ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಿ ಎ ಅಹಮ್ಮದ್ ನಿಜಾಮುದ್ದೀನ್  ಪ್ರಾಯ 30 ವರ್ಷ ತಂದೆ ; ಅಬ್ದುಲ್ ರಹಿಮಾನ್ ವಾಸ ; ಪಿಲಿಚಂಡಿಕ್ಕಲ್ಲು  ಮನೆ ಕುವ್ವೆಟ್ಟು  ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರಾದ ಜಿ.ಎ ಅಹಮ್ಮದ್ ನಿಜಾಮುದ್ದೀನ್  ರವರು ದಿನಾಂಕ:24.11.2021 ರಂದು KA-19 MB-3827 ZEN ESTILO  ಕಾರೊಂದರಲ್ಲಿ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಆತೂರು ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿರುವಾಗ ಸಮಯ ರಾತ್ರಿ 07.20 ಗಂಟೆಗೆ ಕಡಬ ತಾಲೂಕು ಕೊಯಿಲಾ ಗ್ರಾಮದ ಕೆ.ಸಿ ಪಾರ್ಮ ಎಂಬಲ್ಲಿನ ಹಾಲಿನ ಡೈರಿ ಎದುರುಗಡೆಗೆ ತಲುಪಿದಾಗ ಪಿರ್ಯಾದುದಾರರ ಎದುರಿಗೆ ಬರುತ್ತಿದ್ದ KA- 21 N-7074  ಮಾರುತಿ ಓಮಿನಿ ಕಾರಿನ  ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ವಾಹನವನ್ನು ರಸ್ತೆಯ ತೀರ ಬಲಬದಿಗೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರು  ಚಲಾಯಿಸುಕೊಂಡು ಬರುತ್ತಿದ್ದ ಕಾರಿಗೆ ಎದುರುಗಡೆಯಿಂದ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ವಾಹನದ ಎದುರು ಜಖಂಗೊಂಡಿದ್ದು ಎರಡು ವಾಹನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಪಿರ್ಯಾದುದಾರರ ಕಾರಿನ ಎದುರು ಬಾಗ ಮತ್ತು ಬಾನೆಟ್‌, ಹೆಡ್‌ಲೈಟ್‌ ಹಾಗೂ ಬಂಪರ್‌ ರೇಡಿಯೇಟರ್‌ ಸಂಪೂರ್ಣ ಜಖಂಗೊಂಡಿರುತ್ತದೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 97/2021 ಕಲಂ. 279  IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಪ್ರಿತ್ ಕೆ ಎಸ್ ಪ್ರಾಯ 34 ವರ್ಷ ತಂದೆ ; ಶಿನಪ್ಪ ಗೌಡ ವಾಸ ; ವಾಲ್ತಾಜೆ ಮನೆ ಬಿಳಿನೆಲೆ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 25.11.2021 ರಂದು ತನ್ನ ಬಾಬ್ತು ಕಾರು ವಾಹನದಲ್ಲಿ ಪತ್ನಿ ಮತ್ತು ಸಂಬಂದಿಕರಾದ ಪ್ರಶಾಂತ್‌ ಎಂಬವರೊಂದಿಗೆ ಕೃಷಿ ಕೆಲಸಕ್ಕೆ ಹೋಗಿ ನಂತರ ಕೃಷಿ ಉತ್ಪನ್ನಗಳನ್ನು ಕಾರಿನಲ್ಲಿ ಹಾಕಿಕೊಂಡು ವಾಪಾಸ್ಸು ಮನೆ ಕಡೆಗೆ ಬರುತ್ತಿರುವಾಗ ಕಡಬ ತಾಲೂಕು ಬಿಳಿನೆಲೆ ಗ್ರಾಮದ ರೈಲ್ವೇ ಸ್ಟೇಷನ್‌ ಹತ್ತಿರ ಸಮಯ  ಬೆಳಗ್ಗೆ 07.45 ಗಂಟೆಗೆ ತಲುಪಿದಾಗ ಎದುರುಗಡೆಯಿಂದ ಮೋಟಾರ್ ಸೈಕಲ್‌ನಲ್ಲಿ  ಬಂದ ಆರೋಪಿತನು ಪಿರ್ಯಾದುದಾರರ ಕಾರನ್ನು ತಡೆದು ನಿಲ್ಲಿಸಿ ಅವ್ಯಾಚ ಶಬ್ಧಗಳಿಂದ ಬೈದು ನಂತರ  ಪಿರ್ಯಾದುದಾರರು ಕಾರಿನಿಂದ ಇಳಿಯುತ್ತಿರುವಾಗ ಆರೋಪಿತನು ಕೈಯಿಂದ ಪಿರ್ಯಾದಿಗೆ ಏಕಾಏಕಿ ಎದೆಗೆ ಗುದ್ದಿ ಬಳಿಕ ಅಲ್ಲಿಯೇ ಬಿದ್ದುಕೊಂಡಿದ್ದ ಕೋಲಿನಿಂದ  ಬೆನ್ನಿಗೆ  ಹಾಗೂ ಕುತ್ತಿಗೆಗೆ  ಹೊಡೆದು ಹಲ್ಲೆ ಮಾಡಿರುತ್ತಾರೆ ನಂತರ ಕಾರಿನಲ್ಲಿದ್ದ ಪಿರ್ಯಾದಿ ಪತ್ನಿ ಮತ್ತು ಪ್ರಶಾಂತ್‌ ಎಂಬವರು ಕಾರಿನಿಂದ ಇಳಿದು ಜಗಳವನ್ನು ಬಿಡಿಸಿರುತ್ತಾರೆ ನಂತರ ಆರೋಪಿತನು ಪಿರ್ಯಾದುದಾರರನ್ನು ಉದ್ದೇಶಿಸಿ ನಿನ್ನನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಕೈಯಲ್ಲಿದ್ದ ಮರದ ಕೋಲನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾನೆ ಹಲ್ಲೆಯಿಂದ ಗಾಯಗೊಂಡ ಪಿರ್ಯಾದುದಾರರು ಕಡಬ ಸರ್ಕಾರಿ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 96/2021 ಕಲಂ. 504.323.324.506 IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಮೇಶ್ ಪ್ರಾಯ (46) ತಂದೆ ;ಕೊರಗಪ್ಪ ಗೌಡ ವಾಸ ;ವಾಲ್ತಾಜೆ ಬಿಳಿನೆಲೆ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 25.11.2021 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಮನೆಯ ರಿಪೇರಿಗೆ ಬಂದ ಬಿಳಿನೆಲೆ ವಾಸಿ ಬೊಮ್ಮಣ್ಣ ಎಂಬುವವರನ್ನು ವಾಪಾಸ್ಸು ಅವರ ಮನೆಗೆ ಬಿಡುವರೇ ಹಾಗೂ ನೆಟ್ಟಣ ಸಮೀಪದ ಬಿಳಿನೆಲೆ ಹಾಲು ಸೊಸೈಟಿಗೆ ಹಾಲು ಕೊಡುವರೇ  ಪಿರ್ಯಾದುದಾರರ ತನ್ನ ಬಾಬ್ತು ದ್ವಿಚಕ್ರ ವಾಹನದಲ್ಲಿ ಬರುತ್ತಾ ಬೆಳಿಗ್ಗೆ  07-30 ಗಂಟೆಗೆ ಪಿರ್ಯಾದುದಾರರ ಮನೆಯ ಸಮೀಪ ವಾಲ್ತಾಜೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾದುದಾರರ ಎದುರಿನಿಂದ  ಆರೋಪಿ ಸುಪ್ರೀತ್ ಎಂಬಾತನು ಮಾರುತಿ 800 ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ದ್ವಿಚಕ್ರ ವಾಹನಕ್ಕೆ ತಡೆ ಉಂಟುಮಾಡಿದಾಗ  ಪಿರ್ಯಾದುದಾರರು  ತನ್ನ ಮೋಟಾರ್ ಸೈಕಲ್ ನ್ನು ನಿಲಿಸಿದ್ದು ನಂತರ  ಆರೋಪಿ ಮತ್ತು  ಆತನ ಮನೆಯ ಕೆಲಸ ಮಾಡುವವರು ಅವರ ವಾಹನದಿಂದ ಇಳಿದು ಪಿರ್ಯಾದುದಾರರ ಹತ್ತಿರ ಬಂದು ಆರೋಪಿ ಸುಪ್ರೀತಾನು ತನ್ನ ಕೈಯಲ್ಲಿ ಮರದ ದೊಣ್ಣೆಯನ್ನು ಹಾಗೂ ಆತನ ಜೊತೆಯಲ್ಲಿದ್ದ ಕೆಲಸದವನು ತಲವಾರು (ಬಾಲುಕತ್ತಿಯನ್ನು ) ಹಿಡಿದುಕೊಂಡು ಪಿರ್ಯಾದುದಾರರ ಬಳಿ ಬಂದು ಸುಪ್ರೀತ್ ನು ಪಿರ್ಯಾದುದಾರರನ್ನು ಉದ್ದೇಶಿಸಿ ನನ್ನ ಮೇಲೆ ಕಡಬ ಪೊಲೀಸ್ ಠಾಣೆಗೆ  ದೂರು ನೀಡಿದ್ದಿಯ ನಿನ್ನನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಆತನ ಕೈಯಲ್ಲಿದ್ದ ದೊಣ್ಣೆಯಿಂದ ಹಲ್ಲೆ ಮಾಡಿದ ಪರಿಣಾಮ ಪಿರ್ಯಾದಿ  ಬಲ ಕೈಗೆ ಹಾಗೂ ಅಂಗೈಗೆ ಹಾಗೂ ಬೆರಳಿಗೆ,ಅಲ್ಲದೇ ಎಡ ಕೈಯ ತೋಳಿಗೆ ತಲೆಗೆ ಮತ್ತು ಎಡ ಕಾಲಿನ ತೊಡೆಗೆ ಮತ್ತು ಸೊಂಟಕ್ಕು ನೋವುಂಟಾಗಿರುತ್ತದೆ. ನಂತರ ಪಿರ್ಯಾದುದಾರರು ಹಲ್ಲೆಯನ್ನು ತಡೆಯಲು ಹತ್ತಿರವೇ ಇದ್ದ ಬೇಲಿಯಿಂದ ಒಂದು ಮರದ ಸೊಂಟೆಯನ್ನು ಹಿಡಿದಾಗ ಆರೋಪಿ ಸುಪ್ರೀತನು ದೊಣ್ಣೆಯನ್ನು ಬಿಸಾಡಿ ಆತನ ಕೆಲಸದಾಳುವಿನ ಕೈಯಲ್ಲಿದ್ದ ತಲವಾರನ್ನು ತೆಗೆದುಕೊಂಡು ಪಿರ್ಯಾದುದಾರರ ಹತ್ತಿರ ಇಬ್ಬರು ಬಂದು ಹಲ್ಲೆಗೆ ಮುಂದಾದಾಗ  ಪಿರ್ಯಾದುದಾರರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಅಡ್ಡತಡೆದಿರುತ್ತಾರೆ  ನಂತರ ಆ ಸಮಯ ಪಿರ್ಯಾದುದಾರರು ಜೋರಾಗಿ ಬೊಬ್ಬೆ ಹೊಡೆದಾಗ ಅಲ್ಲಿಯೇ ನೆರೆ ಮನೆಯ ಹತ್ತಿರದ ಡೆನ್ಸಿ ಎಂಬುವವರು ಓಡಿ ಬಂದು ಗಲಾಟೆಯನ್ನು ತಡೆದಿದ್ದು ಆರೋಪಿಗಳಿಬ್ಬರು  ಈ ಸಲ ನೀನು ಬದುಕಿದ್ದಿಯ ಮುಂದಕ್ಕೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಹಲ್ಲೆಯಿಂದ ಗಾಯಗೊಂಡ ಪಿರ್ಯಾದುದಾರರು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 98/2021 ಕಲಂ. 341.324.506.R/W 34  IPC   ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಮೇಶ ಬಿ ಪ್ರಾಯ (37) ತಂದೆ ಬಸವರಾಜಪ್ಪ ವಾಸ: ಹಿರೇಮಲ್ಲನ ಹೋಳೆ ಗ್ರಾಮ ಮತ್ತು ಅಂಚೆ ಜಗಳೂರು ತಾಲೂಕು ದಾವಣಗೇರೆ ಜಿಲ್ಲೆ ಎಂಬವರ ದೂರಿನಂತೆ ಫಿರ್ಯಾಧಿದಾರರಾದ ರಮೇಶ ಬಿ (37 ವರ್ಷ)  ಕಿರಿಯ ಇಂಜಿನಿಯರ್  ಮಂಗಳೂರು ವಿದ್ಯುಚಕ್ತಿ ಸರಭರಾಜು ಕಂಪನಿಯ ಕಾರ್ಯ ಮತ್ತು ಪಾಲನ ಶಾಖೆ ನೆಲ್ಯಾಡಿರವರು ದಿನಾಂಕ 25.11.2021 ರಂದು ಕರ್ತವ್ಯದ ನಿಮಿತ್ತಾ  ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ರಾ ಹೆ 75  ರಸ್ತೆ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡದ ವಿದ್ಯುತ್ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸುತ್ತಿರುವಾಗ   ಸಂಜೆ ಸಮಯ 06.00 ಗಂಟೆ ವೇಳೆಗೆ ಎಂ ಕೆ ಪೌಲೋಸ್ ಮತ್ತು ಕಾರ್ತಿಕೇಯನ್ ಎಂಬವರು ಪಿರ್ಯಾಧಿದಾರರ ಬಳಿ ಬಂದು  ಪಿರ್ಯಾಧಿದಾರರಿಗೆ ಮತ್ತು ಜೊತೆಯಲ್ಲಿದ್ದ ಇಲಾಖಾ ಸಿಬ್ಬಂದಿಯವರಾದ ರಜಾಕ್ ಮೌಲಾಸಾಬ ನದಾಫ್ ಮತ್ತು ಅಡಿವೆಪ್ಪ ಮಾದರ ರವರನ್ನು ಉದ್ದೇಶಿಸಿ ಸಾರ್ವಜನಿಕ ಶೌಚಾಲಯ ಕಟ್ಟಡದ ವಿದ್ಯುತ್ ಸಂಪರ್ಕದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಇಲಾಖಾ ಸಾರ್ವಜನಿಕ ಕರ್ತವ್ಯ ನಿರ್ವಹಿಸದಂತೆ ತಡೆಯೊಡ್ಡಿ  ಎಂ.ಕೆ ಪೌಲೋಸ್ ನು ಮೂವರನ್ನು ಜೋರಾಗಿ ದೂರಕ್ಕೆ  ತಳ್ಳಿ ಕಾರ್ತಿಕೇಯನ್ ಎಂಬಾತನು ಫಿರ್ಯಾದಿದಾರರ ಶರ್ಟಿನ ಕಾಲರ್ ಪಟ್ಟಿ ಹಿಡಿದು ಎಳೆದಾಡಿ ಕೈಯಿಂದ ಕುತ್ತಿಗೆಗೆ ಹೊಡೆದು ಪಿರ್ಯಾಧಿದಾರರಿಗೆ ಮತ್ತು ಜೊತೆಯಲ್ಲಿದ್ದ ಸಿಬ್ಬಂದಿಯುವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 144/2021 ಕಲಂ:323.353.504.506. R/W 34  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಯಾನಂದ (46) ತಂದೆ: ದಿ| ಗಿರಿಯಪ್ಪ ಪೂಜಾರಿ ವಾಸ: ಎಳಬೆ ಮನೆ, ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಮ್ಮ ಮದುಮೇಹ ಮತ್ತು ಕಡಿಮೆ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ದಿನಾಂಕ:24-11-2021 ರಂದು ರಂದು ಸಂಜೆ ಮನೆಯಲ್ಲಿ ಊಟ ಮಾಡಿ ಮಲಗುವಾಗ ಒಮ್ಮೆಲೆ ಕುಸಿದು ಬಿದ್ದಿದ್ದು, ಪಿರ್ಯಾದಿದಾರರ ತಾಯಿ ಮತ್ತು ಮೃತರ ಪತ್ನಿ ಅವರನ್ನು ಮೇಲಕ್ಕೆತ್ತಿ ಉಪಚರಿಸಿ ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ದಿನಾಂಕ:24-11-2021 ರಂದು 7.45 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 41-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಶ್ವೇಶ್ವರ  ಪ್ರಾಯ:82 ವರ್ಷ    ತಂದೆ: ದಿ/ ನರಸಿಂಹ ದಾಮಲೆ ವಾಸ; ನರಸಿಂಹವನ ಐಂಗುಡ ಮನೆ  ಶಿಬಾಜೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರ  ಪತ್ನಿ ಅನುರಾದ(72)  ರವರು ಹಲವಾರು ವರ್ಷಗಳಿಂದ ಸಕ್ಕರೆ ಖಾಯಿಲೆ , ಬಿ ಪಿ ಖಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು. ದಿನಾಂಕ: 25/11/2021 ರಂದು ಬೆಳಗ್ಗೆ ಸುಮಾರು 6.00 ಗಂಟೆಗೆ ಮನೆಯ ಬಳಿ ಇರುವ ಬಾವಿಯಿಂದ ನೀರು ತರಲು ಹೋಗಿದ್ದವರು ಆ ಸಮಯ ಬಾವಿಯಿಂದ ಜೋರಾಗಿ ಶಬ್ದ ಕೇಳಿದ್ದರಿಂದ ಪಿರ್ಯಾದಿದಾರರ ಮನೆಯಲ್ಲಿದ್ದ ಸೋದರ ಮಾವನ ಮಗ ವಿವೇಕಾನಂದ ಬೀಡೆ ರವರು ಓಡಿ ಹೋಗಿ ನೋಡಿದಾಗ ಪಿರ್ಯಾದಿದಾರರ ಪತ್ನಿ ಬಾವಿಗೆ ಬಿದ್ದಿದ್ದು ಈ ವಿಚಾರವನ್ನು ಪಿರ್ಯಾದಿದಾರರಿಗೆ ಹಾಗೂ ಅಕ್ಕ ಪಕ್ಕದ ಮನೆಯವರಿಗೆ ತಿಳಿಸಿ ನಂತರ ಹಗ್ಗದ ಸಹಾಯದಿಂದ ದೇಹವನ್ನು ಮೇಲಕ್ಕೆ ಎತ್ತಿ ನೋಡಿದಾಗ ಪಿರ್ಯಾದಿದಾರರ ಪತ್ನಿ ಮೃತ ಪಟ್ಟಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್  56/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಕೃಷ್ಣ ಪ್ರಾಯ 48 ತಂದೆ ನಾರಾಯಣ ಶೆಟ್ಟಿಗಾರ್ ಹೊಯಿಗೆ ಗದ್ದೆ ಕೊಡ್ಮಣ್ ಗ್ರಾಮ   ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು   ಪತ್ನಿ ಯೊಂದಿಗೆ ವಾಸವಾಗಿದ್ದು, ನೆತ್ರಕೆರೆ ಇಂಟರ್ ಲಾಕ್  ಪ್ಯಾಕ್ಟರಿಯಲ್ಲಿ  ಕೆಲಸ ಮಾಡಿಕೊಂಡಿದ್ದು  ಪಿರ್ಯಾದಿದಾರರ  ಪತ್ನಿ  ಮನೆಯಲ್ಲಿ ಬೀಡಿಕಟ್ಟುವ ಕೆಲಸ ಮಾಡಿಕೊಂಡಿದ್ದು ಪಿರ್ಯಾದಿದಾರರಿಗೆ  ಸುಮಾರು 12 ವರ್ಷದ ಹಿಂದೆ ಮದುವೆಯಾಗಿದ್ದು ಮಕ್ಕಳಾಗಿರುವುದಿಲ್ಲ.  ಮನೆಯಲ್ಲಿ  ಇಬ್ಬರೇ ಇದ್ದು  ದಿನಾಂಕ 24-11-2021 ರಂದು  ಸಾಯಂಕಾಲ ಪಿರ್ಯಾದಿದಾರರು  ಮನೆಯಲ್ಲಿ ಇದ್ದು ಪಿರ್ಯಾದಿದಾರರ  ಪತ್ನಿ ಮನೆಯ ಪಕ್ಕ ಬಚ್ಚಲು ಕೋಣೆಗೆ  ಸ್ನಾನ ಮಾಡಲು ಹೋಗಿದ್ದು ಸಮಯ 7.30 ಗಂಟೆಗೆ ಬಚ್ಚಲು ಕೋಣೆಯಲ್ಲಿ ಬೊಬ್ಬೆ ಕೇಳಿಸಿತು ಪಿರ್ಯಾದಿದಾರರು  ಕೂಡಲೇ ಮನೆಯ ಒಳಗಿನಿಂದ  ಬಚ್ಚಲು ಕೋಣೆಗೆ ಓಡಿ ಹೋದಾಗ ಪತ್ನಿ ಬಚ್ಚಲು ಕೋಣೆಯಲ್ಲಿ ಬಿದ್ದುಕೊಂಡಿದ್ದು ನರಳಾಡುತ್ತಿದ್ದಳು.  ಪಿರ್ಯಾದಿದಾರರು  ಹೆದರಿ  ಮನೆಯ ಪಕ್ಕದಲ್ಲಿ ಪಿರ್ಯಾದಿದಾರರ  ತಮ್ಮ ಭಾಸ್ಕರ ರವರನ್ನು ಕರೆದಾಗ ತಮ್ಮ ಭಾಸ್ಕರರವರ ಪತ್ನಿ ಶ್ರೀಮತಿ ದೇವಿಕಾರವರು ಓಡಿಕೊಂಡು ಬಂದಿದ್ದು ಪಿರ್ಯಾದಿದಾರರು  ಅವರನ್ನು ಆರೈಕೆ ಮಾಡಿ  ನಂತರ ಪಿರ್ಯಾದಿದಾರರ  ಪತ್ನಿಯನ್ನು  ತಮ್ಮ ಭಾಸ್ಕರನ ಓಮ್ನಿ ಕಾರಿನಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ  ಕರೆದುಕೊಂಡು ಬಂದಲ್ಲಿ ವೈದ್ಯರು  ಪರೀಕ್ಷಿಸಿ  ರಾತ್ರಿ 8.27 ಗಂಟೆಗೆ ದಾರಿ ಮದ್ಯೆ ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 50-2021 ಕಲಂ 174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-11-2021 09:56 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080