ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 1

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಣ್ಣಪ್ಪ ನಾಯ್ಕ (76) ತಂದೆ: ದಿ, ದೇವಪ್ಪ ನಾಯ್ಕ ವಾಸ: ಏನವರ ಮನೆ, ನಾರ್ಕೋಡು, ಆಲೆಟ್ಟಿ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ಈ ದಿನ ದಿನಾಂಕ 26.03.2022 ರಂದು ಸಮಯ ಸುಮಾರು 12:00 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ನಾರ್ಕೋಡು ಎಂಬಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವರೇ  ಎದುರಿನಂದ ಬಂದ ಕೆಎ 19 ಹೆಚ್ ಜಿ 7498 ನೇದರ ಸ್ಕೂಟರ್ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಪಿರ್ಯಾದುದಾರರು  ರಸ್ತೆಗೆ ಬಿದ್ದು, , ಎಡಕೈ ಮೊಣಗಂಟು,ಎಡಕಾಲಿನ ಕೋಲು ಕಾಲಿಗೆ ರಕ್ತಗಾಯವಾಗಿದ್ದವರನ್ನು ಅಲೇ ಇದ್ದ ಪಿರ್ಯಾದುದಾರರ ಪರಿಚಯಸ್ಥರಾದ ವೆಂಕಪ್ಪ ಎಂಬವರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ, ವಿ, ಜಿ ಆಸ್ಪತ್ರೆಗೆ ಕರೆತಂದಿರುವುದಾಗಿದೆ.ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅಕ್ರ  38/22 ಕಲಂ:  279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಯತ್ನ ಪ್ರಕರಣ: 1

 • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿನೋದ್ ಕುಮಾರ್ಪ್ರಾಯ: 23 ವರ್ಷ, ತಂದೆ: ಗಿರಿಯಪ್ಪ ಗೌಡ  ವಾಸ: ಕುಲ್ಕುಂದ ಮನೆ,  ಸುಬ್ರಹ್ಮಣ್ಯ  ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಸುಬ್ರಹ್ಮಣ್ಯದ ಹಿಂಧೂ ಜಾಗರಣ ವೇದಿಕೆಯ ಕಾರ್ಯದರ್ಶಿಯಾಗಿದ್ದು, ದಿನಾಂಕ: 23.03.2022 ರಂದು ಮುಂಜಾನೆ ಸುಮಾರು 3:30 ಗಂಟೆಯ ಹೊತ್ತಿಗೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಅಭಯ ಆಂಜನೇಯ ಸ್ವಾಮಿ ಗುಡಿಯ ಸಮೀಪದಲ್ಲಿ ಮಲಗಿಕೊಂಡಿದ್ದ ದನವೊಂದರ ಸಮೀಪದಲ್ಲಿ ಬಿಳಿ ಬಣ್ಣದ ಇನೋವ ಕಾರನ್ನು ತಂದು ನಿಲ್ಲಿಸಿ ಕಾರಿನಿಂದಿಳಿದ ಯಾರೋ ಇಬ್ಬರು ವ್ಯಕ್ತಿಗಳು ದನವನ್ನು ಕಾರಿನ ಡಿಕ್ಕಿಯ ಕಡೆಗೆ ಎಳೆದು ತರಲು ಎರೆಡರೆಡು ಬಾರಿ ಪ್ರಯತ್ನಿಸಿ, ಕಾರಿನಲ್ಲಿ ತುಂಬಿಸಿ ಕದ್ದುಕೊಂಡು ಹೋಗಲು ಯತ್ನಿಸಿರುವುದು ಸ್ಪಷ್ಟವಾಗಿ ಶ್ರೀ ದೇವಳದ ಕ್ಯಾಮರಾದಲ್ಲಿ ದಾಖಲಾಗಿರುವುದಾಗಿದ್ದು,ಈ ಬಗ್ಗೆ ಸುಬ್ರಮಣ್ಯ ಪೊಲೀಸ್‌  ಠಾಣೆ  ಅ.ಕ್ರ ನಂಬ್ರ  : 37-2022 ಕಲಂ:   379, 511 ಐಪಿಸಿ       ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರುಕ್ಮಿಣಿ ಪ್ರಾಯ 53 ವರ್ಷ ಗಂಡ ; ಸುದರ್ಶನ್  ವಾಸ ;ಮಂಜೋಳಿ ಮನೆ ಗ್ರಾಮ ನೂಜಿಬಾಳ್ತಿಲ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಾದ ಶ್ರೀಮತಿ ರುಕ್ಮಿಣಿ (53) ಎಂಬವರು ತನ್ನ ಗಂಡನೊಂದಿಗೆ ವಾಸವಾಗಿದ್ದು ಮನೆ ವಾರ್ತೆ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರಿಗೆ ಎರಡು ಗಂಡು ಮಕ್ಕಳಿದ್ದು ಹಿರಿಯ ಮಗ ವಿದೇಶದಲ್ಲಿದ್ದು ಕಿರಿಯ ಮಗನಾದ ಆರೋಪಿತ ಬಿನುಕುಮಾರ್ ಎಂಬಾತನು ಪಿರ್ಯಾದುದಾರರೊಂದಿಗೆ ವಾಸವಾಗಿದ್ದು ವಿಪರೀತ ಅಮಲು ಪದಾರ್ಥ ಚಟವುಳ್ಳವನಾಗಿರುತ್ತಾನೆ. ಆರೋಪಿತನು ಪಿರ್ಯಾದುದಾರರಿಗೆ ಕೃಷಿ ಜಾಗದಲ್ಲಿ ಪಾಲು ನೀಡುವಂತೆ ಆಗಾಗ ತೊಂದರೆ ನೀಡುತ್ತಿರುತ್ತಾನೆ ಈಗಿರುತ್ತಾ ದಿನಾಂಕ:25.03.2022 ರಂದು ಸಮಯ ಸಂಜೆ 17.30 ಗಂಟೆಗೆ ಆರೋಪಿತನು ಪಿರ್ಯಾದುದಾರರಿಗೆ ಜಾಗದಲ್ಲಿ ಪಾಲುಕೊಡಬೇಕೆಂದು ಕೇಳಿದಾಗ ಪಿರ್ಯಾದುದಾರರು ವಿದೇಶದಲ್ಲಿದ್ದ ಹಿರಿಯ ಮಗ ಬಂದ ನಂತರ ಪಾಲು ನೀಡುವುದಾಗಿ ತಿಳಿಸಿರುತ್ತಾರೆ ಆದರೆ ಆರೋಪಿತನು ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಬಳಿಕ ಕಟ್ಟಿಗೆಯ ದೊಣ್ಣೆಯೊಂದನ್ನು ತೆಗೆದುಕೊಂಡು ಬಂದು ಪಿರ್ಯಾದುದಾರಿಗೆ ಹಲ್ಲೆ ಮಾಡಿ ಬಳಿಕ ಕೈಯಿಂದ ಗುದ್ದಿ ದೂಡಿ ಹಾಕಿರುತ್ತಾನೆ ಅ ವೇಳೆ  ಮನೆಯಲ್ಲಿದ್ದ ಪಿರ್ಯಾದುದಾರರ ಗಂಡ ಸುದರ್ಶನ ರವರು ಗಲಾಟೆಯನ್ನು ಬಿಡಿಸಲು ಬಂದಾಗ ಆವರಿಗೂ ಸಹ ದೊಣ್ಣೆಯಿಂದ ಹಲ್ಲೆ ಮಾಡಿ ಬಳಿಕ ನಿಮ್ಮನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ನಂತರ ದಿನಾಂಕ:26.03.2022 ರಂದು ಬೆಳಗ್ಗೆ ಆರೋಪಿತ ಪಿರ್ಯಾದುದಾರರ ಮನೆಗೆ ಬಂದು ಗಲಾಟೆ ಮಾಡಿ ಹೋಗಿದ್ದು  ಬಳಿಕ ಪುನ: ಮದ್ಯಾಹ್ನ ಸಮಯ ವಿಪರೀತ ಅಮಲು ಪದಾರ್ಥವನ್ನು ಸೇವಿಸಿಕೊಂಡು ಬಂದು ಪಿರ್ಯಾದುದಾರರೊಂದಿಗೆ ಗಲಾಟೆ ಮಾಡಿದ್ದು ಪಿರ್ಯಾದುದಾರರಿಗೆ ನಿನ್ನೆ ದಿನ ಆರೋಪಿತನು ಹಲ್ಲೆ ಮಾಡಿದ್ದರಿಂದ ನೋವು ಉಲ್ಬಣಗೊಂಡು ಈ ದಿನ ಕಡಬ ಸರ್ಕಾರಿ ಆಸ್ಪತ್ರೆಗೆ ಹೋಗಿ   ಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 26/2022 ಕಲಂ. 504.324.323.506    IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸವಿತ ಪ್ರೀತಿ ಪಿಂಟೋ ಗಂಡ ರೋಶನ್ ಮನೋಜ್ ಪಿಂಟೋ ಬಲ್ಯ ಮನೆ ಕಾಗೆಕಾನ ಬರಿಮಾರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದುದಾರರು ತನ್ನ ಮನೆಯಲ್ಲಿ ಅತ್ತೆ ಮತ್ತು ಮಗುವಿನೊಂದಿಗೆ ವಾಸವಾಗಿದ್ದು ಪಿರ್ಯಾದುದಾರರ  ಗಂಡ ವಿದೇಶದಲ್ಲಿ  ವಾಸವಾಗಿರುವುದಾಗಿದೆ. ಪಿರ್ಯಾದುದಾರರ ನೆರೆಯ ಆರೋಪಿ  ಶ್ರೀಧರ ಭಂಡಾರಿ ರವರ ಮನೆಯಿದ್ದು ದಿನಾಂಕ 26.03.2022 ರಂದು ಮಧ್ಯಾಹ್ನ 12.00 ಗಂಟೆಗೆ ಪಿರ್ಯಾದುದಾರರು ಪಿರ್ಯಾದುದಾರರ ಮನೆಗೆ ಕೆಲಸಕ್ಕೆ ಬಂದ ಅನಿತಾ ಮತ್ತು ಚಂದ್ರಾವತಿರವರ ಜೊತೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿ ಶ್ರೀಧರ ಭಂಡಾರಿ ಮತ್ತು ಅವರ ಪತ್ನಿ ಗೀತಾ ರವರು ಪಿರ್ಯಾದುದಾರರ ಅಂಗಳಕ್ಕೆ  ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರ ಕಾಂಪೌಂಡ್ ಗೋಡೆಗೆ ತಾಗಿ ಕೊಂಡಿರುವ ಕೃಷಿ ನಾಶ ಮಾಡಿ ಸುಮಾರು  5000/- ನಷ್ಟವನ್ನುಂಟು ಮಾಡಿರುತ್ತಾರೆ ಆರೋಪಿಗಳ ಈ ಕೃತ್ಯವನ್ನು ಪಿರ್ಯಾದುದಾರರು ಯಾಕೆ ಈ ರೀತಿ ಮಾಡಿದ್ದು ಎಂದು ಕೇಳಿದ್ದಕ್ಕೆ ಪಿರ್ಯಾದುದಾರರಿಗೆ ಮತ್ತು ಪಿರ್ಯಾದುದಾರರ ಅತ್ತೆಗೆ ಅವಾಚ್ಯವಾಗಿ ಬೈದಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ,ಕ್ರ 27/2022 ಕಲಂ 447,427,504, ಜೊತೆಗೆ 34  ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಿಮ್ಮಪ್ಪ (40)ತಂದೆ; ದಿ ಮುದ್ದ ವಾಸ:ಮದರ ಮೂಲೆ ಮನೆ, ಕರೋಪಾಡಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ತಮ್ಮ ವಸಂತ ಪ್ರಾಯ 37 ವರ್ಷ ಎಂಬಾತನು ಎಲೆಕ್ಟ್ರಿಕ್ ಕಂಬದ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಈ ದಿನ ರಜೆ ಮಾಡಿ ಮನೆಯಲ್ಲಿಯೇ ಇದ್ದು. ಪಿರ್ಯಾಧಿ  ಈ ದಿನ ಕೂಲಿ ಕೆಲಸದ ಬಗ್ಗೆ ಉಪ್ಪಳಕ್ಕೆ ಹೋಗಿದ್ದು ಸಾಯಂಕಾಲ ಸುಮಾರು 4.45 ಗಂಟೆ ಸಮಯಕ್ಕೆ ಪಿರ್ಯಾಧಿಯ ದೊಡ್ಡ ಅಣ್ಣನ ಹೆಂಡತಿ ಸವಿತಾ ಎಂಬವರು ಫೋನು ಮಾಡಿ ವಸಂತನು ಬಂಟ್ವಾಳ ತಾಲೂಕು ಕರೋಪ್ಪಾಡಿ ಗ್ರಾಮದ ಮದರ ಮೂಲೆ ಎಂಬಲ್ಲಿರುವ ತಮ್ಮ ಮನೆಯ ಬಳಿಯ ಬಾವಿಯ ನೀರಿಗೆ ಬಿದ್ದಿರುವುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾಧಿ ಮನೆಗೆ ಬಂದು ವಿಷಯವೇನೆಂದು ತನ್ನ ತಾಯಿಯಲ್ಲಿ ಕೇಳಿದಾಗ ತಮ್ಮ ವಸಂತನು  ಮನೆಯ ಕೋಳಿ ಮರಿಯು ಬಾವಿಗೆ ಬಿದ್ದಿದ್ದು ಅದನ್ನು ಮೇಲಕ್ಕೆತ್ತಲು ಪ್ರಯತ್ನ ಪಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನಿರೀನಲ್ಲಿ ಮುಳುಗಿರುವುದಾಗಿ ತಿಳಿಸಿದರು. ನೆರೆಯ ಮುಳುಗು ತಜ್ಞರು ಕರೆಯಿಸಿ ಬಾವಿಗೆ ಇಳಿದು ಸುಮಾರು 5.30 ಗಂಟೆ ಸಮಯಕ್ಕೆ ವಸಂತನನ್ನು ಮೇಲಕ್ಕೆತ್ತಿ ನೋಡಲಾಗಿ ವಸಂತನು ಮೃತಪಟ್ಟಿದ್ದನು.ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 07/2022  ಕಲಂ 174  ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-03-2022 10:06 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080