ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಆಸಿಫ್  ಪ್ರಾಯ : 29 ವರ್ಷತಂದೆ: ಎಸ್ ಮಹಮ್ಮದ್ವಾಸ: ಮಾರ್ಕೆಟ್ ರೋಡ್,8 ನೇ ವಾರ್ಡ್, ಮೂಡಿಗೆರೆ ಟೌನ್,ಮೂಡಿಗೆರೆ ತಾಲೂಕು,ಚಿಕ್ಕಮಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ : 25-08-2021ರಂದು KA-05-ME-0665 ನಂಬ್ರದ ಮಾರುತಿ 800 ಕಾರನ್ನು  ಮಂಗಳೂರಿನಿಂದ ಮೂಡಿಗೆರೆಗೆ ಚಲಾಯಿಸಿಕೊಂಡು ಬರುತ್ತಾ  ಸಮಯ ಸುಮಾರು 23:40 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮಿತ್ತಬೈಲು ಎಂಬಲ್ಲಿಗೆ ತಲುಪಿದಾಗ ಬಿ.ಸಿ.ರೋಡ್ ಕಡೆಯಿಂದ ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ  KA-20-MA-6818 ನಂಬ್ರದ S-Cross ಕಾರನ್ನು ಅದರ ಚಾಲಕ ಪ್ರಮೋದ್ ರವರು  ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಕಾರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ  ಪರಿಣಾಮ  ಎರಡೂ ವಾಹನಗಳು ಜಖಂಗೊಂಡು ಪಿರ್ಯಾದಿಯು ಗಾಯಗೊಂಡು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 81/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಿರಣ್ ಕುಮಾರ್ @ ರಮಾನಂದ ಪ್ರಾಯ: 29 ವರ್ಷ, ತಂದೆ: ಅಣ್ಣಿ ಹೆಗ್ಡೆ, ವಾಸ: ಪೇರಡೆ ಮನೆ, ಮಾಲಾಡಿ ಗ್ರಾಮ, ಬೆಳ್ತಂಗಡಿ ಗ್ರಾಮ ಎಂಬವರ ದೂರಿನಂತೆ ಫಿರ್ಯಾಧಿದಾರರಾದ ಕಿರಣ್ ಕುಮಾರ್ ರವರು ದಿನಾಂಕ: 26.08.2021 ರಂದು ತನ್ನ ಮನೆಯಿಂದ ಕುಕ್ಕಳ ಗ್ರಾಮದ ಮಂಜಲಪಲ್ಕೆ ಎಂಬಲ್ಲಿರುವ ತನ್ನ ಗೆಳೆಯ ನಿತೀನ್ ಎಂಬವರ ಮನೆಗೆ ಮೊಟಾರ್ ಸೈಕಲ್ ನಲ್ಲಿ ಹೋಗುತ್ತಿರುವಾಗ 20:15 ಗಂಟೆಗೆ ಬಂಟ್ವಾಳ ತಾಲೂಕು, ಪಿಲಾತಬೆಟ್ಟು ಗ್ರಾಮದ, ಪುಂಜಾಲಕಟ್ಟೆ ಪೇಟೆಗೆ ತಲುಪಿದಾಗ ಸುಮಾರು 8-10 ಮಂದಿ ಅಪರಿಚಿತರು ಅಕ್ರಮಕೂಟ ಸೇರಿಕೊಂಡು ಫಿರ್ಯಾಧಿದಾರರ ಮೋಟಾರ್ ಸೈಕಲ್ ನ್ನು ಅಡ್ಡಕಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಕೈಯಿಂದ ಹಲ್ಲೆ ನಡೆಸಿ ಮೋಟಾರ್ ಸೈಕಲ್ ನ್ನು ದೂಡಿ ಹಾಕಿ ಫಿರ್ಯಾಧಿದಾರರನ್ನು ಕೆಳಗೆ ಬೀಳಿಸಿದ್ದಲ್ಲದೆ ಅವರ ಪೈಕಿ ಒಬ್ಬಾತನು ಫಿರ್ಯಾಧಿದಾರರ ತಲೆಗೆ ಕಲ್ಲಿನಿಂದ ಹೊಡೆದ ಪರಿಣಾಮ ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 56/2021 ಕಲಂ: 143, 147, 148, 341, 323, 324, 504, 149  ಐಪಿಸಿ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೀಕ್ಷಿತಾ ಪ್ರಾಯ 22 ವರ್ಷ ತಂದೆ: ನಾರಾಯಣ ಪೂಜಾರಿ ವಾಸ: ಮಾರ್ನಬೈಲ್ ಕಾಲೋನಿ ಮನೆ ಸಜಿಪ ಮುನ್ನೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 25.08.2021 ರಂದು ರಾತ್ರಿ  10.00 ಗಂಟೆಗೆ  ಪಿರ್ಯಾಧಿದಾರರು ಬಂಟ್ವಾಳ ತಾಲೂಕು  ಬಂಟ್ವಾಳ ತಾಲೂಕು ಸಜಿಪ ಮುನ್ನೂರು  ಗ್ರಾಮದ  ಮಾರ್ನಬೈಲ್ ಮನೆಯ ಅಂಗಳದಲ್ಲಿ ತನ್ನ ಬಾಬ್ತು ಕೆ ಎ 19 ಹೆಚ್ ಡಿ 3801 ಡಿಯೋ ಮೋಟಾರ್ ಸೈಕಲನ್ನು  ಇಟ್ಟಿದ್ದು ದಿನಾಂಕ 26-08-2021 ರಂದು ಬೆಳಿಗ್ಗೆ 06.00 ಗಂಟೆಗೆ ಎದ್ದು ನೋಡುವಾಗ   ಸದ್ರಿ ಮೋಟಾರು ಸೈಕಲ್ ಸ್ಥಳದಲ್ಲಿ ಇಲ್ಲದೇ ಇದ್ದು,  ಯಾರೋ ಕಳ್ಳರು  ಮೋಟಾರು ಸೈಕಲನ್ನು ಕಳವು ಮಾಡಿಕೊಂಡು ಹೋಗಿದ್ದು ಸದ್ರಿ ಮೋಟಾರು ಸೈಕಲನ್ನು  ಸದ್ರಿ ಪರಿಸರದಲ್ಲಿ ಹುಡುಕಾಟ ನಡೆಸಿಕೊಂಡು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ: 100/2021 ಕಲಂ:  379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಅಸ್ಮತ್‌ ಗಂಡ:ಇರ್ಷಾದ್‌ ವಾಸ:ಪಾತ್ರತೋಟ ಕೆಳಿಂಜ ಮನೆ, ವೀರಕಂಭ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರಳ ಗಂಡನಾದ ಇರ್ಷಾದ ಪ್ರಾಯ 26 ವರ್ಷ ಎಂಬಾತನು ಕೈಕಂಬದಲ್ಲಿ ರಿಂಗ್‌ವೆಲ್‌ ಕೆಲಸ ಮಾಡಿಕೊಂಡಿದ್ದವರು 03 ದಿನಗಳಿಂದ ಕೆಲಸಕ್ಕೆ ಹೋಗದೆ ಪಿರ್ಯಾಧಿಯ ಮನೆಯಾದ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಪಾತ್ರತೋಟ ಕೆಳಿಂಜ ಎಂಬಲ್ಲಿದ್ದವರು ದಿನಾಂಕ:25-08-2021 ರಂದು ಬೆಳಿಗ್ಗೆ 05.00 ಗಂಟೆಗೆ ಮನೆಯಿಂದ ಯಾರಿಗೂ ಹೇಳದೆ ಹೊರಟು ಹೋದವರು ಈವರೆಗೂ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಹಾಗೂ ಅವರ ಸ್ನೇಹಿತರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 113/2021 ಕಲಂ:ಮನುಷ್ಯ ಕಾಣೆ  ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆಯತ್ನ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಿಂಗಪ್ಪ ಗೌಡ,ಪ್ರಾಯ 69 ವರ್ಷ ,ತಂದೆ ದಿ/ಸಿದ್ದಪ್ಪ ಗೌಡ ,ವಾಸ ಬರೆಮೇಲು ಮನೆ,ಬೆಳಾಲು ಗ್ರಾಮ ,ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಸಮಯ ಸುಮಾರು 17.00 ಗಂಟೆ ಸಮಯಕ್ಕೆ ಪಿರ್ಯಾದಿ ಲಿಂಗಪ್ಪ ಗೌಡರವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಮಯ ನೆರೆಯ ಜಾರಪ್ಪ ಗೌಡ ಹಾಗೂ ಆತನ ಪತ್ನಿ ಸುಶೀಲ ಎಂಬವರು ಪಿರ್ಯಾದುದಾರರ ಜಾಗಕ್ಕೆ ಪ್ರವೇಶಿಸಿ ಅವರಲ್ಲಿ ಸುಶೀಲಳು ಪಿರ್ಯಾದುದಾರರನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಹೇಳಿ ಪಿರ್ಯಾದುದಾರರನ್ನು ಕೊಲ್ಲುವ ಉದ್ದೇಶದಿಂದ ಆಕೆಯ ಕೈಯಲ್ಲಿದ್ದ ಕತ್ತಿಯಿಂದ ಜೋರಾಗಿ ಬೀಸಿದಾಗ ಪಿರ್ಯಾದುದಾರರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕತ್ತಿಯು ಪಿರ್ಯಾದುದಾರರ ತಲೆಯ ಎಡ ಭಾಗಕ್ಕೆ ತಾಗಿ ರಕ್ತಗಾಯವಾಗಿರುತ್ತದೆ. ಆ ಸಮಯ ಜಾರಪ್ಪ ಗೌಡನು ಅಲ್ಲಿಯೇ ಬೇಲಿಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದುದಾರರ ಬೆನ್ನಿಗೆ ತಿವಿದು, ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಹಾಕಿರುತ್ತಾನೆ. ಗಾಯಗೊಂಡ ಪಿರ್ಯಾದದುದಾರರು ಬೆಳ್ತಂಗಡಿ ಸರಕಾರಿ ಅಸ್ಬತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಹಲ್ಲೆಯಿಂದಾಗಿ ಪಿರ್ಯಾದುದಾರರ ತಲೆಗೆ,ಬೆನ್ನಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 46/2021 ಕಲಂ:447,504,506,324,307 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ 26-08-2021 ರಂದು  ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 47/2021 ಕಲಂ: 504,506,323, 354 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಆಶ್ಲೇಷ ವಾಸ: ಜಯಲಕ್ಷ್ಮೀ ನಿವಾಸ ಗಾಂಧಿ ನಗರ ಕರಿಮೆಣೇಲು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರು ಹಾಗೂ ಅವರ ಗೆಳತಿಯರಾದ ನಾಗರತಿ, ಸುಭಾನ ಹಾಗೂ ಗೆಳೆಯರಾದ ತೌಫಿಕ್,  ಮುಹೀಜ್ ಹಫೀಝ್  ಎಂಬವರು ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಅಂತಿಮ ವರ್ಷದ ಪ್ಯಾರ ಮೆಡಿಕಲ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ದಿನಾಂಕ: 26.08.2021 ರಂದು 17.00 ಗಂಟೆಗೆ ಟ್ರಿಪ್ ಗೆಂದು ಗೆಳೆಯರ ದ್ವಿಚಕ್ರ ವಾಹನದಲ್ಲಿ  ತಾನು ಹಾಗೂ ಗೆಳತಿಯರು  ಗೆಳೆಯರೊಂದಿಗೆ ಮಂಗಳೂರಿನಿಂದ ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಂದು  ದೇವಸ್ಥಾನದಲ್ಲಿ ಪೋಟೋಗಳನ್ನು ತೆಗೆದು ಬಳಿಕ  ಮರಳಿ ದೇವಸ್ಥಾನದಿಂದ ಮನೆಗೆ ಹೋಗುವಾಗ ಸಮಯ ಸುಮಾರು 6.00 ಗಂಟೆಗೆ ದೇವಾಸ್ಥಾನದ ಕೆರೆಯ ಬಳಿ ತಲುಪುತ್ತಿದ್ದಂತೆ 5 ಮಂದಿ ಅಪರಿಚಿತ ಯುವಕರ ಗುಂಪೊಂದು ಸಮಾನ ಉದ್ದೇಶದಿಂದ ಗುಂಪು ಸೇರಿ ಪಿರ್ಯಾದಿ ಹಾಗೂ ಪಿರ್ಯಾದಿ ಜೊತೆಗಿದ್ದ ಗೆಳತಿ ಗೆಳೆಯರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ್ದು, ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 55/2021 ಕಲಂ: 143, 147, 341, ಜೊತೆಗೆ 149  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಜೇಶ ಕೆ ಜೆ ಪ್ರಾಯ:49 ವರ್ಷ,ತಂದೆ: ದಿ|| ಜನಾರ್ಧನ,ವಾಸ:ಪಲ್ಲೋಡಿ ಮನೆ,ಪಂಬೆತ್ತಾಡಿ   ಗ್ರಾಮ,ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರು ದಿನಾಂಕ 26.08.2021 ರಂದು 11.15 ಗಂಟೆಗೆ ತನ್ನ ಆಟೋರಿಕ್ಷಾ ನಂಬ್ರ ಕೆಎ 21-ಬಿ-2503 ನೇದರಲ್ಲಿ ಜನ ಹಾಕಿಕೊಂಡು ಬರುವಾಗ ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಕೂತ್ಕುಂಜ ಬಸ್ಸು ತಂಗುದಾಣದ ಬಳಿ ರೋಡಿನಲ್ಲಿ ಗುತ್ತಿಗಾರಿನಿಂದ ಪಂಜಕ್ಕೆ ಸರ್ವಿಸ್‌ ಮಾಡುವ ಆರೋಪಿತ ಕುಶಾಲಪ್ಪ ಗೌಡ ಎಂಬಾತನು ಪ್ರೈವೆಟ್‌ ಜೀಪಿನಲ್ಲಿ ಬಂದು ಪಿರ್ಯಾದಿದಾರರನ್ನು ಅಡ್ಡಕಟ್ಟಿ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಲ್ಲದೇ ಜೀವ ಸಹಿತ ಬದುಕಲು ಬಿಡುವುದಿಲ್ಲವಾಗಿ ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಅ.ಕ್ರ  : 62-2021 ಕಲಂ:,341,323,506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-08-2021 12:38 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080