ಅಪಘಾತ ಪ್ರಕರಣ: ೦2
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹಬೀಬ್, ಪ್ರಾಯ 38 ವರ್ಷ ತಂದೆ: ಎಸ್.ಹೆಚ್.ಯೂಸುಫ್ ವಾಸ: #11-31 ಗೂಡಿನಬಳಿ, ಎಂ.ಕೆ.ರೋಡ್ ಬಳಿ, ಬಿ-ಮೂಡ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 23-07-2022 ರಂದು ತನ್ನ ಬಾವ ಮೊಹಮ್ಮದ್.ಬಿ ರವರ ಬಾಬ್ತು KA-19-D-9165 ನೇ ಆಟೋರಿಕ್ಷಾದಲ್ಲಿ ತಾನು ಚಾಲಕನಾಗಿ ಬಾಡಿಗೆ ನಿಮಿತ್ತ ಜಯಶ್ರೀ, ಅಕ್ಷತಾ ಯಾನೆ ಲೋಲಾಕ್ಷಿ, ರಾಮ ಮುಗೇರ ರವರನ್ನು ಬಂಟ್ವಾಳ ಪೇಟೆ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಕರೆದುಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಕಂಚಿಕಾರ ಪೇಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಗೂಡಿನಬಳಿ ಕಡೆಯಿಂದ KA-70-E-3307 ಸ್ಕೂಟರೊಂದನ್ನು ಅದರ ಸವಾರ ದೇಜಪ್ಪ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಆಟೋರಿಕ್ಷಾವು ಬಲಬದಿಗೆ ಮಗುಚಿ ಬಿದ್ದು ಸ್ಕೂಟರ್ ಸವಾರ ಮತ್ತು ಸಹಸವಾರ ಸ್ಕೂಟರ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಆಟೋರಿಕ್ಷಾದಲ್ಲಿದ್ದ ಜಯಶ್ರೀರವರಿಗೆ ಎರಡೂ ಕಾಲಿನ ಮಣಿಗಂಟಿಗೆ ತರಚಿದ ರಕ್ತಗಾಯ, ಅಕ್ಷತಾ ಯಾನೆ ಲೋಲಾಕ್ಷಿ ರವರ ಎರಡೂ ಕೈಗೆ ಹಾಗೂ ಸೊಂಟಕ್ಕೆ ಗುದ್ದಿದ ನೋವಾಗಿದ್ದು ಹಾಗೂ ರಾಮ ಮುಗೇರರವರಿಗೆ ಎರಡೂ ಕಾಲಿಗೆ, ಎಡಕೈಗೆ ಗುದ್ದಿದ ರಕ್ತಗಾಯವಾಗಿದ್ದು ಪಿರ್ಯಾದಿದಾರರಿಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ. ಅಪಘಾತಪಡಿಸಿದ ಸ್ಕೂಟರ್ ಸಹ ಸವಾರ ಹರೀಶ್ ರವರ ಮುಖಕ್ಕೆ ಹಾಗೂ ಕಾಲಿಗೆ ಗುದ್ದಿದ ತರಚಿದ ಗಾಯವಾಗಿದ್ದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಜಯಶ್ರೀ, ಅಕ್ಷತಾ ಯಾನೆ ಲೋಲಾಕ್ಷಿ ಮತ್ತು ಸ್ಕೂಟರ್ ಸವಾರ ದೇಜಪ್ಪ ರವರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದು, ರಾಮ ಮುಗೇರ ಮತ್ತು ಹರೀಶ್ ರವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಬಗ್ಗೆ ರಾಮ ಮುಗೇರರವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮತ್ತು ಸ್ಕೂಟರ್ ಸಹ ಸವಾರ ಹರೀಶ್ ರವರನ್ನು ಮಂಗಳೂರು ಕೆ.ಎಂ.ಸಿ.ಅತ್ತಾವರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 80/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ಶಾಕೀರ ಬಾನು (24) ತಂದೆ:ಖಲಂದರ್ ಶಾಫಿ್ ವಿ ವಾಸ:ಮೇಲ್ಕಾರ್ ರಂಗೇಲ್ ಮನೆ ಪಾಣೆಮಂಗಳೂರು ಬಂಟ್ವಾಳ ತಾಲೂಕು ರವರು ದಿನಾಂಕ:23-07-2022 ರಂದು ಬಂಟ್ವಾಳ ತಾಲೂಕು ನೇರಳಕಟ್ಟೆಯ ಇಂಡಿಯನ್ ಅಡಿಟೋರಿಯಂನಲ್ಲಿ ನಡೆಯುವ ಮದುವೆಗೆ ತಮ್ಮ ಪರಿಚಯದ ರಿಕ್ಷಾ ಚಾಲಕ ಮೊಹಮ್ಮದ್ ಮೊಯಿದ್ದೀನ್‌ರವರ ಬಾಬ್ತು ಕೆಎ-19-ಡಿ-9266ನೇ ಅಟೋ ರಿಕ್ಷಾದಲ್ಲಿ ಪಿರ್ಯಾಧಿ ತನ್ನ ಅಕ್ಕ ಶಬೀನಾ ಹಾಗೂ ತಾಯಿ ಶ್ರೀಮತಿ ಮರಿಯಮ್ಮ ರವರು ಹೋಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸು ಪಾಣೆಮಂಗಳೂರಿನಲ್ಲಿರುವ ಮನೆಯ ಕಡೆಗೆ ಬರುವಾಗ ರಿಕ್ಷಾವನ್ನು ಚಾಲಕ ಚಲಾಯಿಸಿಕೊಂಡು ಬರುತ್ತಾ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಬಳಿ ರಾ ಹೆದ್ದಾರಿಯಲ್ಲಿ ತಲುಪಿದಾಗ ಪಿರ್ಯಾಧಿದಾರರ ಎದುರಿನಿಂದ ಅಂದರೆ ಮಾಣಿ ಕಡೆಯಿಂದ ಮಂಗಳೂರು ಕಡೆಗೆ ಕೆಎ-19-ಬಿ-9862ನೇ ಲಾರಿಯೊಂದನ್ನು ಅದರ ಚಾಲಕ ಅಜಾಕರೂಕತೆ ಹಾಗೂ ದುಡುಕುತನದಿಂದ ಚಲಾಯಿಸಿ ಯಾವುದೇ ಸೂಚನೆ ನೀಡದೆ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾಧಿದಾರರು ಹೋಗುತ್ತಿದ್ದ ಅಟೋರಿಕ್ಷಾಕ್ಕೆ ಅಫಘಾತವಾಯಿತು. ಪರಿಣಾಮ ಪಿರ್ಯಾಧಿದಾರರ ಹಲ್ಲಿಗೆ ಗುದ್ದಿದ ಗಾಯ ,ಅಕ್ಕ ಶ್ರೀಮತಿ ಶಬೀನಾರವರ ಬಲಕೈ, ಹೊಟ್ಟೆಗೆ, ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಅಲ್ಲದೇ ರಿಕ್ಷಾ ಚಾಲಕನ ಬಲ ಕೈಗೆ,ಸೊಂಟಕ್ಕೆ ,ಬೆನ್ನಿಗೆ ರಕ್ತಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ ಮುಲ್ಲರ್ ಆಸ್ಪತ್ರಗೆ ದಾಖಲಿಸಿದ್ದು. ವೈದ್ಯರ ಸಲಹೆಯಂತೆ ಪಿರ್ಯಾಧಿ ಹಾಗೂ ಆಕೆಯ ಅಕ್ಕನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಕಂಕನಾಡಿ ಪಾಧರ್ ಮುಲ್ಲರ್ಸ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಅಕ್ಕ ಶಬೀನಾಳನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಪಿರ್ಯಾಧಿಗೆ ಚಿಕಿತ್ಸೆ ನೀಡಿ ನಿನ್ನೆ ರಾತ್ರಿ ಡಿಸ್‌ಚಾರ್ಜ ಮಾಡಿರುತ್ತಾರೆ. ರಿಕ್ಷಾ ಚಾಲಕ ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 125/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦2
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲಿಂಗಪ್ಪ ಪೂಜಾರಿ ಪ್ರಾಯ 36 ವರ್ಷ ತಂದೆ: ರುಕ್ಮಯ್ಯ ಪೂಜಾರಿ ವಾಸ:ಕಳಂಜೋಡಿ ಮನೆ ದೋಳ್ಪಾಡಿ ಗ್ರಾಮದ ಕಡಬ ತಾಲೂಕು ರವರು ಕಡಬ ತಾಲೂಕು ದೋಳ್ಪಾಡಿ ಗ್ರಾಮದ ಕಳಂಜೋಡಿ ಎಂಬಲ್ಲಿ ವಾಸವಿದ್ದ ಸಮಯ ದಿನಾಂಕ:23.07.2022 ರಂದು ನೆರೆಯ ನಿವಾಸಿ ಮಾದವರು ಬೆಳಿಗ್ಗೆ 10-30 ಗಂಟೆಗೆ ಮನೆಗೆ ಕರೆದುಕೊಂಡು ಹೋಗಿ ಅಕ್ಕ ಕುಸುಮಳಿಗೆ ತೊಂದರೆ ನೀಡಿದ್ದು ಯಾರೂ ಎಂದು ಕೇಳಿ, ಏಕಾಏಕಿಯಾಗಿ ಮರದ ದೊಣ್ಣೆಯಿಂದ ಅಲ್ಲಿಯೇ ಇದ್ದ ಮೋನಪ್ಪ, ಶ್ರೀನಿವಾಸ, ಕೇಶವ ಮತ್ತು ಮಾಧವ ರವರು ಸೇರಿಕೊಂಡು ಪಿರ್ಯಾದಿದಾರರಿಗೆ ಕೈ,ಕಾಲು ಹಾಗೂ ಮೈಗೆ ಹೊಡೆದ ಪರಿಣಾಮ ಪಿರ್ಯಾದಿದಾರರು ಅಲ್ಲಿಯೇ ಕುಸಿದು ಬಿದ್ದ ಸಮಯ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ ಹಲ್ಲೆಗೊಳಗಾದ ಪಿರ್ಯಾದಿದಾರರು ಆಟೋ ರಿಕ್ಷಾದಲ್ಲಿ ಕಡಬ ಸರ್ಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ಹೋಗಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಈ ಘಟನೆಗೆ ಕಾರಣವೆನೆಂದರೆ ಮಾಧವರವರ ಅಕ್ಕ ಕುಸುಮಾಳಿಗೆ ಎರಡು ದಿನಗಳ ಹಿಂದೆ ಯಾರೋ ತೊಂದರೆ ನೀಡಿದ್ದನ್ನು ತಪ್ಪಾಗಿ ಗ್ರಹಿಸಿ ಪಿರ್ಯಾದಿಗೆ ಹಲ್ಲೆ ಮಾಡಿರುವುದಾಗಿದೆ ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 65/2022 ಕಲಂ: 324, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನಿತೇಶ್, ಪ್ರಾಯ: 22 ವರ್ಷ, ತಂದೆ: ಸೇಸಪ್ಪ ಸಾಲ್ಯಾನ್, ವಾಸ:ಅಂಕಾಜೆ ಮನೆ, ಲಾಯಿಲ ಗ್ರಾಮ, ಬೆಳ್ತಂಗಡಿ ತಾಲೂಕು ರವರಿಗೆ ಸುಮಾರು 3 ತಿಂಗಳಿನಿಂದ ಇನ್ಟ್ರಾಗ್ರಾಂ ನಲ್ಲಿ ಪರಿಚಯವಾದ ಹುಡುಗಿಯೊಂದಿಗೆ ಚಾಟಿಂಗ್ ಮಾಡುತ್ತಿದ್ದು ಈ ವಿಚಾರವು ಆಕೆಯ ಮನೆಯವರಿಗೆ ಗೊತ್ತಾಗಿ ಆಕೆಯ ಅಣ್ಣ ರಂಜಿತ್ ಎಂಬಾತನು ಕೋಪಗೊಂಡು ದಿನಾಂಕ: 24-07-2022 ರಂದು ತನ್ನ ಸಂಗಡಿಗರೊಂದಿಗೆ ಕೆಎ 07-ಎಂ 3480 ನೇ ಬೊಲೋರೊ ವಾಹನದಲ್ಲಿ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ದರ್ಪಿಂಜ ಸೇತುವೆಯ ಬಳಿ ಬಂದು ಪಿರ್ಯಾದುದಾರರ ಸ್ಕೂಟರನ್ನು ತಡೆದು ನಿಲ್ಲಿಸಿ ಪಿರ್ಯಾದುದಾರರನ್ನು ಬೊಲೋರೊ ವಾಹನದಲ್ಲಿದ್ದ ಇತರ ನಾಲ್ವರು ಸಹಚರರೊಂದಿಗೆ ಅಕ್ರಮ ಕೂಟ ಸೇರಿ ಸಮಾನ ಉದ್ದೇಶದಿಂದ ಸ್ಕೂಟರಿನಿಂದ ಎಳೆದು ಹಾಕಿ ಕೈಯಿಂದ ಮುಖಕ್ಕೆ ಕೈ ಕಾಲುಗಳಿಗೆ ಹೊಡೆದು ಪಿರ್ಯಾದುದಾರರನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳಿಂದ ಬೈದು ಬೊಲೋರಾ ವಾಹನದಲ್ಲಿ ಕುಳ್ಳಿರಿಸಿಕೊಂಡು ಕನ್ನಾಜೆ ರಸ್ತೆಯಿಂದಾಗಿ ಸವಣಾಲು ಮುಖಾಂತರ ಆಳದಂಗಡಿಯ ಕೆದ್ದು ಎಂಬಲ್ಲಿಗೆ ಕರೆದುಕೊಂಡು ಹೋಗಿ ಬೊಲೋರೊ ವಾಹನದಿಂದ ಕೆಳಗೆ ಇಳಿಸಿ ಪುನಃ ಅವರೆಲ್ಲರೂ ಸೇರಿ ಕೈಯಿಂದ ಹೊಡೆದು ಕಾಲಿನಿಂದ ತುಳಿದರು. ಪಿರ್ಯಾದುದಾರರು ನೋಡಲಾಗಿ ರಂಜಿತ್ ನ ಜೊತೆಯಲ್ಲಿ ಪ್ರವೀಣ, ವಿಜೆತ್ ,ಪ್ರದೀಪ್ ಮತ್ತು ಸುಕೇಶ ರವರು ಇದ್ದು, ಇವರ ಪೈಕಿ ರಂಜೀತ್ ನು ಪಿರ್ಯಾದುದಾರರನ್ನು ಉದ್ದೇಶಿಸಿ “ಪುನಃ ನನ್ನ ತಂಗಿಗೆ ಮೆಸೇಜ್ ಅಥವಾ ಕಾಲ್ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಬೊಲೋರೊ ವಾಹನದೊಂದಿಗೆ ಸ್ಥಳದಿಂದ ಹೋಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 49/2022 ಕಲಂ: 143, 147, 341, 323, 504, 506 ಜೊತೆಗೆ 149 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪೊಲೀಸ್ ಉಪನಿರೀಕ್ಷಕರು ಬಂಟ್ವಾಳ ಗ್ರಾಮಾಂತರ ಠಾಣೆ ರವರು ಸಿಬ್ಬಂದಿಗಳೊದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮೋಂತಿಮಾರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯ ಮಂಚಿಕಟ್ಟೆಯಿಂದ ಗೂಡ್ಸ್ ವಾಹನ ಬರುತ್ತಿದ್ದುದನ್ನು ಕಂಡು ಪಿರ್ಯಾದುದಾರರು ಮತ್ತು ಸಿಬಂದಿಗಳು ಗೂಡ್ಸ್ ವಾಹನ ವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಗೂಡ್ಸ್ ವಾಹನವನ್ನು ಚಾಲಕನು ನಿಲ್ಲಿಸದೆ ಮುಂದಕ್ಕೆ ಹೋಗಿದ್ದು ಪಿರ್ಯಾದುದಾರರು ಮತ್ತು ಸಿಬಂದಿಗಳು ಇಲಾಖಾ ಜೀಪಿನಲ್ಲಿ ಬೆನ್ನಟ್ಟಿ 500 ಮೀಟರ್ ದೂರ ಅಡ್ಡ ಗಟ್ಟಿ ನಿಲ್ಲಿಸಿದಾಗ ಅದರಲ್ಲಿ ಒಬ್ಬಾತ ಓಡಿ ಹೋಗಿದ್ದು ಚಾಲಕ ಸೀಟಿನಲ್ಲಿದ್ದ ಒಬ್ಬಾತನನ್ನು ಸುತ್ತುವರಿದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಅಬ್ದುಲ್ ಹಮೀದ್ ಎಂಬುವುದಾಗಿ ತಿಳಿಸಿದ್ದು. ಓಡಿ ಹೋದವನ ಹೆಸರು ಕೇಳಲಾಗಿ ಅಬ್ಬಾಸ್ ಮೂಲೆ ಮನೆ ಎಂದು ತಿಳಿಸಿದ್ದು, ಗೂಡ್ಸ್ ವಾಹನದಲ್ಲಿದ್ದ ಸರಕಿನ ಬಗ್ಗೆ ಕೇಳಲಾಗಿ ಜಾನುವಾರು ಎಂದು ಹೇಳಿದ್ದು ಗೂಡ್ಸ್ ವಾಹನದ ನಂಬ್ರ ನೋಡಲಾಗಿ KA-21-B-0069 ಆಗಿದ್ದು ಅದರ ಒಳಗೆ ನೋಡಲಾಗಿ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿದ್ದು ಕಂಡು ಬಂದಿದ್ದು ಈ ಜಾನುವಾರುಗಳನ್ನು ಸಾಗಾಟ ಮಾಡಲು ಪರವಾನಿಗೆ ಯನ್ನು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿದ್ದು ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದರಿಂದ ಗೂಡ್ಸ್ ವಾಹನದಿಂದ 3 ಜಾನುವಾರುಗಳನ್ನು ಹೊರಗೆ ಇಳಿಸಿದ್ದು ಅಬ್ದುಲ್ ಹಮೀದ್ ಮತ್ತು ಅಬ್ಬಾಸ್ ಮೂಲೆ ಮನೆ ರವರು ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಿ ಅಪರಾಧ ಎಸಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 54.-2022 ಕಲಂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ2020 ಕಲಂ; 5,7 ಮತ್ತು 12 ಹಾಗೂ ಕಲಂ 11(D) ಪ್ರಾಣಿ ಹಿಂಸೆ ತಡೆ ಕಾಯ್ದೆ 1960. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ : ಪೊಲೀಸು ಉಪ ನಿರೀಕ್ಷಕರು ಸುಳ್ಯ ಪೊಲೀಸ್ ಠಾಣೆರವರು ದಿನಾಂಕ: 23.07.2022 ರಂದು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯ ಮಾಡುತ್ತಿರುವ ಸಮಯ ನೆಲ್ಲಿಕುಮೇರಿ ಕೆಎಫ್‌ಡಿಸಿ ರಬ್ಬರ್ ತೋಟದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಜೂಜು ಆಟವಾಡುತ್ತಿರುವ ಬಗ್ಗೆ ಮಾಹಿತಿ ಪ್ರಕಾರ ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ ರಬ್ಬರ್ ತೋಟದ ನೆಲಕ್ಕೆ ಬೆಡ್‌ಶೀಟ್ ಹಾಸಿ 08 ಜನ ಗುಂಪು ಸೇರಿಕೊಂಡು ಆ ಪೈಕಿ ಒಬ್ಬನು ಕೈಯಲ್ಲಿ ಇಸ್ಪೀಟ್ ಎಲೆಗಳನ್ನು ಹಿಡಿದುಕೊಂಡು ಉಲಾಯಿ-ಪಿದಾಯಿ ಎಂದು ಹೇಳುತ್ತ ಇಸ್ಪೀಟ್ ಎಲೆಗಳನ್ನು ಎರಡು ಕಡೆ ಹಾಕುತ್ತಿದ್ದು ಆ ಸಮಯ ಉಳಿದವರು ಹಣವನ್ನು ಪಣವನ್ನಾಗಿಟ್ಟು ಜೂಜಾಡುತ್ತಿರುವುದು ಕಂಡು ಬಂದಿದ್ದು, ಗುಂಪು ಸೇರಿದಲ್ಲಿಗೆ ಸುತ್ತಲು ದಾಳಿ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ 1. ಸುರೇಶ 2.ತೇಜೇಶ್ವರ 3.ಜಿತೇಶ್ 4. ಹಿಮಕರ 5. ಲಿಂಗರಾಜು 6. ಮಾಧವ 7. ವೆಂಕಪ್ಪ ಎಂಬುದಾಗಿ ತಿಳಿಸಿದ್ದು, ಓಡಿ ಹೋದವನ ಹೆಸರು ತಿಳಿಯಲಾಗಿ ಮರ್ಕಂಜ ಗ್ರಾಮದ ಎಲಿಮಲೆ ಗಿರಿ ಎಂದು ತಿಳಿದು ಬಂದಿದ್ದು, ಅವರನ್ನು ವಶಕ್ಕೆ ಪಡೆದು ಸುಳ್ಯ ಪೊಲೀಸ್ ಠಾಣಾ ಅ,ಕ್ರ 84/2022 ಕಲಂ 87 ಕೆ.ಪಿ ಅಕ್ಟ್ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦1
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎ. ಮನೋಹರ್ (48) ತಂದೆ: ದಿ| ಸೀತಾರಾಮ್ ವಾಸ: ರಾಘವೇಂದ್ರ ಮಠದ ಬಳಿ, ಕಲ್ಲಾರೆ ಮನೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರು ಪುತ್ತೂರು ನಗರ ಸಭಾ ವ್ಯಾಪ್ತಿಯ 23 ನೇ ವಾರ್ಡಿನ ನಗರ ಸಭಾ ಸದಸ್ಯನಾಗಿರುತ್ತಾರೆ. ಪುತ್ತೂರು ಪೇಟೆಗೆ ಹಾವೇರಿ ಜಿಲ್ಲೆಯ, ಬ್ಯಾಡಗಿ ತಾಲೂಕಿನ, ಸಿದ್ದಾಪುರ ಗ್ರಾಮದ, ದಿ| ಬಸಂತಪ್ಪರವರ ಮಗ ಸುಮಾರು 47 ವರ್ಷ ಪ್ರಾಯದ ಸಂಗಮೇಶ್ ಎಂಬವರು ಕೆಲವು ಸಮಯದ ಹಿಂದೆ ಕೂಲಿ ಕೆಲಸ ಮಾಡುವರೇ ಬಂದವರು ದಿನಾಂಕ: 22.07.2022 ರಂದು ಸಾಯಂಕಾಲ 6.00 ಗಂಟೆಗೆ ಪುತ್ತೂರು ಕಸಬಾ ಗ್ರಾಮದ, ದನ್ವಂತರಿ ಆಸ್ಪತ್ರೆಯ ಬಳಿ ನಿಂತುಕೊಂಡಿದ್ದಾಗ ತಲೆ ತಿರುಗಿ ಬಿದ್ದಿರುತ್ತಾರೆ. ಬಳಿಕ ಅವರನ್ನು ಅಲ್ಲಿ ಸೇರಿದ ಜನರು ಅಂಬುಲೆನ್ಸ್ ವಾಹನವೊಂದರಲ್ಲಿ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಅವರನ್ನು ರಾತ್ರಿ 11.00 ಗಂಟೆಗೆ ಒಳರೋಗಿಯನ್ನಾಗಿ ದಾಖಲಿಸಿ ಚಿಕಿತ್ಸೆ ನೀಡಿರುತ್ತಾರೆ. ಹೀಗೆ ಚಿಕಿತ್ಸೆಯಲ್ಲಿದ್ದ ಸಂಗಮೇಶ್‌ರವರು ದಿನಾಂಕ: 23.07.2022 ರಂದು ರಾತ್ರಿ 11.00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಯುಡಿಆರ್ 19/2022 ಕಲಂ: 174 (3) & (iv) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.