ಅಪಘಾತ ಪ್ರಕರಣ: ೦3
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹೆಚ್ ಆರ್ ಅಭಿಷೇಕ್, ಪ್ರಾಯ 23 ವರ್ಷ, ವಾಸ: ರಾಮು, ವಾಸ: 273/1, ಶಿವನಗರ ರಸ್ತೆ, ಮೂಡುಶೆಡ್ಡೆ, ತಿರುವೈಲ್, ವಾಮಂಜೂರು, ಮಂಗಳೂರು ರವರು ನೀಡಿದ ದೂರಿನಂತೆ ದಿನಾಂಕ 26-12-2021 ರಂದು ಆರೋಪಿ ಮೋಟಾರ್ ಸೈಕಲ್ ಸವಾರ ಸಮೃದ್ಧ ಎಂಬವರು KL-14-T-9229 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಹಳೆಗೇಟು ದಡ್ಡು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಆರೋಪಿಯ ಮೋಟಾರ್ ಸೈಕಲಿನ ಮುಂಭಾಗದಲ್ಲಿ ಪಿರ್ಯಾದುದಾರರು ಹಾಸನ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-13-EP-1469 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಹಿಂದಿನಿಂದ ಅಪಘಾತವಾಗಿ, ಪಿರ್ಯಾದುದಾರರು ಹತೋಟಿ ತಪ್ಪಿ ರಸ್ತೆಯ ಎಡಭಾಗದಲ್ಲಿ ಹೆದ್ದಾರಿ ಸೇರಲು ಕಾಯುತ್ತಿದ್ದ KA-05-N-9805 ನೇ ನೋಂದಣಿ ನಂಬ್ರದ ಮಾರುತಿ-800 ಕಾರಿನ ಮೇಲೆ ಬಿದ್ದು, ಪಿರ್ಯಾದುದಾರರಿಗೆ ಹಣೆಗೆ ಗುದ್ದಿದ ಗಾಯ, ಎಡಕೈ ಹಾಗೂ ಎಡಕಾಲಿಗೆ ತರಚಿದ ಮತ್ತು ಗುದ್ದಿದ ಗಾಯವಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಆರೋಪಿ ಸವಾರನಿಗೂ ಕಾಲಿಗೆ ಗುದ್ದಿದ ನೋವಾಗಿರುತ್ತದೆ. ಈ ಅಪಘಾತದಿಂದ ಮೂರೂ ವಾಹನಗಳು ಜಖಂಗೊಂಡಿರುತ್ತವೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 158/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿನಾಯಕ ದೊಡ್ಡನಾಯಿಕ್ ಪ್ರಾಯ 43 ವರ್ಷ ತಂದೆ:ಆನಂದ ವಾಸ:ಅಂಬೇಡ್ಕರ್ ನಗರ ಗುಡಸ್ ಅಂಚೆ ಮತ್ತು ಗ್ರಾಮ ಹುಕ್ಕೇರಿ ತಾಲೂಕು ಬೆಳಗಾವಿ ಜಿಲ್ಲೆ ರವರು ಕ್ರಿಸ್ಮಸ್ ಹಬ್ಬದ ನಿಮಿತ್ತ ರಜೆ ಇದ್ದುದರಿಂದ ದಿನಾಂಕ: 25-12-2021ರಂದು ಬೆಳಗ್ಗಿನ ಜಾವ ವ್ಯಾಗನರ್ ಕಾರು ನಂಬ್ರ ಕೆಎ-22-ಎಂಬಿ-9185 ನೇದರಲ್ಲಿ ಪಿರ್ಯಾದಿ ತಂಗಿ ಕವಿತಾ, ಭಾವ ಸುಭಾಷ್, ಮಕ್ಕಳಾದ ಕುಶಾಲ್, ಕೃತಿಕಾ ಹಾಗೂ ನೀಲವ್ವ ಹಾಗೂ ಅವರ ಮಗಳು ನಿಶಿತಾ ರವರನ್ನು ಕುಳ್ಳಿರಿಸಿಕೊಂಡು ಕಾರನ್ನು ಪಿರ್ಯಾದಿದಾರರು ಚಲಾಯಿಸಿಕೊಂಡು ಮನೆಯಿಂದ ಹೊರಟು ಮದ್ಯಾಹ್ನ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮುಗಿಸಿ ಧರ್ಮಸ್ಥಳದಲ್ಲಿಯೇ ರಾತ್ರಿ ಉಳಕೊಂಡು ದಿನಾಂಕ: 26-12-2021ರಂದು ಬೆಳಿಗ್ಗೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮುಗಿಸಿ, ವಾಪಾಸು ಸುಬ್ರಹ್ಮಣ್ಯದಿಂದ ಹೊರನಾಡು ದೇವಸ್ಥಾನಕ್ಕೆ ಹೋಗುವರೇ ವ್ಯಾಗನರ್ ಕಾರನ್ನು ಸುಬ್ರಹ್ಮಣ್ಯ- ದರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿ ಚಲಾಯಿಸಿಕೊಂಡು ಬರುತ್ತಾ, ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಟ್ಲಡ್ಕ ಎಂಬಲ್ಲಿಗೆ ಸಮಯ ಸುಮಾರು ಮದ್ಯಾಹ್ನ 12-15 ಗಂಟೆಗೆ ತಲುಪುವಾಗ ಧರ್ಮಸ್ಥಳ ಕಡೆಯಿಂದ ಸ್ವಿಪ್ಟ್ ಕಾರು ಕೆಎ:03-ಎನ್ಬಿ-0500ನೇದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರುಗಳೆರಡೂ ಜಖಂಗೊಂಡಿದ್ದು, ಕಾರಿನಲ್ಲಿದ್ದ ಪಿರ್ಯಾದಿ ತಂಗಿಯ ಮಗಳು ಕೃತಿಕಾ ಪ್ರಾಯ 5 ವರ್ಷ ಎಂಬಾಕೆಗೆ ತಲೆಗೆ, ಮುಖಕ್ಕೆ ಗಾಯವಾಗಿದ್ದು, ತಂಗಿಯ ಮಗ ಕುಶಾಲ್ ಪ್ರಾಯ 2 ವರ್ಷ ಎಂಬಾತನಿಗೆ ಮುಖಕ್ಕೆ ಮತ್ತು ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಪಿರ್ಯಾದಿಯ ಭಾವ ಸುಭಾಷ್ (35) ರವರ ಮುಖಕ್ಕೆ ರಕ್ತಗಾಯವಾಗಿರುತ್ತದೆ. ನೀಲವ್ವ(30) ಎಂಬವರ ಮುಖಕ್ಕೆ ಮತ್ತು ಅವರ ಮಗಳು ನಿಶಿತಾ ಪ್ರಾಯ 5 ವರ್ಷ ಎಂಬವರ ಮೊಣಕಾಲಿಗೆ ತರಚಿದ ರಕ್ತಗಾಯಗಳಾಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 168/2021 ಕಲಂ:279, 337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುರೇಶ್ ಪ್ರಾಯ:38 ವರ್ಷ ತಂದೆ ; ನಾಗಪ್ಪ ಗೌಡ ವಾಸ ; ಅಗೋಲಿ ಬೈಲು ಮನೆ ಬಾಲ್ಪ ಗ್ರಾಮ ಕಡಬ ತಾಲೂಕು ರವರು ತಾರೀಖು 24.12.2021 ರಂದು ಕಡಬದಿಂದ ಪುತ್ತೂರಿಗೆ ಪಿರ್ಯಾದುದಾರರು ಕಾರು ನಂಬ್ರ ಕೆಎ 04 ಎಮ್ ಟಿ 1463 ರಲ್ಲಿ ಹೋಗುತ್ತಿದ್ದಾಗ ಪದವಿನ ಮುರಾ ಚೆಡಾವು ತಿರುವಿನಲ್ಲಿ ಮೋಟಾರು ಬೈಕ್ ನಂಬ್ರ ಕೆಎ 01 ಜೆಇ 1372 ಅಪಘಾತವಾಗಿರುತ್ತದೆ ಅಪಘಾತವಾಗಿರುವ ಬೈಕನ್ನು ದಿವಾಕರ ಎಂಬಾತ ಚಲಾಹಿಸುತ್ತಿದ್ದ ಹಾಗೂ ಸಹ ಸವಾರನಾಗಿರುವ ದಿನೇಶ ಎಂಬಾತ ಗಾಯ ಗೊಂಡಿರುತ್ತಾನೆ, ಗಾಯಗೊಂಡಿರು ದಿನೇಶನನ್ನು ಪಿರ್ಯಾದುದಾರರು ಮತ್ತು ದಿವಾಕರ ಸೇರಿ ಪಿರ್ಯಾದುದಾರರ ಕಾರಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಹಿತಾ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 107/2021 ಕಲಂ. 279.337. IPC ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎಸ್. ರಾಧಕೃಷ್ಣ ನಾಯಕ್ [74] ತಂದೆ ವಾಸ ಓಂ ಸ್ಕಂದ ಮಿಶನ್ ಮೂಲೆ ಮುಕ್ಂಪ್ಪಾಡಿ ದರ್ಬೆ ಪುತ್ತೂರು ತಾಲೂಕು ಎಂಬವರು ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ವರಿಷ್ಟ ಪ್ರಭಂಧಕರಾಗಿದ್ದು, ಅವರು ತನ್ನ ಬಾಬ್ತು ಕೆ.ಎ-21-ವಿ-0348 ನೇ ಯಮಹಾ ಪ್ಯಾಶಿನೋ ಸ್ಕೂಟರ್ ನ್ನು ದಿನಾಂಕ:-26-12-2021 ರಂದು ಅವರ ಮನೆಗೆ ಹಾಲು ತಲುವರೇ ಸದ್ರಿ ವಾಹನವನ್ನು ಮನೆಯಿಂದ ಚಲಾಯಿಸಿಕೊಂಡು ಬಂದು ಮದ್ಯಾಹ್ನ 2 ಗಂಟೆಗೆ ಬೊಳ್ವಾರು-ಪುತ್ತೂರು ಸಾರ್ವಜನಿಕ ರಸ್ತೆಯ ಬದಿ ನಿಲ್ಲಿಸಿ, ಎದುರು ಅಲ್ಲೇ ಇರುವ ಬೊಳ್ವಾರ್ನ ರಿಲಾಯನ್ಸ್ ಸ್ಮಾರ್ಟ್ ಸೂಪರ್ ಮಾರ್ಕೆಟ್ಗೆ ಹೋಗಿ ಮನೆಗೆ ಹಾಲು ಖರೀದಿಸಿ ವಾಪಾಸು ಸೂಪರ್ ಮಾರ್ಕೆಟ್ ಅಂಗಡಿಯಿಂದ ಸುಮಾರು 2:10 ಗಂಟೆಗೆ ಹೊರಗೆ ಬಂದಾಗ ಅವರು ನಿಲ್ಲಿಸಿದ ಸ್ಕೂಟರ್ ಇಲ್ಲದಿರುವುದು ಕಂಡು ಬಂತು. ಸದ್ರಿ ಸ್ಕೂಟರ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಇದರ ಈಗಿನ ಅಂದಾಜು ಮೌಲ್ಯ 30,000/- ರೂ ಆಗಬಹುದು. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 114/2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦2
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪೊಲೀಸ್ ಉಪ-ನಿರೀಕ್ಷಕರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ದಿನಾಂಕ:- 26.12.2021 ರಂದು ಇಲಾಖಾ ಜೀಪು ನಂಬ್ರ KA19 G 435 ರಲ್ಲಿ Aಸಿಬ್ಬಂದಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಮಧ್ಯಾಹ್ನ ಮಾಣಿ-ಮೈಸೂರು ಹೆದ್ದಾರಿಯಲ್ಲಿರುವ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿಗೆ ತಲುಪಿದಾಗ ಸದ್ರಿ ಸ್ಥಳದಲ್ಲಿ ಮದಕಂ ಅಬ್ರೋಡ್ ಸಭಾ ಭವನ ಮತ್ತು ಶಿವಕೃಪಾ ಸಭಾ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಸಾರ್ವಜನಿಕರು ತಮ್ಮ ವಾಹನಗಳನ್ನು ಮಾಣಿ-ಮೈಸೂರು ಹೆದ್ದಾರಿಯ ಇಕ್ಕೆಲಗಳಲ್ಲಿ ನಿಲ್ಲಿಸಿ, ಸದ್ರಿ ಸಭಾ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗಿದ್ದು, ಸದ್ರಿ ವಾಹನಗಳಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದಲ್ಲದೇ, ಇದರಿಂದಾಗಿ ಸಾರ್ವಜನಿಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಕಂಡು ಬಂದಿರುತ್ತದೆ. ಮದಕಂ ಅಬ್ರೋಡ್ ಸಭಾ ಭವನ ಮತ್ತು ಶಿವಕೃಪಾ ಸಭಾ ಭವನದ ಮಾಲೀಕರು ತಮ್ಮ ಸಭಾ ಭವನದ ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನಗಳ ಪಾರ್ಕಿಂಗ್ಗೆ ಸೂಕ್ತ ವ್ಯವಸ್ಥೆಯನ್ನು ಮಾಡದೇ, ಸದ್ರಿ ವಾಹನಗಳ ವ್ಯವಸ್ಥಿತ ನಿಲುಗಡೆಗೆ ಯಾವುದೇ ಸಿಬ್ಬಂದಿಯವರನ್ನು ನೇಮಿಸದೇ ನಿರ್ಲಕ್ಷ ವಹಿಸಿರುವುದರಿಂದಲೇ ಸದ್ರಿ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ರೀತಿ ಸಾರ್ವಜನಿಕ ಹೆದ್ದಾರಿಯಲ್ಲಿ ನಿಲುಗಡೆ ಮಾಡಿದ್ದು, ಇದರಿಂದ ಸಾರ್ವಜನಿಕರಿಗೆ ಅಪಾಯ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗಿರುತ್ತದೆ ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅಕ್ರ: 111/2021 ಕಲo: 283 ಜೊತೆಗೆ 34 ಐಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪೊಲೀಸ್ ಉಪಾಧೀಕ್ಷಕರು (ಪ್ರೊಬೇಷನರಿ) ಉಪ್ಪಿನಂಗಡಿ ವೃತ್ತ ನೀರಿಕ್ಷಕರ ಕಛೇರಿ ರವರಿಗೆ ದಿನಾಂಕ:26.12.2021 ರಂದು ಕಡಬ ತಾಲೂಕು ಅಲಂಕಾರು ಗ್ರಾಮದ ಕೆದಿಲ ಎಂಬಲ್ಲಿನ ಗೇರು ಬೀಜ ಅಭಿವೃದ್ದಿ ನಿಗಮಕ್ಕೆ ಸಂಬಂದಪಟ್ಟ ಗೇರು ತೋಟದಲ್ಲಿ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿದಾಗ ತಕ್ಷೀರು ಸ್ಥಳದಲ್ಲಿ ಉಲಾಯಿ ಪಿದಾಯಿ ಎಂದು ಇಸ್ಪೀಟು ಎಲೆಗಳನ್ನು ಹಾಕುತ್ತಿದ್ದು ಜುಗಾರಿ ಆಟವಾಡುತ್ತಿದ್ದ ಸುಮಾರು 10-12 ಆರೋಪಿತರುಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಲು ಪ್ರಯತ್ನಿಸಿದ್ದು ನಂತರ ಸಿಬ್ಬಂದಿಗಳೊಂದಿಗೆ ಪಿರ್ಯಾದುದಾರರು ಆರೋಪಿತರನ್ನು ಬೆನ್ನಟ್ಟಿ 5 ಜನ ಆರೋಪಿತರಾದ ಜಗದೀಶ ರಾಧಾಕೃಷ್ಣ ,ತಿಮ್ಮಪ್ಪ ಮುಗೇರ,ರಘುರಾಮ ಗೌಡ ಲಕ್ಷ್ಮಣಗೌಡ ರವರುಗಳನ್ನು ಹಿಡಿದು ನಂತರ ಪಂಚರ ಸಮಕ್ಷಮದಲ್ಲಿ ಜುಗಾರಿ ಆಟವಾಡುತ್ತಿದ್ದ ಸ್ಥಳದಲ್ಲಿ ಆಟಕ್ಕೆ ಉಪಯೋಗಿಸಿದ ನೀಲಿ ಟಾರ್ಪಲ್ ಮೇಲೆ ಹಾಕಿದ್ದ ಸುಮಾರು 5 ಪ್ಯಾಕೆಟ್ನಲ್ಲಿದ್ದ ಇಸ್ಪೀಟು ಎಲೆಗಳು ಹಾಗೂ ಪ್ಯಾಕೇಟ್ ತೆರೆದು ಟಾರ್ಪಲ್ ಮೇಲೆ ಬಿಡಿಯಾಗಿ ಹಾಕಿದ್ದ 52 ಇಸ್ಪೀಟು ಎಲೆಗಳು ಮತ್ತು ಜೂಜಾಟಕ್ಕೆ ಉಪಯೋಗಿಸಿದ 9360 ರೂ ಹಣ, VIVO ಕಂಪನಿಯ Androide ಮೊಬೈಲ್-01 ಹಾಗೂ ITEL ಕಂಪನಿಯ ಕೀಪ್ಯಾಡ್ ಮೊಬೈಲ್-01 ಹಾಗೂ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ವಾಹನಗಳನ್ನು ಪಂಚರ ಸಮಕ್ಷಮ ಮಹಜರು ಮುಖೇನಾ ಸ್ವಾದೀನಪಡಿಸಿಕೊಂಡು 5 ಜನ ಆರೋಪಿತರನ್ನು ಮಹಜರೊಂದಿಗೆ ಪಿರ್ಯಾದುದಾರು ಠಾಣೆಗೆ ತಂದು ಈ ಬಗ್ಗೆ ಕಡಬ ಠಾಣಾ ಅ.ಕ್ರ 108/2021 ಕಲಂ 87 KARNATAKA POLICE ACT.1963 ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦2
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಯೋಗಿಶ ಪ್ರಾಯ 43 ವರ್ಷ ತಂದೆ. ಗಿರಿಯಪ್ಪ ಪೂಜಾರಿ ವಾಸ. ಕರ್ಬೆಟ್ಟು ಮನೆ. ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ರವರ ಅಣ್ಣ ಸುನಿಲ್ ಪೂಜಾರಿಯವರ ಪತ್ನಿಯಾದ ಶ್ರೀಮತಿ ಭಾರತಿ ರವರ ಮನೆಯಾದ ಮಂಗಳೂರು ನೀರು ಮಾರ್ಗದಲ್ಲಿ ಹೆಂಡತಿ ಮಕ್ಕಳ ಜೊತೆ ವಾಸವಾಗಿದ್ದು. ದಿನಾಂಕ 25-12-2021 ರಂದು ಸುನಿಲ್ ಪೂಜಾರಿಯವರ ಪತ್ನಿಯಾದ ಶ್ರೀಮತಿ ಭಾರತಿ, ಮಗಳ ಜೊತೆ ನಂದಾವರ ದೇವಸ್ಥಾನಕ್ಕೆ ವೈಕುಂಠ ಸಮಾರಾಧಾನೆಗೆ ಬಂದವರು, ನಂತರ ಮಗಳ ಜೊತೆ ಸಂಜೆ 5.00 ಗಂಟೆಗೆ ಪಿರ್ಯದಿದಾರರ ಮನೆಗೆ ಬಂದಿರುತ್ತಾರೆ. ಹೀಗೆ ಬಂದವರು ರಾತ್ರಿ 11.00 ಗಂಟೆಯ ತನಕ ಟಿ.ವಿ. ನೋಡಿ ನಂತರ ಮಗಳ ಜೊತೆ ಮಲಗಿದವರಿಗೆ ದಿನಾಂಕ 26-12-2021 ರಂದು ಬೆಳಿಗ್ಗೆ 5.00 ಉಸಿರಾಟದ ತೊಂದರೆ ಕಾಣಿಸಿಕೊಂಡು ಉಸಿರಾಟದ ತೊಂದರೆ ಜಾಸ್ತಿಯಾದುದರಿಂದ ಕೂಡಲೇ ಪಾಣೆಮಂಗಳೂರು ಶಾಫಿ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ತುಂಬ್ಯೆ ಫಾದರ ಮುಲ್ಲರ್ ಆಸ್ಪತ್ರೆಗೆ ಬೆಳಿಗ್ಗೆ 5.30 ಗಂಟೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಾಗಿದ್ದು, ಉಸಿರಾಟದ ತೊಂದರೆ ಜಾಸ್ತಿಯಾಗಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 6.20 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 46-2021 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪುಷ್ಪ ಪ್ರಾಯ:53 ವರ್ಷ ಗಂಡ; ಆಂಟನಿ ಪಿ ಜೆ ವಾಸ: ಬೋವುಕಾಡು ಮನೆ ತೋಟತ್ತಾಡಿ ಗ್ರಾಮ ಬೆಳ್ತಂಗಡಿ ತಾಲೂಕು ರವರ ಗಂಡ ಆಂಟನಿ ಪಿ ಜೆ ಪ್ರಾಯ:53 ವರ್ಷ ಎಂಬವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದು ದಿನಾಂಕ;25-12-2021 ರಂದು ರಾತ್ರಿ 11.00 ಗಂಟೆಗೆ ಮನೆಯಲ್ಲಿ ಎಲ್ಲರೊಂದಿಗೆ ಊಟ ಮಾಡಿ ಮಲಗಿದ ನಂತರ ಎದ್ದು ಹೊರಗೆ ಹೋದವರು ಬಾರದೇ ಇದ್ದದನ್ನುಕಂಡ ಪಿರ್ಯಾದುದಾರರು ಹೊರಗೆ ಹೋಗಿ ಹುಡುಕಾಡಿದಾಗ ಮನೆಯ ಪಕ್ಕದ ರಬ್ಬರ್ ಹಾಳೆ ಮಾಡುವ ಜಾಗದಲ್ಲಿ ರಬ್ಬರ್ ಆಸಿಡ್ ಸೇವಿಸಿ ಬಿದ್ದಿರುವುದು ಕಂಡುಬಂದಿರುತ್ತದೆ. ನಂತರ ಪಿರ್ಯಾದುದಾರರ ಮಗ ಅನಿಲ 108 ಆಂಬುಲ್ಯಾನ್ಸ್ ನಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬೆಳ್ತಂಗಡಿಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯು ಡಿ ಆರ್ 67/2021 ಕಲಂ: 174(iii)(1v) ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.