ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಧರ ಶೆಟ್ಟಿ ಪ್ರಾಯ 58 ವರ್ಷ ತಂದೆ:ನಾಗಪ್ಪ ಶೆಟ್ಟಿ ವಾಸ:ಬರೆಂಜ ಮನೆ, ಪುಣಚ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:25-10-2021 ರಂದು 10.20 ಗಂಟೆಗೆ ಕೆಲಸದ ನಿಮಿತ್ತ ವಿಟ್ಲ ಪೇಟೆಗೆ ತನ್ನ ಬಾಬ್ತು ಮೊಟಾರು ಸೈಕಲ್ ನಲ್ಲಿ ಬರುತ್ತಿರುವಾಗ ಆ ಸಮಯ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿಗೆ ತಲುಪಿದಾಗ ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ಒಂದು ಮೋಟಾರು ಸೈಕಲನ್ನು ಅದರ ಸವಾರರು ಹಿಂಬದಿಯಲ್ಲಿ ಒಬ್ಬರು ಮಹಿಳೆಯನ್ನು ಕುಳ್ಳಿರಿಸಿಕೊಂಡು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಆತನ ಚಾಲನಾ ನಿಯಂತ್ರಣ ತಪ್ಪಿ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಮೋಟಾರು ಸೈಕಲಿನಲ್ಲಿದ್ದ ಹಿಂಬದಿ ಸವಾರರಾಗಿದ್ದ ಮಹಿಳೆಯ ತಲೆಯ ಭಾಗಕ್ಕೆ ನೋವುಂಟಾಗಿದ್ದು ಆ ಸಮಯಕ್ಕೆ ಪಿರ್ಯಾಧಿ ಮೋಟಾರು ಸೈಕಲನ್ನು ನಿಲ್ಲಿಸಿ ಅವರ ಬಳಿಗೆ ಹೋಗಿ ಅವರನ್ನು ಉಪರಿಚರಿಸಿ  ಒಂದು ಆಟೋ ರಿಕ್ಷಾವನ್ನು ನಿಲ್ಲಿಸಿ, ಗಾಯಾಳುವನ್ನು ಆಟೋ ರಿಕ್ಷಾದಲ್ಲಿ ಚಿಕಿತ್ಸೆ ವಿಟ್ಲ ಕಡೆಯ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ..ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 135/2021  ಕಲಂ: 279,337, ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ಯಾಂ ಪ್ರಸಾದ್ ಪ್ರಾಯ  46 ವರ್ಷ    ತಂದೆ: ಈತ್ತಪ್ಪ ಗೌಡ ವಾಸ; ಮಿತ್ತಮಜಲು ಮನೆ, ಸೋಣಂಗೇರಿ ಅಂಚೆ ಜಾಲ್ಸೂರು ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿರವರು ದಿನಾಂಕ 23.10.2021 ರಂದು ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ಸೋಣಂಗೇರಿ ಮಾರ್ಗವಾಗಿ ಸುಳ್ಯ ಕಡೆಗೆ ಹೋಗುತ್ತಿದ್ದ ಸಮಯ ಸಂಜೆ ಸುಮಾರು 6.00 ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಜಬಳೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಮುಂದಿನಿಂದ ಅಂದರೆ ಸೋಣಂಗೇರಿ ಕಡೆಯಿಂದ ಪೈಚಾರ್  ಕಡೆಗೆ ನೊಂದಣಿಯಾಗದ ಅಕ್ಟಿವ್ ಹೋಂಡ ಸ್ಕೂಟರನ್ನು ಅದರ ಸವಾರ ಹಿಂಬದಿ ಸವಾರರನ್ನು ಕುಳ್ಳಿರಿಸಿಕೊಂಡು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು ಬಿದ್ದವರನ್ನು ಪಿರ್ಯಾದಿದಾರರು ತನ್ನ ಬಾಬ್ತಗು ಮೋಟಾರ್ ಸೈಕಲನ್ನು ನಿಲ್ಲಿಸಿ ಹೋಗಿ ರಸ್ತೆಗೆ ಬಿದ್ದವರನ್ನು ಎಬ್ಬಿಸಿ ಉಪಚರಿಸಿ ನೋಡಲಾಗಿ ಪರಿಚಯದ ಕೇಶವ ಎಂಬವರಾಗಿದ್ದು, ಅವರ ಬಲಗೈಗೆ ಮತ್ತು ಬಲ;ಕಾಲಿಗೆ ಗುದ್ದಿದ ಗಾಯ ಮತ್ತು ದೇಹದ ಇತರ ಕಡೆಗಳಿಗೆ ತರಚಿದ ಗಾಯವಾಗಿದ್ದವರನ್ನು ಪಿರ್ಯಾದಿದಾರರು ಮತ್ತು ಸಾರ್ವಜನಿಕರು ಒಂದು ಕಾರಿನಲ್ಲಿ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿದ್ದು, ಈ ಬಗ್ಗೆ ಸುಳ್ಯ ಪೊಲೀಸು ಠಾಣೆ  ನಂಬ್ರ 80/21 ಕಲಂ 279, 337 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಲಿಗೆ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಕಮಲ ಪ್ರಾಯ 55 ವರ್ಷ ಗಂಡ:ಶೀನ ನಾಯ್ಕ  ವಾಸ: ಆಲಂಗಾರು ಗುಂಪಲಡ್ಕ  ಮನೆ, ವಿಟ್ಲ ಮೂಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 26-10-2021 ರಂದು ಖಾಸಗಿ ಕೆಲಸದ ಬಗ್ಗೆ ವಿಟ್ಲ ಪೇಟೆಗೆ ಬಂದು ವಾಪಾಸು ಮನೆಗೆ ಹೋಗುವರೇ ವಿಟ್ಲ ಪೇಟೆಯಿಂದ  ಒಂದು ಬಸ್ಸಿನಲ್ಲಿ ಮನೆಯಾದ ಗುಂಪಲಡ್ಕಕ್ಕೆ  ಹೋಗುವರೇ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕಲ್ಲುರ್ಟಿಯಡ್ಕ ಎಂಬಲ್ಲಿ ಬಸ್ಸಿನಿಂದ ಇಳಿದು ನನ್ನ ಮನೆಯಾದ ಗುಂಪಲಡ್ಕ ಎಂಬಲ್ಲಿಗೆ ನಾನು ಒಬ್ಬಳೇ ನಡೆದುಕೊಂಡು ಕಲ್ಲುರ್ಟಿಯಡ್ಕ – ಗುಂಪಲಡ್ಕ ಸಾರ್ವಜನಿಕ ಡಾಮರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು 12-45 ಗಂಟೆಗೆ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಗುಂಪಲಡ್ಕ ಎಂಬಲ್ಲಿಗೆ ತಲುಪಿದಾಗ ದಡ್ಡಲಡ್ಕ ಕಡೆಯಿಂದ ಒಂದು ಸ್ಕೂಟರ್ ನಲ್ಲಿ ಒಬ್ಬ ಅಪರಿಚಿತ ಕಪ್ಪು ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ವ್ಯಕ್ತಿಯು ತಲೆಗೆ ಹೆಲ್ಮೇಟ್ ಸವಾರಿ ಮಾಡಿಕೊಂಡು ನನ್ನ ಬಳಿ ನಿದಾನವಾಗಿ ಬಂದು ನನ್ನ ಕುತ್ತಿಗೆಯಲ್ಲಿ ಧರಿಸಿದ ಸುಮಾರು 28 ಗ್ರಾಂ ಚಿನ್ನದ ಕರಿಮಣಿ ಸರವನ್ನು ಕೈ ಹಾಕಿ ಬಲತ್ಕಾರದಿಂದ ಎಳೆದುಕೊಂಡು ಹೋಗಿರುತ್ತಾನೆ ಪಿರ್ಯಾಧಿರವರು ಹೆದರಿ ಸದ್ರಿ  ಸ್ಕೂಟರಿನ ನಂಬ್ರ ನೋಡಿರುವುದಿಲ್ಲ. ಸುಲಿಗೆ ಮಾಡಿದ ಚಿನ್ನದ ಅಂದಾಜು ಮೌಲ್ಯ ಸುಮಾರು 80,000/- ಅಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 136/2021  ಕಲಂ: 392 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆಯತ್ನ ಪ್ರಕರಣ: 1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಕಾಶ್ ಬೆಳ್ಳೂರು ಪ್ರಾಯ 31 ವರ್ಷ ತಂದೆ ಜನಾರ್ಧನಾ ಪೂಜಾರಿ ವಾಸ ಬಡಗಬೆಳ್ಳೂರು ಸೈಟ್ ಮನೆ ಬಡಗಬೆಳ್ಳೂರು ಗ್ರಾಮ  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯದುದಾರರು ಪ್ರವಾಸಿ ಪ್ರಬಂದಕನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು ಕೋವಿಡ್ 19 ಬಂದ ಕಾರಣ ಮನೆಯಲ್ಲಿರುವುದಾಗಿದೆ .ಪಿರ್ಯಾದುದಾರರು ಆರೋಪಿ ನಿತಿನ್ ಪರವಾಗಿ ರೂ 25000 ಹಣ ಪಡೆದುಕೊಂಡು  ಉಜಿರೆಯಲ್ಲಿ ನಡೆದ ಘಟನೆ ಬಗ್ಗೆ ಕೆಲಸ ಮಾಡಿದ್ದೇನೆ ಎಂದು ರತ್ನಾಕರ ಕೋಟ್ಯಾನ್  ರವರು ಅಪಪ್ರಚಾರ ಮಾಡಿದ್ದು ಇದನ್ನು  ತಿಳಿದು ಪಿರ್ಯಾದುದಾರರು ದೇವಸ್ಥಾನವೊಂದಕ್ಕೆ ಸತ್ಯಾಸತ್ಯತೆ ಬಗ್ಗೆ ಬರುವಂತೆ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದು ಸದ್ರಿ ಫೇಸ್ ಬುಕ್ ನ್ನು  ಹಾಕಿದ ವಿಚಾರದಲ್ಲಿ ನಿತಿನ್ ನಿಶಾಂತ್ ಮತ್ತು  ರತ್ನಾಕರ ಕೋಟ್ನಾನ್ ರವರು ಪಿರ್ಯಾದುದಾರರಿಗೆ ಕೊಲೆ ಬೆದರಿಕೆ ಹಾಕಿದ್ದು ಪಿರ್ಯದುದಾರರು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ದೂರು ನೀಡಿರುವುದಾಗಿದೆ.ಹೀಗಿರುತ್ತಾ ದಿನಾಂಕ 26.10.2021 ರಂದು ಸಂಜೆ 7.30 ಗಂಟೆಗೆ  ಪಿರ್ಯಾದುದಾರರು ಮನೆಯಲ್ಲಿದ್ದ ಸಮಯ ನಿತಿನ್ ನಿಶಾಂತ್ ಮತ್ತು 3 ಜನರು   ಪಿರ್ಯಾದುದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ನಿತಿನ್ ಕೈಯಲ್ಲಿ ತಲವಾರು ಹಿಡಿದುಕೊಂಡು ಬಂದು ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನೀನು ನಮ್ಮ ಬಗ್ಗೆ ಫೇಸ್ ಬುಕ್ ನಲ್ಲಿ ಬಾರಿ ಫೋಸ್ಟ್ ಮಾಡುತ್ತೀಯಾ  ಎಂದು ನಿತಿನ್  ಆತನ ಕೈಯ್ಯಲ್ಲಿದ್ದ  ತಲವಾರಿನಿಂದ ಪಿರ್ಯಾದುದಾರರಿಗೆ ಕಡಿಯಲು ಬೀಸಿದ್ದು  ಆ ಸಮಯ ಪಿರ್ಯಾದುದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತಲವಾರು ಪಿರ್ಯಾದುದಾರರ ಎಡ ಕಿವಿಗೆ ತಾಗಿ ರಕ್ತಗಾಯವಾಗಿರುತ್ತದೆ ಅ ಸಮಯ ಉಳಿದೆವರೆಲ್ಲುರು  ಕಡಿ ಬಿಡಬೇಡ  ಅವನನ್ನು ಎಂದು ಹೇಳುತ್ತಾ ಪಿರ್ಯಾದುದಾರರ ಬೆನ್ನಿಗೆ ಬಲ ತೊಡೆಗೆ ಬಲ ಭುಜಕ್ಕೆ ತಲೆಗೆ ಹಿಗ್ಗಾ ಮುಗ್ಗ ಕೈಯಿಂದ ಹೊಡೆದರು ಈ ಸಮಯ ಪಿರ್ಯಾದುದಾರರು ನೆಲಕ್ಕೆ ಬಿದ್ದಾಗ  ಆರೋಪಿಗಳು ಕಾಲಿನಿಂದ ತುಳಿದ ಪರಿಣಾಮ ಪಿರ್ಯಾದುದಾರರ ಎಡ ಕಾಲಿನ ಮೊಣ ಗಂಟಿಗೆ , ಕೋಲು ಕಾಲಿಗೆ ಮತ್ತು ಪಾದಕ್ಕೆ ತರೆಚಿದ  ಗಾಯವಾಗಿದ್ದು  ಪಿರ್ಯಾದುದಾರರು  ಜೋರಾಗಿ ಬೊಬ್ಬೆ   ಹೊಡೆದಾಗ ಪಿರ್ಯಾದುದಾರರ ಅಣ್ಣ ರವೀಂದ್ರ , ಲೀಲಾ ಮತ್ತು ಅತ್ತಿಗೆ  ಗಲಾಟೆ ಬಿಡಿಸಲು ಬಂದಾಗ ಆರೋಪಿತರು ಅವರನ್ನು ಉದ್ದೇಶಿಸಿ  ನೀವು ಹತ್ತಿರ ಬಂದರೆ  ನಿಮ್ಮನ್ನು ಕೂಡ ಜೀವ ಸಹಿತ  ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಓಡಿ ಹೋಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 124-2021 ಕಲಂ448, 504 323 324 307 506 ಜೊತೆಗೆ  34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳ್ಳತನ ಪ್ರಕರಣ: 1

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹರ್ಷಿತ್ ಜಿ ಬಿ, ಪ್ರಾಯ: 35 ವರ್ಷ, ತಂದೆ: ಗಿರೀಶ್ ಕೆ ಪಿ, ವಾಸ: ಕೊರಂಬಟ ಮನೆ, ನಡುಗಲ್ಲು ಅಂಚೆ ನಾಲ್ಕೂರು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದಲ್ಲಿ ಆಶಾಭಾರತಿ ಎಂಬ ಸಂಸ್ಥೆಯ ಮೂಲಕ ವ್ಯವಹಾರ ನಡೆಸುತ್ತಿದ್ದು, ಸದ್ರಿ ಸಂಸ್ಥೆಗೆ ಸಂಬಂದಪಟ್ಟ ಕೆಎ 21 ಹೆಚ್ 0035 ನೇ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ (Reg date: 20.01.2000, Chassis No: 99M19C05833, Engine No: 99M17M05810) ಅನ್ನು ಪಿರ್ಯಾದಿದಾರರ ಡ್ರೈವರ್ ಸುರೇಶ್ ಎಂಬವರು ಸದ್ರಿ ಸಂಸ್ಥೆಗೆ ಸಂಬಂದಿಸಿದ ಗುತ್ತಿಗಾರು ಪೇಟೆಯ ಹಳೆಯ ಬಾರ್ ನ ಕಟ್ಟಡದ ಮುಂಭಾಗದ ಶೆಡ್ಡಲ್ಲಿ ದಿನಾಂಕ: 25-10-2021 ರಂದು ಬೆಳಿಗ್ಗೆ ಸುಮಾರು 8:30 ಗಂಟೆಗೆ ನಿಲ್ಲಿಸಿ ಲಾಕ್ ಮಾಡಿ ಅಲ್ಲಿ ಇದ್ದ ಪಿಕಪ್ ವಾಹನವನ್ನು ತೆಗೆದುಕೊಂಡು ಪುತ್ತೂರಿಗೆ ಹೋಗಿ ಬಾರ್ ಗೆ ಬೇಕಾದ ಲಿಕ್ಕರ್ ಸ್ಟಾಕ್ ನ್ನು ಕೆಎಸ್ ಬಿಸಿಎಲ್ ಸಂಸ್ಥೆಯಿಂದ ಪಡೆದು ವಿತರಿಸಿ ಸಾಯಂಕಾಲ ಬಂದು ಪಿಕಫ್ ವಾಹನವನ್ನು ನಿಲ್ಲಿಸಿ ಬೈಕ್ ನ್ನು ಶೆಡ್ಡಿನಲ್ಲಿ ನೋಡಲಾಗಿ ಬೈಕ್ ಇಲ್ಲದಿರುವುದನ್ನು ಗಮನಿಸಲಾಗಿದೆ. ಸದ್ರಿ ಬೈಕ್ ನ ಅಂದಾಜು ಮೌಲ್ಯ 10,000/- ಆಗಬಹುದು. ಆದುದರಿಂದ ಬೈಕ್ ಕಾಣೆಯಾದ ಬಗ್ಗೆ ಸುತ್ತ ಮುತ್ತ ಹುಡುಕಾಡಿದಲ್ಲಿ ಈ ತನಕ ಪತ್ತೆಯಾಗದೇ ಇದ್ದು, ಯಾರೋ ಕಿಡಿಗೇಡಿಗಳು ಬೈಕ್ ನ್ನು ಕದ್ದುಕೊಂಡು ಹೋಗಿರುವ ಸಂಶಯವಿರುವುದರಿಂದ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ : 74-2021 ಕಲಂ: 379  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 26-10-2021 ರಂದು ಬಂಟ್ವಾಳ ನಗರ ಠಾಣಾ ಅ.ಕ್ರ. 125/2021  ಕಲಂ: 323, 498 (ಎ)  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ : ದಿನಾಂಕ: 26-10-2021 ರಂದು ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 94/2021, ಕಲo:  354(a)  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗೀತಾ ಎಂ.ಪಿ (26) ಗಂಡ: ಪ್ರಕಾಶ್ ಎಂ ಇ  ವಾಸ:ಕರಿಕೆ ದೊಡ್ಡಚೇರಿ ಮನೆ ಮಡಿಕೇರಿ ಎಂಬವರ ದೂರಿನಂತೆ ಫಿರ್ಯಾದಿದಾರರ ಗಂಡ ಪ್ರಕಾಶ್ ರವರು  ಒಂದುವರೆ ವರ್ಷಗಳಿಂದ ಕುಡಿತದ ಚಟವನ್ನು ಹೊಂದಿದ್ದು ದಿನಾಂಕ 25.10.2021  ರಂದು  21.00 ಗಂಟೆಗೆ ಮನೆಯಿಂದ ಹೋದವರು ವಾಪಾಸು ಬಾರದೇ ಇದ್ದು ದಿನಾಂಕ 26/10/2021  ರಂದು 06.30 ಗಂಟೆಗೆ ಸರೋಜಿನಿ ಎಂಬವರ ಮನೆಯ ಪಕ್ಕದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದು. ಈ ಬಗ್ಗೆ ಸುಳ್ಯ ಪೊಲೀಸು ಠಾಣೆ  ನಂಬ್ರ 48/2021  u/s 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-10-2021 10:44 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080