ಅಪಘಾತ ಪ್ರಕರಣ: ೦1
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹಸನ್ ಬಸರ್, ಪ್ರಾಯ 24 ವರ್ಷ, ತಂದೆ: ಮಹಮ್ಮದ್, ವಾಸ: ಪಾಣೆಮಂಗಳೂರು ನೆಹರೂನಗರಮನೆ, ನರಿಕೊಂಬು ಅಂಚೆ ಮತ್ತು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 27-09-2021 ರಂದು 13-30 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಐತಪ್ಪ ಎಂಬವರು KA-19-AC-3116 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರೂನಗರ ಎಂಬಲ್ಲಿ ಮರದ ಮಿಲ್ ಬಳಿ ಯಾವುದೇ ಸೂಚನೆ ನೀಡದೇ ಹಿಂದಿನಿಂದ ಬರುವ ವಾಹನವನ್ನು ಗಮನಿಸದೇ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಏಕಾಏಕಿಯಾಗಿ ಪುನಃ ಪುತ್ತೂರು ಕಡೆಗೆ ತಿರುಗಿಸಿದ ಪರಿಣಾಮ, ಪಿರ್ಯಾದಿದಾರರು, ಮಹಮ್ಮದ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ಬಂಟ್ವಾಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-70-H-2596 ನೇ ನೋಂದಣಿ ನಂಬ್ರದ ಸ್ಕೂಟರಿಗೆ ರಿಕ್ಷಾದ ಬಲಬದಿ ತಾಗಿ ಅಪಘಾತವಾಗಿ, ಸವಾರರಿಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಎಡಕೋಲು ಕೈಗೆ ಗುದ್ದಿದ ಹಾಗೂ ರಕ್ತಗಾಯ ಮತ್ತು ಮಹಮ್ಮದ್ ರವರಿಗೆ ಬಲ ಕಾಲಿನ ತೊಡೆಗೆ ಗುದ್ದಿದ ಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 119/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ವಿಮಲ, (36), ಬಿ. ವಸಂತ, ವಾಸ: ಬಾರ್ದೊಟ್ಟು ಮನೆ ತೆಂಕಕಜೆಕಾರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 02.08.2021 ರಂದು ಪುಂಜಾಲಕಟ್ಟೆ ಪುಂಡಲಿಕ ಬಾಳಿಗಾ ದಿಂದ 14 ಗ್ರಾಂ ಚಿನ್ನದ ಕಸರವನ್ನು ಖರೀದಿಸಿ ದಿನಾಂಕ: 04.08.2021 ರಂದು ಹೊಸ ಕರಿಮಣಿ ಸರವನ್ನು ಹಾಕಿಕೊಂಡು ಹಳೆಯ 20 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ ಇತರ 10 ಗ್ರಾಂ ತೂಕದ ಚಿನ್ನದ ದಳಪತಿ ಚೈನ್, 5 ಗ್ರಾಂ ತೂಕದ ಚಿನ್ನದ ಸರ, 6 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ 2 ಕಿವಿಯ ಬೆಂಡೊಲೆ ಸುಮಾರು 3 ಗ್ರಾಂ ತೂಕದ ಚಿನ್ನದ ಉಂಗುರ ಕೂಡಾ ಒಟ್ಟಿಗೆ ಮನೆಯ ಗೋದ್ರೆಜ್ ಕಪಾಟಿನಲ್ಲಿಟ್ಟಿದ್ದು ದಿನಾಂಕ: 08.08.2021 ರಂದು ಗೊದ್ರೆಜ್ ಕಪಾಟಿನಲ್ಲಿದ್ದ ಚಿನ್ನವನ್ನು ತೆಗೆಯಲು ಹೋದಾಗ ಎಲ್ಲಾ ಆಭರಣಗಳು ಕಳವಾಗಿದ್ದು, ಕಳವಾದ ಆಭರಣದ ಮೌಲ್ಯ ಸುಮಾರು 1,89,000 ಆಗಬಹುದು. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 65/2021ಕಲಂ: 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦2
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಚಂದ್ರಾವತಿ, ಗಂಡ;ದಿನೇಶ ಗೌಡ, ವಾಸ;ಜಾರಿಗೆ ಮನೆ ಮಿತ್ತಬಾಗಿಲು ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 27.09.2021ರಂದು ಮದ್ಯಾಹ್ನ 03.00ಗಂಟೆ ಸಮಯಕ್ಕೆ ಪ್ರಕರಣದ ಪಿರ್ಯಾದಿದಾರರಾದ ಶ್ರೀಮತಿ ಚಂದ್ರಾವತಿಯವರು ತಮ್ಮ ಬಾಬ್ತು ಜಾಗದ ಸರ್ವೆ ನಡೆಸುತ್ತಿದ್ದ ಸಮಯ ಗಡಿ ಕಲ್ಲು ನೋಡುವರೇ ಹತ್ತಿರದ ಬಾಬು ಗೌಡ ಎಂಬವರ ತೋಟಕ್ಕೆ ಪಿರ್ಯಾದಿದಾರ ಹಾಗೂ ಅವರ ಗಂಡ ದಿನೇಶ ಗೌಡರ ಜೊತೆಗೆ ಹೋಗುತ್ತಿದ್ದಾಗ ನೆರೆ ಮನೆಯ ಗಿರೀಶಗೌಡ ಮತ್ತು ಆತನ ಹೆಂಡತಿ ಭವ್ಯ ಹಾಗೂ ಇತರರಾದ ವಿನಯಚಂದ್ರ, ವಸಂತ, ಹಾಗೂ ಶ್ರೀಮತಿ ದೇವಕಿಯವರು ಪಿರ್ಯಾದಿದಾರರನ್ನು ಹಾಗೂ ಅವರ ಗಂಡನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಪಿರ್ಯಾದಿದಾರರ ಗಂಡನಿಗೆ ಗಿರೀಶಗೌಡ,ವಿನಯಚಂದ್ರ ಮತ್ತು ವಸಂತರವರು ಸೇರಿ ಕೋಲಿನಿಂದ ಕೈಗೆ ಮತ್ತು ಎದೆಗೆ ಹೊಡೆದಾಗ ಪಿರ್ಯಾದಿದಾರರು ತಡೆಯಲು ಹೊದಾಗ ಭವ್ಯ ಮತ್ತು ದೇವಕಿಯವರು ಪಿರ್ಯಾಧಿರವರಿಗೆ ಸೇರಿ ಹಲ್ಲೆ ನಡೆಸಿದ್ದು, ಬೊಬ್ಬೆಯನ್ನು ಕೇಳಿ ಹತ್ತಿರದ ಲಾಲು ಚೇಚಾ ಚನನಗೌಡ ಹೇಮಂತ ಮತ್ತು ಶ್ರೀಮತಿ ಸೇಸಮ್ಮ ರವರು ನಮ್ಮ ಹತ್ತಿರ ಓಡಿ ಬಂದಾಗ ಗೀರಿಶ ಗೌಡ ಹಾಗೂ ಮತ್ತಿತರರು ಅವರ ಕೈಯಲ್ಲಿದ್ದ ಕೋಲುಗಳನ್ನು ಸ್ಥಳದಲ್ಲಿ ಬಿಸಾಡಿ ‘ನೀವು ಜಾಗದ ಕುರಿತು ಇನ್ನು ಮುಂದಕ್ಕೆ ತಕರಾರು ನಡೆಸಲು ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಎಂಬುದಾಗಿ ಬೇದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 79/2021 ಕಲಂ: 143,147,341,324,506, r/w 149 IPCಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಿರೀಶ್ ಕೆ ಪ್ರಾಯ 33 ತಂದೆ:ದಿ||ಶಂಕರ ಪಾಟಾಳಿ ವಾಸ:ಕುಂಞಪ್ಪಾರೆ ಮನೆ,ಎಣ್ಮಕಜೆ ಗ್ರಾಮ ಮಂಜೇಶ್ವರ ತಾಲೂಕು, ಕೇರಳ ರಾಜ್ಯ ಎಂಬವರ ದೂರಿನಂತೆ ದಿನಾಂಕ:26-09-2021 ರಂದು 17.00 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ಅಡ್ಯನಡ್ಕ-ಕುದ್ದುಪದವು ರಸ್ತೆಯಲ್ಲಿ ಪಿರ್ಯಾಧಿದಾರರಾದ ಗಿರೀಶ್‌ರವರು ತನ್ನ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಕುದ್ದುಪದವು ಕಡೆಗೆ ಹೋಗುತ್ತಿರುವಾಗ ಎದುರಿನಿಂದ ಬಂದ ಪಿಕಪ್ ಕೆಎ-21-ಬಿ-5014ನೇದರಲ್ಲಿ ಚಾಲಕ ಮಹಮ್ಮದ್,ಮಹಮ್ಮದ್ ಆಲಿ ಹಾಗೂ ಇತರ 3-4 ಜನರು ರಸ್ತೆಯಲ್ಲಿ ಪಿಕಪ್ ನಿಲ್ಲಿಸಿ ಪಿರ್ಯಾಧಿದಾರರಿಗೆ ಹಲ್ಲೆ ನಡೆಸುವ ಸಮಾನ ಉದ್ದೇಶದಿಂದ ಮಾರಕಾಯುಧದೊಂದಿಗೆ ಅಕ್ರಮಕೂಟ ಸೇರಿಕೊಂಡು ಪಿರ್ಯಾಧಿದಾರರು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಪಿಕಪ್‌ನಲ್ಲಿದ್ದ ಚಾಲಕ ಮಹಮ್ಮದ್, ಮಹಮ್ಮದ್ ಆಲಿ ಹಾಗೂ ಇತರ 3-4 ಜನರು ವಾಹನದಿಂದ ಇಳಿದು ಬಂದು ಮಹಮ್ಮದನು ಕೈಯಲ್ಲಿ ಕತ್ತಿ ಹಿಡಿದುಕೊಂಡು ಪಿರ್ಯಾಧಿಯ ಬಳಿಗೆ ಬಂದು ಪಿರ್ಯಾಧಿಯನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮಹಮ್ಮದನು ಕತ್ತಿಯಿಂದ ಪಿರ್ಯಾಧಿಯ ಎಡ ತೋಳಿನ ಭಾಗಕ್ಕೆ ಕಡಿದನು, ಆಗ ಮಹಮ್ಮದ್ ಆಲಿಯು ಆತನ ಕೈಯಲ್ಲಿದ್ದ ದೊಣೆಯಿಂದ ಹೊಡೆಯುವುದನ್ನು ತಪ್ಪಿಸಿಕೊಂಡಾಗ ಅವರೊಂದಿಗೆ 3-4 ಜನರು ಪಿರ್ಯಾಧಿಯನ್ನು ಹಿಡಿದುಕೊಂಡು ಹೊಟ್ಟೆಯ ಭಾಗಕ್ಕೆ ಹಾಗೂ ಬೆನ್ನಿನ ಭಾಗಕ್ಕೆ ಹೊಡೆದಿದ್ದು. ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬ್ಯಾರಿ ಭಾಷೆಯಲ್ಲಿ ಬೆದರಿಕೆ ಹಾಕಿರುತ್ತಾರೆ ಗಾಯಾಳು ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 128/2021 ಕಲಂ: 143,147,148,341,504,323,324, 506 ಜೊತೆಗೆ 149 ಬಾಧಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦3
ಕಡಬ ಪೊಲೀಸ್ ಠಾಣೆ : ದಿನಾಂಕ27.-09-2021 ರಂದು ಕಡಬ ಠಾಣೆಯಲ್ಲಿ ಅ.ಕ್ರ 79/2021 . ಕಲಂ.376(2).506 IPC And 5(A) 5(J) (ii) 6 Pocso Act 2012 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ: 27.09.2021 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 66/2021 ಕಲಂ: 376(2), 506 ಐ.ಪಿ.ಸಿ. ಮತ್ತು ಕಲಂ:4, 6 ಪೋಕ್ಸೋ ಕಾಯ್ದೆ 2012ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ;27.09.2021 ರಂದು ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ 78/2021 ಕಲಂ: 447,504,323,324,354,506 r/w 34 IPCಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦3
ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಹಾಸ ಪ್ರಾಯ 32 ವರ್ಷ ತಂದೆ ;ದಿ.ಕೊರಗಪ್ಪ ಪೂಜಾರಿ ವಾಸ ;ಕೇಪುಳು ಮನೆ ಆಲಂಕಾರು ಗ್ರಾಮ ಗ್ರಾಮ. ಕಡಬ ಎಂಬವರ ದೂರಿನಂತೆ ದಿನಾಂಕ 27.09.2021 ರಂದು ಪಿರ್ಯದುದಾರರು ಬೆಳಗ್ಗೆ 9-00 ಗಂಟೆ ಸಮಯಕ್ಕೆ ತೋಟದಲ್ಲಿ ಅಡಿಕೆ ಹೆಕ್ಕಲು ಹೋಗಿದ್ದು . ಆ ಸಮಯ ಪಿರ್ಯದುದಾರರ ತಾಯಿಯವರಾದ ಚೆನ್ನಮ್ಮರವರು ಮನೆಯಲ್ಲಿ ಒಬ್ಬರೇ ಇದ್ದರು. . ಪಿರ್ಯದುದಾರರು ತೋಟಕ್ಕೆ ಹೋಗುವ ಸಮಯ ಪಿರ್ಯದುದಾರರ ಅಣ್ಣನು ರೇಷನ್ ತೆಗೆದುಕೊಂಡು ಮನೆಗೆ ಬಂದಾಗ ಪಿರ್ಯದುದಾರರ ತಾಯಿಯವರು ಮನೆಯ ಊಟದ ಹಾಲಿನ ಅಡ್ಡಕ್ಕೆ ಕುತ್ತಿಗೆ ನೇಣು ಬಿಗಿದು ನೇತಾಡುತ್ತಿರುವುದನ್ನು ಕಂಡ ಕೂಡಲೇ ಪಿರ್ಯದುದಾರ ಬೊಬ್ಬೆ ಹೊಡೆದು ಕರೆದನು. ಕೂಡಲೇ ಪಿರ್ಯದುದಾರ ಮನೆಗೆ ಓಡಿಬಂದು ಪಿರ್ಯದುದಾರರ ತಾಯಿಯವರು ಜೀವಂತವಿರಬಹುದೆಂದು ಭಾವಿಸಿ ಹಗ್ಗವನ್ನು ತುಂಡುಮಾಡಿ ಕೆಳಗೆ ಇಳಿಸಲಾಗಿ ಆ ಸಮಯ ಪಿರ್ಯದುದಾರರ ತಾಯಿಯವರ ಪ್ರಾಣ ಹೋಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 22/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಾರಿಜಾ, ಪ್ರಾಯ: 55 ವರ್ಷ, ಗಂಡ: ವೆಂಕಪ್ಪ ಶೆಟ್ಟಿ, ವಾಸ: ಕಂಡದಬೆಟ್ಟು ಮನೆ, ಕುಕ್ಕಿಪ್ಪಾಡಿ ಗ್ರಾಮ, ಬಂಟ್ವಾಳ ತಾಲೂಕು, ಎಂಬವರ ದೂರಿನಂತೆ ಫಿರ್‍ಯಾಧಿದಾರರ ಮಗಳು ದಿವ್ಯಾ (ಪ್ರಾಯ: 28 ವರ್ಷ) ಎಂಬಾಕೆ ದಿನಾಂಕ: 27.09.2021 ರಂದು ಬೆಳಿಗ್ಗೆ 08:00 ಗಂಟೆಯಿಂದ 09:00 ಗಂಟೆಯ ಮಧ್ಯೆ ಮನೆಯಲ್ಲಿ ಫ್ಯಾನ್‌ಗೆ ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ UDR NO 13/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಭರಾಜ್ (29) ತಂದೆ: ಡೀಕಯ್ಯ ಪೂಜಾರಿ ವಾಸ: ಕಜೆ ಮನೆ, ಮರೋಡಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿರವರ ತಂದೆ ಡೀಕಯ್ಯ ಪೂಜಾರಿ (59) ಇವರು ದಿನಾಂಕ 27.09.2021 ರಂದು ಬೆಳಿಗ್ಗೆ 08.30 ಗಂಟೆಗೆ ಮನೆಯಿಂದ ಪೇಟೆಗೆ ಹೋಗಿದ್ದು, ನಂತರ 10.30 ಗಂಟೆಗೆ ಮನೆಗೆ ಬಂದಾಗ, ವಿಪರೀತ ಶರಾಬು ಕುಡಿದು ಅಲ್ಲದೇ ಬಾಯಿಯಿಂದ ವಾಸನೆ ಬರುತ್ತಿದ್ದುದನ್ನು ಕಂಡು ಕರಿಮಣೇಲಿನಲ್ಲಿದ್ದ ಅವರ ಮಗ ಶುಭರಾಜ್ ಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದು, ಶುಭರಾಜ್‌ರವರು ಮನೆಗೆ ಹೋದಾಗ ಅವರ ತಂದೆ ಮನೆಯ ಚಾವಡಿಯಲ್ಲಿ ಮಲಗಿಕೊಂಡಿದ್ದು, ಬಾಯಿ ಘಾಟು ವಾಸನೆ ಬರುತ್ತಿದ್ದುದನ್ನು ಕಂಡು ವಿಷಯ ತಿಳಿದು ಬಂದ ಫಿರ್ಯಾದಿದಾರರ ಅಕ್ಕ ಸುಭಾಷಿನಿಯವರು ಬಂದಿದ್ದು ಅವರ ಜೊತೆಯಲ್ಲಿ ರಿಕ್ಷಾದಲ್ಲಿ ಡೀಕಯ್ಯ ಪೂಜಾರಿಯವರನ್ನು ನಾರಾವಿ ಆಸ್ಪತ್ರೆಗೆ ಹೋಗಿ ಅಲ್ಲಿ ವೈದ್ಯರಿಲ್ಲದ ಕಾರಣ ಬೆಳ್ತಂಗಡಿ ಆಸ್ಪತ್ರೆಗೆ ಅದೇ ರಿಕ್ಷಾದಲ್ಲಿ ಕೊಂಡುಹೋಗಿದ್ದು ವೈದ್ಯರು ಪರೀಕ್ಷಿಸಿ ಡೀಕಯ್ಯ ಪೂಜಾರಿಯವರು ಮೃತಪಟ್ಟಿರುತ್ತಾರೆಂದು 02:45 ಗಂಟೆಗೆ ತಿಳಿಸಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 24-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.