ಅಭಿಪ್ರಾಯ / ಸಲಹೆಗಳು

ಕೊಲೆ ಬೆದರಿಕೆ ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯತೀಶ (30 ವರ್ಷ)ತಂದೆ: ಜಯರಾಮ ಪುರುಷ, ವಾಸ: ಪಳಿಕೆ ಮನೆ , ಮರೀಲ್‌, ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ 24.05.2021 ರಂದು ಅವರ ಅತ್ತೆ ಮನೆಯಲ್ಲಿರುವ  ಸಮಯ ಸುಮಾರು 16.00 ಗಂಟೆಗೆ ಅವರ ಸ್ನೇಹಿತ ಸಚಿನ್‌ ಫಿರ್ಯಾದಿದಾರರ ಮೊಬೈಲ್‌ಗೆ ಕರೆ ಮಾಡಿ ಮುಕ್ವೆ ನರ್ಸರಿ ಬಳಿ ಬಾ ಎಂದು ತಿಳಿಸಿದ್ದು ಅದರಂತೆ ಫಿರ್ಯಾದಿದಾರರು ಸುಮಾರು 16.30 ಗಂಟೆಗೆ ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಮುಕ್ವೆ ನರ್ಸರಿ ಎಂಬಲ್ಲಿಗೆ ಬಂದಾಗ ಸಚಿನ್‌ ಮತ್ತು ಆತನ ಸ್ನೇಹಿತ ಧೀಕ್ಷಿತ್‌ರವರು ಇದ್ದು, ಸಚಿನ್‌ನು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಸಚಿನ್‌ ಬರುವಾಗಲೇ ತಂದಿದ್ದ ಚೂರಿಯಿಂದ ಫಿರ್ಯಾದಿದಾರರ ಹೊಟ್ಟೆಯ ಕೆಳಗಡೆ ಏಕಾಏಕಿ ತಿವಿದಿದ್ದು , ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಅಲ್ಲಿ ಸಮೀಪದ ಮನೆಯಲ್ಲಿದ್ದ ಫಿರ್ಯಾದಿದಾರರ ಅಣ್ಣ ಶಿವ ಮತ್ತು ಇತರರು ಓಡಿ ಬರುವುದನ್ನು ನೋಡಿ ಸಚಿನ್‌ನು ಫಿರ್ಯಾದಿದಾರರನ್ನು ಉದ್ದೇಶಿಸಿ ನೀನು ಈ ಬಾರಿ ಬದುಕಿದ್ದೀಯಾ ಇನ್ನು ಮುಂದೆ ನೀನು ನನ್ನ ತಂಟೆ ತಕರಾರಿಗೆ ಬಂದಲ್ಲಿ ಜೀವ ಸಹಿತ ಬದುಕಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಹಲ್ಲೆ ಮಾಡುಲು ಉಪಯೋಗಿಸಿದ ಚೂರಿಯನ್ನು ಆತನ ಜೊತೆಯಲ್ಲಿ ಹಿಡಿದುಕೊಂಡು ಹೋಗಿರುತ್ತಾನೆ. ಹಲ್ಲೆಗೊಳಗಾದ ಫಿರ್ಯಾದಿದಾರರನ್ನು ಫಿರ್ಯಾದಿದಾರರ ಸ್ನೇಹಿತ ಒಂದು ವಾಹನದಲ್ಲಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 40/2021 ಕಲಂ: 504,324,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-05-2021 10:08 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080