ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹಸೈನಾರ್‌  ಆರೀಫ್‌  ಎನ್‌, ಪ್ರಾಯ 33 ವರ್ಷ, ತಂದೆ: ಅಬ್ದುಲ್‌ ರಝಾಕ್‌ , ವಾಸ: ನೆಕ್ಕಿಲ ಮನೆ, ನರಿಮೊಗರು ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 25-06-2021 ರಂದು 08-00 ಗಂಟೆಗೆ ಆರೋಪಿ ಕಾರು ಚಾಲಕ ರಮನ್ ಎಂಬವರು KA-21-C-0766 ನೇ ನೋಂದಣಿ ನಂಬ್ರದ ಕಾರನ್ನು ದರ್ಬೆ-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕುಂಬ್ರ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ದರ್ಬೆ ಎಂಬಲ್ಲಿ ರಿಲಾಯನ್ಸ್ ಮಾಲ್ ಎದುರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಪಿರ್ಯಾದುದಾರರೊಂದಿಗೆ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ  ಪಿರ್ಯಾದುದಾರರ ತಂದೆ ಅಬ್ದುಲ್ ರಝಾಕ್ ರವರಿಗೆ  ಡಿಕ್ಕಿ ಹೊಡೆದ ಪರಿಣಾಮ ಅಬ್ದುಲ್ ರಝಾಕ್ರವರು ರಸ್ತೆಗೆ ಬಿದ್ದು, ಮುಖ, ಮೂಗು, ಕುತ್ತಿಗೆ, ಕೈ ಕಾಲುಗಳಿಗೆ ಗಾಯ ಹಾಗೂ ಎದುರಿನ ಮೂರು ಹಲ್ಲುಗಳು ಮುರಿದು ತೀವ್ರ ಸ್ವರೂಪದ ಗಾಯವಾಗಿದ್ದು,  ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  92/2021 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹೃಷೀಕೇಶ ಶರ್ಮ  ಪ್ರಾಯ 24 ವರ್ಷ ತಂದೆ; ಗಣರಾಜ ಕುಂಬ್ಳೆ  ವಾಸ ; ಬೊಳುಂಬುಡ  ಮನೆ ಹಿರೆಬಂಡಾಡಿ  ಗ್ರಾಮ ಪುತ್ತೂರು  ತಾಲೂಕು  ರವರು ನೀಡಿದ ದೂರಿನಂತೆ ಪಿರ್ಯಾದಿಯು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಲಾಕ್ ಡೌನ್ ನಿಮಿತ್ತ ವರ್ಕ ಫ್ರಮ್ ಹೋಮ್ ಕೆಲಸ ಮಾಡಿಕೊಂಡು ಮನೆಯಲ್ಲಿದ್ದು, ದಿನಾಂಕ:25.06.2021 ರಂದು ಬೆಳಿಗ್ಗೆ ಮನೆಯಿಂದ  KA19 MJ 4683 ನೇ ಬಲೆನೊ ಕಾರಿನಲ್ಲಿ ತನ್ನ ತಂದೆಯವರೊಂದಿಗೆ ಹೊರಟು ಆಲಂಕಾರಿಗೆ ಬಂದು ಅಗತ್ಯ ವಸ್ತು ಖರೀದಿಸಿಕೊಂಡು ವಾಪಾಸು ಮನೆಗೆ ಹೋಗುವರೇ ಪಿರ್ಯಾದಿಯ ತಂದೆ ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗ ಕಡಬ ತಾಲೂಕು ರಾಮಕುಂಜ ಗ್ರಾಮದ ಕುಂಡಾಜೆ ಎಂಬಲ್ಲಿಗೆ ತಲುಪಿದಾಗ ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಬರುತ್ತಿದ್ದ ಆಲ್ಟೋ ಕಾರಿನ ಚಾಲಕನು ತೀರಾ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಬಲ ಬದಿಗೆ ಬಂದು ಪಿರ್ಯಾದಿಯ ತಂದೆ ಚಲಾಯಿಸುತ್ತಿದ್ದ ಬಲೆನೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನಗಳೆರಡು ಮುಂಬಾಗ ಜಖಂಗೊಂಡಿರುತ್ತದೆ ಹಾಗೂ ಪಿರ್ಯಾದಿಯ ತಂದೆಗೆ ಹಣೆಗೆ, ಎಡಕಾಲಿನ ಮೊಣಗಂಟಿಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ ನಂತರ ಡಿಕ್ಕಿ ಉಂಟು ಮಾಡಿದ ಕಾರು ನಂಬ್ರ ನೋಡಲಾಗಿ KA 21 P 2263 ನೇ ಆಲ್ಟೋ ಕಾರಾಗಿದ್ದು ಅದರ ಚಾಲಕ ಹಾಗೂ ಪ್ರಯಾಣಿಕನಿಗೂ ತೀವ್ರ ತರಹದ ರಕ್ತ ಗಾಯವಾಗಿರುವುದರಿಂದ ಅಲ್ಲಿದ್ದ ಸಾರ್ವಜನಿಕರೊಂದಿಗೆ ಸೇರಿ ಉಪಚರಿಸಿ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಖಾಸಗಿ ವಾಹನದಲ್ಲಿ ಪುತ್ತೂರು ಆದರ್ಶ  ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 48/2021 ಕಲಂ 279 337.338  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸದಾಶಿವ ಪ್ರಾಯ 25 ವರ್ಷ. ತಂದೆ;ತಿಮ್ಮಯ್ಯ ನಾಯ್ಕ್, ವಾಸ;ಕುದ್ಯಾಡಿ ಮನೆ  ಉಜಿರೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 25.06.2021ರಂದು ಮದ್ಯಾಹ್ನ 1;00 ಗಂಟೆ ವೇಳೆಗೆ ಪಿರ್ಯಾದಿದಾರಾದ ಸದಾಶಿವ ಮತ್ತು ಅವರ ಗೆಳೆಯರಾದ ಮಧುಕರ ಮತ್ತು ದಿನೇಶರವರು ಬೆಳ್ತಂಗಡಿ  ತಾಲೂಕು ಕಡಿರುದ್ಯಾವರ ಗ್ರಾಮದ ಎರ್ಮಾಳಪಲ್ಕೆ ಎಂಬಲ್ಲಿರುವ  ನೇತ್ರಾವತಿ ಹೊಳೆಯ ನೀರಿನಲ್ಲಿ ಈಜಲು ಹೋದಾಗ ಅಲ್ಲಿಗೆ ಬಂದ 4 ಜನ ಅಪರಿಚಿತ ವ್ಯಕ್ತಿಗಳು ಈ ಪ್ರಕರಣದ  ಪಿರ್ಯಾದಿದಾರ ಮತ್ತು  ಅವರ ಗೆಳೆಯರನ್ನು  ಉದ್ದೇಶಿಸಿ “ನೀವು ಯಾಕೆ ಇಲ್ಲಿ ಬಂದಿದ್ದು” ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿ ಮತ್ತು ಅವರ ಗೆಳೆಯರು ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ ಅವರನ್ನು ತಡೆದಯ ನಿಲ್ಲಿಸಿ 4 ಜನರು ಸೇರಿ ಕೈಗಳಿಂದ ಹಲ್ಲೆ ನಡೆಸಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 58/2021 ಕಲಂಚ 341 504 323  ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 2

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಶಮೀಮ ಪ್ರಾಯ;38 ವರ್ಷ ತಂದೆ; ಅಬ್ದುಲ್ ಖಾದರ್ ವಾಸ; ಜನತಾ ಕಾಲೊನಿ ಮನೆ ನೆರಿಯಾ ಬೆಳ್ತಂಗಡಿ  ತಾಲೂಕು ರವರು ದಿನಾಂಕ: 24.06.2021 ರಂದು ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ನೆರಿಯಾ ಮಸೀದಿಯ ಬಳಿ ಸಾರ್ವಜನಿಕ ರಸ್ತೆಗೆ ತಲುಪಿದಾಗ  ಶರೀಫ್ ನು  ಪಿರ್ಯಾದಿದಾರರಿಗೆ ಕೆಲಸ ಮಾಡಿದ ಹಣವನ್ನು ಕೊಡಲು ಬಾಕಿ ಉಳಿಸಿಕೊಂಡಿದ್ದು, ಅದನ್ನು ಪಿರ್ಯಾದಿದಾರರು ಕೇಳಿದಾಗ “ನಿನಗೆ ಯಾವ ಹಣ ಕೊಡಲಿಕ್ಕೆ ಇದೆ ಎಂಬುದಾಗಿ ಹೇಳಿ” ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಗುದ್ದಿ, ಎದೆಯ ಮಧ್ಯೆ ಭಾಗಕ್ಕೆ ಕಚ್ಚಿ, ದೂಡಿ ಹಾಕಿ ಸೊಂಟಕ್ಕೆ ತುಳಿದಿರುತ್ತಾನೆ. ಇನ್ನು ಮುಂದೆ ಹಣ ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾನೆ. ಗಾಯಗೊಂಡ ಪಿರ್ಯಾದಿದಾರರನ್ನು ಸಿದ್ದಿಕ್ ಮತ್ತು ಆಸೀಫ್ ಎಂಬವರು ಯಾವುದೋ ಖಾಸಗಿ ವಾಹನವೊಂದರಲ್ಲಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ ಕ್ರ 34/2021 ಕಲಂ; 504, 324, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೊರಗಪ್ಪ ಶೆಟ್ಟಿ ಪ್ರಾಯ;70 ವರ್ಷ ತಂದೆ; ದಿ.ಕುಂಞಣ್ಣ ಶೆಟ್ಟಿ, ವಾಸ; ಪಲಸ್ತಡ್ಕ ಮನೆ ಹತ್ಯಡ್ಕ ಬೆಳ್ತಂಗಡಿ  ತಾಲೂಕು ರವರು ದಿನಾಂಕ: 25.06.2021 ರಂದು ಅವರ ಅಳಿಯ ಗಿರೀಶ ಹಾಗೂ ಮಗಳಿಗೆ ಮನೆಗೆ ಬರಲು ಹೇಳಿದಂತೆ ಬೆಳಿಗ್ಗೆ ಮನೆಗೆ ಬಂದಿದ್ದು, ಜಮೀನನ್ನು ಸಮಾನವಾಗಿ ಎರಡು ಮಕ್ಕಳಿಗೆ ಪಾಲು ಮಾಡಿ ಕೊಡುವ ಉದ್ದೇಶದಿಂದ ಬಂದಿದ್ದು, 11.00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಅಳಿಯ ಗಿರೀಶನಿಗೆ  2 ನೇ ಅಳಿಯ ಸುಕುಮಾರ  ಶೆಟ್ಟಿಯು “ನಿನಗೆ ಪಾಲು ಕೊಡುವುದಿಲ್ಲ ಈ ಜಮೀನು ಎಲ್ಲವೂ ನನಗೆ ಮಾತ್ರ ಎಂದು ಹೇಳಿ ಕತ್ತಿಯಿಂದ ಅಳಿಯ ಗಿರೀಶನಿಗೆ ಬಲಕೈ ಕೋಲು ಕೈ ಗೆ ಕಡಿದಿರುತ್ತಾನೆ. ನಂತರ ಪಿರ್ಯಾದುದಾರರಿಗೆ ಮತ್ತು ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರ ಬಲಕೈ, ಎಡಕೈ ಕೋಲು ಕೈಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ರಕ್ತಗಾಯವಾಗಿರುತ್ತದೆ. ಬಲ ಹುಬ್ಬಿನ ಬಳಿ ರಕ್ತಗಾಯವಾಗಿರುತ್ತದೆ. ಮೇಲ್ಬಾಗದಲ್ಲಿ ಕಣಿದ ಗಾಯವಾಗಿರುತ್ತದೆ. ಪಿರ್ಯಾದಿದಾರರ ಪತ್ನಿ ಯಮುನಳಿಗೆ ಕಬ್ಬಿಣದ ರಾಡಿನಿಂದ ಹೊಡೆದ ಪರಿಣಾಮ ಬಲಕೈ ಅಂಗೈ ಹಾಗೂ ಬೆರಳುಗಳಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ ಕ್ರ 35/2021 ಕಲಂ; 504, 324, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 25.06.2021 ರಂದು ಪೊಲೀಸ್‌ ಉಪ ನಿರೀಕ್ಷಕರು ಬಂಟ್ವಾಳ ನಗರ ಪೊಲೀಸ್ ಠಾಣೆ ರವರು ರೌಂಡ್ಸ್ ನಲ್ಲಿರುವ ಸಮಯ ಮಧ್ಯಾಹ್ನ 14.30 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಜಂಕ್ಷನ್ ನಿಂದ್ ಮುಡಿಪು ಕಡೆಗೆ ಹೋಗುವ ರಸ್ತೆಯ ಎಡ ಬದಿಯಲ್ಲಿರುವ ಸೈಪುದ್ದೀನ ಬೋಗೋಡಿ ಎಂಬುವವರಿಗೆ ಸೇರಿದ ಸಾಲು ಕಟ್ಟಡದಲ್ಲಿ ಇಬ್ರಾಹಿಂ ಎಂಬುವವರಿಗೆ ಸೇರಿದ ಮೀನು ವ್ಯಾಪಾರ ಮಾಡುವ ಅಂಗಡಿಯಲ್ಲಿ ಸುಮಾರು 9-10 ಗಿರಾಕಿಗಳನ್ನು ಅಂಗಡಿಯ ಒಳಗಡೆ ಸೇರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡದೇ ಸರಕಾರವು ಕೋವಿಡ್-19 ನಿಯಂತ್ರಣದ ಬಗ್ಗೆ ಹೊರಡಿಸಿದ ಮಾರ್ಗಸೂಚಿ ಪಾಲಿಸದೇ ಸಮಯ ಮೀರಿ ವ್ಯಾಪಾರವನ್ನು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಪಿರ್ಯಾಧಿದಾರರು ಸದ್ರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು  ಕರೆದು ವಿಚಾರಿಸಲಾಗಿ ತನ್ನ ಹೆಸರು 1) ನಿಜಾಮುದ್ದಿನ 2) ಅಬ್ದುಲ್ ಲತೀಫ ಎಂಬುದಾಗಿ ತಿಳಿಸಿದ್ದು ಇವರು ಸಾಮಾಜಿಕ ಅಂತರವನ್ನು ಕಾಪಾಡದೇ ಸರಕಾರದ ಮಾರ್ಗಸೂಚಿ ಪಾಲಿಸದೇ ನಿರ್ಲಕ್ಷತನದಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ರೋಗವು ಹರಡುವ ಸಂಭವವಿದೆಯೆಂದು ತಿಳಿದು ವ್ಯಾಪಾರ ನಡೆಸಿ ಅಪರಾಧ ಎಸಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ: 72/2021 ಕಲಂ: 269. ಐಪಿಸಿ ಮತ್ತು ಕಲಂ 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆದ್ಯಾಧೇಶ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿಎಸ್ಐ ಸುಳ್ಯ ಪೊಲೀಸ್ ಠಾಣೆ ರವರು ದಿನಾಂಕ 25.06.2021 ರಂದು ಠಾಣಾ ವ್ಯಾಫ್ತಿಯಲ್ಲಿ ಸಿಬ್ಬಂದಿಗಳ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಎಂಬಲ್ಲಿ ವಿನಾಯಕ ಗ್ಯಾರೇಜ್ ನ ಎದುರು ಆರೋಪಿ ಗಣೇಶ್ ಯು ಎಸ್ (55) ತಂದೆ: ಸಣ್ಣಯ್ಯ ಗೌಡ ವಾಸ: ಊರುಪಂಜ ಮನೆ, ತೋಡಿಕಾನ ಗ್ರಾಮ ಸುಳ್ಯ ತಾಲೂಕು ಎಂಬ ವ್ಯಕ್ತಿಯು MYSORE LANCER   WHISKY ಎಂದು ಆಂಗ್ಲ ಭಾಷೆಯಲ್ಲಿ ಬರೆದಿರುವ 180 ಎಂ. ಎಲ್ ನ ಅರ್ಧ ಮದ್ಯ ಇರುವ ಮದ್ಯದ ಸ್ಯಾಚೆಟ್  ಮತ್ತು ಮದ್ಯ ಹಾಕಿ ಸೇವಿಸಿದ್ದ ಒಂದು ಗ್ಲಾಸನ್ನು ಕೈಯಲ್ಲಿ ಹಿಡಿದು ಕೊಂಡು ಸಾರ್ವಜನಿಕ ಸ್ಥಳದಲ್ಲಿ ಎಲ್ಲರಿಗೂ ಗೋಚರಿಸುವಂತೆ ಮದ್ಯ ಸೇವನೆ ಮಾಡುತ್ತಿದ್ದು, ಕರ್ನಾಟಕ ಅಬಕಾರಿ ಕಾಯಿದೆಯಡಿಯಲ್ಲಿ ಅಪರಾಧ ಎಸಗಿರುವುದರಿಂದ ಆತನನ್ನು ಮತ್ತು ಅತನಲ್ಲಿದ್ದ ಸೊತ್ತುಗಳನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಸುಳ್ಯ ಪೊಲೀಸ್‌ ಠಾಣಾ ಅ,ಕ್ರ 46/2021 ಕಲಂ: 15(ಎ),32(3) ಕೆ ಇ Act ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನರಸಿಂಹ ಶೆಟ್ಟಿ ಪ್ರಾಯ 38 ವರ್ಷ ತಂದೆ: ದಿ. ನಾರಾಯಣ ಶೆಟ್ಟಿ ವಾಸ: ಲಕ್ಕಪ್ಪ ಕೋಡಿ ಮನೆ ಮಾಣಿ ಗ್ರಾಮ ಬಂಟ್ವಾಳ ತಾಲೂಕು ರವರು ಹಿಂದೂ ಜಾಗರಣೆ ವೇದಿಕೆಯ ಸದಸ್ಯರಾಗಿದ್ದು ಕಳೆದ 1 ವರ್ಷದಿಂದ ಸಂಘಟನೆಯ ವತಿಯಿಂದ ಕೋವಿಡ ಖಾಯಿಲೆಗೆ ಒಳಗಾದ ರೋಗಿಗಳಿಗೆ ಸೇವಾ ಭಾರತೀ ಅಂಬುಲೇನ್ಸ್ ಉಚಿತ ಸೇವೆ ಮಾಡುತ್ತಿದ್ದು ದಿನಾಂಕ 25-06-2021 ರಂದು ಬಿ ಸಿ ರೋಡಿನ ಟೋಲ್ ಗೇಟ್ ಬಳಿಯ ಹಳೆಯ ರಸ್ತೆಯ ಬಳಿ ಕಟ್ಟಡದ ಬಳಿ ಓರ್ವ ವಾರಸುದಾರರು ಇಲ್ಲದ ಮಹಿಳೆ ಅಸ್ವಸ್ಥಲಾಗಿರುವುದಾಗಿ ಬಂದ ಕರೆಯಂತೆ ಪಿರ್ಯಾಧಿದಾರರು  ಸೇವಾ ಭಾರತೀ ಅಂಬುಲೇನ್ಸ್ನಲ್ಲಿ ಕರೆದು ಕೊಂಡು ಬಂದು ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ವತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿದೆ, ಚಿಕಿತ್ಸೆ ಫಲಕಾರಿಯಾಗದೇ ಸದ್ರಿ ಮಹಿಳೆಯು ಮೃತಪಟ್ಟಿರುವುದಾಗಿ ವಿಷಯ ತಿಳಿದಿರುತ್ತದೆ.  ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 24-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-06-2021 11:30 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080