ಅಪಘಾತ ಪ್ರಕರಣ: ೦5
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಯಶವಂತ ಆರ್ ಬಾಳಿಗ (55), ತಂದೆ: ರಾಮದಾಸ್ ಜಿ ಬಾಳಿಗ ವಾಸ:ದ್ವಾರಕ ಮೋಟಾರು ಡ್ರೈವಿಂಗ್ ಸ್ಕೂಲ್ ಬಾಳಿಗ ಬಿಲ್ಡಿಂಗ್ ,ಮುಖ್ಯರಸ್ತೆ,ಬೆಳ್ತಂಗಡಿ ಕಸಬಾ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 19-11-2021 ರಂದು ತನ್ನ ಬಾಬ್ತು ಕಾರು ನಂಬ್ರ ಕೆಎ 70 ಎಮ್ 2877 ನೇಯದನ್ನು ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಬಾಳಿಗ ಬಿಲ್ಡಿಂಗ್ ಕಛೇರಿಯ ಆವರಣದ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಸಮಯ ಸುಮಾರು ರಾತ್ರಿ 08.30. ಗಂಟೆಗೆ ಯಾವುದೋ ಅಪರಿಚಿತ ವಾಹನವು ಢಿಕ್ಕಿ ಹೊಡೆಸಿ ಪರಾರಿಯಾಗಿದ್ದು ನಂತರ ಪಿರ್ಯದಿದಾರರ ಕಛೇರಿ ಸಿ ಸಿ ಕ್ಯಾಮರ ದಲ್ಲಿ ಪರಿಶೀಲಿಸಲಾಗಿ ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಪಡೆಸಿದ ಕಾರು ನಂಬ್ರ ಕೆಎ 19 ಎಮ್ ಡಿ 8509 ನೇ ಕಾರು ಎಂಬುದು ತಿಳಿಯಿತು, ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 96/2021, ಕಲಂ; 279,ಭಾದಂ.ಸಂ.ಮತ್ತು 134 (ಬಿ) R/w 187 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬ್ದುಲ್ ಸಮದ್ ಪ್ರಾಯ: 32 ವರ್ಷತಂದೆ: ದಿ|| ಶೇಖಬ್ಬ ವಾಸ: ಪರ್ಲಿಯಾ ಮನೆ, ಬಿ ಮೂಡ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 24.12.2021 ರಂದು ತನ್ನ ಬಾಬ್ತು ಕಾರಿನಲ್ಲಿ ಫರಂಗಿಪೇಟೆಗೆ ಹೋದವರು ವಾಪಾಸ್ಸು ಮನೆ ಕಡೆಗೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಾ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪೊನ್ನೋಡಿ ಎಂಬಲ್ಲಿಗೆ ತಲುಪಿದಾಗ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಗೆ ಯಾವುದೊ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ತಲೆಗೆ ಬಲಕೈಗೆ ಬಲಕಾಲಿಗೆ ರಕ್ತಗಾಯವಾಗಿದ್ದು ಗಾಯಾಳುವನ್ನು ಸಾರ್ವಜನಿಕರೊಂದಿಗೆ ವಾಹನವೊಂದರಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಅಪಘಾತ ಸಂಭವಿಸುವಾಗ ಸಮಯ ಸುಮಾರು 18:45 ಗಂಟೆಗೆ ಆಗಬಹುದು. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 146/2021 ಕಲಂ 279,304(ಎ) ಐಪಿಸಿ & 134 (ಎ&ಬಿ) 187 ಮೋ ವಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದುರ್ಗಾಪ್ರಸಾದ್ (28), ತಂದೆ: ಕರಿಯ ಪೂಜಾರಿ, ವಾಸ: ಬಾಕ್ಯರೋಡಿ ಮನೆ, ಆರಂಬೋಡಿ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ 23.12.2021 ರಂದು ತಮ್ಮ ಬಾಬ್ತು ಕೆಎ.21.ಡಬ್ಲ್ಯೂ.9817 ನೇ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಸಹಸವಾರನನ್ನಾಗಿ ದೀಪಕ್ ಎಂಬುವವರನ್ನು ಕುಳ್ಳಿರಿಸಿಕೊಂಡು ಸಿದ್ದಕಟ್ಟೆ ಕಡೆಗೆ ಹೋಗುತ್ತಾ ಬೆಳ್ತಂಗಡಿ ತಾಲೂಕು ಆರಂಬೋಡಿ ಗ್ರಾಮದ ತಂಕರಬೆಟ್ಟು ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ರಾಮಚಂದ್ರ ಎಂಬುವವರು ಚಲಾಯಿಸಿಕೊಂಡು ಬರುತ್ತಿದ್ದ ಕೆಎ.19.ಎಸಿ.2416ನೇ ಮಹೀಂದ್ರ ಜೀತೋ ವಾಹನವನ್ನು ರಸ್ತೆಯಲ್ಲಿ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮವಾಗಿ ಎರಡೂ ವಾಹನಗಳು ರಸ್ತೆಯಲ್ಲಿ ಅಡ್ಡ ಬಿದ್ದಿದ್ದು, ಪರಿಣಾಮವಾಗಿ ಫಿರ್ಯಾದಿದಾರ ವಾಹನದಲ್ಲಿದ್ದ ದೀಪಕ್ ಎಂಬುವವರಿಗೆ ಕೈಗೆ ಮತ್ತು ಹಣೆಗೆ ರಕ್ತ ಗಾಯವಾಗಿದ್ದು, ಮಹಿಂದ್ರ ಜೀತೋ ವಾಹನದಲ್ಲಿ ಕ್ಲೀನರ್ ಆಗಿದ್ದ ಹರಿಯಪ್ಪ ಎಂಬುವವರಿಗೆ ಭುಜಕ್ಕೆ ಮತ್ತು ಕೈಗೆ ರಕ್ತಗಾಯವಾಗಿರುತ್ತದೆ. ದೀಪಕ್ರವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹಾಗೂ ಹರಿಯಪ್ಪ ಎಂಬುವವರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 82-2021 ಕಲಂ: 279,337, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪಿ. ಸುಭಾಸ್ ಭಟ್ 22 ವರ್ಷತಂದೆ: ಈಶ್ವರ ಭಟ್ ಪಿ. ವಾಸ: ಕೊಡಿಯೂರು ಮನೆ, ಕೊಡಿಪ್ಪಾಡಿ ಗ್ರಾಮ & ಅಂಚೆ, ಕಬಕ ಹೋಬಳಿ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ; 23-12-2021 ರಂದು ಆರೋಪಿ ಮೋಟಾರ್ ಸೈಕಲ್ ಸವಾರ ಚೇತನ್ ಎಂಬುವರು KA-21-EB-4438 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಂಜಲಡ್ಪು-ಕೊಡಿಪ್ಪಾಡಿ-ಕಬಕ ಸಾವಜನಿಕ ಡಾಮಾರು ರಸ್ತೆಯಲ್ಲಿ ಕಬಕ ಕಡೆಯಿಂದ ಮಂಜಲಡ್ಪು ಕಡೆಗೆಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಕೊಡಿಪ್ಪಾಡಿ ಗ್ರಾಮದ ಕೊಟ್ರುಪಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆಯನ್ನು ನೀಡದೆ, ಇಂಡಿಕೇಟರ್ ಹಾಕದೇ ರಸ್ತೆಯ ಎಡಬದಿಯಲ್ಲಿರುವ ಕಜೆ ಕಡೆಗೆ ಹಾದು ಹೋಗುವ ರಸ್ತೆಯ ಕಡೆಗೆ ಒಮ್ಮೆಲೇ ಚಲಾಯಿಸಿದ ಪರಿಣಾಮ. ಫಿರ್ಯಾದುದಾರರಾದ ಪಿ. ಸುಭಾಸ್ ಭಟ್ ರವರು ಕೊಡಿಂಬಾಡಿ ಕಡೆಯಿಂದ ಕೊಡಿಪ್ಪಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-21-R-6825 ನೇ ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿನ ತೊಡೆಗೆ, ಗಲ್ಲಕ್ಕೆ , ನಾಲಿಗೆಗೆ ಗುದ್ದಿದ ಹಾಗೂ ರಕ್ತಗಾಯ, ಬಲಕೈ ತಟ್ಟಿನ ಬಳಿ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಆರೋಪಿ ಮೋಟಾರ್ ಸೈಕಲ್ ಸವಾರ ಚೇತನ್ರವರಿಗೂ ಗಾಯಗಳಾಗಿದ್ದು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 156/2021 ಕಲಂ: 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ರಶೇಖರ ಪ್ರಾಯ:49ವರ್ಷ ತಂದೆ: ಚನ್ನಬಸಪ್ಪ ವಾಸ:D.NO:162, ಬಸವ ನಗರ, ಕಾವೂರು, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 24-12-2021 ರಂದು 11-40 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಕೌಶಿಕ್ ಎಂಬವರು KA-21-L-1969ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಕಬಕ ಎಂಬಲ್ಲಿ ಕಾರೊಂದನ್ನು ಓವರ್ಟೆಕ್ ಮಾಡಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಚಂದ್ರಶೇಖರರವರು ಎಂಬವರು ಚಾಲಕರಾಗಿ ಉಡುಪಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-04-F-1097ನೇ ನೋಂದಣಿ ನಂಬ್ರದ KSRTC ಬಸ್ಗೆ ಅಪಘಾತವಾಗಿ, ಆರೋಪಿ ಮೋಟಾರ್ ಸೈಕಲ್ ಸವಾರನ ಬೆರಳು ಮತ್ತು ತಲೆಗೆ ಗಾಯವಾಗಿದ್ದು ಸ್ಥಳೀಯ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕಳುಹಿಸಿ ಕೊಡಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 157/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೋಹಿನಿ @ ಬೇಬಿ(53), ಗಂಡ: ಕೊರಗಪ್ಪ @ ಬಾಬು ಲಿಂಗಾಯತ ವಾಸ: ಮುಕ್ಕುರೆ ಮನೆ, ಕರಂಬಾರು ಗ್ರಾಮ, ಬೆಳ್ತಂಗಡಿ ತಾಲೂಕು ರವರು ಮತ್ತು ಆರೋಪಿತರು ಸಂಬಂಧಿಕರಾಗಿದ್ದು, ಹಾಗೂ ಒಬ್ಬರಿಗೊಬ್ಬರು ಮಾತುಕತೆ ಇರುವುದಿಲ್ಲ, ಫಿರ್ಯಾದಿದಾರರು ಅಡಿಕೆ ಕೃಷಿ ಮಾಡಿದ್ದನ್ನು ಕಂಡು ಹೊಟ್ಟೆಕಿಚ್ಚು ಮಾಡಿಕೊಂಡು ಈ ಹಿಂದೆ ಕೂಡಾ ಆರೋಪಿಗಳು ಅಡಿಕೆ ಗಿಡಗಳನ್ನು ಕಡಿದು ಫಿರ್ಯಾದಿದಾರರಿಗೆ ಮೈಗೆ ಕೈಹಾಕಿ ಹಲ್ಲೆ ನಡೆಸಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ನಂತರದ ದಿನಗಳಲ್ಲಿ ಕೂಡಾ ಅವರುಗಳು ಗಿಡಗಳನ್ನು ಕಡಿದುಹಾಕಿರುತ್ತಾರೆ. ದಿನಾಂಕ 23.12.2021 ರಂದು ರಾತ್ರಿ ಮನೆಯ ನಾಯಿಗಳು ಬೊಗಳುತ್ತಿದ್ದುದನ್ನು ಕಂಡು, ಫಿರ್ಯಾದಿದಾರರು ಮತ್ತು ಅವರ ಮಗ ಎಚ್ಚರಗೊಂಡು ಟಾರ್ಚ್ ಲೈಟ್ನ ಬೆಳಕಿನಲ್ಲಿ ನೋಡಲಾಗಿ ಅವರ ಅಡಿಕೆ ತೋಟದಲ್ಲಿ 4 ಜನ ಇರುವುದನ್ನು ಕಂಡು ಅಲ್ಲಿಗೆ ಹೋಗಿ ನೋಡಿದಾಗ ಅಣ್ಣಿ ತೆಲುಗ, ಗುಲಾಬಿ ಮತ್ತುಅವರ ಮಗ ಗಣೇಶ ಮತ್ತು ಜಗದೀಶರವರಿದ್ದು ಅವರಲ್ಲಿ ಅಣ್ಣಿ ತೆಲುಗ ಮತ್ತು ಜಗದೀಶ ರವರು ಅವರ ಕೈಯಲ್ಲಿದ್ದ ಕತ್ತಿಯಿಂದ ಅಡಿಕೆ ಗಿಡಗಳನ್ನು ಕಡಿಯುತ್ತಿದ್ದು, ಯಾಕೆ ಗಿಡಗಳನ್ನು ಕಡಿಯುತ್ತೀರಿ ಎಂದು ವಿಚಾರಿಸಿದ್ದಕ್ಕೆ “ಅವಾಚ್ಯ ಶಬ್ದದಿಂದ ಬೈದು ನಮ್ಮ ವಿಷಯಕ್ಕೆ ಬಂದರೆ ನಿಮ್ಮನ್ನೂ ಕೂಡಾ ಇದೇ ರೀತಿ ಕಡಿದು ಹಾಕುತ್ತೇವೆ” ಎಂದು ಜೀವ ಬೆದರಿಕೆ ಹಾಕಿ ಕತ್ತಿಯನ್ನು ಅಲ್ಲೆ ಎಸೆದು ಓಡಿ ಹೋಗಿರುತ್ತಾರೆ. ಅವರು ಸುಮಾರು 20 ಗಿಡಗಳನ್ನು ಕಡಿದುಹಾಕಿದ್ದು ಇದರಿಂದ 10,000 ರೂ ನಷ್ಟ ಆಗಬಹುದು ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 81-2021 ಕಲಂ: 447, 427, 504, 506 r/w 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜೊರಾಲ್ಡ್ ಡಿ ಸೋಜಾ ತಂದೆ: ತೋಮಸ್ ಡಿ ಸೋಜಾ ವಾಸ: ಕಂರ್ಬಿತ್ತಿಲು ಮನೆ, ಸೋಣಂದೂರು ಗ್ರಾಮ ಬೆಳ್ತಂಗಡಿ ತಾಲೂಕು ರವರ ಮನೆಯಲ್ಲಿ ಸುಮಾರು 3 ತಿಂಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದ ಕುಂಞಿಮೋನು ಪ್ರಾಯ 60 ವರ್ಷ ಎಂಬವನು ಸುಮಾರು 2 ವಾರಗಳ ಹಿಂದೆ ಕೆಲಸಬಿಟ್ಟು ಹೋದವನು, ದಿನಾಂಕ:24.12.2021 ರಂದು ಪಿರ್ಯಾದಿದಾರರ ಹೆಂಡತಿ ಮಾಲಾಡಿ ಗ್ರಾಮ ಪಂಚಾಯತಿಗೆ ಹೋಗಿ ಮರಳಿ ಮನೆಯ ಕಡೆಗೆ ಬರುವಾಗ ಪಿರ್ಯಾದಿದಾರರ ಬಾಬ್ತು ತೋಟದಲ್ಲಿ ಯಾರೋ ಬಿದ್ದುಕೊಂಡಿರುವುದಾಗಿ ಪಿರ್ಯಾದಿದಾರರ ಹೆಂಡತಿ ತಿಳಿಸಿದ ಮೇರೆಗೆ ತೋಟಕ್ಕೆ ಹೋಗಿ ನೋಡಿದಾಗ ಸದ್ರಿ ವ್ಯಕ್ತಿ ಪಿರ್ಯಾದಿದಾರರ ಮನೆಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಕುಂಞಿಮೋನು ಆಗಿದ್ದು, ಆತನು ವಿಪರೀತ ಅಮಲು ಪದಾರ್ಥವನ್ನು ಸೇವನೆ ಮಾಡಿಕೊಂಡಂತೆ ಕಂಡು ಬಂದಿರುವುದರಿಂದ ಪಿರ್ಯಾದಿದಾರರು ಆತನನ್ನು ಉಪಚರಿಸಿ ಮನೆಗೆ ಕರೆದುಕೊಂಡು ಬಂದಿದ್ದು, ಬಳಿಕ ಮನೆಯ ಬಳಿ ಇದ್ದವನು ಸಂಜೆ ಸುಮಾರು 3-30 ಗಂಟೆಗೆ ಮನೆಯ ಮುಂದೆ ಮತ್ತೆ ಬಿದ್ದುಕೊಂಡಿದವನನ್ನು ನೋಡಿದಾಗ ಆತನ ಬಾಯಿಯಿಂದ ವಿಷ ಪದಾರ್ಥ ಸೇವನೆ ಮಾಡಿದ ಘಾಟು ವಾಸನೆ ಹಾಗೂ ಬಾಯಿಯಲ್ಲಿ ನೊರೆ ಬರುತ್ತಿರುವುದರಿಂದ ಆತನನ್ನು ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಪರೀಕ್ಷಿಸಿ ಸಂಜೆ 4.45 ಗಂಟೆಗ ಮೃತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆ UDR NO 21/2021 ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.