ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಕಾಂತ ಎನ್ ಪ್ರಾಯ33 ವರ್ಷ ತಂದೆ ಪುಟ್ಟ ನಾಯ್ಕ ವಾಸ ನೀರ್ಕಜೆ ಮನೆ   ಕೇಪು ಗ್ರಾಮ ಬಂಟ್ವಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 24-03-2022 ರಂದು ಮಂಜೇಶ್ವರ- ಸುಬ್ರಹ್ಮಣ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ರಿಕ್ಷಾ ನಂಬ್ರ ಕೆಎ-70-3516 ನೇಯದನ್ನು ಆದರ ಚಾಲಕ ರವಿಚಂದ್ರ ಎನ್ ರವರು ಉಕ್ಕುಡ ಕಡೆಯಿಂದ ನೀರ್ಕಜೆ ಕಡೆಗೆ ಸವಾರಿ ಮಾಡಿಕೊಂಡು ಹೋಗಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ನೀರ್ಕಜೆ ಎಂಬಲ್ಲಿಗೆ ತಲುಪಿದಾಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋದ ಪರಿಣಾಮ ನೀರ್ಕಜೆ ಕಡೆಯಿಂದ ಉಕ್ಕುಡ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಆಕ್ಟೀವಾ ಹೊಂಡಾ ಕೆಎ-19-ಇವೈ-6721 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅ್ಯಕ್ಟೀವ್ ಹೊಂಡ ಸವಾರ ಕೃಷ್ಣಪ್ಪ ಪೂಜಾರಿ ರವರು ಹೊಂಡಾ ಆಕ್ಟೀವಾ ಸಮೇತ ರಸ್ತೆಗೆ ಮಗುಚಿ ಅವರ ತಲೆಯ ಮೇಲ್ಬಾಗ ಗುದ್ದಿದ ಗಾಯ, ಬಲ ಕಾಲಿನ ಪಾದಕ್ಕೆ ರಕ್ತ ಗಾಯ ಹಾಗು ಗುದ್ದಿದ ಗಾಯ ,ಬಲ ಕೈಗೆ ತರಚಿದ ರೀತಿಯ ಗಾಯ ಅಗಿ ಗಾಯಾಳು  ಚಿಕಿತ್ಸೆಯ ಬಗ್ಗೆ ಪುತ್ತೂರಿನ ಪ್ರಗತಿ ದಾಖಲಾಗಿ ಪ್ರಗತಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಈ ಬಗ್ಗೆ ವಿಟ್ಲ ಠಾಣಾ ಅಕ್ರ 51/2020 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರವಿಚಂದ್ರ (36) ಕುಂಞರಾಮನ್ ವಾಸ: ಸುಣ್ಣಮೂಲೆ ಮನೆ, ಕನಕಮಜಲು ಗ್ರಾಮ, ಸುಳ್ಯ ತಾಲೂಕು ರವರು ದಿನಾಂಕ 25.03.2022 ರಂದು  ತಮ್ಮ ಬಾಬ್ತು ಆಟೋ ರಿಕ್ಷಾ ಕೆಎ 21 ಬಿ 8294 ನೇದರಲ್ಲಿ ಆತನ ಸ್ನೇಹಿತರಾದ ಕೃಷ್ಣ, ಅಶೋಕ, ನಳಿನಾಕ್ಷ ಎಂಬವರೊಂದಿಗೆ ಬರುತ್ತಿರುವರೇ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಪಾಲಡ್ಕ ಎಂಬಲ್ಲಿ ತಲುಪುತ್ತಿದ್ದಂತೆ ಸುಳ್ಯ ಕಡೆಯಿಂದ ಕೆಎ 08 ಎಂ 3273 ನೇದರ ಮಾರುತಿ ಕಾರು ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರನ್ನು ಜಿಗ್ ಜಾಗ್ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಎದುರಿನ ಕಚ್ಚಾ ರಸ್ತೆಯಲ್ಲಿ  ನಿಂತಿದ್ದ ಕೆಎ 21 ಜೆ 3301 ನೇ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿ ನಂತರ ಪೆರಾಜೆ ಕಡೆಗೆ ಹೋಗಿ ಪುನಃ ಹಿಂತಿರುಗಿ ಬಂದು ಪಿರ್ಯಾದುದಾರರ ಆಟೋ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿವುಂಟು ಮಾಡಿದ ಪರಿಣಾಮ ಆಟೋ ರಿಕ್ಷಾ ಜಕ್ಕಂ ಆಗಿದ್ದು, ಆದರಲ್ಲಿದ್ದ ನಳಿನಾಕ್ಷ ಎಂಬವರಿಗೆ ಗುದ್ದಿದ ಗಾಯವಾಗಿರುವುದಾಗಿ ನಂತರ ಜರ್ನಾಧನ ಎಂಬುವವರು ಮೋಟಾರ್ ಸೈಕಲ್ ಸವಾರ ಮತ್ತು ನಳಿನಾಕ್ಷ ಎಂಬವರನ್ನು  ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅಕ್ರ  37/22 ಕಲಂ:  279,337 ಐಪಿಸಿ ಮತ್ತು 134 (A &B) IMV ACT  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅಪ್ಪಿ ಪ್ರಾಯ 66 ವರ್ಷ ಗಂಡ ದಿ|| ಕೃಷ್ಣಪ್ಪ ಪೂಜಾರಿ, ಕೊಡಂಗೆ ಮನೆ, ಮಣಿನಾಲ್ಕೂರು ಗ್ರಾಮ  ಬಂಟ್ವಾಳ ತಾಲೂಕು  ರವರಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗನಿದ್ದು, ಹೆಣ್ಣು ಮಕ್ಕಳಿಗೆ ಮದುವೆಯಾಗಿರುತ್ತದೆ.  ಮಗ ಆರೋಪಿ ನವೀನನು ಪ್ರತ್ಯೇಕ ಮನೆ ಮಾಡಿ ಆತನ ಸಂಸಾರದೊಂದಿಗೆ ಕುರಿಯಾಳದಲ್ಲಿ  ಇರುವುದಾಗಿದೆ. ಪಿರ್ಯಾದಿದಾರರರು ಒಬ್ಬರೇ ಮನೆಯಲ್ಲಿ ಇದ್ದು, ಪಿರ್ಯಾದುದಾರರ ಹೆಸರಿನಲ್ಲಿ 3.20 ಎಕ್ರೆ ಪಟ್ಟಾ ಜಾಗ ಹಾಗೂ ಸುಮಾರು 5 ಎಕ್ರೆ ಕುಮ್ಕಿ ಜಾಗಿವಿದ್ದು ಅದರಲ್ಲಿ ಬೆಳೆದ ಅಡಿಕೆ ಗಿಡಗಳನ್ನು ಹಾಗೂ ಜಾಗವನ್ನೂ ಆರೋಪಿ  ನವೀನ ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಪದೇ ಪದೇ  ಒತ್ತಾಯಿಸುತ್ತಿದ್ದು, ಇದನ್ನು ಅರಿತ ಹೆಣ್ಣು ಮಕ್ಕಳು  ಪಾಲು ಮಾಡಲು ಬಂಟ್ವಾಳ ಸಿವಿಲ್ ನ್ಯಾಯಾಲಯಲ್ಲಿ ದಾವೆ ಹೂಡಿದ್ದು, ದಿನಾಂಕ:26-03-2022 ರಂದು ಪಿರ್ಯಾದಿದಾರರು ಮತ್ತು   ಮಕ್ಕಳು  ಬಂಟ್ವಾಳ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದ್ದು ಇದರಿಂದ ಮನಸ್ತಾಪಗೊಂಡ  ನವೀನನು ದಿನಾಂಕ 25.03.2022  ರಂದು ಬೆಳಿಗ್ಗೆ 9.30 ಗಂಟೆಗೆ ಪಿರ್ಯಾದುದಾರರ ಮನೆಗೆ ಬಂದು ಕೈಯಲ್ಲಿ ಮರದ ದೊಣ್ಣೆಯನ್ನು ಹಿಡಿದುಕೊಂಡು ಪಿರ್ಯಾದಿದಾರರ ಮನೆಯ ಒಳಗೆ ಹೋಗಿ ಪಿರ್ಯಾದಿದಾರರಿಗೆ ಬಲಕೈ, ಕೋಲು ಕೈಗೆ, ಬಲ ಭುಜಕ್ಕೆ ಹೊಡೆದುದಲ್ಲದೇ,   ಎರಡು ದಿನಗಳ ಹಿಂದೆ ಮನೆಗೆ  ಬಂದ  ಪಿರ್ಯಾದಿದಾರರ ಮಗಳು ಜಯಂತಿಯು  ತಡೆಯಲು ಬಂದಾಗ  ಅವರಿಗೂ ಕೂಡ ಎಡ ಕೈ ರಟ್ಟೆಗೆ,  ಮಣಿಗಂಟಿಗೆ , ಹೆಬ್ಬೆರಳಿಗೆ ಬೆನ್ನಿನ ಬಲ ಬದಿಗೆ, ಎಡ ಕಾಲಿನ ಮೊಣಗಂಟಿಗೆ  ಹೊಡೆದುದಲ್ಲದೆ  ಪಿರ್ಯಾದಿದಾರರನ್ನು ಮತ್ತು  ಜಯಂತಿಯನ್ನು ದೂಡಿ ಹಾಕಿ  ನಿಮ್ಮನ್ನು ಈ ಜಾಗ, ಮನೆಯಲ್ಲಿ ಜೀವಂತವಾಗಿ ಬದುಕಲು ಬಿಡುವುದಿಲ್ಲ ಎಂದು ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ  ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ,ಕ್ರ 26/2022 ಕಲಂ 324.504.506  ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-03-2022 10:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080