ಅಪಘಾತ ಪ್ರಕರಣ: ೦2
ಬೆಳ್ತಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಕ್ಬರ್ ಅಲಿ (20) S/o ಟಿಪ್ಪು ಸುಲ್ತಾನ R/O ಗೌಡ್ಸಾಗ್ ಮನೆ, ನೇಲ್ಯಾಡಿ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 27-10-2021 ರಂದು ಪಿರ್ಯಾದುದಾರರು ತನ್ನ ಬಾಬ್ತು ಮೋಟಾರ್ ಸೈಕಲ್‌ನ್ನು ಸವಾರಿ ಮಾಡಿಕೊಂಡು ನೆಲ್ಯಾಡಿ ಕಡೆಯಿಂದ ರೆಖ್ಯಾ ರಸ್ತೆಯಲ್ಲಿ ಹೋಗುತ್ತಾ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಪರಕ್ಕಳ ತಿರುವು ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿಯ ಎದುರಿನಿಂದ ಅಂದರೆ ನೆಲ್ಯಾಡಿ ಕಡೆಯಿಂದ ಹಾಸನ ಕಡೆಗೆ ಹೋಗುತ್ತಿದ್ದ ಕೆ.ಎ 45 ಇ ಸಿ 1339 ನೇ ಮೋಟಾರ್ ಸೈಕಲ್ ಗೆ ಪಿರ್ಯಾದಿಯ ವಿರುದ್ದ ದಿಕ್ಕಿನಿಂದ ಅಂದರೆ ಬೆಂಗಳೂರು ಕಡೆಯಿಂದ ನೆಲ್ಯಾಡಿ ಕಡೆಗೆ ಕೆ ಎ 51 ಎಂ ಕ್ಯೂ 5019 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ, ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದನು. ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸವಾರನ ಬಲ ಮೊಣ ಕಾಲಿಗೆ ಗುದ್ದಿದ ಗಾಯ, ಬಲ ಕೈ ಮದ್ಯ ಬೆರಳಿಗೆ, ಎಡ ಕಾಲಿನ ತೊಡೆಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬೆಳ್ತಗಡಿ ಸಂಚಾರ ಪೊಲೀಸ್ ಠಾಣೆ ಅ.ಕ್ರ 80/2021 ಕಲಂ 279,337 ಐ.ಪಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಸುಬು (33)S/o ಮಹಮ್ಮದ್ ಅಲಿ R/O ಅನ್ಕೊಸ್ಟಾರ್ ಮನೆ, ನೆರಿಯಾ ಗ್ರಾಮ, ಬೆಲ್ತಂಗಡಿ ತಾಲೂಕು ರವರು ದಿನಾಂಕ: 26-10-2021 ರಂದು ತನ್ನ ಬಾಬ್ತು ಮೋಟಾರ್ ಸೈಕಲ್‌ನ್ನು ಸವಾರಿ ಮಾಡಿಕೊಂಡು ಬಸ್ತಿಯಿಂದ ಕಕ್ಕಿಂಜೆ ಕಡೆಗೆ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಬೆಳ್ತಂಗಡಿ ತಾಲೂಕು ಕಕ್ಕಿಂಜೆ ಮಸೀದಿಯ ಬಳಿ ತಲುಪುತ್ತಿದ್ದಂತೆ ಮಸೀದಿಯ ಗೇಟಿನ ಎದುರು ರಸ್ತೆಯ ತೀರಾ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕ ಮಹಮ್ಮದ್ ಶಾಹಿಲ್ ನಿಗೆ ಪಿರ್ಯಾದಿಯ ಎದುರಿನಿಂದ ಅಂದರೆ ಬಸ್ತಿ ಕಡೆಯಿಂದ ಕಕ್ಕಿಂಜೆ ಕಡೆಗೆ ಹೋಗುತ್ತಿದ್ದ ಕೆ ಎ 06 ಎನ್ 5556 ನೇ ಓಮಿನಿ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ, ಹಿಂದಿನಿಂದ ಡಿಕ್ಕಿ ಹೊಡೆದನು. ಪರಿಣಾಮ ಸದ್ರಿ ಬಾಲಕ ರಸ್ತೆಗೆ ಬಿದ್ದು ಬಾಲಕನ ಮುಖಕ್ಕೆ, ತುಟಿಗೆ, ಮೂಗಿನ ಬಳಿ ಗುದ್ದಿದ ಗಾಯ ಹಾಗೂ ಎಡ ಕಾಲಿನ ಪಾದಕ್ಕೆ, ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು, ನಂತರ ಗಾಯಾಳುವನ್ನು ಪಿರ್ಯಾದಿ ಮತ್ತು ಶಿನೋಜ್ ರವರು ಉಪಚರಿಸಿ ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಮಂಗಳೂರು ಕಡೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಗಡಿ ಸಂಚಾರ ಪೊಲೀಸ್ ಠಾಣೆ ಅ.ಕ್ರ 81/2021 ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦1
ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹರೀಶ್ಚಂದ್ರ ಅಚಾರ್ಯ (64) ತಂದೆ: ದಿ ಅನಂತ ಅಚಾರ್ಯ ವಾಸ: ಶ್ರೀ ರತ್ನ ನಿವಾಸ, ಕೊಕ್ರಾಡಿ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ಸಾವ್ಯ ಗ್ರಾಮದ ಸ.ನಂ 59/2 ಎಳಂಬ ಬಾಕ್ಯಾರು ಎಂಬಲ್ಲಿ ಜಾಗದ ಜಮೀನು ನನ್ನ ಹಿರಿಯರು ಖರೀದಿಸಿದ್ದಾಗಿದ್ದು, ಪ್ರಸ್ತುತ ನಾನು ಅದನ್ನು ಅನುಭವಿಸಿಕೊಂಡು ಬರುತ್ತಿದ್ದು, ಈ ಜಾಗದ ಆಸ್ತಿ ಕುಮ್ಕಿ ಜಾಗದಲ್ಲಿ ಎದ್ರಿಯವರು ಅಕ್ರಮವಾಗಿ ರಸ್ತೆಯನ್ನು ಮಾಡುವರೇ, ತಹಶೀಲ್ದಾರರಿಗೆ ದೂರನ್ನು ಸಲ್ಲಿಸಿ ರಸ್ತೆ ನಿರ್ಮಾಣಕ್ಕೆ ಪ್ರಯತ್ನ ಪಟ್ಟಿದ್ದು, ಮಾನ್ಯ ತಹಶೀಲ್ದಾರರು ಈ ಬಗ್ಗೆ ಕಂದಾಯ ನಿರೀಕ್ಷಕರಿಗೆ ಕಾನೂನು ರೀತಿಯಲ್ಲಿ ಬೇಲಿ ತೆರವು ಗೊಳಿಸುವರೇ ನೋಟೀಸ್ / ತಿಳುವಳಿಕೆ ಪತ್ರ ನೀಡಿರುತ್ತಾರೆ. ಇದರ ವಿರುದ್ದ ನಾನು ಮಾನ್ಯ ಸಹಾಯಕ ಕಮಿಷನರ್ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದು, ಸದ್ರಿ ಅಪೀಲಿನಲ್ಲಿ ಸ.ಕಮಿಷನರರು ತಡೆಯಾಜ್ಞೆ ನೀಡಿ ಕಂದಾಯ ಇಲಾಖೆಗೆ ಆದೇಶಿಸಿರುತ್ತಾರೆ, ಎದ್ರಿಯವರು ಹತಾಶರಾಗಿ ನನ್ನ ಕುಮ್ಕಿ ಸ್ಥಳದಲ್ಲಿ ರಸ್ತೆ ನಿರ್ಮಾಣ ಉದ್ದೇಶದಿಂದ ಅಕ್ರಮವಾಗಿ ಬೇಲಿಯನ್ನು ಕೃಷಿಯನ್ನು ನಾಶ ಮಾಡಲು ಗೂಂಡಾಗಳನ್ನು ಬಿಟ್ಟು ಹೆದರಿಸಿರುತ್ತಾರೆ. ಅಲ್ಲದೇ ದಿನಾಂಕ 26.10.2021 ರಂದು ಸಂಜೆ 04:00 ಗಂಟೆಯಿಂದ ರಾತ್ರಿ 10:00 ಗಂಟೆಯ ತನಕ ಶಶಿಧರ್ ಹೆಗ್ಡೆ ಮತ್ತು ಆತನ ಮಗ ಸ್ವದೀಪ್ ಹೆಗ್ಡೆ ಹಾಗೂ ವಸಂತ, ಕರಿಯ ಮತ್ತು ಇತರೆ ಸುಮಾರು 7-8 ಜನರೊಂದಿಗೆ ನನ್ನ ಕೃಷಿ ತೋಟಕ್ಕೆ ನುಗ್ಗಿ ಅಡಕೆ, ಬಾಳೆ, ತೆಂಗು ಗಿಡಗಳನ್ನು ಹಾಳು ಮಾಡಿ ಹಾಗೂ ಅದಕ್ಕೆ ಹಾಕಿದ್ದ ಕಲ್ಲು ಕಂಬದ ತಂತಿ ಬೇಲಿ ಹಾಗೂ 35 ಕಲ್ಲಿನ ಕಂಬಗಳನ್ನು ತುಂಡು ಮಾಡಿ ನನಗೆ ನಷ್ಟ ಉಂಟುಮಾಡಿರುತ್ತಾರೆ. ಈ ದಿನ ನನ್ನ ತಮ್ಮ ಜಯರಾಮ್ ಆಚಾರ್ಯ ಎಂಬುವವರ ಮನೆಯಲ್ಲಿರುವಾಗ ನಮ್ಮ ಮನೆಯ ಅಂಗಳಕ್ಕೆ ಶಶಿಧರ್ ಹೆಗ್ಡೆ ಮತ್ತು ಇತರ 7-8 ಜನ ಆರೋಪಿಗಳು ಅಕ್ರಮ ಪ್ರವೇಶ ಮಾಡಿ “ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಕೈಯಲ್ಲಿ ಮಾರಕಾಯುಧವಾದ ದೊಣ್ಣೆಯನ್ನು ಹಿಡಿದುಕೊಂಡು ಬೆದರಿಕೆ ಹಾಕಿ ಹೊಗಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ: 68-2021 ಕಲಂ: 143, 147, 447, 427, 504, 506 r/w 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦3
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಭಾಸ್ಕರ ಪೂಜಾರಿ ಪ್ರಾಯ 50 ವರ್ಷ ತಂದೆ:ರಾಮಣ್ಣ ಪೂಜಾರಿ ವಾಸ:ಅಬ್ಬಡ ಮನೆ ಮತ್ತು ಕಾಣಿಯೂರು ಗ್ರಾಮ ಮತ್ತು ಬೊಬ್ಬೆಕೇರಿ ಅಂಚೆ ಕಡಬ ತಾಲೂಕು ದ.ಕ ಜಿಲ್ಲೆ ರವರ ತಂದೆ ರಾಮಣ್ಣ ಪೂಜಾರಿ ಪ್ರಾಯ 80 ವರ್ಷ ಎಂಬವರು ಬಜತ್ತೂರು ಗ್ರಾಮದ ಡೆಂಬಲೆ ಎಂಬಲ್ಲಿಯ ನಿವಾಸಿಯಾಗಿದ್ದು ವಿಪರೀತ ಹಠವಾದಿಯಾಗಿದ್ದು ಪ್ರಾಯಸ್ದರಾಗಿದ್ದು ಸುಮಾರು 20 ವರ್ಷ ಗಳಿಂದ ಮನೆ ಬಿಟ್ಟು ತನ್ನ ಮಕ್ಕಳ ಜೊತೆಗೂ ನಿಲ್ಲದೇ ಎಲ್ಲೆಲ್ಲಿ ಮಲಗುತ್ತಿದ್ದವರು ಈಗ ಕೆಲವು ಸಮಯದಿಂದ ಉಪ್ಪಿನಂಗಡಿ ಪೇಟೆಯ ಪರಿಸರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು ಯಾವುದೋ ವಿಚಾರದಲ್ಲಿ ಜಿಗ್ಸಪೆಗೊಂಡು ದಿನಾಂಕ 26-10-2021 ರ ರಾತ್ರಿ 09.30 ಗಂಟೆಯಿಂದ ದಿನಾಂಕ 27-10-2021 ರ ಬೆಳಿಗ್ಗೆ 07.00 ಗಂಟೆಯ ಮದ್ಯೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಬಸ್ ನಿಲ್ದಾಣದ ಅನ್ನಪುರ್ಣ ಹೊಟೇಲಿನ ಕಟ್ಟಡದ ಮೇಲ್ಗಡೆಯ ಕಟ್ಟಡಕ್ಕೆ ಹೋಗುವ ಮೆಟ್ಟಿಲಿನ ಬಳಿ ಮೇಲಿನ ಮಹಡಿಯ ಅಡ್ಡದ ಸರಳಿಗೆ ತಂಗೀಸ್ ಹಗ್ಗದ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ:35/2021 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸತೀಶ್ ಪೂಜಾರಿ ಪ್ರಾಯ:47 ವರ್ಷ ತಂದೆ; ಸಂಜೀವ ಪೂಜಾರಿ ವಾಸ; ಆಶ್ರಯ ಮನೆ ಕಂಚಿಮಾರು ಬೈಲು ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ರವರು ಶ್ರೀಕ್ಷೇತ್ರ ಧರ್ಮಸ್ಥಳದ ಮಾಹಿತಿ ಕಛೇರಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ;04/10/2021 ರಂದು ಧರ್ಮಸ್ಥಳ ಗ್ರಾಮದ ಮಾಹಿತಿ ಕಛೇರಿಯ ಬಳಿ ಇರುವ ಕೆ ಎಸ್ ಆರ್ ಟಿಸಿ ಬಸ್ಸು ನಿಲ್ದಾಣ ಬಳಿ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಅಪರಿಚಿತ ವ್ಯಕ್ತಿ ಪ್ರಾಯ ಸುಮಾರು 50 ರಿಂದ 60 ವರ್ಷ ದವರು ಅಸೌಖ್ಯದಿಂದ ನರಳಾಡುತ್ತಿದ್ದನ್ನು ಕಂಡು ಕೂಡಲೇ 108 ಆಂಬುಲೇನ್ಸ್ ಗೆ ಕರೆ ಮಾಡಿ ಆತನನ್ನು ಚಿಕಿತ್ಸೆಯ ಬಗ್ಗೆ ಕಳುಹಿಸಿಕೊಟ್ಟಿದ್ದು 108 ಆಂಬುಲೇನ್ಸ್ ನವರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ದಿನಾಂಕ: 25/10/2021 ರಂದು ರಾತ್ರಿ 8.15 ಗಂಟೆಗೆ ಮೃತ ಪಟ್ಟ ವಿಚಾರ ತಿಳಿದು ಠಾಣೆಗೆ ಬಂದು ದೂರು ನೀಡಿದ್ದಾಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್ 53/2021 ಕಲಂ:174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಆನಂದ (44) ತಂದೆ-ಬಾಬು ವಾಸ-ಸ್ವಸ್ತಿಕ್ ನಗರಮನೆ, ವೇಣೂರು ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಂಗಿ ಸರೋಜಾ ರವರ ಮಗ ಚಂದ್ರಶೇಖರ ಎಂಬವನು ಚಿಕ್ಕದಿನಿಂದಲೇ ಫಿರ್ಯಾದಿದಾರರ ಮನೆಯಲ್ಲಿ ಇರುವುದಾಗಿದೆ. ಮೃತನ ತಂದೆ ,ತಾಯಿ ಮತ್ತು ತಂಗಿ ಆತನ ಚಿಕ್ಕ ವಯಸ್ಸಿನಲ್ಲಿಯೇ ಆತನನ್ನು ಫಿರ್ಯಾದಿದಾರರ ಮನೆಯಲ್ಲಿ ಬಿಟ್ಟು ಹೋಗಿರುತ್ತಾರೆ, ಅವರು ಎಲ್ಲಿರುತ್ತಾರೆ ಎಂಬುದಾಗಿ ತಿಳಿದಿರುವುದಿಲ್ಲ, ಮೃತನು ವೇಣೂರಿನ ಶ್ರೀ ನಿಧಿ ಶಾಮಿಯಾನದ ಮಾಲಕರಾದ ಜಗದೀಶ ಭಟ್ ರವರ ಜೊತೆಯಲ್ಲಿ ಶಾಮಿಯಾನದ ಕೆಲಸವನ್ನು ಅವನ ಸ್ನೇಹಿತರಾದ ವಿಕ್ರಂ, ಸಿದ್ದೀಕ್ ಮತ್ತು ರವಿರವರ ಜೊತೆ ಮಾಡುತ್ತಿದ್ದನು, ದಿನಾಂಕ 27.10.2021 ರಂದು ಮದ್ಯಾಹ್ನ 01-30 ಗಂಟೆಗೆ ಚಂದ್ರಶೇಖರ, ವಿಕ್ರಂ, ಸಿದ್ದೀಕ್ ಮತ್ತು ರವಿರವರ ಜೊತೆ ವೇಣೂರಿನ ಮಸೀದಿಯ ಬಳಿ ಹರಿದು ಹೋಗುವ ಪಲ್ಗುಣಿ ನದಿಯ ಬದಿಯಲ್ಲಿ ಶಾಮಿಯಾನದ ಮ್ಯಾಟ್ ನ್ನು ತೊಳೆಯಲು ಹೋಗಿದ್ದು ನೀರಿನಲ್ಲಿ ಮ್ಯಾಟನ್ನು ತೊಳೆಯುತ್ತಿರುವಾಗ ಚಂದ್ರಶೇಖರನು ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ನೀರಿಗೆ ಬಿದಿದ್ದು, ಆ ಸಮಯ ಅವನ ಜೊತೆ ಇದ್ದ ವಿಕ್ರಂ ರವರು ನೀರಿನಿಂದ ಮೇಲಕ್ಕೆ ಎಳೆಯಲು ಪ್ರಯತ್ನಿಸಿದರೂ ಯಶಸ್ವಿಯಾಗದೇ ಚಂದ್ರಶೇಖರನು ನೀರಿನಲ್ಲಿ ಮುಳುಗಿರುತ್ತಾನೆ ಎಂಬ ಮಾಹಿತಿ ಬಂದ ಮೇರೆಗೆ ಫಿರ್ಯಾದಿದಾರರು ಕೂಡಲೇ ಅಲ್ಲಿಗೆ ಹೋಗಿ ನಂತರ ಬೆಳ್ತಂಗಡಿ ಅಗ್ನಿಶಾಮಕ ದಳ ಮತ್ತು ಬಂಟ್ವಾಳದ ಮುಳುಗು ತಜ್ಞರನ್ನು ಕರೆಸಿದ್ದು ಅವರು ನದಿ ನೀರಿನಲ್ಲಿ ಹುಡುಕಿದಾಗ ಸಂಜೆ 05-00 ಗಂಟೆ ಸಮಯಕ್ಕೆ ಚಂದ್ರಶೇಖರ್ ಮೃತದೇಹವನ್ನು ಅಲ್ಲೇ ನದಿ ನೀರಿನಿಂದ ಮೇಲಕ್ಕೆ ತೆಗೆದಿರುತ್ತಾರೆ. ಚಂದ್ರಶೇಖರ್ ತನ್ನ ಸ್ನೇಹಿತರ ಜೊತೆ ನದಿ ನೀರಿನ ಬದಿಯಲ್ಲಿ ಶಾಮಿಯಾನದ ಮ್ಯಾಟನ್ನು ತೊಳೆಯುತ್ತಿರುವಾಗ ಆಕಸ್ಮಿಕವಾಗಿ ನದಿಯ ನೀರಿಗೆ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 27-2021 ಕಲಂ:174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ