ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 7

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹಸನಬ್ಬ ಪ್ರಾಯ 49 ವರ್ಷ ತಂದೆ: ಟಿ ಇಸ್ಮಾಯಿಲ್ ವಾಸ: ಎರಂಕಲ್ಲು ಮನೆ ಮದ್ದಡ್ಕ ಕುವೆಟ್ಟು ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ:27-03-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು ಕೆಎ 21 ಬಿ 2888 ನೇ ಆಟೋರಿಕ್ಷಾದಲ್ಲಿ ಬಾಡಿಗೆ ನಿಮಿತ್ತ ಸಹ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಉಜಿರೆಯಿಂದ ಚಾರ್ಮಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಸುಮಾರು ಮದ್ಯಾಹ್ನ 12:50 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಮುಂಡಾಜೆ ಶೀಟ್ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ ಕೆಎ 17 ಎಫ್ 1919 ನೇ ಕೆಎಸ್ ಆರ್ ಟಿ ಸಿ ಬಸ್ಸನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡುಬಂದು ರಿಕ್ಷಾಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಎಡ ಮಗ್ಗುಲಾಗಿ ಮಗಚಿ ಬಿದ್ದಿತು. ಪರಿಣಾಮ ಆಟೋರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ಬಲ ಮೊಣಕೈಗೆ ತರಚಿದ ಗಾಯ, ಸೊಂಟ ಹಾಗೂ ಬಲಮೊಣಕಾಲಿಗೆ ಗುದ್ದಿದ ಗಾಯ, ಸಹಪ್ರಯಾಣಿಕರಾದ ಶ್ರೀಮತಿ ಮರಿಯಮ್ಮ ರವರಿಗೆ ಸೊಂಟ ಹಾಗೂ ಬಲಕಣ್ಣಿನ ಹತ್ತಿರ ಗುದ್ದಿದ ಗಾಯ, ಮಹಮ್ಮದ್ ಮುಶಾಬ್ ರವರಿಗೆ ಎಡಭುಜ ಹಾಗೂ ಹೊಟ್ಟೆಗೆ ಗುದ್ದಿದ ಗಾಯ, ಶ್ರೀಮತಿ ಆಶಿಯಾ ರವರಿಗೆ ಸೊಂಟಕ್ಕೆ ಹಾಗೂ ಎಡ ಹಣೆಗೆ ಗುದ್ದಿದ ಗಾಯ, ರಿಂಶಾಳಿಗೆ ತಲೆಗೆ ತರಚಿದ ಗಾಯವಾಗಿರುತ್ತದೆ, ಗಾಯಾಳುಗಳೆಲ್ಲರೂ ಉಜಿರೆಯ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 47/2022 ಕಲಂ; 279,337 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಮರನಾಥ ಗೌಡ,,   ಪ್ರಾಯ 40 ವರ್ಷ, ತಂದೆ: ಕಿಟ್ಟಣ್ನ ಗೌಡ,, ವಾಸ: ಸುಖೀ ನಿವಾಸ, ಬಪ್ಪಳಿಗೆ ಮನೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 27-03-2022 ರಂದು 15-20 ಗಂಟೆಗೆ ಆರೋಪಿ ಕಾರು ಚಾಲಕ ರಂಜಿತ್‌ ಎಂಬವರು  KA-70-M-2696ನೇ ನೋಂದಣಿ ನಂಬ್ರದ ಕಾರಿನಲ್ಲಿ ಭವಾನಿ, ಅರುಣಾ, ರತ್ನಾವತಿ, ಹರಿಣಾಕ್ಷಿ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ದ್ವಿಪಥ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಮಧ್ಯದಲ್ಲಿರುವ ವಿಭಾಜಕದ ಮೇಲೆ ಚಲಾಯಿಸಿ, ಪಿರ್ಯಾದುದಾರರಾದ ಅಮರನಾಥ ಗೌಡ ರವರು ಚಾಲಕರಾಗಿ ಅವರ ತಂದೆ ಕಿಟ್ಟಣ್ಣ ಗೌಡ(82ವರ್ಷ), ಪತ್ನಿ ಶೈಲಜಾ(35ವರ್ಷ), ಮಗ ಹೃತಿಕ್‌ ಗೌಡ(11ವರ್ಷ) ರವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-N-9526ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾದ ಪರಿಣಾಮ ಪಿರ್ಯಾದುದಾರರ ಕಾರಿನಲ್ಲಿದ್ದ ಕಿಟ್ಟಣ್ಣ ಗೌಡ, ಹೃತಿಕ್‌ ಗೌಡ ರವರಿಗೆ ಗಾಯಗಳಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಆರೋಪಿ ಕಾರಿನಲ್ಲಿದ್ದ ಭವಾನಿ, ಅರುಣಾ, ರತ್ನಾವತಿ, ಹರಿಣಾಕ್ಷಿ ರವರಿಗೆ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಪಿರ್ಯಾದುದಾರರಿಗೆ,  ಅವರ ಪತ್ನಿ ಶೈಲಜಾ ಮತ್ತು ಆರೋಪಿ ಕಾರು ಚಾಲಕ ರಂಜಿತ್‌ ರವರಿಗೆ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  57/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಿವಪ್ರಸಾದ್‌ ಎ ಪ್ರಾಯ 24 ವರ್ಷ, ತಂದೆ: ಸುಂದರ ಗೌಡ ,ವಾಸ: ಅಕ್ಕೇನಿ ಮನೆ,   ಬಳ್ಪ ಅಂಚೆ, ಕಡಬ ಎಂಬವರ ದೂರಿನಂತೆ ದಿನಾಂಕ 27-03-2022 ರಂದು 15-30 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಶ್ರೀನಿಧಿ ಎಂಬವರು  KA-21-EB-6227 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿನಲ್ಲಿ ವಿದ್ಯಾಲಕ್ಷ್ಮಿ ಎಂಬವರನ್ನುಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು  ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಗಡಿಪಿಲ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಶಿವಪ್ರಸಾದ್‌ ಎ ಎಂಬವರು ಬಳ್ಪ ಕಡೆಯಿಂದ ಪುಣಚ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-18-C-2075 ನೇ  ನೋಂದಣಿ ನಂಬ್ರದ ಲಾರಿಗೆ ಹಿಂದಿನಿಂದ ಅಪಘಾತವಾಗಿ, ಸವಾರರಿಬ್ಬರೂ ರಸ್ತೆಗೆ ಬಿದ್ದು, ಸವಾರನಿಗೆ ಮೂಗಿಗೆ ಮತ್ತು ಹಣೆಗೆ ರಕ್ತಗಾಯ ಮತ್ತು ಸಹಸವಾರೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಮಂಗಳಾ ಅಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  58/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭೀಮಪ್ಪ ಗೌರಿ (34) ತಂದೆ: ವಿಠ್ಠಲ ಗೌರಿ, ವಾಸ: ಆನದಿನ್ನಿ ಗ್ರಾಮ, ಎಡಹಳ್ಳಿ ಪೋಸ್ಟ್, ಬಾಗಲಕೋಟೆ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಕೆಎಸ್ಆರ್ ಸಿಟಿಸಿ ಬಸ್ ಚಾಲಕರಾಗಿ ಸುಳ್ಯ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಈ ದಿನ ದಿನಾಂಕ 27.03.2022 ರಂದು ಕೆಎ 19 ಎಫ್ 2868 ನೇ ಕೆಎಸ್ ಆರ್ ಟಿಸಿ ಬಸ್ ಗೆ ಚಾಲಕರಾಗಿ ಮತ್ತು ನಿರ್ವಹಕರಾಗಿ ಪಾಂಡುರಂಗ ರಾಥೋಡ್ ರವರೊಂದಿಗೆ ಸುಳ್ಯ ದಿಂದ ಕೊಯಿನಾಡುಗೆ ಪ್ರಯಾಣಿಕರೊಂದಿಗೆ  ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿರುವರೇ ಸಮಯ ಸುಮಾರು 15:30 ಗಂಟೆಗೆ ಸುಳ್ಯ ತಾಲೂಕು ಅರಂತೋಡು ಗ್ರಾಮದ ಕೊಡಂಕೇರಿ ಎಂಬಲ್ಲಿ ತಲುಪುತ್ತಿದ್ದಂತೆ ಎದುರಿನಿಂದ ಬಂದ ಕೆಎ 25 ಎಬಿ 2552 ನೇದರ ಟಾಟಾ ಜೀಪ್ ಚಾಲಕ ಮಹಮ್ಮದ್ ಹನೀಫ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಜೀಪ್ ನ್ನು ಚಾಲನೆ ಮಾಡಿಕೊಂಡು ಬಂದು ಬಸ್ ನ ಬಲಬದಿಯ ಕಿಡಕಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಬಸ್ ನಲ್ಲಿ ಕಿಡಕಿಯ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ  ಉಜೀತ ವಿ ಎಂಬಾತನಿಗೆ ಬಲಕೈ ಗಾಯವಾಗಿದ್ದವನನ್ನು ಪಿರ್ಯಾದುದಾರರು ಮತ್ತು ಇತರರು  ಉಪಚರಿಸಿ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅಕ್ರ  40/22  ಕಲಂ:  279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಉಬೈಸ್ (39) ತಂದೆ: ಅಬ್ದುಲ್ ಖಾದರ್ ವಾಸ: ಅಜರ್ ಮಂಜಿಲ್, ಗಡಿಕಲ್ಲು , ಸಂಪಾಜೆ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ನಿನ್ನೆ ದಿನ ದಿನಾಂಕ 26.03.2022 ರಂದು ಸಮಯ ಸುಮಾರು 19:30 ಗಂಟೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಸಂಪಾಜೆ ಮಸೀದಿಯ ಬಳಿಯಲ್ಲಿರುವ ಎದುರು ರಸ್ತೆಯಲ್ಲಿ ನಿಂತುಕೊಂಡಿರುವ ಸಮಯ ಅರೆಕಲ್ಲು ಒಳರಸ್ತೆಯಿಂದ ಒಮ್ಮೆಲೇ ಮುಖ್ಯ ರಸ್ತೆಗೆ ಕೆಎ 12 ಎಂಎ 2235 ನೇ ಕಾರು ಚಾಲಕ ರೋಹಿತ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರನ್ನು ಚಾಲನೆ ಮಾಡಿಕೊಂಡು ಬಂದ ಪರಿಣಾಮ  ಕಲ್ಲುಗುಂಡಿ ಕಡೆಯಿಂದ ಸಂಪಾಜೆ ಕಡೆಗೆ ಪಿರ್ಯಾದುದಾರರ ಪರಿಚಯದ ಫಹರ್ ಎಂಬಾತನು ಕೆಎ 21 ಕ್ಯೂ 8544 ನೇ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಫಹರ್ ಮೋಟಾರ್ ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದು, ಬಲಬದಿ ಬುಜ, ಎಡಕಾಲುಮೊಣಗಂಟು, ಎಡಬದಿ ತೋಡೆಗೆ ಗಾಯವಾದವನನ್ನು ಪಿರ್ಯಾದುದಾರರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ.ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅಕ್ರ  39/2022 ಕಲಂ: 279.337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪುರುಷೋತ್ತಮ ಗೌಡ ಪ್ರಾಯ 47 ವರ್ಷ ತಂದೆ ;ಪೆರ್ಗಡೆ ಗೌಡ  ವಾಸ;ಅಂಗನ ಮಜಲು ಮನೆ ಮುಳ್ಯ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ:24.03.2022 ರಂದು   ಬೆಳಗ್ಗೆ  ಪಿರ್ಯಾದುದಾರರು  ಮನೆಯಾದ ಅಂಗನ ಮಜಲು ಮುಳ್ಯದಿಂದ ಬಸ್ಸಿನಲ್ಲಿ ಕಡಬಕ್ಕೆ ಬಂದು ಕೆಲಸವನ್ನು ಮುಗಿಸಿಕೊಂಡು ನಂತರ ಕಾಣಿಯೂರಿಗೆ  ಹೋಗುವರೇ ಕಡಬದಿಂದ ಅಟೋ ರಿಕ್ಷಾವೋಂದರಲ್ಲಿ  ಹೊರಟು ಕಡಬ-ಚಾರ್ವಕ  ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸಂಜೆ 19-.10 ಗಂಟೆಗೆ ಕಡಬ ತಾಲೂಕು ದೊಳ್ಪಾಡಿ  ಗ್ರಾಮದ ಇಡ್ಯಾಡ್ಕ ಗಾಣಂತಿಬೆಟ್ಟು  ಎಂಬಲ್ಲಿಗೆ ತಲುಪಿದಾಗ ಅದೇ ರಸ್ತೆಯಲ್ಲಿ ಪಿರ್ಯಾದುದಾರರ  ಎದುರುಗಡೆ ಕಾಣಿಯೂರು ಕಡೆಗೆ ಮೋಟಾರ್ ಸೈಕಲ್ ಸವಾರನೊಬ್ಬನು ಸಹ ಸವಾರರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಇಡ್ಯಡ್ಕ ಗಾಣಂತಿಬೆಟ್ಟು ಎಂಬಲ್ಲಿ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದಾಗ ಪರಿಣಾಮ ಮೋಟಾರ್‌ ಸೈಕಲ್‌ ಸವಾರನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಮೋಟಾರ್‌ ಸೈಕಲ್ ನ್ನು ಒಮ್ಮೆಲೇ ಬ್ರೇಕ್ ಹಾಕಿದಾಗ ಮೋಟಾರ್‌ ಸೈಕಲ್‌ ನಿಯಂತ್ರಣ ತಪ್ಪಿ ಸವಾರ ಮತ್ತು ಸಹ ಸವಾರು ರಸ್ತೆಗೆ ಬಿದಿದ್ದು  ನಂತರ ಅಪಘಾತವಾದದನ್ನು ನೋಡಿದ ಪಿರ್ಯಾದುದಾರರು  ಅಟೋ ರಿಕ್ಷಾದಿಂದ ಇಳಿದು ಹತ್ತಿರ ಹೋಗಿ ನೋಡಲಾಗಿ ಪರಿಚಯದ ಚಂದ್ರಹಾಸರಾಗಿದ್ದು ನಂತರ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರರನ್ನು ಉಪಚರಿಸಿ ನೋಡಲಾಗಿ ಸಹಸವಾರರಾದ ಚಂದ್ರಹಾಸರವರ ತಾಯಿ ಯಮುನ ಎಂಬವರಿಗೆ  ಎಡಕಾಲಿಗೆ ರಕ್ತಗಾಯವಾಗಿದ್ದು ಮತ್ತು ಕೈ ಮುಖಕ್ಕೆ ತರಚಿದ ಗಾಯವಾಗಿದ್ದು  ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿರುತ್ತಾದೆ ನಂತರ ಅಪಘತಕ್ಕೊಳಗಾದ ಮೋಟಾರ್ ಸೈಕಲ್ ನ್ನು ನೋಡಲಾಗಿ KA-21- L-9030 ನೇ ಮೋಟಾರ್‌ ಸೈಕಲ್‌ ಆಗಿದ್ದು .ತಕ್ಷಣ ಪಿರ್ಯಾದುದಾರರು ಮತ್ತು ಅಟೋ ರಿಕ್ಷಾದಲ್ಲಿ ಇದ್ದ ಇತರರೊಂದಿಗೆ ಸೇರಿ ಸಹಸವಾರಳನನ್ನು ಉಪಚಾರಿಸಿ ಪಿರ್ಯಾದುದಾರರು ಒಂದು ಖಾಸಗಿ ಜೀಪಿನಲ್ಲಿ ಗಾಯಾಳುಗಳನ್ನು ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಾಲು ಮಾಡಿರುತ್ತಾರೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 27/2022 ಕಲಂ. 279,337    IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಾಯ 23 ವರ್ಷ ತಂದೆ ;ಆನಂದ  ಗೌಡ  ವಾಸ;ಹಳ್ಯಾರ  ಮನೆ ರಾಮಕುಂಜ  ಗ್ರಾಮ ಕಡಬ  ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 27-03-2022 ರಂದು  ತನ್ನ  ಬಾಬ್ತು ಮೋಟಾರ್ ಸೈಕಲ್ ನಲ್ಲಿ  ಸಮಯ 14-30 ಗಂಟೆಗೆ ಕಡಬ ತಾಲೂಕು ಕೊಯಿಲ ಗ್ರಾಮದ ಹಾಲಿನ ಸೊಸೈಟಿ ಎಂಬಲ್ಲಿ ತಲುಪಿದಾಗ ಪಿರ್ಯಾದುದಾರರ ಎದುರುನಿಂದ   ಅಂದರೆ ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಬರುತ್ತಿದ್ದ ಕಾರು ಚಾಲಾಕನು  ತೀರಾ ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ತೀರಾ ಬಲಬದಿಗೆ ಕಾರು  ಚಲಾಯಿಸಿಕೊಂಡು ಬಂದು  ಪಿರ್ಯಾದುದಾರರ ಎದುರಿನಿಂದ ಹೋಗುತ್ತಿದ್ದ ನೊಂದಣೆಯಾಗದ ಹೊಸ  ಮೋಟಾರ್ ಸೈಕಲ್ ಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಮೊಟಾರ್ ಸೈಕಲ್ ಸವಾರರಿಬ್ಬರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದು ನಂತರ ಪಿರ್ಯಾದುದಾರರು ತನ್ನ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಪಿರ್ಯಾದುದಾರರ ಅಣ್ಣನಾದ ನಂದ ಕಿಶೋರ ಹಾಗೂ ತನ್ನ ದೊಡ್ಡಮ್ಮ ಸರೋಜ  ರವರಾಗಿದ್ದು ನಂತರ ಡಿಕ್ಕಿಉಂಟು ಮಾಡಿದ ಆಲ್ಟೊ ಕಾರು ನಂಬ್ರ  ನೋಡಲಾಗಿ KA-21-Z-4329 ನೇದರ ಚಾಲಕಿ ಉಷಾ ಎಂಬುದಾಗಿ ತಿಳಿದಿದ್ದು ಈ ಅಪಘತದಿಂದ  ಗಾಯಗೊಂಡ ಮೋಟಾರ್ ಸೈಕಲ್ ಸವಾರ ರನ್ನು ಪಿರ್ಯಾದುದಾರರು ಹಾಗೂ ಅಲ್ಲೆ ಹತ್ತಿರದಲ್ಲಿ ಇದ್ದ  ಸಾರ್ವಜನಿಕರು ಸೇರಿಕೊಂಡು ಒಂದು ಖಾಸಗಿ 108 ಆಂಬುಲೆನ್ಸ್  ವಾಹನದಲ್ಲಿ ಕರೆದುಕೊಂಡು ಹೋಗಿ  ಮಂಗಳೂರು ಎ.ಜೆ  ಅಸ್ವತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು ವೈದ್ಯರು  ಪರಿಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿದ್ದು ಈ ಅಪಘತದ ಸಮಯ ನಂದಕಿಶೋರ ತಲೆಗೆ. ಕಾಲಿಗೆ ರಕ್ತಗಾಯ ಮತ್ತು ಸೊಂಟಕ್ಕೆ ಗುದ್ದಿದ ನೋವುಉಂಟಾಗಿರುತ್ತಾದೆ ಹಾಗೂ ಸರೋಜಾ ರವರಿಗೆ  ಬಲ ಕೈ ಹಾಗೂ ಎರಡು ಕಾಲಿಗೆ ರಕ್ತ ಗಾಯ ಹಾಗೂ ಸೊಂಟಕ್ಕೆ ಗುದ್ದಿದ  ನೋವುಉಂಟಾಗಿರುತ್ತಾದೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 28/2022 ಕಲಂ. 279,337    IPC   ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಕಳವು ಪ್ರಕರಣ: 1

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶೋಭಾ ಪ್ರಾಯ 46 ವರ್ಷ ಗಂಡ: ರಮೇಶ್ ಹೆಚ್.ಜೆ  C/o ಅಬೂಬಕ್ಕರ್ ಶಾಂತಿನಗರ ಮನೆ ಬೆಳ್ಳಿಪ್ಪಾಡಿ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಶ್ರೀಮತಿ ಶೋಭಾ ಪ್ರಾಯ 46 ವರ್ಷ ಗಂಡ: ರಮೇಶ್ ಹೆಚ್.ಜೆ  C/o ಅಬೂಬಕ್ಕರ್ ಶಾಂತಿನಗರ ಮನೆ ಬೆಳ್ಳಿಪ್ಪಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರು ತನ್ನ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ಸದ್ರಿ ವಿಳಾಸದಲ್ಲಿ ಅಬೂಬಕ್ಕರ್ ಎಂಬವರ ಬಾಬ್ತು ಬಾಡಿಗೆ ಮನೆಯಲ್ಲಿ  ವಾಸವಾಗಿದ್ದು, ಫಿರ್ಯಾದಿದಾರರು ಉಪ್ಪಿನಂಗಡಿಯ ವಳಾಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಹಾಗೂ ಫಿರ್ಯಾದಿದಾರರ ಗಂಡ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಫಿರ್ಯಾದಿದಾರರ ಮಗಳ ಹುಟ್ಟುಹಬ್ಬವು ಮುಂದಿನ ವಾರದಲ್ಲಿ ನಡೆಯಲಿರುವುದರಿಂದ ಹುಟ್ಟು ಹಬ್ಬದ ಆಚರಣೆ ಸಲುವಾಗಿ ಮನೆಯ ರೂಮಿನ ಗೋದ್ರೇಜ್ ನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ದಿನಾಂಕ: 26.03.2022 ರಂದು ರಾತ್ರಿ 11.00 ಗಂಟೆಗೆ ಪರಿಶೀಲನೆ ನಡೆಸಿದಾಗ ಚಿನ್ನಾಭರಣಗಳು ಕಂಡು ಬರಲಿಲ್ಲ. ಕೇವಲ ಚಿನ್ನಾಭರಣ ಇಟ್ಟಿದ್ದ ಬೇರೆ ಬೇರೆ ಬಾಕ್ಸ್ ಹಾಗೂ ಬ್ಯಾಗ್ ಮಾತ್ರ ಇದ್ದಿರುವುದಾಗಿದೆ. ಈ ಚಿನ್ನಾಭರಣಗಳು ದಿನಾಂಕ: 23.01.2022 ರಂದು 7.00 ಗಂಟೆಯಿಂದ ದಿನಾಂಕ: 26.03.2022 ರಂದು ರಾತ್ರಿ 11.00 ಗಂಟೆಯ ಮಧ್ಯಾವಧಿಯಲ್ಲಿ ಕಳವಾಗಿದ್ದು, ಕಳವಾದ ಚಿನ್ನಾಭರಣಗಳ ಒಟ್ಟು ತೂಕ 297 ಗ್ರಾಂ ಆಗಿದ್ದು, ಅದರ ಅಂದಾಜು ಮೌಲ್ಯ ರೂ 11,88,000/- ಆಗಿರುತ್ತದೆ. ಈ ಚಿನ್ನಾಭರಣಗಳನ್ನು ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ ಅಥವಾ ಇನ್ನಾವುದೋ ರೀತಿಯಲ್ಲಿ ಕಳವು ಮಾಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ: 17/2022 ಕಲಂ:   457,454,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೇಸಪ್ಪ ನಾಯ್ಕ್ ಪ್ರಾಯ 65 ವರ್ಷ ತಂದೆ ಲೇ||ಅಣ್ಣು ನಾಯ್ಕ್ ತಾಂದಪಳಿಕೆ ಮನೆ ಮಣಿನಾಲ್ಕೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯದುದಾರರು ವಿಳಾಸದಲ್ಲಿ ಪತ್ನಿ ಪ್ರೇಮ ಯಾನೆ ಬೇಬಿ ತಾಯಿ ಮುತ್ತು ಎಂಬುವವರೊಂದಿಗೆ ವಾಸವಾಗಿದ್ದು, ದಿನಾಂಕ 26.03.2022 ರಂದು ಬಾಚನಕೆರೆಯಲ್ಲಿ  ಧಾರ್ಮಿಕ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಪಿರ್ಯಾದುದಾರರು ಮತ್ತು ಅವರ ಪತ್ನಿ ರಾತ್ರಿ 8.30 ಗಂಟೆಗೆ ಪಿರ್ಯಾದುದಾರರ  ತಾಯಿಯನ್ನು ಮನೆಯಲ್ಲಿ ಬಿಟ್ಟು ಮನೆಗೆ ಬೀಗ ಹಾಕಿ ಹೋಗಿದ್ದು ಮಧ್ಯರಾತ್ರಿ ಹಿಂತಿರುಗಿ ದಿನಾಂಕ 27.03.2022ರ ಮಧ್ಯರಾತ್ರಿ ಸಮಯ 02.45 ಗಂಟೆಗೆ ಮನೆಗೆ ಬಂದಾಗ  ಮನೆಯ ಎದುರಿನ ಬಾಗಿಲು ಅರೆತೆರದಿದ್ದು   ಕಂಡು ಬಂದಿದ್ದು ನೋಡಿದಾಗ ಮನೆಯ  ಬಾಗಿಲಿನ ಚೀಲಕಕ್ಕೆ ಅಳವಡಿಸಿದ ಕೊಂಡಿಯನ್ನು  ಮುರಿದಿರುವುದು ಕಂಡು ಬಂದಿದ್ದು  ಗಾಬರಿಯಿಂದ ಒಳಗೆ ಹೋಗಿ ತಾಯಿಯನ್ನು  ಕೇಳಿದಾಗ  ಒಬ್ಬಾತ ಮನೆಯ ಒಳಗೆ ಬಂದು ಕಪಾಟನ್ನು  ಚೆಲ್ಲಾಪಿಲ್ಲಿ ಮಾಡಿ  ಹಾಗೂ ಅಡುಗೆ ಕೋಣೆಯನ್ನು  ಚೆಲ್ಲಾಪಿಲ್ಲಿ ಮಾಡಿ  ಪಿರ್ಯಾದುದಾರರ ತಾಯಿಯ ಬಾಯಿಗೆ ಬಟ್ಟೆಯನ್ನು ತುರುಕಿಸಿ  ಕಿವಿಯ ಬೆಂಡೋಲೆಯನ್ನು   ತೆಗೆಯಲು ನೋಡಿದಾಗ ಪಿರ್ಯಾದುದಾರರ ತಾಯಿ ಪ್ರತಿರೋದ ಮಾಡಿದಾಗ ಕೈಯಿಂದ ಪಿರ್ಯಾದುದಾರರ ಮುಖಕ್ಕೆ ಹೊಡೆದು ಗಟ್ಟಿಯಾಗಿ ಹಿಡಿದುಕೊಂಡು ಕಿವಿಯಲ್ಲಿದ್ದ 2 ಬೆಂಡೋಲೆಯನ್ನು ಬಲತ್ಕಾರವಾಗಿ ತೆಗೆದುಕೊಂಡು ಹೋಗಿರುತ್ತಾರೆ .ಎಂದು ತಿಳಿಸಿದ್ದು ಪಿರ್ಯಾದುದಾರರು ಮನೆಯ ಕೋಣೆಯಲ್ಲಿದ್ದ  ಕಪಾಟನ್ನು ನೋಡಿದಾಗ  ಕಪಾಟಿನ ಬೀಗವನ್ನು  ಮುರಿದು ಅದರೊಳಗಿದ್ದ  ಬಟ್ಟೆಗಳನ್ನು  ಚೆಲ್ಲಾಪಿಲ್ಲಿಯಾಗಿ ಮಾಡಿ ಕಪಾಟಿನ ಒಳಗಿದ್ದ ಡ್ರಾಯರ್ ಮುರಿದು ಅದರೊಳಗಿದ್ದ ಪಿರ್ಯಾದುದಾರರ ಉಂಗುರವನ್ನು ಮತ್ತು ನಗದು ರೂಪಾಯಿ 400 /- ರೂನ್ನು ಕೊಂಡೊಗಿದ್ದಲ್ಲದೇ ಮನೆಯ ಹಾಲ್ ನಲ್ಲಿ ಚೀಲದಲ್ಲಿ ಹಾಕಿದ ಪ್ಲಾಸ್ಟಿಕ್  ತೊಟ್ಟೆಯನ್ನು ತೆಗೆದು ಚೆಲ್ಲಾಪಿಲ್ಲಿ  ಮಾಡಿ ಅದರೊಳಗಿದ್ದ  ಪಿರ್ಯಾದುದಾರರ ಪತ್ನಿಯ ಕರಿಮಣಿ ಸರವನ್ನು  ಕೊಂಡೊಗಿರುವುದು ಕಂಡು ಬಂದಿದ್ದು  ಅಲ್ಲದೆ ಅಡುಗೆಕೋಣೆಯನ್ನು ಕೂಡ ಚೆಲ್ಲಾಪಿಲ್ಲಿ ಮಾಡಿರುತ್ತಾರೆ.      ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋದ ಪಿರ್ಯಾದುದಾರರ ಚಿನ್ನದ ಉಂಗುರ 4. ಗ್ರಾಂ ತೂಕವಿದ್ದು  ,ಕಿವಿಯ ಬೆಂಡೋಲೆ 6. ಗ್ರಾಂ ತೂಕವಿದ್ದು ಕರಿಮಣಿ  ಸರ 24.ಗ್ರಾಂ ತೂಕವಿರುತ್ತದೆ.ಕಳವಾದ ಚಿನ್ನದ ಮೌಲ್ಯದ ರೂ 68,000/- ರೂ  ಆಗಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ,ಕ್ರ 28/2022. ಕಲಂ 394 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 27-03-2022 ರಂದು ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 36/2022  ಕಲಂ: 4, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಮತ್ತು ಸಂರಕ್ಷಣ ಅಧಿನಿಯಮ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 27-03-2022 ರಂದು ಬೆಳ್ಳಾರೆ ಪೊಲೀಸ್ ಠಾಣೆ 25/2022 ಕಲಂ 5,7,12 ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ 2020            ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ರೇಣುಕಾ ಕೆ ಆರ್ (33) ಗಂಡ:ರೂಪೇಶ್ ಕುಮಾರ್ ಬಿ ಜೆ ವಾಸ: ಶ್ರೀಲಲಿತಾ ಮನೆ, ಬಜಕ್ರೆ ಸಾಲು, ಲಾಯಿಲ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾದಿದಾರರ ಗಂಡ ರೂಪೇಶ್ ಕುಮಾರ್ ಬಿ ಜೆ ರವರು ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಿಗರಾಗಿ ಕೆಲಸ ಮಾಡಿಕೊಂಡಿದ್ದು, ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ  19.03.2022 ರಂದು ಮುಂಜಾನೆ 1.00 ಗಂಟೆಗೆ ಏಕಾಏಕಿ ಎದ್ದು ತಲೆ ಸುತ್ತುವುದಾಗಿ ಪಿರ್ಯಾದಿದಾರರಲ್ಲಿ ತಿಳಿಸಿದ್ದು, ರಕ್ತದೊತ್ತೆಡದ ಮಾತ್ರೆ ಮತ್ತು ನೀರು ತರುವಷ್ಟರಲ್ಲಿ ಮೃತ ರೂಪೇಶ್ ಕುಮಾರ್ ಬಿ ಜೆ ರವರು ಮಾತನಾಡದ ಸ್ಥಿತಿಯಲ್ಲಿರುವುದರಿಂದ    ಕೂಡಲೆ ಚಿಕಿತ್ಸೆಯ ಬಗ್ಗೆ ಉಜಿರೆ ಎಸ್ ಡಿ ಎಮ್ ಆಸ್ಪತ್ರೆ, ಮಂಗಳೂರು ಪಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕೀತ್ಸೆಗೊಳಪಡಿಸಿದಾಗ ಮೆದುಳು ನಿಷ್ಕ್ರಿಯಗೊಂಡಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಆಧರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ದಿನಾಂಕ 27.03.2022 ತನಕ ಚಿಕಿತ್ಸೆಯನ್ನು ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೇ ಇರುವುದರಿಂದ ಮತ್ತು ಅವರ ಚಿಕಿತ್ಸಾ ವೆಚ್ಚವು ಜಾಸ್ತಿಯಾಗಿರುವುದರಿಂದ ಹಾಗೂ ಶುಶ್ರುಷೆಗೆ ಹೋಗಿ ಬರಲು ದೂರವಾಗುವದರಿಂದ ಮನೆಯ ಹತ್ತಿರದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ದಿನಾಂಕ 27.03.2022 ರಂದು ಸಂಜೆ 5.00 ಗಂಟೆಯ ಸಮಯಕ್ಕೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದು ವೈದ್ಯರು ಪರಿಕ್ಷೀಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಯು ಡಿ ಆರ್  10/2022, ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-03-2022 10:08 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080