ಅಪಘಾತ ಪ್ರಕರಣ: ೦4
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿಶ್ವನಾಥ ಮೂಲ್ಯ,, ಪ್ರಾಯ 48 ವರ್ಷ, ತಂದೆ: ದಿ|| ಮೋನಪ್ಪ ಮೂಲ್ಯ, ವಾಸ: ಕೇರಿಕಟ್ಟೆ ಮನೆ, ಕಣಿಯೂರು ಅಂಚೆ & ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 23-06-2022 ರಂದು 23-00 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ನಾರಾಯಣ ಮೂಲ್ಯ ಎಂಬವರು KA-70-2970 ನೇ ನೋಂದಣಿ ನಂಬ್ರದ ಅಟೋರಿಕ್ಷಾದಲ್ಲಿ ಪತ್ನಿ ಗೀತಾರವರನ್ನು ಕುಳ್ಳಿರಿಸಿಕೊಂಡು ಪಿಲಿಗೂಡು-ಕಣಿಯೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪಿಲಿಗೂಡು ಕಡೆಯಿಂದ ಕಣಿಯೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಬೋರುಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಅಟೋರಿಕ್ಷಾ ರಸ್ತೆಯ ಬಲಭಾಗ ಚರಂಡಿಗೆ ಇಳಿದು ಆರೋಪಿ ಚಾಲಕ ನಾರಾಯಣ ಮೂಲ್ಯರವರು ರಸ್ತೆಗೆ ಬಿದ್ದು, ಎಡಕಣ್ಣಿನ ಹತ್ತಿರ ಹಾಗೂ ಎಡಭುಜದಲ್ಲಿ ಗಾಯಗಳಾಗಿದ್ದು, ಗಾಯಾಳುವನ್ನು ಅವರ ಪತ್ನಿ ಗೀತಾ ಮತ್ತು ಆಸಿಫ್ ಎಂಬವರು ಕಾರಿನಲ್ಲಿ ಉಪ್ಪಿನಂಗಡಿಗೆ ಕರೆದುಕೊಂಡು ಬಂದು, ನಂತರ ಅಲ್ಲಿಂದ ಅಂಬ್ಯುಲೆನ್ಸ್ ನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಬದುಕುಳಿಯುವ ಸಾಧ್ಯತೆ ಕಡಿಮೆ ಎಂಬುದಾಗಿ ತಿಳಿಸಿದಂತೆ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಈ ವಿಷಯವನ್ನು ತಿಳಿದು ಪಿರ್ಯಾದುದಾರರಾದ ವಿಶ್ವನಾಥ ಮೂಲ್ಯರವರು ಪುನಃ ಅಂಬ್ಯುಲೆನ್ಸ್ ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ದಿನಾಂಕ 24-06-2022 ರಂದು 04-00 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 115/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶಿವನ ಗೌಡ ಪ್ರಾಯ 42 ವರ್ಷ, ತಂದೆ: ಶರಣಗೌಡ, ವಾಸ: ಹೊಗರನಾಳ್ ಗ್ರಾಮ & ಅಂಚೆ, ಮಸ್ಕಿ ತಾಲೂಕು ರಾಯಚೂರು ಜಿಲ್ಲೆ ರವರು ನೀಡಿದ ದೂರಿನಂತೆ ದಿನಾಂಕ 24-06-2022 ರಂದು 05-55 ಗಂಟೆಗೆ ಆರೋಪಿ ಲಾರಿ ಚಾಲಕ ರಾಮಕೃಷ್ಣ ಎಂಬವರು AP-39-TE-8318 ನೇ ನೋಂದಣಿ ನಂಬ್ರದ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಪಿರ್ಯಾದುದಾರರು ಚಾಲಕರಾಗಿ ಚೆನ್ನೈ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-57-F-2498 ನೇ ನೋಂದಣಿ ನಂಬ್ರದ KSTRC ಸಂಸ್ಥೆಯ ಐರಾವತ ಮಲ್ಟಿ ಎಕ್ಸಿಲ್ ಬಸ್ಸಿನ ಬಲಭಾಗಕ್ಕೆ ಅಪಘಾತವಾಗಿ, ನಂತರ ಪಿರ್ಯಾದುದಾರರ ಹಿಂದಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ KA-20-D-5789 ನೇ ನೋಂದಣಿ ನಂಬ್ರದ ಲಾರಿಗೆ ಅಪಘಾತವಾಗಿ ಮೂರೂ ವಾಹನಗಳಿಗೆ ಹಾನಿಯಾಗಿರುತ್ತದೆ. ಯಾರಿಗೂ ಗಾಯಗಳಾಗಿರುವುದಿಲ್ಲ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 116/2022 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಬಿ. ಜೀವನ್ ಕುಮಾರ್, ಪ್ರಾಯ 30 ವರ್ಷ, ತಂದೆ: ಮೋನಪ್ಪ ಪೂಜಾರಿ, ವಾಸ: ಬಡಕ್ಕೋಡಿ ಮನೆ, ಕುಂಬ್ರ ಅಂಚೆ, ಒಳಮೊಗ್ರು ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 24-06-2022 ರಂದು 09-30 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಮಹಮ್ಮದ್ ಯಾಸೀನ್ ಎಂಬವರು KA-03-JX-7043 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ನೆಹರೂ ನಗರ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಎಂಬಲ್ಲಿ ಲಾರಿಯೊಂದನ್ನು ಓವರ್ ಟೇಕ್ ಮಾಡಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಬಿ. ಜೀವನ್ ಕುಮಾರ್ ಎಂಬವರು ಚಾಲಕರಾಗಿ, ನಿರ್ಮಲ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ನೆಹರೂನಗರ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-C-2184 ನೋಂದಣಿ ನಂಬ್ರದ ಅಟೋರಿಕ್ಷಾಕ್ಕೆ ಅಪಘಾತವಾಗಿ, ಎರಡೂ ವಾಹನಗಳು ಜಖಂಗೊಂಡು, ಪಿರ್ಯಾದುದಾರರಿಗೆ ತಲೆಗೆ ಗುದ್ದಿದ ನೋವಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ನಿರ್ಮಲರವರು ಮತ್ತು ಆರೋಪಿ ಸವಾರ ಕೂಡಾ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 117/2022 ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಾಮಣ್ಣ ಮೂಲ್ಯ, ಪ್ರಾಯ 53 ವರ್ಷ, ತಂದೆ: ದಿ|| ಸೇಸಪ್ಪ ಮೂಲ್ಯ , ವಾಸ: ಬುಡ್ಡೋಣಿ ಮನೆ, ಮಂಗಲಪದವು ಅಂಚೆ, ವಿಟ್ಲ ಕಸಬಾ ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 24-06-2022 ರಂದು 11-45 ಗಂಟೆಗೆ ಆರೋಪಿ ಕಾರು ಚಾಲಕ ಮಂಜುನಾಥ ರೆಡ್ಡಿ ಎಂಬವರು KA-51-MF-6237 ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಪೆರ್ನೆ ಎಂಬಲ್ಲಿ ಲಾರಿಯೊಂದನ್ನು ಓವರ್ ಟೇಕ್ ಮಾಡಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಸವಾರರಾಗಿ ಮಾಣಿ ಕಡೆಯಿಂದ ಬಿಳಿಯೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EK-1254 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ, ಪಿರ್ಯಾದುದಾರರು ಸ್ಕೂಟರಿನೊಂದಿಗೆ ರಸ್ತೆಯ ಬದಿಗೆ ಬಿದ್ದು, ಬಲ ಕೋಲು ಕೈಗೆ ಹಾಗೂ ಎಡಮೊಣಕಾಲಿಗೆ ಗುದ್ದಿದ ಒಳನೋವಿರುವ ನೋವು, ಎಡ ಪಾದಕ್ಕೆ ತರಚಿದ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 118/2022 ಕಲಂ: 279, 337 IPC & 134(A)&(B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದಿನೇಶ್ ಟಿ.ಆರ್. ಪ್ರಾಯ:31 ವರ್ಷ, ತಂದೆ: ರಮೇಶ್ ಗೌಡ. ವಾಸ: ತುಂಬೆತಡ್ಕ ಮನೆ, ಕಡಬ ಗ್ರಾಮ, ಕಡಬ ತಾಲೂಕು ಎಂಬವರು ಕಡಬ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ಸಂಗೀತಾ ಎಲೆಕ್ಟ್ರಾನಿಕ್ಸ್ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ:23.06.2022 ರಂದು ರಾತ್ರಿ ಸಮಯ 08.45 ಗಂಟೆಗೆ ಅಂಗಡಿಯ ಎಲ್ಲಾ ಬಾಗಿಲು ಬೀಗ ಹಾಕಿಕೊಂಡು ಮನೆಗೆ ಹೋಗಿರುತ್ತಾರೆ ದಿನಾಂಕ:24.06.2022 ರಂದು ಪಿಯಾದುದಾರರ ಅಂಗಡಿಯಲ್ಲಿ ಕೆಲಸ ಮಾಡುವ ಯುವತಿ ದೀಕ್ಷಿತಾಳು ಬೆಳಗ್ಗೆ 09.00 ಗಂಟೆಗೆ ಎಲೆಕ್ಟ್ರಾನಿಕ್ಸ್ ಅಂಗಡಿ ಬಾಗಿಲನ್ನು ತೆರೆದು ನೋಡಲಾಗಿ ಅಂಗಡಿಯಲ್ಲಿ ಕೆಲವು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದನ್ನು ಕಂಡು ಪಿರ್ಯಾದುದಾರರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದಂತೆ ಪಿರ್ಯಾದುದಾರರು ಬಂದು ನೋಡಲಾಗಿ ಯಾರೋ ಕಳ್ಳರು ಸದ್ರಿ ಅಂಗಡಿಯ ಮೇಲಿನ ಹೆಂಚುಗಳನ್ನು ತೆರೆದು ಅಂಗಡಿಯ ಓಳ ಪ್ರವೇಶಿಸಿ ಹಣಕ್ಕಾಗಿ ಹುಡುಕಾಟ ಮಾಡಿ ಬಳಿಕ ಕ್ಯಾಶ್ಡ್ರಾವರ್ ಮತ್ತು ಮೇಜಿನ ಹಿಂಬದಿಯಲ್ಲಿ ಹುಡುಕಾಟ ಮಾಡಿದ್ದು,ಅಂಗಡಿ ಕ್ಯಾಶ್ ಡ್ರಾವರ್ ಪಕ್ಕದ ಮೇಜಿನ ಕೆಳಗಿನ ಕಪಾಟಿನಲ್ಲಿ ಕಪ್ಪು ಬಣ್ಣದ ಬ್ಯಾಗ್ನಲ್ಲಿ ಇಟ್ಟಿದ್ದ 10,000 ನಗದು ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳಾದ ಪ್ಯಾನ ಸೋನಿಕ್ ಮಿಕ್ಸಿ-01, ಬಜಾಜ್ ಐರನ್ ಬಾಕ್ಸ್-01 ಕೆಟಲ್-01 ಕಳವು ಮಾಡಿಕೊಂಡು ಬಳಿಕ ಕಳವು ಮಾಡಿದ ಬಗ್ಗೆ ಸಿ.ಸಿ ಕ್ಯಾಮರದಲ್ಲಿ ದಾಖಲಾಗುತ್ತದೆ ಎಂದು ಅಂಗಡಿಯಲ್ಲಿ ಅಳವಡಿಸಿದ್ದ 4 ಸಿ.ಸಿ ಕ್ಯಾಮರ ಮತ್ತು ಸಿ.ಸಿ ಕ್ಯಾಮರದ DVR ಹಾಗೂ ಪವರ್ ಸಪ್ಲೈ ಬಾಕ್ಸನ ವಯರ್ಗಳನ್ನು ತುಂಡು ಮಾಡಿ ಬಳಿಕ 4 ಸಿ.ಸಿ ಕ್ಯಾಮರ ಮತ್ತು ಸಿ.ಸಿ ಕ್ಯಾಮರದ DVR ಹಾಗೂ ಪವರ್ ಸಪ್ಲೈ ಬಾಕ್ಸ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿರುತ್ತದೆ. ಹಾಗೆಯೇ ಸದ್ರಿ ಅಂಗಡಿಯ ಪಕ್ಕದಲ್ಲಿರುವ ಸ್ಟಾರ್ ಟ್ರೇಡರ್ಸ್ ಟೈಲ್ಸ್ ಅಂಗಡಿಗೂ ನುಗ್ಗಿ ಸ್ಟಾರ್ ಟ್ರೇಡರ್ಸ್ ಟೈಲ್ಸ್ ಅಂಗಡಿಯಲ್ಲಿ ಕ್ಯಾಶ್ ಡ್ರಾವರ್ನಲ್ಲಿದ್ದ 1200/- ನಗದು 2 ಸಿ.ಸಿ ಕ್ಯಾಮರ ಮತ್ತು ಸಿ.ಸಿ ಕ್ಯಾಮರದ DVRಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿರುತ್ತದೆ. ಕಳವಾದ ಒಟ್ಟು 6-ಸಿ.ಸಿ ಕ್ಯಾಮರಗಳ ಅಂದಾಜು ಮೌಲ್ಯ 12000/- 2-ಸಿ.ಸಿ ಕ್ಯಾಮರದ DVRಗಳ ಅಂದಾಜು ಮೌಲ್ಯ 20,000 ,ಪವರ್ ಸಪ್ಲೈ ಬಾಕ್ಸ್ ನ ಬೆಲೆ 1000/-,ಹಾಗೂ ಪ್ಯಾನಸೋನಿಕ್ ಮಿಕ್ಸಿ ಬೆಲೆ 7500/-,ಬಜಾಜ್ ಐರನ್ ಬಾಕ್ಸ್ ನ ಬೆಲೆ 1500/- ಹಾಗೂ ಕೆಟಲ್ 1000/- ಆಗಿರುತ್ತದೆ ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 55/2022 ಕಲಂ:457, 380, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿಶ್ವನಾಥ ಪ್ರಾಯ 54 ವರ್ಷ ತಂದೆ: ದಿ. ಮಾಯಿಲ ಮೂಲ್ಯ ವಾಸ: ತಾಲಂಗಡಿ ಮನೆ ಎಕ್ಕಾರು ಗ್ರಾಮ ಕಿನ್ನಿಗೋಳಿ ಮೂಡಬಿದ್ರೆ ತಾಲೂಕು ರವರ ಅಣ್ಣನಾದ ಪೂವಪ್ಪ ಪ್ರಾಯ 75 ವರ್ಷ ತಂದೆ: ದಿ. ಮಾಯಿಲ ಮೂಲ್ಯ ವಾಸ: ದಡ್ಡಲ್ ಕಾಡು ಮನೆ ಮೂಡನಡು ಗ್ರಾಮ ಬಂಟ್ವಾಳ ತಾಲೂಕು ದಿನಾಂಕ 17-09-2022 ರಂದು ಕೂಲಿ ಕೆಲಸಕ್ಕೆ ಬೆಳಿಗ್ಗೆ 8.00 ಗಂಟೆಗೆ ಬಂಟ್ವಾಳ ಕಸಬಾ ಗ್ರಾಮದ ಬಡ್ಡಕಟ್ಟೆ ಬಸ್ಸು ನಿಲ್ದಾಣಕ್ಕೆ ಹೋಗಿ ನಿಂತು ಕೊಂಡಿರುವಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ತಲೆಗೆ ಗಾಯಗೊಂಡವರನ್ನು ಬಂಟ್ವಾಳ ಸರಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ವತ್ರೆಗೆ ದಾಖಲಿಸಿರುವಿದಾಗಿದೆ. ದಿನಾಂಕ 24-06-2022 ರಂದು ಬೆಳಿಗ್ಗೆ 3.15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ವೆನ್ಲಾಕ್ ಆಸ್ವತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 27/2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.