ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುದೀಪ್ ಕುಮಾರ್ ಶೆಟ್ಟಿ, ಪ್ರಾಯ 45  ವರ್ಷತಂದೆ; ಸದಾಶೀವ ಶೆಟ್ಟಿವಾಸ; ಶ್ರೀ ದೇವಿ ಕೊಡಾಜೆ ಮಾಣಿ ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ;26.04.2021 ರಂದು 16.30 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್ ಎಂಬಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಮೋಟಾರು ಸೈಕಲು ಕೆಎ 21 ಯು 0424 ನೇಯದನ್ನು ಅದರ ಸವಾರ ವೆಂಕಟೇಶ್ ರವರು ಸವಾರಿ ಮಾಡಿಕೊಂಡು ಬಂದು ಪುತ್ತೂರು ಕಡೆಗೆ ತಿರುಗಲು ಸೂಚನೆ ನೀಡಿ ಇಂಡಿಕೇಟರ್ ಲೈಟನ್ನು ಹಾಕಿ ಪುತ್ತೂರು ಕಡೆಗೆ ತಿರುಗಿಸುತ್ತಿರುವಾಗ ಮೋಟಾರು ಸೈಕಲಿನ ಹಿಂದಿನಿಂದ ಮಾರುತಿ ಸ್ವಿಫ್ಟ್ ಕಾರು ಕೆಎ 42 ಎನ್ 1040 ನೇಯದನ್ನು ಅದರ ಚಾಲಕರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲಿನ ಬಲಭಾಗದಿಂದ ಓವರ್ ಟೇಕ್ ಮಾಡಿ ಮೋಟಾರು ಸೈಕಲಿಗೆ ಅಪಘಾತಪಡಿಸಿದ ಪರಿಣಾಮ ಮೋಟಾರು ಸೈಕಲು ಸವಾರ ವೆಂಕಟೇಶ್ ರವರು ಮೋಟಾರು ಸೈಕಲು ಸಮೇತ ರಸ್ತೆಗೆ ಬಿದ್ದು ತಲೆಯ ಭಾಗಕ್ಕೆ ರಕ್ತಗಾಯಗೊಂಡವರನ್ನು ಫಿರ್ಯಾದಿದಾರರು ಹಾಗೂ ಇತರರು ಒಂದು ಅಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರ ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ವೈಧ್ಯರ ಚಿಕಿತ್ಸೆಗೆ ಸ್ಪಂದಿಸದೇ 27.04.2021 ರಂದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 62/2021  ಕಲಂ:279,304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುರೇಶ ಕುಲಾಲ್  ಪ್ರಾಯ 40 ವರ್ಷ ತಂದೆ: ರಾಮ ಮೂಲ್ಯ ವಾಸ: ಬೋರು ಗುಡ್ಡೆ ಬೈಪಾಸ್ ಬಿ ಮೂಡ ಗ್ರಾಮ ಬಂಟ್ವಾಳ ತಾಲೂಕು ರವರ ತಮ್ಮನಾದ ಹರೀಶ  ಪ್ರಾಯ 31 ವರ್ಷ ಬಿ ಸಿ ರೋಡಿನ ಗಣೇಶ ಟೈಯರ್ ವರ್ಕ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು. ಎಂದಿನಂತೆ ದಿನಾಂಕ 26-04-2021 ರಂದು ರಾತ್ರಿ 20.00 ಗಂಟೆಗೆ ಮನೆಯಲ್ಲಿ ಊಟ ಮಾಡಿ ಮಲಗಿದ್ದು. 27-04-2021 ರಂದು ಬೆಳಿಗ್ಗೆ 5.00 ಗಂಟೆಗೆ ತಂದೆಯವರು ಮೂತ್ರ ವಿಸರ್ಜನೆಗೆ ಹೋದ ಸಮಯ ಮನೆಯ ಸ್ನಾನದ ಗೃಹದ ಮಾಡಿನ ಫಕ್ಕಾಸಿಗೆ ಪಿರ್ಯಾಧಿದಾರರು ತಮ್ಮನು ನೈಲಾನ ಹಗ್ಗದ ಸಹಾಯದಿಂದ ಕುತ್ತಿಗೆಗೆ ನೇಣು ಬಿಗಿದು ನೇತಾಡಿ ಕೊಂಡಿರುವುದನ್ನು ನೋಡಿ ಬೊಬ್ಬೆ ಹಾಕಿರುವುದಾಗಿದೆ. ಪಿರ್ಯಾಧಿದಾರರು ತಮ್ಮನ ದೇಹವು ಬಿಸಿ ಇರುವುದರಿಂದ ಕೆಳಗಿಳಿಸಿ ಚಿಕಿತ್ಸೆಗೆ ಬಂಟ್ವಾಳ ಸರಕಾರಿ ಆಸ್ವತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಹರೀಶನು ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಪಿರ್ಯಾಧಿದಾರರ ತಮ್ಮನು ಹಣದ ಅಡಚಣೆಯಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 16-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ  ಲೀಲಾ,  ಪ್ರಾಯ: 44 ವರ್ಷ ಗಂಡ: ರಾಜು ಶೆಟ್ಟಿ ವಾಸ:  ಖಂಡಿಗ  ಮನೆ,  ಕರಿಮಣೇಲು  ಗ್ರಾಮ ಬೆಳ್ತಂಗಡಿ  ತಾಲೂಕು ರವರ ಗಂಡ ರಾಜು ಶೆಟ್ಟಿ ಯ ವರು   ದಿನಾಂಕ  02-04-2021 ವೇಣೂರು  ಪೇಟೆಗೆ ಹೋಗಿ ವಾಪಾಸು ಮನೆಗೆ  ಕೆ  ಎ 19  ಎ ಡಿ 1152  ಲೀಝಾ ಬಸ್ಸಿನಲ್ಲಿ ಬರುತ್ತಿರುವಾಗ ಬೆ ಬೆಳ್ತಂಗಡಿ  ತಾಲೂಕು  ಕರಿಮಣೇಲು  ಗ್ರಾಮದ  ಖಂಡಿಗ  ಎಂಬಲ್ಲಿ   ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮವಾಗಿ ರಾಜು ಶೆಟ್ಟಿಯವರು ಬಸ್ಸಿನಿಂದ  ಇಳಿಯುವಾಗ  ಕೆಳಗೆ  ಬಿದ್ದು  ಗಾಯಗೊಂಡವರನ್ನು  ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗಯಲ್ಲಿ  ದಾಖಲಿಸಿ ಚಿಕಿತ್ಸೆ ನೀಡಿ ಅಲ್ಲಿಂದ ದಿನಾಂಕ 13-04-2021 ರಂದು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿಯೇ ಶೂಶ್ರೂಷೆ ಯಲ್ಲಿ ಇದ್ದವರು ದಿನಾಂಕ 26-04-2021 ರಂದು ರಾತ್ರಿ 11-00 ಗಂಟೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು  ನೆರೆಮನೆಯ ವಿಲಿಯಂ ರವರನ್ನು ಕರೆಸಿಕೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ರಾಜು ಶೆಟ್ಟಿಯವರು ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ : 12-2021 ಕಲಂ: 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-04-2021 10:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080