ಅಪಘಾತ ಪ್ರಕರಣ: ೦5
ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಾಮಚಂದ್ರ ಬಿ ಪ್ರಾಯ 40 ವರ್ಷ ತಂದೆ:ತುಕ್ಕಪ್ಪ ಮೂಲ್ಯ ವಾಸ:ಬೇತ ಮನೆ, ಕರೋಪ್ಪಾಡಿ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ:25-09-2021 ರಂದು ತನ್ನ ದೈನಂದಿನ ಪೋಸ್ಟ್ ಕರ್ತವ್ಯ ಮುಗಿಸಿ ಕುಡ್ಪುಲ್ತಡ್ಕದಿಂದ ತನ್ನ ಮನೆಯಾದ ಬೇತ ಎಂಬಲ್ಲಿಗೆ ಹೋಗುವರೇ ತನ್ನ ಬಾಬ್ತು KA-19-ES-4636 ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಇಸ್ಮಾಯಿಲ್ ಎಂಬವರನ್ನು ಕುಳ್ಳಿರಿಸಿಕೊಂಡು ದ್ವಿ ಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಬಂಟ್ವಾಳ ತಾಲೂಕು ಕರೋಪ್ಪಾಡಿ ಗ್ರಾಮದ ಅರಸಳಿಕೆ ಎಂಬ ತಿರುವಿನಲ್ಲಿ ಹೋಗುತ್ತಿರುವಾಗ ಮಿತ್ತನಡ್ಕದಿಂದ ಕುಡ್ಪುಲ್ತಡ್ಕ ಕಡೆಗೆ ಬರುತ್ತಿದ್ದ KL-14-L-1871ನೇ ಟಿಪ್ಪರ ಲಾರಿ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿ ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದಾಗ ಪಿರ್ಯಾಧಿ ಹಾಗೂ ಹಿಂಬದಿ ಸವಾರ ಡಾಮಾರು ರಸ್ತೆಯ ಎಡ ಬದಿಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾಧಿದಾರರ ಬಲಕಾಲಿನ ಕೋಲು ಕಾಲಿಗೆ ರಕ್ತಗಾಯವಾಗಿದ್ದು. ಹಿಂಬದಿ ಸವಾರ ಇಸ್ಮಾಯಿಲ್ರವರಿಗೆ ಎಡ ಕಣ್ಣಿ ರೆಪ್ಪೆಯ ಬಳಿ ರಕ್ತಗಾಯ, ಎದೆಯ ಎಡಭಾಗಕ್ಕೆ ಗುದ್ದಿದ ಗಾಯ ಹಾಗೂ ಬಲ ಕೈ ಮೊಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 127/2021 279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹರ್ಷ, 18 ವರ್ಷ, ತಂದೆ: ರಾಜು ವಾಸ: ಹೊಸ ನಗರ ಮನೆ,ಹಳಸೆ ಗ್ರಾಮ ಮತ್ತು ಅಂಚೆ, ಮೂಡಿಗೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ ರವರು ದಿನಾಂಕ 25-09-2021 ರಂದು ತನ್ನ ಸ್ನೇಹಿತರಾದ ಶುಶಾನ್, ಶರತ್, ಅನಿಂದಿತ್, ಶ್ರೀರಾಮ್ ರವರೊಂದಿಗೆ ಡಾಕ್ಯುಮೆಂಟರಿ ಶೂಟಿಂಗ್ ಬಗ್ಗೆ KA-21-N-6931 ನೇ ಕಾರಿನಲ್ಲಿ ಕುಳಿತುಕೊಂಡು ಅನಿಂದತ್ ರವರು ಚಾಲಕರಾಗಿ ಚಲಾಯಿಸಿಕೊಂಡು ಮಂಗಳೂರು ಕಡೆಯಿಂದ ಪುತ್ತೂರಿಗೆ ಪ್ರಯಾಣಿಸುತ್ತಾ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ರಾಮಲ್ ಕಟ್ಟೆ ಎಂಬಲ್ಲಿಗೆ ತಲುಪಿದಾಗ ಅನಿಂದಿತ್ ರವರು ಕಾರನ್ನು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಕಾರು ಚಾಲಕರ ನಿಯಂತ್ರಣ ತಪ್ಪಿ ಎಡಕ್ಕೆ ಚಲಿಸಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ತಲೆಗೆ ರಕ್ತಗಾಯ, ಶುಶಾನ್ ರವರಿಗೆ ಬಲ ಕೋಲು ಕಾಲಿಗೆ ಗುದ್ದಿದ ಗಾಯ, ಬಲಕೈ ತಟ್ಟಿಗೆ ತರಚಿದ ಗಾಯ, ಶರತ್ ರವರ ತಲೆಗೆ ತರಚಿದ ಗಾಯ, ಶ್ರೀರಾಮ್ ರವರ ತಲೆಗೆ ರಕ್ತ ಗಾಯ, ಬಲಭುಜಕ್ಕೆ, ಬೆನ್ನಿಗೆ ಗುದ್ದಿದ ನೋವು ಮತ್ತು ಚಾಲಕ ಅನಿಂದಿತ್ ರವರ ಹಿಂಬದಿ ತಲೆಗೆ ಬಲ ಕಿವಿಯ ಬಳಿ, ಗಲ್ಲಕ್ಕೆ ತರಚಿದ ಗಾಯವಾಗಿದ್ದು, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 99/2021 ಕಲಂ 279,337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬೂಬಕ್ಕರ್ ಪ್ರಾಯ:50ವರ್ಷತಂದೆ: ದಿ|| ಅಬ್ದುಲ್ ರಹಿಮಾನ್ ವಾಸ: ಶಾಂತಿಯಂಗಡಿ ಮನೆ , ಬಿ ಮೂಡ ಗ್ರಾಮ ಬಂಟ್ವಾಳ ತಾಲೂಕು. ರವರು ದಿನಾಂಕ:25-09-2021 ರಂದು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮಿತ್ತಬೈಲು ಎಂಬಲ್ಲಿ ತನ್ನ ಕ್ಯಾಂಟೀನ್ನ ಎದುರು ನಿಂತುಕೊಂಡಿದ್ದಾಗ ತನ್ನ ಪರಿಚಯದ ಇಬ್ರಾಹಿಂ ರವರು ಮಸೀದಿ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದ ಸಮಯ ಬಿ.ಸಿ.ರೋಡ್ ಕೈಕಂಬ ಕಡೆಯಿಂದ KA-19-AC-2639 ನೇ ಆಟೋರಿಕ್ಷಾವನ್ನು ಅದರ ಚಾಲಕ ಮಹಮ್ಮದ್ ಷರೀಪ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಇಬ್ರಾಹಿಂರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಇಬ್ರಾಹಿಂರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ತಲೆಗೆ ರಕ್ತಗಾಯ , ಎಡ ಎದೆಗೆ ಹೊಟ್ಟೆಗೆ , ಸೊಂಟಕ್ಕೆ ಗುದ್ದಿದ ನೋವಾಗಿದ್ದು ಗಾಯಾಳು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಪಡೀಲ್ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 100/2021 ಕಲಂ 279,337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದಾಮೋಧರ (55) ತಂದೆ: ಸೀತಾ ರಾಮ್ ವಾಸ: ಒಂಟಿಕಟ್ಟೆ ಮನೆ, ಮಾರ್ಪಾಡಿ ಗ್ರಾಮ, ಮೂಡಬಿದ್ರೆ ತಾಲೂಕು ಮಂಗಳೂರು ರವರು ದಿನಾಂಕ: 20.09.2021 ರಂದು ತನ್ನ ಹೆಂಡತಿ ಶಕುಂತಲ ಎಂಬವರನ್ನು ಪಿರ್ಯಾದಿದಾರರ ಭಾವ ಶ್ರೀಧರ ಆಚಾರ್ಯರವರು ಗರ್ಡಾಡಿ ಎಂಬಲ್ಲಿಂದ ಕೆ ಎ 19 ವಿ 7963 ನೇ ಮೋಟಾರ್ ಸೈಕಲ್ ನಲ್ಲಿ ಶಕುಂತಲ ಇವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು, ಮೋಟಾರ್ ಸೈಕಲ್ ನ್ನು ಮೂಡಬಿದ್ರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಪೆರಿಂಜೆ ಕುರ್ಲೋಟ್ಟು ಎಂಬಲ್ಲಿಗೆ ತಲುಪಿದಾಗ, ಶ್ರೀಧರರವರು ಮೋಟಾರು ಸೈಕಲ್ ನ್ನು ವೇಗವಾಗಿ, ನಿರ್ಲಕ್ಷ್ಯತನದಿಂದ ಚಲಾಯಿಸಿದರಿಂದ ಮೋಟಾರ್ ಸೈಕಲ್ ಸ್ಕಿಡ್ ಯಾಗಿ ರಸ್ತೆಯ ಎಡಬದಿಗೆ ಮುಗುಚಿ ಬಿದ್ದುದರಿಂದ, ಸಹಸವಾರಳಾಗಿ ಕುಳಿತಿದ್ದ ಪಿರ್ಯಾದಿದಾರರ ಹೆಂಡತಿ ಶಕುಂತಲರವರಿಗೆ ತಲೆಗೆ ರಕ್ತ ಗಾಯವಾಗಿರುತ್ತದೆ ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ: 62-2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿಜಯ ಎಸ್, ಪ್ರಾಯ 33 ವರ್ಷ, ತಂದೆ: ಕೃಷ್ಣಪ್ಪ ಗೌಡ, ವಾಸ: ಮುರ ಮನೆ, ಇಳಂತಿಲ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 24-09-2021 ರಂದು 17-00 ಗಂಟೆಗೆ ಆರೋಪಿ ಸ್ಕೂಟರ್ ಸವಾರ ದಾವೂದ್ ಎಂಬವರು KA-21-EB-4114 ನೇ ನೋಂದಣಿ ನಂಬ್ರದ ಸ್ಕೂಟರನ್ನು ಉಪ್ಪಿನಂಗಡಿ—ಇಳಂತಿಲ-ಮೊಗ್ರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಮೊಗ್ರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಕಟ್ಟೆಚ್ಚಾರು-ಪಳ್ಳ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ನಾಯಿಯೊಂದು ಅಡ್ಡ ಬಂದಾಗ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಸ್ಕೂಟರಿನಲ್ಲಿ ಸಹಸವಾರರಾಗಿದ್ದ ಐಸಮ್ಮ ಎಂಬವರು ಹತೋಟಿ ತಪ್ಪಿ ರಸ್ತೆಗೆ ಬಿದ್ದು, ತಲೆಗೆ ಗುದ್ದಿದ ಗಾಯಗೊಂಡವರನ್ನು ಪಿರ್ಯಾದುದಾರರು ಆರೋಪಿಯೊಂದಿಗೆ ಉಪ್ಪಿನಂಗಡಿ ಕೆ.ಜಿ.ಭಟ್ ಕ್ಲಿನಿಕ್ಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಆರೋಪಿಯು ಅಂಬ್ಯುಲೆನ್ಸ್ ನಲ್ಲಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 118/2021 ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಜಾತ ಪ್ರಾಯ 31 ವರ್ಷ ಗಂಡ ಪದ್ಮನಾಭ ಪೂಜಾರಿ ಸುಜೀರ್ ಕೊಡಂಗೆ ಮನೆ ಪುದು ಗ್ರಾಮ ಬಂಟ್ವಾಳ ತಾಲೂಕು ರವರ ಅಣ್ಣ ಪದ್ಮನಾಭರವರು ಕಣ್ಣೂರು ಎಂಬಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡು ಬರುತ್ತಿದ್ದು ಸುಮಾರು 8 ವರ್ಷಗಳಿಂದ ಬೆನ್ನು ನೋವಿನ ಖಾಯಿಲೆ ಇದ್ದು ಈ ಬಗ್ಗೆ ಹಲವಾರು ಕಡೆಗಳಲ್ಲಿ ಮದ್ದು ಮಾಡಿದ್ದು ಆದರೂ ಬೆನ್ನು ನೋವು ಕಡಿಮೆ ಆಗಿರುವುದಿಲ್ಲ ಇತ್ತೀಚಿಗೆ 1 ತಿಂಗಳಿನಿಂದ ಬೆನ್ನು ನೋವು ವಿಪರೀತವಾಗಿದ್ದು ಪಿರ್ಯಾದುದಾರರ ಅಣ್ಣ ಪದ್ಮನಾಭ ರವರು ಬೇಸರಗೊಂಡು ಸುಮಾರು 2 ವಾರದ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಈ ಬಗ್ಗೆ ಮನೆಯವರೆಲ್ಲರು ಸಮಾಧಾನ ಮಾಡಿದ್ದು ದಿನಾಂಕ 24.09.2021 ರಂದು ವಿಪರೀತ ಬೆನ್ನು ನೋವು ಉಂಟಾದ ಪರಿಣಾಮ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ರಾತ್ರಿಯೆಲ್ಲ ಬೆನ್ನು ನೋವು ಎಂದು ಹೇಳಿಕೊಂಡಿದ್ದು ಮಧ್ಯರಾತ್ರಿ 12.10 ಗಂಟೆಗೆ ಎದ್ದು ಮಲಗಿದ್ದ ಕೋಣೆಯಲ್ಲಿ ಸೀರೆಯಿಂದ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದು ಪಿರ್ಯಾದುದಾರರ ಅಣ್ಣನ ಪತ್ನಿ ಎಚ್ಚರಗೊಂಡು ಪಿರ್ಯಾದುದಾರರಿಗೆ ತಿಳಿಸಿದಾಗ ಪದ್ಮನಾಭನನ್ನು ರಕ್ಷಣೆ ಮಾಡಿ ಸಮಾಧಾನ ಮಾಡಿ ಮಲಗಿದ್ದು ದಿನಾಂಕ 25.09.2021 ರಂದು ಬೆಳಿಗ್ಗೆ 6.30 ಗಂಟೆಗೆ ಅಣ್ಣನ ಪತ್ನಿ ಸುಜಾತರವರು ಎದ್ದು ನೋಡಿದಾಗ ಪದ್ಮನಾಭರವರು ಇಲ್ಲದೇ ಇದ್ದು ಬಾಗಿಲು ತೆರೆದು ಹೊರಗೆ ಬಂದು ನೋಡಿದಾಗ ಮನೆಯ ಹಾಲ್ ನಲ್ಲಿ ಪಕ್ಕಾಸಿಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಕೊಂಡಿದ್ದು ಕೂಡಲೇ ಶಾಲನ್ನು ಕತ್ತರಿಸಿ ತುಂಬೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿ 8.20 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ . ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯು ಡಿ ಆರ್ ನಂ 40/2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.