ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಭೀಫಾತಿಮಾ(63) ಗಂಡ : ಎನ್.ಅಬ್ಬಾಸ್ ವಾಸ: ತಲಪಾಡಿ ಮನೆ, ಬೈಕಂಡಿ ಚಿಕನ್ ಸೆಂಟರ್ ಬಳಿ, ಬಿ-ಮೂಡ  ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 25-07-2021 ರಂದು ಪಿರ್ಯಾದುದಾರರು ತನ್ನ ತಂಗಿ ಮನೆಯಾದ ನಂದಾವರಕ್ಕೆ ಹೋಗಿ ವಾಪಸು ತನ್ನ ಮನೆಯಾದ ತಲಪಾಡಿಗೆ ಹೋಗುವರೇ ಬಿ.ಸಿ.ರೋಡಿನಿಂದ KA-70-3585 ನೇ ಆಟೋರಿಕ್ಷಾದಲ್ಲಿ ಕುಳಿತು ಪ್ರಯಾಣಿಸುತ್ತಾ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ರಿಕ್ಷಾವನ್ನು ನಿಲ್ಲಿಸಲು ಸೂಚಿಸಿದಂತೆ ರಿಕ್ಷಾವನ್ನು ನಿಲ್ಲಿಸಿ ಇಳಿಯುತ್ತಿದ್ದಂತೆ ಚಾಲಕ ಒಮ್ಮೆಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಿಕ್ಷಾವನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ರಿಕ್ಷಾದಿಂದ  ರಸ್ತೆಗೆ ಬಿದ್ದು ಸೊಂಟಕ್ಕೆ, ತಲೆಗೆ ಗುದ್ದಿದ ನೋವಾಗಿದ್ದು ಪರ್ಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿರುತ್ತಾರೆ. ನಂತರ ನೋವು ಉಲ್ಬಣಿಸಿರುವುದರಿಂದ ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಚಿಕಿತ್ಸೆಯ ವೆಚ್ಚವನ್ನು ರಿಕ್ಷಾ ಚಾಲಕ ಭರಿಸುವುದಾಗಿ ತಿಳಿಸಿ ಈವರೆಗೆ ಆಸ್ಪತ್ರೆಗೆ ಬಾರದೇ  ಇದ್ದುದರಿಂದ ವಿಳಂಬವಾಗಿ ದೂರು ನೀಡುತ್ತಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 67/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಮೋದ್‌, ಪ್ರಾಯ 21 ವರ್ಷ, ತಂದೆ: ಧರ್ಣಪ್ಪ ಗೌಡ, ವಾಸ:  ಕಳೆಂಜ ಮನೆ, ಪೆರ್ನೆ ಅಂಚೆ,  ಬಿಳಿಯೂರುಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 26-07-2021 ರಂದು 21-00 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ಮೆಹಬೂಬ್‌ ಎಂಬವರು KA-19-HA-8194 ನೇ ನೋಂದಣಿ ನಂಬ್ರದ ಸ್ಕೂಟರನ್ನು ಬೊಳುವಾರು-ದರ್ಬೆ ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ಪುತ್ತೂರು ಕಡೆಯಿಂದ  ಬೊಳುವಾರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಬೊಳುವಾರು ಪ್ರಗತಿ ಆಸ್ಪತ್ರೆಯ ಹತ್ತಿರ  ಬಸ್ಸೊಂದನ್ನು ಓವರ್‌ ಟೇಕ್‌ ಮಾಡಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಬೊಳುವಾರು ಕಡೆಯಿಂದ ಪುತ್ತೂರು ಸಿಟಿ ಆಸ್ಪತ್ರೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-21-EB-1973  ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲ್‌ನ ಹ್ಯಾಂಡಲಿಗೆ ಸ್ಕೂಟರಿನ ಹ್ಯಾಂಡಲ್‌ ತಾಗಿ ಅಪಘಾತ ಘಟಿಸಿ, ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಬಲ ಕಿರು ಬೆರಳಿಗೆ ರಕ್ತಗಾಯ, ಬಲಕಾಲಿನ ಕಿರುಬೆರಳಿಗೆ ಗುದ್ದಿದ ಒಳನೋವು, ಎಡಮೊಣಕಾಲಿಗೆ ತರಚಿದ ಗಾಯಗಳಾಗಿ  ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ  ದಾಖಲಿಸಿರುತ್ತಾರೆ. ಆರೋಪಿ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  100/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ವಿಟ್ಲಪೊಲೀಸ್ ಠಾಣೆ : ಶ್ರೀ ನಾಗರಾಜ ಹೆಚ್‌ ಇ  ಮಾನ್ಯ ಪೊಲೀಸ್‌ ನಿರೀಕ್ಷಕರು ವಿಟ್ಲ ಪೊಲೀಸ್ ಠಾಣೆರವರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ  ದಿನಾಂಕ: 27-07-2021 ರಂದು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಸಮಯ 13-30 ಗಂಟೆಗೆ  ವಾಹನ ತಪಾಸಣೆ ಮಾಡುತ್ತಿರುವಾಗ ಉಕ್ಕುಡ ಕಡೆಯಿಂದ ವಿಟ್ಲ ಪೇಟೆ ಕಡೆಗೆ ಒಂದು ಆಟೋ ರಿಕ್ಷಾವನ್ನು ಅದರ ಚಾಲಕ ಚಲಾಯಿಸಿಕೊಂಡು ಬರುವುದನ್ನು ಕಂಡ ಸಿಬ್ಬಂದಿಗಳು ಆಟೋ ರಿಕ್ಷಾವನ್ನು ಅದರ ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದಾಗ ಆಟೋ ರಿಕ್ಷಾ ಚಾಲಕನು ಒಮ್ಮೆಲೇ ಆಟೋ ರಿಕ್ಷಾವನ್ನು ತಿರುಗಿಸಿದ ಕಾರಣ ಆಟೋ ರಿಕ್ಷಾವು ಚಾಲಕನ ಹತೋಟಿ ತಪ್ಪಿ 30 ಅಡಿ ದೂರದಲ್ಲಿ ಉಕ್ಕಡ ಕಡೆಗೆ ಮುಖ ಮಾಡಿ ಮಗುಚಿ ಬಿದ್ದುದರಿಂದ  ಅವರ ರಕ್ಷಣೆಗೆ ಸಿಬ್ಬಂದಿಗಳು ಹೋದಾಗ ಅವರು ಬಿದ್ದ ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿಗಳು  ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಅಸೀಫ್ ಯಾನೆ ಅಚಿ (28) ತಂದೆ: ದಿ| ಇಬ್ರಾಹಿಂ ವಾಸ:ಸುಬಾಶ್ ನಗರ  ಗುರು ಮಂದಿರ ಸಜಿಪಮೂಡ ಗ್ರಾಮ ಬಂಟ್ವಾಳ ತಾಲೂಕು, 2) ಫರಾಝ್ (23) ತಂದೆ:ಇಬ್ರಾಹಿಂ ವಾಸ: ಚಾಪಳ್ಳ ಮಸೀದಿ ಹತ್ತಿರ ಮನೆ ಮಾಂತೂರು ಸವಣೂರು ಗ್ರಾಮ ಕಡಬ ತಾಲೂಕು ಎಂದು ತಿಳಿಸಿದಲ್ಲದೇ ಆಟೋ ರಿಕ್ಷಾದಲ್ಲಿ ಗಾಂಜಾ ಇರುವುದನ್ನು ತಿಳಿಸಿದಂತೆ  ಪರಿಶೀಲಿಸಿದಾಗ ಗಾಂಜಾ ಒಟ್ಟು 2060 ಗ್ರಾಂ ಇದ್ದು.ಗಾಂಜಾ ಮತ್ತು ಸದ್ರಿ ಗಾಂಜಾವನ್ನು ಸಾಗಾಟ ಮಾಡುವರೇ ಉಪಯೋಗಿಸಿದ ಆಟೋ ರಿಕ್ಷಾ ಕೆಎ-70-0557 ನೇದನ್ನು ಹಾಗೂ ಆಟೋ ರಿಕ್ಷಾದ ಅರ್ ಸಿ ನಕಲನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಗಾಂಜಾದ ಒಟ್ಟು ಮೌಲ್ಯ ಸುಮಾರು 60,000/-ರೂ ಆಗಿರುತ್ತದೆ. ಆಟೋ ರಿಕ್ಷಾದ ಅಂದಾಜು ಮೌಲ್ಯ ರೂ 1,50,000/- ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 101/2021 ಕಲಂ8(c) R/w 20(B)(II)(b) NDPS ACT, 1985 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸೂರಜ್ ಮರ್ಡಿ C/o ಜೂಬಿ ಜೇಸುದಾಸ್ ವಾಸ:  ನಡು ಮನೆ,  ಸುಲ್ಕೇರಿ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾಧಿದಾರರ ಗಂಡ ಬೆಟ್ಕ ಸೂರೇನ್‌ ಪ್ರಾಯ 41 ವರ್ಷ ಎಂಬವರು ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಬಳ್ಳಮಂಜ ಎಂಬಲ್ಲಿನ ಜೂಬಿ  ಜೇಸುದಾಸ್‌ ಎಂಬವರ ಬಾಬ್ತು ಅನನಾಸು ತೋಟದಲ್ಲಿ  ಕೆಲಸ ಮಾಡಿಕೊಂಡು, ತೋಟದ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ 26-07-2021 ರಂದು ಬೆಳಗ್ಗೆ 9-00 ಗಂಟೆಗೆ ಬಳ್ಳಮಂಜ ಜಂಕ್ಷನ್‌ ನಲ್ಲಿ ವಿಪರೀತ ಅಮಲು ಪದಾರ್ಥ ಸೇವಿಸಿ  ಬಿದ್ದುಕೊಂಡಿದ್ದವರನ್ನು ಮನೆಗೆ ರಿಕ್ಷಾದಲ್ಲಿ ಕರೆದುಕೊಂಡು ಬಂದಿದ್ದು, ದಿನಾಂಕ 27-07-2021 ರಂದು ಬೆಳಗ್ಗೆ ಸುಮಾರು 10-00 ಗಂಟೆಗೆ ಮನೆಯಲ್ಲಿ ಹುಷಾರಿಲ್ಲದಂತೆ ಮಲಗಿದ್ದಲ್ಲಿಯೇ ಇದ್ದವರನ್ನು, ಚಿಕಿತ್ಸೆ  ಬಗ್ಗೆ  ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯವರು 12-00 ಗಂಟೆಗೆ ಪರೀಕ್ಷಿಸಿದಾಗ ಬೆಟ್ಕ ಸೂರೇನ್‌ ರವರು  ಮೃತಪಟ್ಟಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಅ.ಕ್ರ 10/2021  ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಿವ ಪ್ರಾಯ 50 ವರ್ಷ, ತಂದೆ: ದಿ| ದಾಸಪ್ಪ ಗೌಡ, ವಾಸ: ಗೋಳಿಕಟ್ಟೆ ಮನೆ, ಪರ್ಲಡ್ಕ ಅಂಚೆ, ಆರ್ಯಾಪು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರ ತಾಯಿ ಮಹಾದೇವಮ್ಮ ಪ್ರಾಯ 75 ವರ್ಷ ರವರು ಮಾನಸಿಕ ಮತ್ತು ಇತರ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಸದ್ರಿಯವರು ಪುತ್ತೂರು ಧನ್ವಂತರಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ದಿನಾಂಕ: 26-07-2021ರಂದು ಸಂಜೆ 6-30 ಗಂಟೆಗೆ ಧನ್ವಂತರಿ ಆಸ್ಪತ್ರೆಯಿಂದ ಔಷದಿ ತರಲೆಂದು ಮನೆಯಿಂದ ಹೋದವರು ಆಸ್ಪತ್ರೆಗೆ ಹೋಗದೆ ಇದ್ದವರನ್ನು ಪಿರ್ಯಾದಿದಾರರು ಮತ್ತು ಇತರರು ಸೇರಿ ಹುಡುಕಾಡಿದಾಗ ಮನೆ ಸಮೀಪದ ಸಂಕಪ್ಪ ಕುಲಾಲ್‌ ರವರ ಮನೆಯ ಅಂಗಳದಲ್ಲಿರುವ ಬಾವಿಯ ನೀರಿನಲ್ಲಿ ಕುತ್ತಿಗೆಗೆ ಹಗ್ಗ ಸುತ್ತಿಕೊಂಡ ರೀತಿಯಲ್ಲಿ ಬಾವಿ ನೀರಿನಲ್ಲಿ ತೇಲಾಡುತ್ತಿದ್ದುದು ಕಂಡು ಬಂದಿದ್ದು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಯುಡಿಅರ್ ನಂಬ್ರ 27/21  ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-07-2021 09:37 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080