ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗೋಪಿ.ಎನ್, 52 ವರ್ಷ ತಂದೆ: ದಿ|| ನಾರಾಯಣನ್ ವಾಸ: ಮಂಜತ್ತನಮ್ ಲಕ್ಷ್ಮಂ ವೀಡು ಕಾಲನಿ,  ಮಲ್ಲಪಲ್ಲಿ ವೆಸ್ಟ್ ಪೋಸ್ಟ್, ಮಲ್ಲಪಳ್ಳಿ, ಪಟ್ಟನಂತಿಟ್ಟ, ಶಬರಿಮಲೆ, ಕೇರಳ ರವರು ನೀಡಿದ ದೂರಿನಂತೆ ದಿನಾಂಕ 26-05-2022 ರಂದು ಬೆಳಿಗ್ಗೆ 06:00 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ಪಿರ್ಯಾದಿದಾರರ ಜೊತೆಯಲ್ಲಿದ್ದ ಮಹಿಳೆ ರಾಜಮ್ಮ ಎಂಬವರು ಬಹಿರ್ದೆಸೆಗೆ  ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಿ.ಸಿ.ರೋಡ್ ಕಡೆಯಿಂದ ಅಪರಿಚಿತ ವಾಹನವೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬದಿಗೆ ಚಲಾಯಿಸಿಕೊಂಡು ಹೋಗಿ ರಾಜಮ್ಮಳಿಗೆ ರಭಸವಾಗಿ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿರುವುದಾಗಿದೆ. ಅಪಘಾತದ ಪರಿಣಾಮ ರಾಜಮ್ಮಳಿಗೆ ತಲೆಗೆ ಜಜ್ಜಿದ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 59/2021 ಕಲಂ: 279, 304(A) ಐಪಿಸಿ & 134(A&B) r/w 187 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೆ, ಆರ್ ಅರುಣ್ ಕುಮಾರ್ (48) ತಂದೆ: ರಾಮ ಶೆಟ್ಟಿ ವಾಸ: ಜೋಡಿ ಬೆಟ್ಟಿ ಗ್ರಾಮ, ಪೊನ್ನಂ ಪೇಟೆ ತಾಲೂಕು, ಮಡಿಕೇರಿ ಜಿಲ್ಲೆ ರವರು ಕೆ.ಎಸ್,ಆರ್,ಟಿ.ಸಿ ಮಡಿಕೇರಿ ಡಿಪೋದಲ್ಲಿ ಬಸ್ ಚಾಲಕರಾಗಿದ್ದು ದಿನಾಂಕ 26.05.2022 ರಂದು ಮೇಲಾಧಿಕಾರಿಯವರ ಆದೇಶದಂತೆ ಕೆಎ 19 ಎಫ್ 2288 ನೇ ಕೆ.ಎಸ್,ಆರ್,ಟಿ.ಸಿ ಟ್ರಕ್ ನ ಚಾಲಕರಾಗಿ ಮಡಿಕೇರಿಯಿಂದ ಪುತ್ತೂರು ಡಿಪೋದಲ್ಲಿರುವ ವರ್ಕ್ ಶಾಫ್ ಗೆ  ಬಸ್ಸಿನ ಸಲಕರಣೆಗಳನ್ನು ಟ್ರಕ್ ನಲ್ಲಿ ತುಂಬಿಕೊಂಡು ಮೇಕಾನಿಕ್ ಗಳಾದ ಮಂಜುನಾಥ ಮತ್ತು ಅಲ್ಲಾಬಾಷ್ ಎಂಬವರೊಂದಿಗೆ ಪಿರ್ಯಾದುದಾರರು ಟ್ರಕ್ ನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವರೇ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಆನೆಗುಂಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ, ಎದುರಿನಿಂದ ಬಂದ ಕೆಎ 21 ವೈ 8967 ನೇದರ ಮೋಟಾರ್ ಸೈಕಲ್ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಆತನ ತಪ್ಪುಬದಿಯಾದ ಬಲಬದಿಗೆ  ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬಂದು ಟ್ರಕ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಆತನು ರಸ್ತೆಗೆ ಎಸೆಯಲ್ಪಟ್ಟವನನ್ನು ಪಿರ್ಯಾದುದಾರರು ಮತ್ತು ಮೇಕಾನಿಕ್ ಗಳಾದ ಮಂಜುನಾಥ್, ಅಲ್ಲಾಬಾಷ್ ರವರು ಆತನ ಬಳಿಗೆ ಹೋಗಿ ನೋಡಲಾಗಿ ಸವಾರನಿಗೆ ಎಡಕಾಲಿಗೆ ಗಾಯಾವಾಗಿದ್ದು, ಆತನನ್ನು ಉಪಚರಿಸಿ ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 56/2022 ಕಲಂ: 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಯಶೋಧ ಪ್ರಾಯ 31 ವರ್ಷ, ಗಂಡ:ವಸಂತ , ವಾಸ: ಮಾಡ್ನೂರು ಕಾಲೋನಿ , ಮಾಡ್ನೂರು ಗ್ರಾಮ, ಕಾವು ಅಂಚೆ ಪುತ್ತೂರು ತಾಲೂಕು ಎಂಬವರ ಗಂಡ ವಸಂತರವರು ಮರ ಕೊಯ್ಯುವ ಕೆಲಸ ಮಾಡಿಕೊಂಡಿದ್ದು ದಿನಾಂಕ 25.05.2022 ರಂದು ಬೆಳಿಗ್ಗೆ 7.00 ಗಂಟೆಗೆ ಪುತ್ತೂರು ತಾಲೂಕಿನ ನರಿಮೊಗರು ಎಂಬಲ್ಲಿ ಮರ ಕೊಯ್ಯುವ ಕೆಲಸವಿದೆ ಎಂದು ಹೇಳಿ ಮನೆಯಿಂದ ಹೋಗಿರುತ್ತಾರೆ. ಬಳಿಕ ಬೆಳಿಗ್ಗೆ 9.00 ಗಂಟೆಗೆ ನರಿಮೊಗರು ಎಂಬಲ್ಲಿಗೆ ಹೋಗಿ ದಿವಾಕರ ಗೌಡ ಎಂಬವರ ಬಾಬ್ತು ಜಾಗದಲ್ಲಿ ಮರಗಳನ್ನು ಕಡಿದು ಸಂಜೆ 4.15 ಗಂಟೆ ವೇಳೆಯಲ್ಲಿ ಅಕೇಶಿಯ ಮರಗಳನ್ನು ಮೆಷಿನ್‌ ಮೂಲಕ ಕಡಿಯುತ್ತಿರುವಾಗ ಆಕೇಶಿಯಾ ಮರವು ವಿರುದ್ದ ದಿಕ್ಕಿನಲ್ಲಿ ಇದ್ದ ಹೈಟೆನ್ಷನ್‌ ವಿದ್ಯುತ್‌ ತಂತಿ ಮೇಲೆ ಬಿದ್ದು ತಂತಿ ಮೂಲಕ ಪಿರ್ಯಾದಿದಾರರ ಗಂಡ ವಸಂತರವರಿಗೆ ವಿದ್ಯುತ್‌ ಪ್ರವಹಿಸಿ ಎಸೆಯಲ್ಪಟ್ಟು ಅಸ್ವಸ್ಥಗೊಂಡವರನ್ನು , ಅಲ್ಲಿ ಕೆಲಸ ಮಾಡಿಕೊಂಡಿದ್ದ ಮೋಹನ, ಮುರಳಿ ಮತ್ತು ರಾಕೇಶ್ ರವರು ಒಂದು ವಾಹನದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಜಿಲ್ಲಾ ವೆನ್‌ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 40/2022 ಕಲಂ: 304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರವೀಂದ್ರ ತಂದೆ ನಾರಾಯಣ ಆಚಾರ್ಯ ಕಾವೂರು ಗ್ರಾಮ ಮಂಗಳೂರು ರವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರ ತಂದೆಗೆ ಏಳು ಜನ ಗಂಡು ಮಕ್ಕಳು  ಅವರೆಲ್ಲ ಅವರರ ಕೆಲಸದಲ್ಲಿದ್ದು ಪಿರ್ಯಾದುದಾರರ  2 ನೇ ಸಹೋದರ  ದಯಾಕರ ಆಚಾರ್ಯ ಪ್ರಾಯ(44), ರವರು ಮರದ ಕೆತ್ತನೆ ಕೆಲಸ ಮಾಡಿಕೊಂಡಿದ್ದು ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯ ಭಾಗದಲ್ಲಿ ದೈವಸ್ಥಾನದ ಮರದ ಕತ್ತನೆಯನ್ನು  ಮಾಡಿಕೊಂಡಿರುವುದಾಗಿದೆ. ದಿನಾಂಕ: 18.05.2022 ರಂದು ಬಂಟ್ವಾಳ ತಾಲೂಕು ಕರಿಯಾಂಗಳ ಗ್ರಾಮದ ಪೂಳಲಿ ನಿವಾಸಿ  ವಸಂತರವರ  ಮನೆಯಲ್ಲಿ ದೈವಸ್ಥಾನದ ಮಾಡಿನ ಕೆಲಸವನ್ನು  ಸಹೋದ್ಯೋಗಿ  ಗಂಗಾಧರರವರ ಜೊತೆ ಮಾಡಿನ ಕೆಲಸ ಮಾಡಿಕೊಂಡಿರುವ ಸಮಯ ಸಂಜೆ 4.30 ಗಂಟೆಗೆ ಆಕಸ್ಮಿಕವಾಗಿ  ಸುಮಾರು 7 ಅಡಿ  ಎತ್ತರದಿಂದ ಕಾಲು ಜಾರಿ ಕೆಳಗೆ ಬಿದ್ದು  ತಲೆಗೆ  ಗಾಯವಾಗಿದ್ದು  ಕೂಡಲೇ ಗಂಗಾಧರ ಮತ್ತು ಅಲ್ಲಿದ್ದವರು ಗಾಯಾಳು ಅಣ್ಣ ದಯಾಕರ ಆಚಾರ್ಯರವರನ್ನು ಎತ್ತಿ ಉಪಚರಿಸಿ ಒಂದು ವಾಹನದಲ್ಲಿ ಸ್ಥಳೀಯ ಕೈಕಂಬ ಕ್ಲಿನಿಕ್ ನಲ್ಲಿ  ಚಿಕಿತ್ಸೆ ನೀಡಿದಾಗ ಚೇತರಿಸಿದ್ದು  ನಂತರ ಮನೆಗೆ  ಬಂದಿದ್ದು   ರಾತ್ರಿ  7.00 ಗಂಟೆಗೆ ಮನೆಯಲ್ಲಿರುವಾಗ  ವಾಂತಿ ಮಾಡಿ ಅಸ್ವಸ್ಥಗೊಂಡವರನ್ನು   ಚಿಕಿತ್ಸೆ ಬಗ್ಗೆ  ಮಂಗಳೂರು ಎ.ಜೆ  ಆಸ್ಪತ್ರೆಗೆ ಪಿರ್ಯಾದುದಾರ ಅತ್ತಿಗೆ ಶ್ರೀಮತಿ  ಜಯಶ್ರೀ, ಸಹೋದರ  ಗಣೇಶ್  ಕರೆದುಕೊಂಡು  ಬಂದಿದ್ದು  ಪರೀಕ್ಷಿಸಿದ ವೈಧ್ಯಾಧಿಕಾರಿಗಳು  ಒಳರೋಗಿಯಾಗಿ ಚಿಕಿತ್ಸೆ  ಬಗ್ಗೆ ತೀವ್ರ  ನಿಗಾ ಘಟಕದಲ್ಲಿ  ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ ಪಿರ್ಯಾದುದಾರರ   ಅಣ್ಣ  ದಯಾಕರ  ದಿನಾಂಕ: 26.05.2022 ರಂದು ಬೆಳಿಗ್ಗೆ ಚಿಕಿತ್ಸೆ  ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ದೃಡ ಪಡಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 30-2022  ಕಲಂ 174  ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 27-05-2022 10:53 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080