ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜೊಯೆಲ್ ಪೊನ್ಸಿಕಾ , ಪ್ರಾಯ 19 ವರ್ಷ. ತಂದೆ: ಲ್ಯಾನ್ಸಿ ಪೊನ್ಸಿಕಾ  ವಾಸ: ಪುರುಷರಲಚ್ಚಿಲ್ ಮನೆ, ಕುರಿಯಾಳು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 26.08.2022 ರಂದು  ತನ್ನ ತಂದೆಯ ಬಾಬ್ತು ಅಟೋ ರಿಕ್ಷಾ ನಂಬ್ರ  KA-19-AA-903ನೇಯದನ್ನು ಚಲಾಯಿಸಿಕೊಂಡು ತನ್ನ ಮನೆಯಿಂದ ಬೆಳ್ತಂಗಡಿ - ಬಿಸಿ ರೋಡ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ,ಸಿ ರೋಡಿಗೆ ಹೋಗುತ್ತಿದ್ದು  ಗಾಣದಪಡ್ಪು ಎಂಬಲ್ಲಿಗೆ ತಲುಪುವಾಗ ಬಿ.ಸಿ  ರೋಡ್‌ ಕಡೆಯಿಂದ ಬರುತ್ತಿದ್ದ ಕಾರ್‌ ನಂಬ್ರ KA-21-P-1176 ನೇಯದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎದುರಿನಿಂದ ಬಿ,ಸಿ ರೋಡ್‌ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ನಂಬ್ರ KA- 70-E-6643 ನೇಯದಕ್ಕೆ ಡಿಕ್ಕಿ ಹೊಡೆಸಿ ನಂತರ ಪಿರ್ಯಾದುದಾರರು  ಚಲಾಯಿಸುತ್ತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಹಾಗೂ ಪಿರ್ಯಾದುದಾರರು ವಾಹನ ಸಮೇತ ರಸ್ತೆಗೆ ಎಸೆಯಲ್ಪಟ್ಟು  ಪಿರ್ಯಾದುದಾರರಿಗೆ  ತಲೆ ಹಿಂಬದಿ, ಬೆನ್ನಿಗೆ ಗುದ್ದಿದ ಗಾಯ ಬಲಕೈಗೆ ಗುದ್ದಿದ ಗಾಯ ಹಾಗೂ ಎಡ ಕಾಲಿಗೆ ಗುದ್ದಿದ ಗಾಯವಾಗಿದ್ದು, ದ್ವಿ ಚಕ್ರ ವಾಹನ ಸವಾರರಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ದ್ವಿಚಕ್ರ ವಾಹನ ಸವಾರರು ಬಂಟ್ವಾಳ  ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು  ಪಿರ್ಯಾದುದಾರರು ಮಂಗಳೂರು ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 96/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನಿತ್ಯಾನಂದ ಡಿ ಪ್ರಾಯ 49 ವರ್ಷ ತಂದೆ:ಬೊರೇ ಗೌಡ ಎನ್ ವಾಸ:1ನೇ ಕ್ರಾಸ್ ಬಂಡಾರ ಹಳ್ಳಿ ಕವಲಗುಂಡಿ ಪೋಸ್ಟ್ ಶಿವಮೊಗ್ಗ ಜಿಲ್ಲೆ ರವರು ದಿನಾಂಕ 27-08-2022 ರಂದು ಮಾರ್ಗ ಸಂಖ್ಯೆ 72/73 ರಲ್ಲಿ   K S R T C  ಬಸ್ಸು KA 09 F 5249 ನೇ ವಾಹನದ ಚಾಲಕನಾಗಿದ್ದು ಬೆಳಿಗ್ಗೆ  6.30 ಗಂಟೆಗೆ   ಮಂಗಳೂರು ದಿಂದ ಹಿಂದುಪುರ  ಹೊರಟಿದ್ದು ಮಂಗಳೂರು-ಬೆಂಗಳೂರಿಗೆ ಸಾರ್ವಜನಿಕ  NH-75 ರಲ್ಲಿ  ಬಸ್ಸುನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ 9.15 ಗಂಟೆಗೆ ಕಡಬ  ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ  ಎಂಬಲ್ಲಿಗೆ ತಲುಪಿದಾಗ  ಸಕಲೇಶಪುರ ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ KA-19-AC-4021 ನೇದನ್ನು ಅದರ ಚಾಲಕ ನಿರ್ಲಕ್ಷ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  K.S.R.T.C  ಬಸ್ಸು ನಂಬ್ರ KA.09.F.5249 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿ  ಪ್ರಯಾಣಿಸುತ್ತಿದ್ದ  ಎರಡು ಪ್ರಯಾಣಿಕರಿಗೆ ಹಾಗು ಲಾರಿ ಚಾಲಕನಿಗೆ ಸಣ್ಣಪುಟ್ಟು ಗಾಯವಾಗಿದ್ದು ಸದ್ರಿಯವರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕಳುಹಿಸಲಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ  ಅ.ಕ್ರ 93/2022 ಕಲಂ:279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಯತ್ನ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶರತ್ ಕುಮಾರ್, ಪ್ರಾಯ: 33 ವರ್ಷ, ತಂದೆ: ನಾರಾಯಣ ನೂರಿತ್ತಾಯ, ವಾಸ: ನೋಚಿಲ ಮನೆ, ಸುಬ್ರಹ್ಮಣ್ಯ ಗ್ರಾಮ, ಕಡಬ ತಾಲೂಕು ರವರು ದಿನಾಂಕ: 26-08-2022 ರಂದು ಸಾಯಂಕಾಲ ಸುಮಾರು 2.45 ಗಂಟೆ ಹೊತ್ತಿಗೆ  ಅವರ ಬಾಭ್ತು ಹೊಂಡಾ ಮೋಟಾರು ಸೈಕಲ್ ನಂಬ್ರ ಕೆಎ 21 ವೈ 8470 ನೇದ್ದನ್ನು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಬಸ್ಸು ನಿಲ್ದಾಣದ ಮುಂಭಾಗ ನಿಲುಗಡೆಗೊಳಿಸಿ ಬಸ್ಸು ನಿಲ್ದಾಣದಲ್ಲಿನ ಅಂಗಡಿಗೆ ಕಲೆಕ್ಷನ್ ಗಾಗಿ ಹೋಗಿದ್ದು, ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗಿ ಬಂದಾಗ ಸದ್ರಿ ಮೋಟಾರು ಬೈಕು ಕಳವಾಗಿದ್ದು, ಸುತ್ತಮುತ್ತಲಿನವರೆಲ್ಲೆಲ್ಲಾ ವಿಚಾರಿಸಿದರೂ ಈ ತನಕ ಮೋಟಾರ್ ಬೈಕ್ ಪತ್ತೆಯಾಗದೇ ಇದ್ದು, ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ 50,000/- ಆಗಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಅ.ಕ್ರ : 84/2022 ಕಲಂ-379 ಐಪಿಸಿ ಯುಡಿ ಆರ್ ಸಂಖ್ಯೆ 32/2016 ಕಲಂ 174(3)(iv)  ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಜೇಶ್‌ ಬಳಿಗಾರ್‌ ವಲಯ ಅರಣ್ಯಾಧಿಕಾರಿಯವರು ಬಂಟ್ವಾಳ ವಲಯ ರವರು ನೀಡಿದ ದೂರಿನಂತೆ ದಿನಾಂಕ:26-08-2022 ರಂದು ಸಾಯಂಕಾಲ ಸುಮಾರು 7.05 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ನಾರಂಕೋಡಿ ಎಂಬಲ್ಲಿ ಸರಕಾರಿ ಜಮೀನಿಗೆ ಕಾಡು ಪ್ರಾಣಿಗಳ ಬೇಟೆಗೆ ಬಂದಿರುವ ಮೂರು ಜನರನ್ನು ಸ್ಥಳೀಯ ನಿವಾಸಿಗಳು ತಡೆದು ನಿಲ್ಲಿಸಿರುತ್ತಾರೆ ಎಂಬುದಾಗಿ ಬಂದ ಮಾಹಿತಿಯಂತೆ ಇಲಾಖಾ ಸಿಬ್ಬಂದಿಗಳಾದ ಉಪವಲಯ ಅರಣ್ಯಾಧಿಕಾರಿ ಪ್ರೀತಮ್, ಪ್ರಭಾರ ಉಪವಲಯದ ಅರಣ್ಯಾಧಿಕಾರಿಯವರು ಜೀತೇಶ್, ಹೊರಗುತ್ತಿಗೆ ನೌಕರ ಭಾಸ್ಕರ್, ಅರಣ್ಯರಕ್ಷಕ ಶೋಬಿತ್ ರವರ ಜೊತೆ ಇಲಾಖಾ ವಾಹನನಂಬ್ರ ಕೆಎ-19-ಜಿ-629ನೇಯದರಲ್ಲಿ ಸದ್ರಿ ಸ್ಥಳವಾದ ನಾರಂಕೋಡಿ ಎಂಬಲ್ಲಿಗೆ ಹೋದಾಗ  1) ಶರತ್ 2) ಪ್ರಶಾಂತ್ 3) ಸುನೀಲ್ ಪೂಜಾರಿ ಎಂಬುದಾಗಿ ತಿಳಿಸಿದ್ದು, ಅವರ ಸ್ವಾಧೀನದಲ್ಲಿ ಕೆಂಪುಬಣ್ಣದ ಸ್ಟೋಟಕ ವಸ್ತುಗಳು -10 ಇದ್ದು ಈ ಬಗ್ಗೆ ಸದ್ರಿ ವಸ್ತುಗಳ ಬಗ್ಗೆ ವಿಚಾರಿಸಿದಾಗ ಕಾಡು ಪ್ರಾಣಿಗಳ ಬೇಟೆಗಾಗಿ ಎಡಪದವಿನ ಕೃಷ್ಣ ಎಂಬವರಿಂದ ಖರೀದಿಸಿ ತಂದು ಬೇಟೆಯಾಡಲು ತಮ್ಮ ವಶದಲ್ಲಿಟ್ಟು ಕೊಂಡಿರುವುದಾಗಿದೆ ಎಂಬುದಾಗಿ ತಿಳಿಸಿದ ಮೇರೆಗೆ ಆರೋಪಿಗಳನ್ನು ಮುಂದಿನ ಕ್ರಮದ ವಶಕ್ಕೆ ಪಡೆದು ಹಸ್ತಾಂತರಿಸಿದ್ದು ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 136/2022  ಕಲಂ: 447 ಜೊತೆಗೆ 34 ಐಪಿಸಿ ಮತ್ತು 9 ಬಿ (1)(ಬಿ) Explossive Act 1884ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ರಮಣಿ ಪ್ರಾಯ:54 ವರ್ಷ ಗಂಡ; ಶ್ರಿಧರ ಗೌಡ ವಾಸ; ಪಾದೆ ಮನೆ ಮಲವಂತಿಗೆ ಗ್ರಾಮ ಬೆಳ್ತಂಗಡಿ ತಾಲೂಕು ರವರ ತಮ್ಮ  ಜಯಂತ್ ಎನ್ (52)  ಎಂಬವರು ಮಂಗಳೂರಿನ ಬಜ್ಪೆಯ ಮಳವೂರಿನಲ್ಲಿ ವಾಸವಾಗಿದ್ದು ಕಾವೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಅವಿವಾಹಿತನಾಗಿರುತ್ತಾನೆ. ದಿನಾಂಕ:25-08-2022 ರಂದು  ರಾತ್ರಿ ಸುಮಾರು 20.30 ಗಂಟೆಗೆ ಪಿರ್ಯಾದುದಾರರ ಮನೆಯಾದ ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ ಪಾದೆ ಎಂಬಲ್ಲಿಗೆ ಬಂದವರು ದಿನಾಂಕ;26-08-2022 ರಂದು ಮನೆಗೆ ಹೋಗುತ್ತೇನೆಂದು ಪಿರ್ಯಾದುದಾರರಲ್ಲಿ ಹೇಳಿ ಹೋಗಿರುತ್ತಾರೆ. ಪಿರ್ಯಾದುದಾರರ ತಮ್ಮ ಜಯಂತ್ ಎನ್ ಎಂಬವರು  ತಡರಾತ್ರಿಯವರೆಗೆ ನಿದ್ರೆ ಮಾಡದೇ ಮನೆಯ ಒಳಗೆ  ಅಲೆದಾಡುತ್ತಾ  ಮಾನಸಿಕ  ರೀತಿಯಲ್ಲಿ  ವರ್ತಿಸುತ್ತಿದ್ದು ದಿನಾಂಕ:26-08-2022 ರಂದು ಸಂಜೆ 5.00 ಗಂಟೆಯಿಂದ ದಿನಾಂಕ:27-08-2022 ರಂದು ಬೆಳಿಗ್ಗೆ 7.00 ಗಂಟೆಯ ಮದ್ಯದ ಅವಧಿಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು   ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು  ಗ್ರಾಮದ ಮೈನೋರ್ಡಿ ಎಂಬಲ್ಲಿಯ  ದಿಡುಪೆ ಬಸ್ಸು ನಿಲ್ದಾಣದ ಬಳಿ   ಮರದ ಕೊಂಬೆಗೆ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 38/2022 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪ್ರಸಾದ ಕೆ ಪ್ರಾಯ 21 ವರ್ಷ ತಂದೆ:ರಾಮಣ್ಣ ಗೌಡ ವಾಸ:ಕನಿಯ ಮನೆ ಕೊಣಾಜೆ ಗ್ರಾಮ ಕಡಬ ತಾಲೂಕು ರವರ ತಂದೆ ರಾಮಣ್ಣ ಗೌಡ (49) ವರ್ಷ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಎಡಕಾಲಿಗೆ ಯಾವುದೋ ವಿಷ ಹಾವು ಕಚ್ಚಿ ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಎಡ ಕಾಲಿಗೆ  ಶಸ್ತ್ರ ಚಿಕಿತ್ಸೆ ಮಾಡಿ ಗುಣಮುಖರಾಗಿ ಮನೆಗೆ ಬಂದಿದ್ದು, ಕಾಲಿಗೆ ಶಸ್ತ್ರ ಚಿಕಿತ್ಸೆಯಾಗಿರುವುದರಿಂದ ಮನೆಯಲ್ಲಿಯೇ ಇದ್ದು, ಯಾವುದೇ  ಕೆಲಸಕ್ಕೆ ಹೋಗಲು ಆಗುವುದಿಲ್ಲವಾಗಿ ಮಾನಸಿಕವಾಗಿ ಮನನೊಂದು. ದಿನಾಂಕ: 27-08-2022 ರಂದು ಸಮಾರು 11.00 ಗಂಟೆಯ ಸಮಯಕ್ಕೆ ಪಿರ್ಯಾದಿಯ ತಾಯಿ ಹುಲ್ಲು ಕೀಲಲು ಮನೆಯಿಂದ ಹೋಗಿ ಮದ್ಯಾಹ್ನ 12.00 ಗಂಟೆಯ ಸಮಯಕ್ಕೆ ಮನೆಗೆ ಬಂದು ನೋಡಲಾಗಿ  ರಾಮಣ್ಣ ಗೌಡರು ಹಳೆಮನೆಯ ಅಡ್ಡಕ್ಕೆ ನೇಲಾನ್ ಹಗ್ಗವನ್ನು ಕಟ್ಟಿ ಕುತ್ತಿಗಗೆ ನೇಣು ಬಿಗಿದು ನೇತಾಡುವ ಸ್ಥಿತಿಯಲ್ಲಿ ಇದ್ದವರನ್ನು ನೋಡಿ ದೊಡ್ಡಪ್ಪನ ಮಗ ಸೂರಪ್ಪ ಎಂಬವರಿಗೆ ತಿಳಿಸಿದ್ದು, ಕೂಡಲೇ ಸಂಬಂಧಿಕರು ಹಾಗೂ ನೆರೆಕೆರೆಯವರು ಸೇರಿ ಅಡ್ಡಕ್ಕೆ ಕಟ್ಟಿದ ನೈಲಾನ್ ಹಗ್ಗವನ್ನು ಅರ್ಧದಿಂದ ತುಂಡು ಮಾಡಿ ಕೆಳಗೆ ಇಳಿಸಿ ಕುತ್ತಿಗೆಗೆ ಕಟ್ಟಿದ ಹಗ್ಗವನ್ನು ಬಿಚ್ಚಿ ನೋಡಿದಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ ನಂಬ್ರ 23/2022 ಕಲಂ:174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-08-2022 11:30 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080