಟಿಗೆ ರಕ್ತ ಬರುವ ಗಾಯ ಹಾಗೂ ಬಲಕಾಲಿನ ಪಾದಕ್ಕೆ ಜಖಂ ಉಂಟಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 35/2021 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಂದ್ರಶೇಖರ ,ಪ್ರಾಯ 45 ವರ್ಷ ತಂದೆ; ಶಿವಪ್ಪ ಗೌಡ , ಅಕ್ಕಾಜೆ ಮನೆ ದೋಲ್ಪಾಡಿ ಗ್ರಾಮ  ಕಡಬ ತಾಲೂಕು  ರವರ ನೆರೆಮನೆಯ ಹರೀಂದ್ರನಾಥ ರೈ ಎಂಬವರು ದಿನಾಂಕ 24-05-2021 ರಂದು ಅಕ್ಕಾಜೆ ಎಂಬಲ್ಲಿಂದ ಕಾಣಿಯೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂ KA21Q4461 ನೇಯದ್ದಕ್ಕೆ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ರಸ್ತೆಯ ಕಾಣಿಯೂರು ಗ್ರಾಮದ ಕಾಣಿಯೂರು ರೈಲ್ವೇ ಓವರ್ ಬ್ರಿಡ್ಜ್ ಬಳಿ ವಿರುದ್ದ ದಿಕ್ಕಿನಿಂದ ಅಂದರೆ ಕಾಣಿಯೂರು ಕಡೆಯಿಂದ ನೊಂದಣಿ ನಂಬರ್ ಇಲ್ಲದ TVS NTORQ 125 ದ್ವಿಚಕ್ರ ವಾಹನವನ್ನು ಅದರ ಸವಾರ ಪ್ರಕಾಶ್ ಎಂಬವರು ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ  ಕಾರೊಂದನ್ನು ಓವರ್ ಟೇಕ್ ಮಾಡಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ದ್ವಿಚಕ್ರವಾಹನಗಳು ರಸ್ತೆಯಲ್ಲಿ ಬಿದ್ದು ಆರೋಪಿ ಸ್ಕೂಟರ್ ಸವಾರರಿಗೆ ತರಚಿದ ಗಾಯ ಹಾಗೂ ಹರೀಂದ್ರನಾಥ ರೈಯವರಿಗೆ ಎಡ ಕೋಲು ಕಾಲಿಗೆ ಮತ್ತು ಬಲ ಕಾಲಿನ ಹೆಬ್ಬೆರಳಿಗೆ ಗಾಯಗಳುಂಟಾಗಿದ್ದು, ಗಾಯಾಳು ಹರೀಂದ್ರನಾಥ ರೈ ಯವರನ್ನು ಪಿರ್ಯಾದಿದಾರರು ಪುತ್ತೂರು ಮಹಾವೀರಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ .ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ  ಅಕ್ರ 25/2021 ಕಲಂ  279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬೆಳ್ತಂಗಡಿ ಪೊಲೀಸ್ ಪೊಲೀಸ್ ಠಾಣೆ : ಪೊಲೀಸ್‌ ಉಪನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ ರವರು ದಿನಾಂಕ 23.05.2021 ರಂದು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯದಲ್ಲಿರುತ್ತಾ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಮರಕ್ಕಿನ ಎಂಬಲ್ಲಿಗೆ ದಾಳಿ ನಡೆಸಿ ಆರೋಪಿ ರಜಾಕ್ ಎಂಬಾತನು ನಿಗದಿತ ಪ್ರಧಿಕಾರದ ಪರವಾಣಿಗೆ ಇಲ್ಲದೇ ಅನದಿಕೃತವಾಗಿ ಮಾರಾಟ ಮಾಡುವರೇ ಸೇಖರಿಸಿಟ್ಟ ರೂ 3250/-  ಮೌಲ್ಯದ 13 ಕೆಜಿ ದನದ ಮಾಂಸವನ್ನು ಸ್ವಾದೀನ ಪಡಿಸಿದ್ದು, ಅಲ್ಲದೇ ಆರೋಪಿ ರಾಜ್ಯ ಸರಕಾರದ ನಿರ್ದೆಶನದಂತೆ ಮಾರಕ ಸಾಂಕ್ರಾಮಿಕ  ನೊವೆಲ್‌ ಕೊರೊನಾ  ವೈರಸ್‌ ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾನ್ಯ ದ.ಕ.ಜಿಲ್ಲಾಧಿಕಾರಿಯವರ ಆದೇಶದಂತೆ ಗ್ರಾಹರಿಗೆ ಸಂಜೆ ಸಮಯದಲ್ಲಿ ಮಾಂಸ ಮಾರಾಟ ಮಾಡುವರೇ ನಿರ್ಭಂದವಿದ್ದರೂ ಮಾನ್ಯ ದ.ಕ. ಜಿಲ್ಲಾಧಿಕಾರಿಯವರು  ವಿಧ್ಯುಕ್ತವಾಗಿ ಪ್ರಸ್ತಾಪಿಸಿದ ಆದೇಶವನ್ನು   ಉಲ್ಲಂಘಿಸಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 55/2021 ಕಲಂ: 4,5,8,11 ಕರ್ನಾಟಕ ಗೋವದೆ ಪ್ರತಿಬಂದಕ ಮತ್ತು ಜಾನುವಾರು ಪರಿರಕ್ಷಣೆ ನಿಯಮ 1964, 269 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 4

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸಂದೇಶ್‌ ಎಸ್‌. ಶೆಟ್ಟಿ (44 ವರ್ಷ) ತಂದೆ: ದಿ.ಶ್ಯಾಮ ಶೆಟ್ಟಿ, ವಾಸ: D.NO: 6-2-79 A  ಕಲ್ಯಾಣಿ, ಪಿಪಿಸಿ ಕಾಲೇಜು ಹತ್ತಿರ 76 ಬಡಗಬೆಟ್ಟು ಗ್ರಾಮ, ವಳಕಾಡು, ಉಡುಪಿ ರವರ ಅಣ್ಣ ಉದಯ ಶ್ಯಾಮ ಶೆಟ್ಟಿ (50 ವರ್ಷ) ಎಂಬವರು ಪುತ್ತೂರು ಎಪಿಎಂಸಿ ಮಾರ್ಕೆಟ್‌ನಲ್ಲಿ ಸುಮಾರು 20 ವರ್ಷಗಳಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದು , ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಸಾಲ್ಮರ ಎಂಬಲ್ಲಿ ಸ್ವಂತ ಮನೆ ಹೊಂದಿ,  ತನ್ನ ಸಂಸಾರದೊಂದಿಗೆ ವಾಸಮಾಡಿಕೊಂಡಿದ್ದು, ದಿನಾಂಕ 23.05.2021 ರಂದು ಸಾಯಂಕಾಲ ತನ್ನ ಪತ್ನಿ ಜೊತೆ ವಾಕಿಂಗ್‌ ಮಾಡುತ್ತಿದ್ದು, ಸುಮಾರು 6.45 ಗಂಟೆಗೆ ಕುಸಿದು ಬಿದ್ದಿದ್ದು ಆ ಸಮಯ ಅವರ ಪತ್ನಿಯು ನೆರೆಕರೆಯವರಲ್ಲಿ ತಿಳಿಸಿ ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಸಾಯಂಕಾಲ 7.05 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ  ವೈದ್ಯರು  ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಯುಡಿಆರ್ ನಂ: 18/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ರೆಜಿಮೋಳ್, ಪ್ರಾಯ 49 ವರ್ಷ, ಗಂಡ: ಸುರೇಶ್.ಕೆ.ಎನ್,  ವಾಸ: ಕಯ್ಯನಿಕುನ್ನೆಲ್ ಮನೆ, ವೇಲತ್ ಸೆರಿ, ಟಿಕೋಯ್ ಪೋಸ್ಟ್, ಮೇನಿಚ್ಚಿಲ್ ತಾಲೂಕು, ಕೋಟ್ಟಾಯಂ ಜಿಲ್ಲೆ, ಕೇರಳ ರಾಜ್ಯ ರವರ ಗಂಡ ಸುರೇಶ್.ಕೆ.ಎನ್, ಪ್ರಾಯ 52 ವರ್ಷ ಎಂಬವರು. ಸುಮಾರು 2 ವರ್ಷಗಳಿಂದ ಹಿಂದೆ  ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಎಂಬಲ್ಲಿರುವ  ಜಯಸೂರ್ಯ ಎಂಬವರ ರಬ್ಬರ್ ತೋಟದಲ್ಲಿನ ಕೆಲಸದವರು ಉಳಕೊಳ್ಳುವ ರೂಮಿನಲ್ಲಿ ಉಳಿದಿಕೊಂಡು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದವರು ಊರಿಗೆ ಬಾರದೇ ಮಕ್ಕಳು ಆಗಿಲ್ಲ ಎಂಬ ಕೊರಗಿನಲ್ಲಿ ಇದ್ದವರು ಇದೇ ಬೇಸರದಿಂದ ಪ್ರತಿದಿನ ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದವರು ಈ ಹಿಂದೆ ಕೂಡಾ ಪಿರ್ಯಾದಿಯ ಊರಿನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದವರು ದಿನಾಂಕ 12.05.2021 ರಂದು ರಾತ್ರಿ ಆ್ಯಸಿಡ್ ವಿಷಪದಾರ್ಥ ಸೇವಿಸಿ ಅಸ್ವಸ್ಥಗೊಂಡವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿ  ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ 24.05.2021 ರಂದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯು.ಡಿ.ಆರ್ ಕ್ರಮಾಂಕ 18/2021 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸಿನ್ಸಿ ಪೀಟರ್ ಪ್ರಾಯ 33 ವರ್ಷ ಗಂಡ ; ಪಿ ಎಂ ಲಿಜೋ ವಾಸ ; ಪೊಡಿಮಟ್ಟತ್ತಿಲ್  ಮನೆ ಕುಟ್ರುಪ್ಪಾಡಿ ಗ್ರಾಮ ಕಡಬ ತಾಲೂಕು ರವರ ಗಂಡ ಮೃತ  ಪಿ ಎಂ ಲೀಜೋ ಎಂಬುವರು ಕೂಲಿ ಕೆಲಸ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದು ದಿನಾಂಕ 24/05/2021 ರಂದು ಬೆಳಿಗ್ಗೆ 6-00 ಗಂಟೆಗೆ ಮನೆಯಲ್ಲಿ ಉಪಾಹಾರ ಮುಗಿಸಿ ಮನೆಯ ಎಡಬದಿಯ ಸ್ವಂತ ಜಾಗದಲ್ಲಿರುವ ತೆಂಗಿನ ಮರದಿಂದ ತೆಂಗಿನ ಕಾಯಿಯನ್ನು ತೆಗೆಯುವರೇ 30 ಅಡಿ ಉದ್ದದ ಅಲ್ಯುಮಿನಿಯಂ ದೋಟಿಯಿಂದ ತೆಂಗಿನ ಮರದಿಂದ ತೆಂಗಿನ  ಕಾಯಿಯನ್ನು ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಅಲ್ಯುಮಿನಿಯಂ ದೋಟಿಯು ತೆಂಗಿನ ಮರದ ಪಕ್ಕದಲ್ಲಿ ಹಾದು ಹೋಗುತ್ತಿರುವ  H T ಲೈನಿನ ವಯರಿಗೆ ತಾಗಿ ವಿದ್ಯುತ್ ಆಘಾತಗೊಂಡು ಪಿರ್ಯಾದಿಯ ಗಂಡ ಪಿ ಎಂ ಲೀಜೋ ರವರು ಮೃತ ಪಟ್ಟಿರುತ್ತಾರೆ.  ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 10/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಕಾಂತ ಪುಣಿಚಿತ್ತಾಯ ಪ್ರಾಯ;54 ವರ್ಷ ತಂದೆ; ದಿ/ ರಾಧಾಕೃಷ್ಣ ಪುಣಿಚಿತ್ತಾಯ ವಾಸ; ಪ್ರಶಾಂತ ನಿಲಯ ಕೊಕ್ಕಡ ಗ್ರಾಮ ಬೆಳ್ತಂಗಡಿ ತಾಲೂಕು ರವರ ಹೆಂಡತಿ ಶ್ರೀಮತಿ  ಜಯಶ್ರೀ (47) ಎಂಬವರು ದಿನಾಂಕ;11-05-2021 ರಂದು ಅಡುಗೆ ಕೋಣೆಯಲ್ಲಿ ಒಲೆಗೆ ಬೆಂಕಿ ಹಚ್ಚಿ ಅಡುಗೆ ಕೆಲಸ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ಧರಿಸಿದ ನೈಟಿಗೆ ಬೆಂಕಿ ತಗುಲಿದ್ದು ಕೂಡಲೇ ಪಿರ್ಯಾದುದಾರರು ಖಾಸಗಿ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ನೀಡಿ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ನಂತರ ಪಿರ್ಯಾದುದಾರರ ಹೆಂಡತಿಯ ದೇಹವು ಬೆಂದು ಹೋಗಿ ವಿಪರೀತ ನೋವು ಕಂಡುಬಂದಿದ್ದರಿಂದ ದಿನಾಂಕ;14-05-2021 ರಂದು ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿದ್ದು ದಿನಾಂಕ;24-05-2021 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತ್ತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:34/2021 ಕಲಂ:174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 25-05-2021 12:35 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080