ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ನಂದಾವರ, ಪ್ರಾಯ: 36 ವರ್ಷ ತಂದೆ: ದಿ|| ಇಸ್ಮಾಯಿಲ್ ವಾಸ: ನಂದಾವರ ಮನೆ, ಸಜಿಪಮುನ್ನೂರು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 27-01-2022 ರಂದು ಕಲ್ಲಡ್ಕದಿಂದ ಮಾಣಿ ಕಡೆಗೆ ಹೋಗುತ್ತಿರುವ ಸಮಯ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿಗೆ ತಲುಪಿದಾಗ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಿರುವು ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ  KA-46-E-7010 ನೇ ಮೋಟಾರ್ ಸೈಕಲ್ ಸವಾರ ಧನಂಜಯ ಎಂಬವರು ದಿಲೀಪ್ ಎಂಬವರನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಮೋಟಾರ್ ಸೈಕಲ್ ಸಮೇತ ಸ್ಕಿಡ್ ಆಗಿ ಬಿದ್ದು ಸಹಸವಾರ ದಿಲೀಪ್ ರವರ ಕಾಲಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಕೊಡಿಯಾಲ್ ಬೈಲ್ ನ ಯೆನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 12/2022 ಕಲಂ 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿನೋದ್ ಕೆ ಪ್ರಾಯ 26 ವರ್ಷ, ತಂದೆ: ನಾರಾಯಣ ಪೂಜಾರಿ, ವಾಸ: ಕಲ್ಲೇರಿ ಮನೆ, ಎಣ್ಮೂರು ಗ್ರಾಮ, ಕಡಬ ತಾಲೂಕು, ರವರು ದಿನಾಂಕ 26.01.2022 ರಂದು ಕಲ್ಲೇರಿ ಬಸ್ಸು ನಿಲ್ದಾಣದಲ್ಲಿ ಅವರ ಪರಿಚಯದ ಕಾರ್ತಿಕ್ ಮತ್ತು ಪ್ರಮೋದ್ ರೈ ರವರ ಜೊತೆ ಮಾತನಾಡುತ್ತಿದ್ದು, ಆ ಸಮಯ ಫಿರ್ಯಾದಿದಾರರ ದೊಡ್ಡಪ್ಪ ಶೀನಪ್ಪ ಪೂಜಾರಿ ರವರು ಕಲ್ಲೇರಿ ಗುಳಿಗನ ಕಟ್ಟೆಗೆ ದೀಪ ಹಚ್ಚಿ ವಾಪಾಸ್ ಮನೆಗೆ ಕಡೆಗೆ ಹೋಗುವರೇ ನಿಂತಿಕಲ್ಲು-ಪಂಜ ರಸ್ತೆಯ ಬದಿ ಮಣ್ಣು ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಸವಾರ ಸಹನ್  ರೈ ಯಾನೆ ಮುನ್ನ ಎಂಬಾತನು ಮೋಟಾರು ಸೈಕಲ್ ನಂಬ್ರ ಕೆಎ-21-ಯು-3083 ನೇಯದನ್ನು ನಿಂತಿಕಲ್ಲು ಕಡೆಯಿಂದ ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಸವಾರಿ ಮಾಡಿಕೊಂಡು ಬಂದು ಕಡಬ ತಾಲೂಕು ಎಣ್ಮೂರು ಗ್ರಾಮದ ಕಲ್ಲೇರಿ ಗುಳಿಗನ ಕಟ್ಟೆ ಬಳಿ ಪಾದಾಚಾರಿ ಶೀನಪ್ಪ ಪೂಜಾರಿ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಶೀನಪ್ಪ ಪೂಜಾರಿ ರವರು ರಸ್ತೆಯಲ್ಲಿ ಬಿದ್ದು ಅವರ ಬಲಕಾಲಿನ ತೊಡೆಗೆ ಗುದ್ದಿದ ನಮೂನೆಯ ಗಾಯಗಳಾಗಿ ನಿಂತಿಕಲ್ಲು ಪೇಟೆಯಲ್ಲಿರುವ ಸ್ಥಳೀಯ ಕ್ಲೀನಿಕ್ ನಲ್ಲಿ ಚಿಕಿತ್ಸೆ ಪಡೆದು ಬಳಿಕ ಈ ದಿನ ಬೆಳಿಗ್ಗೆ ಆಪಘಾತದಿಂದ ಉಂಟಾದ ನೋವು ಉಲ್ಬಣಗೊಂಡು ಚಿಕಿತ್ಸೆಯ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುವುದಾಗಿದೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 12/2022 ಕಲಂ 279,  337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಜೇಶ ಪ್ರಾಯ 40 ವರ್ಷ ತಂದೆ: ಕೊರಗಪ್ಪ ಬಂಗೇರ ವಾಸ: ಕೆದೇಲು ಮನೆ ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ರವರ ತಂದೆಯ ಅಣ್ಣನ ಮಗನಾದ ಪ್ರಕಾಶ ಪ್ರಾಯ 45 ವರ್ಷ ಈತನು ದಿನಾಂಕ: 27-01-2022 ರಂದು ಬೆಳಿಗ್ಗೆ 11.00 ಗಂಟೆಗೆ ಮನೆಯ ಬಳಿ ಇರುವ ತಾಳೆ ಮರದಿಂದ ಶೇಂದಿಯನ್ನು ತೆಗೆಯುತ್ತಿರುವಾಗ ಆಯ ತಪ್ಪಿ ನೆಲಕ್ಕೆ ಬಿದ್ದಿದ್ದು, ತಲೆಗೆ ಗಂಭೀರ ಗಾಯಗೊಂಡವನ್ನು ರವಿ ಹಾಗೂ ರಂಜಿತ್ ತಕ್ಷಣ ಮಂಗಳೂರಿನ  ಎ ಜೆ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು. ಮಧ್ಯಾಹ್ನ 13.00 ಗಂಟೆಗೆ ವೈದ್ಯರು ಪರೀಕ್ಷಿಸುತ್ತಿದ್ದ ಸಮಯ ತಲೆಗಾದ ಗಂಭೀರ ಗಾಯದಿಂದ ಮೃತಪಟ್ಟಿರುವುದಾಗಿದೆ ಎಂದು ತಿಳಿಸಿರುತ್ತಾರೆ.  ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 07-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ದೇವರಾಜ್ ಪ್ರಾಯ: 32 ವರ್ಷ  ತಂದೆ: ಶೇಖರ ವಾಸ: ಕುಡುಮುನ್ನೂರು ಮನೆ, ಸಜೀಪ ಮೂಡ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರು ದಿನಾಂಕ: 27-01-2021 ರಂದು ಮನೆಯಲ್ಲಿ ಇರುವ ಸಮಯ ಪಿರ್ಯಾಧಿದಾರರ ಪತ್ನಿ ಶ್ರೀಮತಿ ಪ್ರಿಯಾಂಕ ಬಿ.ಜೆ ರವರು ಹೊಟ್ಟೆ ನೋವು ಎಂದು ತಿಳಿಸಿದರು. ಬಳಿಕ ಹೊಟ್ಟೆನೋವು ಉಲ್ಬಣಗೊಂಡಿದ್ದು, ಕೂಡಲೇ ಪಿರ್ಯಾಧಿದಾರರು ಹಾಗೂ ತಂಗಿ ಅಶ್ವಿನಿ ರವರು ಸೇರಿಕೊಂಡು ವಾಹನವೊಂದರಲ್ಲಿ ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಲು ಸಲಹೆ ನೀಡಿದಂತೆ, ಪಿರ್ಯಾಧಿದಾರರು ಮಧ್ಯಾಹ್ನ 2.45 ಗಂಟೆಗೆ ಆಂಬುಲೈನ್ಸ್ ವಾಹನದಲ್ಲಿ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 08-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-01-2022 10:46 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080